ರೇಷನ್ ಕಾರ್ಡ್ (Ration card) ಒಂದು ಗುರುತಿನ ಚೀಟಿ ಮಾತ್ರವಲ್ಲದೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಪಡೆಯುವ BPL ಮತ್ತು AAY ರೇಷನ್ ಕಾರ್ಡ್ ಗಳು ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯುವುದಕ್ಕೆ ಅಗತ್ಯ ದಾಖಲೆಯಾಗಿದೆ. BPL ರೇಷನ್ ಕಾರ್ಡ್ ಹೊಂದಿರುವವರಿಗೆ ಸರ್ಕಾರದಿಂದ ಉಚಿತ ಪಡಿತರ ಮತ್ತು ವೈದ್ಯಕೀಯ ಶುಲ್ಕ ಹಾಗೂ ಶೈಕ್ಷಣಿಕ ಶುಲ್ಕಗಳಲ್ಲಿ ರಿಯಾಯಿತಿ ಸಿಗುತ್ತಿದೆ.
ಕರ್ನಾಟಕದಲ್ಲಿ BPL ರೇಷನ್ ಕಾರ್ಡ್ ಇರುವವರಿಗೆ ಅನ್ನ ಭಾಗ್ಯ ಯೋಜನೆ ಹಣ ಕೂಡ ಸಿಗುತ್ತಿದೆ. ಇಷ್ಟೆಲ್ಲ ಸೌಲಭ್ಯಗಳು ಸಿಗುತ್ತಿರುವುದರಿಂದ ಉಳ್ಳವರು ಕೂಡ ಸತ್ಯಾಂಶ ಮರೆಮಾಚಿ ಅಕ್ರಮವಾಗಿ BPL ರೇಷನ್ ಕಾರ್ಡ್ ಗಳನ್ನು ಪಡೆದಿರುವುದು ಆಹಾರ ಇಲಾಖೆಯ (Food Depatment) ಗಮನಕ್ಕೆ ಬಂದಿದೆ.
ಸ್ವಂತ ಮನೆ ಕಟ್ಟಲು ಸರ್ಕಾರದಿಂದ 6.5 ಲಕ್ಷ ರೂಪಾಯಿ ಸಹಾಯಧನ, ಆಸಕ್ತರು ಅರ್ಜಿ ಸಲ್ಲಿಸಿ.! ನಿಮ್ಮ ಕನಸಿನ ಮನೆ ನನಸಾಗಿಸಿಕೊಳ್ಳಿ.!
ಈಗ ಇದಕ್ಕೆ ಸಂಬಂಧಪಟ್ಟ ಹಾಗೆ ಸರ್ಕಾರ ಒಂದು ದೃಢ ನಿರ್ಧಾರ ತೆಗೆದುಕೊಂಡಿದೆ 2016ರಲ್ಲಿಯೇ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಪಡೆಯುವ BPL, AAY ರೇಷನ್ ಕಾರ್ಡ್ ಪಡೆಯುವುದಕ್ಕಾಗಿ ಕೆಲ ಮಾನದಂಡಗಳನ್ನು ರಚಿಸಲಾಗಿದೆ. ಆದರೆ ಅದಕ್ಕಿಂತ ಅನುಕೂಲವಾಗಿರುವ ಸ್ಥಿತಿಯಲ್ಲಿರುವವರು ಕೂಡ BPL ರೇಷನ್ ಕಾರ್ಡ್ ಹೊಂದಿದ್ದಾರೆ ಮತ್ತು ಸು’ಳ್ಳು ದಾಖಲೆ ನೀಡಿರಬಹುದು ಅಥವಾ BPL ರೇಷನ್ ಕಾರ್ಡ್ ಹೊಂದಿರುವ ನಂತರ ಅನುಕೂಲಸ್ಥರಾಗಿರಬಹುದು.
ಮತ್ತೊಂದು ಕಡೆ ಸರ್ಕಾರದ ಕಲ್ಯಾಣ ಯೋಜನೆಗಳ ಪ್ರಯೋಜನ ಪಡೆಯಲು ಅನೇಕ ಬಡವರು ಮತ್ತು ಸಾಮಾನ್ಯ ವರ್ಗದವರು ತಮಗೂ BPL ರೇಷನ್ ಕಾರ್ಡ್ ಬೇಕು ಎಂದು ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ ಒಂದು ರಾಜ್ಯಕ್ಕೆ ಇಂತಿಷ್ಟು BPL ರೇಷನ್ ಕಾರ್ಡ್ ಗಳು ಎನ್ನುವ ಮಿತಿ ಕೂಡ ಇರುವುದರಿಂದ ಮತ್ತೊಮ್ಮೆ ಚಾಲ್ತಿಯಲ್ಲಿರುವ ರೇಷನ್ ಕಾರ್ಡ್ ಗಳನ್ನು ಪರಿಶೀಲನೆ ಮಾಡಿ ಅನರ್ಹರಾದವರ ಕಾರ್ಡುಗಳನ್ನು ರ’ದ್ದುಪಡಿಸಿದರೆ ಮಾತ್ರ ಉಳಿದವರಿಗೆ ಅವಕಾಶ ಸಾಧ್ಯವಾಗುತ್ತದೆ.
