SBI ನಲ್ಲಿ ಅಕೌಂಟ್ ಇದ್ದವರಿಗೆ ಹೊಸ ರೂಲ್ಸ್ ಜಾರಿ.! ಕೂಡಲೇ ಬ್ಯಾಂಕ್ ಗೆ ಬೇಟಿ ನೀಡಿ ಈ ಕೆಲಸ ಮುಗಿಸಿ…

 

WhatsApp Group Join Now
Telegram Group Join Now

ಇತ್ತೀಚೆಗೆ RBI ತನ್ನ ಅಧೀನದಲ್ಲಿರುವ ಎಲ್ಲಾ ಬ್ಯಾಂಕ್ ಗಳಿಗೂ ಕೂಡ ಲಾಕರ್ ವ್ಯವಸ್ಥೆ ಕುರಿತು ಇದ್ದ ನಿಯಮಗಳನ್ನು ಪರಿಷ್ಕರಿಸಿದೆ ಮತ್ತು ಈ ಹೊಸ ನಿಯಮಗಳಿಗೆ ಎಲ್ಲಾ ಬ್ಯಾಂಕ್ ಗಳು ಕೂಡ ತನ್ನ ಗ್ರಾಹಕರಿಂದ ಸಹಿ ತೆಗೆದುಕೊಳ್ಳಬೇಕು ಎಂದು ಕಡ್ಡಾಯವಾದ ಆದೇಶವನ್ನು ಕೂಡ ಮಾಡಿದೆ.

ನಮ್ಮ ದೇಶದಲ್ಲಿ ಜನಸಾಮಾನ್ಯರು ತಮ್ಮ ಬಳಿ ಇರುವ ಬೆಲೆ ಬಾಳುವ ವಸ್ತುಗಳಾದ ಚಿನ್ನ ವಜ್ರದ ಆಭರಣಗಳು ಆಸ್ತಿಪತ್ರಗಳು ಮತ್ತು ಇನ್ನಿತರ ಡಾಕ್ಯುಮೆಂಟ್ ಗಳನ್ನು ಮನೆಯಲ್ಲಿ ಇಡುವುದಕ್ಕಿಂತ ಬ್ಯಾಂಕ್ ಗಳಲ್ಲಿ ಇಟ್ಟರೆ ಸೇಫ್ ಎಂದು ಬ್ಯಾಂಕ್ ಲಾಕರ್ ಗಳಲ್ಲಿ ಇಡುತ್ತಾರೆ. ಈ ರೀತಿ ಲಾಕರ್ ಪಡೆದವರು ವಾರ್ಷಿಕವಾಗಿ ಅದಕ್ಕೆ ವಿಧಿಸಿರುವ ಶುಲ್ಕವನ್ನು ಕೂಡ ಪಾವತಿಸುತ್ತಾರೆ.

ಇದೊಂದು ರೀತಿ ಬಾಡಿಗೆ ಪಡೆದ ರೀತಿ ಆಯಿತು. ಈ ರೀತಿ ಬ್ಯಾಂಕ್ ಗಳಿಂದ ಲಾಕರ್ ಗಳನ್ನು ಪಡೆದು ತಮ್ಮ ಬೆಳೆ ಬಾಳುವ ವಸ್ತುವನ್ನು ಇಡುವುದು ಸೇಫ್ ಎಂದು ಗ್ರಾಹಕರ ಭಾವನೆ. ಬ್ಯಾಂಕ್ ಗಳು ಕೂಡ ಇದಕ್ಕೆ ತಕ್ಕ ಹಾಗೆ ನಿಯಮಗಳನ್ನು ಮಾಡಿ ಸಹಕರಿಸಿ,ಶಅವರ ಪಾಲಿನ ಆಸ್ತಿಗಳ ರಕ್ಷಣೆಯ ಭರವಸೆಯನ್ನು ಕೂಡ ನೀಡುತ್ತಿವೆ.

ಇದರ ನಡುವೆ ಬ್ಯಾಂಕ್ ಗಳು ಹಾಗೂ ಈ ರೀತಿ ಲಾಕರ್ ಗಳಲ್ಲಿ ತಮ್ಮ ವಸ್ತುಗಳನ್ನು ಇಡುವವರ ನಡುವೆ ಕೆಲವು ಒಪ್ಪಂದಗಳು ಇರುತ್ತವೆ. ಈ ರೀತಿ ಲಾಕ್ ಪಡೆಯುವಾಗಲೇ ಆ ಒಪ್ಪಂದಗಳನ್ನೆಲ್ಲ ಓದಿಕೊಂಡು ಅದನ್ನು ಒಪ್ಪಿದ್ದೇವೆ ಎಂದು ಪ್ರತಿಯೊಬ್ಬ ಗ್ರಾಹಕನು ಕೂಡ ಅದಕ್ಕೆ ಸಹಿ ಮಾಡಿ ಕೊಡಬೇಕು ನಂತರ ದಿನಗಳಲ್ಲಿ ಒಂದು ವೇಳೆ ಸಮಸ್ಯೆಗಳು ಆಗಿದ್ದಾಗ ಈ ಒಪ್ಪಂದಗಳು ಆ ಸಮಸ್ಯೆ ಪರಿಹರಿಸಲು ಅನುಕೂಲ ಮಾಡಿಕೊಡುತ್ತವೆ.

