ಸಾಮಾಜಿಕ ಭದ್ರತಾ ಯೋಜನೆಯಲ್ಲಿ ವೃದ್ಧರು, ವಿಧವೆಯರು ಪಿಂಚಣಿ ಪಡೆಯುತ್ತಿದ್ದಾರೆ. ಪ್ರಸ್ತುತವಾಗಿ ಈ ಪಿಂಚಣಿ ಸೌಲಭ್ಯದಿಂದ ರೂ.1200ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಪಡೆಯುತ್ತಿದ್ದಾರೆ. ಇದರ ಮೂಲಕ ವೃದ್ಯಾಪದಲ್ಲಿ ಅವರಿಗೆ ಅಗತ್ಯವಿರುವ ಕೆಲ ಸಣ್ಣಪುಟ್ಟ ಖರ್ಚುಗಳಿಗೆ ಅದು ವಿನಿಯೋಗವಾಗುತ್ತಿದೆ.
ನಮ್ಮ ರಾಜ್ಯದಲ್ಲಿ ಸುಮಾರು 70 ಲಕ್ಷಕ್ಕಿಂತ ಹೆಚ್ಚು ಜನರು ಈ ರೀತಿ ಸಾಮಾಜಿಕ ಭದ್ರತಾ ಯೋಜನೆಯಡಿ ರೂಪಿಸಿರುವ ವಿವಿಧ ಯೋಜನೆಗಳ ಪಿಂಚಣಿ ಪಡೆಯುತ್ತಿದ್ದಾರೆ ಎನ್ನುವುದನ್ನು ಅಂಕಿ ಅಂಶವೊಂದು ತಿಳಿಸುತ್ತದೆ ಆದರೆ ಈ ರೀತಿ ಪಿಂಚಣಿ ಪಡೆಯುತ್ತಿದ್ದವರಿಗೆಲ್ಲ ಈಗ ಒಂದು ಶಾ’ಕಿಂ’ಗ್ ಎದುರಾಗಿದೆ.
ಪಿಂಚಣಿ ಬೇಕಾದವರು ರೇಷನ್ ಕಾರ್ಡ್ ಅಥವಾ ರೇಷನ್ ಕಾರ್ಡ್ ಬೇಕಾದವರು ಪಿಂಚಣಿಯನ್ನು ಕಳೆದುಕೊಳ್ಳಬೇಕಾದಂತ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ಕಾರಣ ಏನೆಂದರೆ, ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯಲು ಅರ್ಜಿ ಸಲ್ಲಿಸುವವರು ನಾಡ ಕಚೇರಿಗಳಿಗೆ ಹೋಗಿ ಅರ್ಜಿ ಸಲ್ಲಿಸುತ್ತಾರೆ.
ಈ ರೀತಿ ಸಂಧ್ಯಾ ಸುರಕ್ಷ ಯೋಜನೆಯಡಿ 60 ವರ್ಷ ಮೇಲ್ಪಟ್ಟವರು ಹಾಗೂ ವಿಧವಾದ ವೃದ್ಯಾಪ್ಯ ಯೋಜನೆ ಅಡಿಯಲ್ಲಿ ಪತಿ ಇಲ್ಲದವರು ಅರ್ಜಿ ಸಲ್ಲಿಸಿ ಸರ್ಕಾರದಿಂದ ಈ ಸಹಾಯವನ್ನು ಪಡೆಯಬಹುದು. ಆದರೆ ಸಂಧ್ಯಾ ಸುರಕ್ಷಾ ಯೋಜನೆ ಅಡಿ ಪಿಂಚಣಿ ಪಡೆಯಲು ಅರ್ಜಿ ಸಲ್ಲಿಸುವವರು ಅರ್ಜಿ ಸಲ್ಲಿಸುವ ವೇಳೆ ತಮ್ಮ ವಯಸ್ಸಿನ ದೃಢೀಕರಣ ಪತ್ರವನ್ನು ಮುಖ್ಯ ದಾಖಲೆಯಾಗಿ ನೀಡಬೇಕು.
ಅದೇ ರೀತಿಯಾಗಿ ವಿಧವಾ ವೇತನ ಪಡೆಯುವವರು ತಮ್ಮ ಪತಿಯ ಮರಣ ದೃಢೀಕರಣ ಪತ್ರವನ್ನು ಕೂಡ ಸಲ್ಲಿಸಿ ಅರ್ಜಿ ಕೊಡಬೇಕು ಇವುಗಳ ಜೊತೆ ಈಗಿರುವ ಕಾನೂನಿನ ಪ್ರಕಾರವಾಗಿ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಗಳನ್ನು ಕೂಡ ನೀಡಬೇಕು.