ಕೇವಲ 30,000 ಸಿಗಲಿದೆ ಹೀರೋ ಸ್ಪ್ಲೆಂಡರ್ ಬೈಕ್, ಮಸ್ತ್ ಮೈಲೇಜ್.!
ಹಾಗಾಗಿ ರಾಜ್ಯ ಆಹಾರ ನಿಗಮವು ಈ ಕಾರ್ಯ ಕೈಗೊತ್ತಿಕೊಂಡಿದೆ. ಈಗಾಗಲೇ ಅಧಿಕಾರಿಗಳಿಂದ ರೇಷನ್ ಕಾರ್ಡ್ ಗಳ ತಪಾಸಣೆ ಕಾರ್ಯವು ವರ್ಷದ ಆರಂಭದಿಂದಲೇ ಶುರುವಾಗಿದೆ. ಎಲ್ಲಾ ದಾಖಲೆಗಳಿಗೂ ಆಧಾರ್ ಕಾರ್ಡ್ ಲಿಂಕ್ ಆಗಿರುವುದರಿಂದ ಕುಟುಂಬಸ್ಥರು 2016ರ ಮಾನದಂಡಗಳನ್ನು ಮೀರಿ ರೇಷನ್ ಕಾರ್ಡ್ ಹೊಂದಿದ್ದಾರೆ ಎಂದು ದಿನ ಪರಿಶೀಲಿಸಿ ಅಂತಹ ಕಾರ್ಡ್ ಗಳನ್ನು ರ’ದ್ದುಪಡಿಸಲಾಗುತ್ತಿದೆ.
ನೀವು ನಿಮ್ಮ ರೇಷನ್ ಕಾರ್ಡ್ ಸ್ಟೇಟಸ್ ನ್ನು ಮಾಹಿತಿ ಕಣಜ ಅಥವಾ ಆಹಾರ ಇಲಾಖೆ ವೆಬ್ಸೈಟ್ಗಳಿಗೆ ಭೇಟಿ ಕೊಟ್ಟು ರೇಷನ್ ಕಾರ್ಡ್ ಸ್ಥಿತಿ ಸಕ್ರಿಯವಾಗಿದೆಯೇ ಅಥವಾ ರದ್ದಾಗಿದೆಯೇ, ಕ್ಯಾನ್ಸಲ್ ಆಗಿದ್ದರೆ ಯಾವ ಕಾರಣಕ್ಕಾಗಿದೆ ಎನ್ನುವ ಮಾಹಿತಿ ತಿಳಿದುಕೊಳ್ಳಬಹುದು. ಮತ್ತು ನಿಮಗೆ ಈ ತಿಂಗಳ ಅನ್ನಭಾಗ್ಯ ಹಣ ಬರದಿದ್ದರೆ ಅದಕ್ಕೆ ಇದೇ ಕಾರಣ ಕೂಡ ಆಗಿರಬಹುದು.
ಸರ್ಕಾರ ಹಾಕಿರುವ ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಹಾಕಿರುವ ಮನದಂಡಗಳು ಇವು :-
* ಕುಟುಂಬದಲ್ಲಿ ಯಾರೂ ಕೂಡ ಆದಾಯ ತೆರಿಗೆ ಪಾವತಿದಾರರಾಗಿರಬಾರದು ಮತ್ತು ಸರ್ಕಾರಿ ಹುದ್ದೆಯಲ್ಲಿ ಇರಬಾರದು
* ಸ್ವಂತ ಬಳಕೆಗಾಗಿ ಬಿಳಿ ಬೋರ್ಡ್ ನ 4 ಚಕ್ರದ ವಾಹನ ಹೊಂದಿರುವವರು ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಅರ್ಹರಲ್ಲ
* ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿರುವ ಕುಟುಂಬಸ್ಥರು ಒಟ್ಟಾರೆ ಆಸ್ತಿ 7 ಎಕರೆಗಿಂತ ಹೆಚ್ಚಿಗೆ ಇದ್ದರೆ ಅವರು ಕೂಡ BPL ರೇಷನ್ ಕಾರ್ಡ್ ಗೆ ಅರ್ಹರಲ್ಲ
* ಶಸ್ತ್ರಾಸ್ತ್ರ ಪರವಾನಗಿ ಹೊಂದಿರುವವರು ರೇಷನ್ ಕಾರ್ಡ್ ಪಡೆಯಲು ಅರ್ಹರಲ್ಲ
* ಎಲ್ಲಾ ಆದಾಯಗಳಿಂದ ಕುಟುಂಬದ ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶದಲ್ಲಿ 2 ಲಕ್ಷ ಹಾಗೂ ಪಟ್ಟಣ ಪ್ರದೇಶದಲ್ಲಿ 3 ಲಕ್ಷ ಮೀರಿದಬಾರದು, ಪಟ್ಟಣ ಪ್ರದೇಶದ ಸಾವಿರ ಅಡಿಗಿಂತ ಹೆಚ್ಚು ದೊಡ್ಡದಾದ ಮನೆ ಹೊಂದಿರುವವರಿಗೆ ಬಿಪಿಎಲ್ ರೇಷನ್ ಕಾರ್ಡ್ ಸಿಗುವುದಿಲ್ಲ.