ತಾಯಿಯ ಆಸ್ತಿಯನ್ನು ಮೊಮ್ಮಕ್ಕಳು ತವರು ಮನೆಯಿಂದ ಪಡೆಯಬಹುದ.? ಕಾನೂನು ಹೇಳೋದೆನು ನೋಡಿ.!

 

WhatsApp Group Join Now
Telegram Group Join Now

ಹಿಂದೂ ಅವಿಭಕ್ತ ಕುಟುಂಬದಲ್ಲಿ ಜನಿಸಿರುವ ಹೆಣ್ಣು ಮಗಳು ತನ್ನ ತಂದೆಯ ಪಾಲಿನ ಆಸ್ತಿಯಲ್ಲಿ ಭಾಗ ಕೇಳಲು ಹಕ್ಕುದಾರಿಕೆ ಹೊಂದಿದ್ದಾಳೆ ಎನ್ನುವ ಕಾನೂನು ಈಗ ಬಹುತೇಕ ಎಲ್ಲರಿಗೂ ತಿಳಿದಿದೆ. ಈ ಹೆಣ್ಣು ಮಗಳು ಜೀವಂಥ ಇಲ್ಲದೆ ಇದ್ದ ಪಕ್ಷದಲ್ಲಿ ತನ್ನ ತಾಯಿಗೆ ಬರಬೇಕಾದ ಆಸ್ತಿಯನ್ನು ಆ ಹೆಣ್ಣು ಮಗಳ ಮಕ್ಕಳು ಅಂದರೆ ಮೊಮ್ಮಕ್ಕಳು ತಾತನನ್ನು ಕೇಳಬಹುದೆ ಎನ್ನುವ ಪ್ರಶ್ನೆ ಎಲ್ಲರಿಗೂ ಇದೆ.

ಒಂದು ವೇಳೆ ಆ ಹೆಣ್ಣು ಮಗಳು ಬದುಕಿದ್ದರೆ ಆಕೆಯ ತಂದೆಯ ಆಸ್ತಿಯಲ್ಲಿ ಆ ಹೆಣ್ಣು ಮಗಳ ಮಕ್ಕಳು ಪಾಲು ಕೇಳಲು ಕಾನೂನಿನಲ್ಲಿ ಅವಕಾಶ ಇರುವುದಿಲ್ಲ, ಆ ಹೆಣ್ಣು ಮಗಳು ಏನಾದರೂ ತನ್ನ ಸಹೋದರರಿಗೆ ಈಗಾಗಲೇ ತನ್ನ ಪಾಲಿನ ಆಸ್ತಿ ಬೇಡ ಎಂದು ಹಕ್ಕು ಬಿಡುಗಡೆ ಮಾಡಿಕೊಟ್ಟಿದ್ದರೆ ಆಗಲು ಕೂಡ ಹೆಣ್ಣುಮಗಳಿಗಾಗಲಿ ಅಥವಾ ಅವರ ಮಕ್ಕಳಿಗಾಗಲೇ ಆಸ್ತಿಯಲ್ಲಿ ಪಾಲು ಕೇಳಲು ಹಕ್ಕು ಇರುವುದಿಲ್ಲ.

ಆದರೆ ಆ ಹೆಣ್ಣು ಮಗಳು ಈಗಾಗಲೇ ತೀ’ರಿಕೊಂಡಿದ್ದರೆ ಆ ಹೆಣ್ಣು ಮಗಳ ಮಕ್ಕಳು ತನ್ನ ತಾತನ ಬಳಿ ಆಸ್ತಿಯಲ್ಲಿ ಪಾಲು ಕೇಳಬಹುದು ಇದಕ್ಕೆ ಕಾನೂನಿನಲ್ಲಿ ಅವಕಾಶ ಇದೆ. ಮೃ’ತ ಹೊಂದಿದ ಹೆಣ್ಣು ಮಗಳಿಗೆ ಎಷ್ಟು ಮಕ್ಕಳಿದ್ದಾರೆ ಎನ್ನುವುದರ ಮೇಲೆ ಭಾಗಾಂಶವನ್ನು ಕೋರ್ಟ್ ನಿರ್ಧಾರ ಮಾಡುತ್ತದೆ.

ಕೆಲವೊಂದು ಸಂದರ್ಭಗಳಲ್ಲಿ ಸಹೋದರರು ತಮ್ಮ ಸಹೋದರ ಬಳಿ ಬಲವಂತವಾಗಿ ಹಕ್ಕು ಬಿಡುಗಡೆ ಪತ್ರ ಮಾಡಿಸಿಕೊಂಡಿರುತ್ತಾರೆ. ಇಂಥಹ ಸಂದರ್ಭದಲ್ಲಿ ಹಕ್ಕು ಬಿಡುಗಡೆ ಪತ್ರ ಬರೆಸಿಕೊಂಡ ಒಂದು ತಿಂಗಳ ಒಳಗೆ ಆ ಹೆಣ್ಣು ಮಕ್ಕಳು ಹತ್ತಿರದಲ್ಲಿರುವ ನ್ಯಾಯಾಲಯಗಳಲ್ಲಿ ದಾವೆ ಕೊಡುವ ಮೂಲಕ ಕೋರ್ಟ್ ಮುಖಾಂತರ ಅದನ್ನುವಜಾಗೊಳಿಸಿ ತಮ್ಮ ಹಕ್ಕನ್ನು ಸ್ಥಾಪಿಸಬಹುದು.