ಹಲವು ವರ್ಷಗಳಿಂದ ಒಂದೇ ರೀತಿಯಾಗಿ ಈ ಲಾಕರ್ ನಿಯಮಗಳು ಇದ್ದವು. ಇತ್ತೀಚಿಗೆ ‌RBI ಇದರಲ್ಲಿ ಪ್ರಮುಖವಾದ ಅಗತ್ಯವಿದ್ದ ಕೆಲವು ಬದಲಾವಣೆಗಳನ್ನು ತಂದಿದೆ. ಪ್ರಸ್ತುತವಾಗಿ ಜಾರಿಗೊಳಿಸಿರುವ ಈ ಲಾಕರ್ ನಿಯಮಗಳು ಗ್ರಾಹಕರಿಗೂ ಕೂಡ ತಿಳಿಯಬೇಕು ಎನ್ನುವ ಉದ್ದೇಶದಿಂದ ಬ್ಯಾಂಕ್ ಗಳಿಗೆ ತಮ್ಮ ಗ್ರಾಹಕರಿಂದ ಸಹಿ ಪಡೆಯಬೇಕು ಎಂದು ಆದೇಶಿಸಿದೆ.

ಆ ಪ್ರಕಾರವಾಗಿ ಬ್ಯಾಂಕ್ ಗಳು ಕೂಡ ತಮ್ಮ ಬಳಿ ಲಾಕರ್ ಇಟ್ಟಿರುವಂತಹ ಗ್ರಾಹಕರುಗಳಿಗೆ ಕರೆ ಮಾಡುವ ಮೂಲಕ SMS ಸಂದೇಶಗಳನ್ನು ಕಳಿಸುವ ಮೂಲಕ ಬ್ಯಾಂಕ್ ಗಳಿಗೆ ಭೇಟಿಕೊಟ್ಟು ಈ ಲಾಕರ್ ನಿಯಮಕ್ಕೆ ಸಹಿ ಹಾಕಬೇಕು ಎಂದು ಕೇಳಿಕೊಂಡಿವೆ. ಆದರೂ ಕೆಲವು ಜನರು ಇದನ್ನು ಮರೆತಿದ್ದಾರೆ ಕೆಲವರು ನಿರ್ಲಕ್ಷಿಸುತ್ತಿದ್ದಾರೆ.

ಆದರೆ ನೀವೇನಾದರೂ ಈ ಕೂಡಲೇ ಡಿಸೆಂಬರ್ 31ರ ಒಳಗಡೆ ನಿಮ್ಮ ಬ್ಯಾಂಕ್ ಗಳಿಗೆ ಹೋಗಿ ಈ ನಿಯಮಗಳಿಗೆ ಪದ್ಧತಿಯಂತೆ ಸಹಿ ಮಾಡದೆ ಇದ್ದರೆ ಮುಂದೆ ನಿಮ್ಮ ವಹಿವಾಟುಗಳಿಗೆ ತೊಡಕಾಗಬಹುದು. ಪರೀಷ್ಕೃತಗೊಂಡಿರುವ ಈ ನಿಯಮಗಳನ್ನು ಓದಿ, ಅದರಲ್ಲಿರುವ ಬದಲಾವಣೆಗಳಿಗೆ ಒಪ್ಪಿಗೆ ಇದ್ದರೆ ಒಪ್ಪಿರುವುದಕ್ಕಾಗಿ ಈ ಸ್ಟಾಂಪ್ ಮೇಲೆ ಗ್ರಾಹಕರು ಸಹಿ ಮಾಡಿಕೊಡಬೇಕು.

ಈ ಸಮಯದಲ್ಲಿ ತಮ್ಮ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಪ್ರತಿ ಕೂಡ ಸಲ್ಲಿಸಬೇಕು ಎಂದು ತಿಳಿಸಲಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತೊಮ್ಮೆ ತನ್ನ ಎಲ್ಲಾ ಗ್ರಾಹಕರಿಗೂ ಈ ವಿಷಯವನ್ನು ಮನದಟ್ಟು ಮಾಡುತ್ತಿದೆ ಹಾಗಾಗಿ ನೀವು ಕೂಡ SBI ಬ್ಯಾಂಕ್ ನಲ್ಲಿ ಲಾಕರ್ ವ್ಯವಸ್ಥೆ ಹೊಂದಿದ್ದರೆ ತಪ್ಪದೆ ಈ ಕೂಡಲೇ ನಿಮ್ಮ ಶಾಖೆಗೆ ಹೋಗಿ ಲಾಕರ್ ಅಗ್ರಿಮೆಂಟ್ ಗೆ ಸಹಿ ಮಾಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now