ಈ ಹಿಂದೆ ರೇಷನ್ ಕಾರ್ಡ ಪ್ರತಿಗಳನ್ನು ಕಡ್ಡಾಯವಾಗಿ ನೀಡಬೇಕಿತ್ತು ಆದರೆ ಈಗ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಪಾನ್ ಕಾರ್ಡ್ ಈ ರೀತಿ ಎಲ್ಲ ದಾಖಲೆಗಳಿಗೂ ಲಿಂಕ್ ಆಗಿರುವ ಕಾರಣ ಆಧಾರ್ ಕಾರ್ಡ್ ಪ್ರತಿ ಸಲ್ಲಿಸಿದರೆ ಆ ವ್ಯಕ್ತಿಯ ಆದಾಯ ವಿವರಿಸಿರಿದಂತೆ ಎಲ್ಲಾ ಮಾಹಿತಿಯನ್ನು ಕ್ಷಣದಲ್ಲಿಯೇ ಪರೀಕ್ಷಿಸಬಹುದು.
ಹಾಗಾಗಿ ರೇಷನ್ ಕಾರ್ಡ್ ಸಲ್ಲಿಸದೆ ಇದ್ದರೂ ಆಧಾರ್ ಕಾರ್ಡ್ ಮೂಲಕವಾಗಿ ಪ್ಯಾನ್ ಕಾರ್ಡ್ ಮಾಹಿತಿ ಮೂಲಕ ಅವರ ಹಣಕಾಸಿನ ಪರಿಸ್ಥಿತಿ ಹೇಗಿದೆ ಎನ್ನುವುದು ಗಮನಕ್ಕೆ ಬರುತ್ತದೆ. ಆಧಾರ್ ಕಾರ್ಡ್ ಮೂಲಕ ರೇಷನ್ ಕಾರ್ಡ್ ಕೂಡ ನೋಡಬಹುದು. ಈ ರೀತಿ ಅರ್ಜಿ ಪರಿಶೀಲನೆ ಮಾಡುವಾಗ ಸಾಮಾಜಿಕ ಭದ್ರತೆ ಹಾಗೂ ಪಂಚಣಿಗಳ ನಿರ್ದೇಶನಾಲಯದ ಅಧಿಕಾರಿಗಳು ಕುಟುಂಬದ ವಾರ್ಷಿಕ ಆದಾಯ 32,000 ಕ್ಕಿಂತಲೂ ಹೆಚ್ಚಿಗೆ ಇರುವ ಕುಟುಂಬಗಳ ಅರ್ಜಿಗಳನ್ನು ತಿರಸ್ಕರಿಸುತ್ತಾರೆ. ಈ ವಿಚಾರ ಈಗ ಅನೇಕರಿಗೆ ಸಮಸ್ಯೆಯಾಗಿದೆ.
ವಾರ್ಷಿಕ ಆದಾಯ ಮಿತಿ 1.20 ಲಕ್ಷದವರೆಗೆ ಆದಾಯ ಹೊಂದಿರುವವರು ಸಹಜವಾಗಿ BPL ಕಾರ್ಡ್ ಹೊಂದಿರುತ್ತಾರೆ. ಈಗ ಇದೇ BPL ಕಾರ್ಡ್ ಅನ್ನು ಅರ್ಜಿ ಸಲ್ಲಿಸುವಾಗ ಸಲ್ಲಿಸಿದರೆ ಅರ್ಜಿ ಪರಿಶೀಲನೆ ಸಮಯದಲ್ಲಿ ಇದನ್ನು ಯಾವ ರೀತಿ ಪರಿಗಣಿಸುತ್ತಾರೆ ಎಂದು ಅನೇಕರು ಗೊಂದಲ ಕೊಡಕ್ಕೊಳಗಾಗಿದ್ದಾರೆ. ಆದರೆ 32 ಸಾವಿರ ರೂ. ವಾರ್ಷಿಕ ಆದಾಯ ಇದ್ದರಿಗೆ ಮಾತ್ರ ಪಿಂಚಣಿ ಯೋಜನೆ (Pension Scheme) ಲಾಭ ಸಿಗುತ್ತದೆ.
ಈ ರೀತಿ ನಿಯಮ ಮಾಡಿದರೆ ನಾವು ಒಂದೋ ಪಿಂಚಣಿ ಯೋಜನೆಯನ್ನು ಬಿಡಬೇಕು, ಇಲ್ಲವೇ ಪಡಿತರ ಚೀಟಿಯನ್ನು ರದ್ದುಪಡಿಸಬೇಕಾಗುತ್ತದೆ. ಹಾಗಾಗಿ ಸರ್ಕಾರದ ಈ ನಿಯಮಕ್ಕೆ ರಾಜ್ಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಮುಂದೆ ಈ ವಿಚಾರವಾಗಿ ಬದಲಿ ಕ್ರಮ ಕೈಗೊಳ್ಳಬಹುದು ಕಾದು ನೋಡೋಣ.