ಹಿಂದೂ ಸಕ್ಸೇಷನ್ ಆಕ್ಟ್ 2014 ತಿದ್ದುಪಡಿ ಆದ ನಂತರ ಜನಿಸಿರುವ ಎಲ್ಲಾ ಹೆಣ್ಣು ಮಕ್ಕಳಿಗೂ ಕೂಡ ತಂದೆ ಆಸ್ತಿಯಲ್ಲಿ ಸಹೋದರನಿಗೆ ಇರುವಷ್ಟೇ ಪಾಲುದಾರಿಕೆ ಹಾಗೂ ಹಕ್ಕು ಇರುತ್ತದೆ. ಅದಕ್ಕಿಂತ ಮುಂಚೆ ಜನಿಸಿದ ಹೆಣ್ಣು ಮಕ್ಕಳಿಗೆ ತಂದೆಯ ಪಾಲಿನ ಆಸ್ತಿಯಲ್ಲಿ ಭಾಗಾಂಶ ಪಡೆಯಲು ಅವಕಾಶ ಇದೆ.

ಕೆಲವೊಂದು ಪ್ರಕರಣಗಳಲ್ಲಿ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿ ತೆಗೆದುಕೊಳ್ಳಲು ಇಷ್ಟ ಇರುವುದಿಲ್ಲ ಅವರು ತಮ್ಮ ಸಹೋದರರೇ ಚೆನ್ನಾಗಿರಲಿ ಎಂದು ಬಯಸುತ್ತಾರೆ. ಇಂತಹ ಸಂದರ್ಭದಲ್ಲಿ ಕಾನೂನು ಬದ್ಧ ನಿಯಮಗಳ ಪ್ರಕಾರ ನೋಂದಣಿ ಪತ್ರಗಳಲ್ಲಿ ಹಕ್ಕು ಬಿಡುಗಡೆ ಪತ್ರ ಬರೆಸಿ ಸಹಿ ಮಾಡಿಕೊಡುವುದು ಉತ್ತಮ ಇಲ್ಲವಾದಲ್ಲಿ ಹೆಣ್ಣು ಮಗಳು ಕಾಲವಾದ ನಂತರ ಅವರ ಮಕ್ಕಳು ಮೊಮ್ಮಕ್ಕಳು ಕೂಡ ತನ್ನ ತಾಯಿಯ ಪಾಲಿನ ಆಸ್ತಿ ಬೇಕು ಎಂದು ಕೇಳಬಹುದು.

ಹಾಗಾಗಿ ಇಂತಹ ನಿರ್ಧಾರ ತೆಗೆದುಕೊಳ್ಳುವ ಹೆಣ್ಣು ಮಕ್ಕಳು ಹಕ್ಕು ಬಿಡುಗಡೆ ಪತ್ರ ಮಾಡಿಕೊಡಿ ಮತ್ತು ಹೆಣ್ಣು ಮಕ್ಕಳು ಏನಾದರೂ ತಮ್ಮ ತಂದೆಯಲ್ಲಿ ಆಸ್ತಿ ಪಾಲು ಬೇಕು ಎಂದು ಕೇಳಿದರೆ, ಇವರು ಕೇಳುತ್ತಿರುವ ಆಸ್ತಿಯ ಮೇಲೆ ತಂದೆ ಸಾಲ ಮಾಡಿದ್ದಾಗ ಅದನ್ನು ಕೂಡ ವಹಿಸಿಕೊಳ್ಳಬೇಕಾಗುತ್ತದೆ.

ಅದನ್ನು ಒಪ್ಪಿಕೊಳ್ಳದೆ ಇದ್ದಲ್ಲಿ ಆಕೆಗೆ ಆಸ್ತಿ ಪಡೆಯಲು ಸಾಧ್ಯವಾಗುವುದಿಲ್ಲ. ಕೆಲವೊಂದು ಸಮಯದಲ್ಲಿ ತಂದೆ ತಾಯಿಗೆ ಆಸ್ತಿ ಇರುವುದಿಲ್ಲ ಆದರೆ ಕುಟುಂಬ ನಿರ್ವಹಣೆಗಾಗಿ ಸಾಲ ಮಾಡಿರುತ್ತಾರೆ. ಆಗ ಗಂಡು ಮಕ್ಕಳು ನಾವು ಮಾತ್ರ ಸಾಲ ತೀರಿಸಬೇಕಾ ಎನ್ನುವ ಪ್ರಶ್ನೆ ತೆಗೆಯುತ್ತಾರೆ. ಒಂದು ವೇಳೆ ಅವರ ಸಹೋದರಿ ಅಂದರೆ ಹೆಣ್ಣುಮಗಳು ಮದುವೆ ಆಗುವ ಮುಂಚೆ ಮಾಡಿದ ಸಾಲಗಳಾದರೆ ಆ ಹೆಣ್ಣು ಮಗಳು ಕೂಡ ಆ ಸಾಲದಲ್ಲಿ ಪಾಲು ಪಡೆದು ತೀರಿಸಬೇಕು

ಆದರೆ ಆ ಹೆಣ್ಣು ಮಗಳ ಮದುವೆ ಆದ ನಂತರ ಕುಟುಂಬ ನಿರ್ವಹಣೆಗಾಗಿ ಸಾಲ ಮಾಡಿದ್ದರೆ ಆ ಹೆಣ್ಣು ಮಗಳು ಅಲ್ಲಿ ವಾಸಿಸದೇ ಗಂಡನ ಮನೆಯಲ್ಲಿ ಇದ್ದ ಕಾರಣಕ್ಕಾಗಿ ಆ ಸಾಲಗಳಿಗೆ ಈಕೆ ಜವಾಬ್ದಾರಿ ಆಗುವುದಿಲ್ಲ ಎನ್ನುತ್ತದೆ ಕಾನೂನು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now