ಗಾರ್ಡೆನಿಂಗ್ ಮಾಡುವುದು ಒಂದು ಹವ್ಯಾಸ, ಇದರಷ್ಟು ಖುಷಿಕೊಡುವ ಸಂಗತಿ ಮತ್ಯಾವುದು ಇಲ್ಲ. ಬೆಳಗ್ಗೆ, ಸಂಜೆ ಮತ್ತು ರಜಾ ದಿನಗಳಲ್ಲಿ ಬಿಡುತ್ತಿದ್ದಾಗ ನಮ್ಮ ಗಾರ್ಡನಿಂಗ್ ನಲ್ಲಿ ಗಿಡಗಳನ್ನು ನೆಡುವುದಕ್ಕೆ ಕಳೆ ತೆಗೆಯುವುದಕ್ಕೆ ಗೊಬ್ಬರ ಹಾಕುವುದಕ್ಕೆ ನೀರು ಹಾಕುವುದಕ್ಕೆ ಸುತ್ತಾಡುತ್ತಿದ್ದರೆ ಆರೋಗ್ಯಕ್ಕೂ ಒಳ್ಳೆಯದು ಮತ್ತು ನಮ್ಮ ಮನೆಗೆ ಬೇಕಾದ ತರಕಾರಿ ಸೊಪ್ಪು ಹಣ್ಣು ಹೂವು ಎಲ್ಲವನ್ನು ನಾವೇ ಬೆಳೆದುಕೊಳ್ಳುವುದರಿಂದ ಹಣ ಕೂಡ ಉಳಿತಾಯ ಆಗುತ್ತದೆ.
ಸಾಮಾನ್ಯವಾಗಿ ಹಳ್ಳಿಗಳಲ್ಲಿರುವ ಪ್ರತಿಯೊಬ್ಬ ರೈತನ ಮನೆ ಹಿಂದೆ ಹೀಗೆ ಹಿತ್ತಲು ಇರುತ್ತದೆ. ಆ ಹಿತ್ತಲಿನಲ್ಲಿ ಅವರ ಅಡುಗೆ ಮನೆಗೆ ಬೇಕಾದಷ್ಟು ತರಕಾರಿಗಳನ್ನು, ಹಣ್ಣು ಹೂಗಳನ್ನು ಬೆಳೆದುಕೊಳ್ಳುತ್ತಾರೆ ಆದರೆ ಉದ್ಯೋಗ ಕಾರಣಕ್ಕೋ ಅಥವಾ ವಿದ್ಯಾಭ್ಯಾಸಕ್ಕಾಗಿಯೋ ಅಥವಾ ಇನ್ಯಾವುದೋ ಅನಿವಾರ್ಯತೆಯಿಂದ ಸಿಟಿ ಸೇರಿದ ನಂತರವೇ ಸಮಸ್ಯೆ ಶುರುವಾಗುವುದು.
ಯಾಕೆಂದರೆ ಹಳ್ಳಿಗಳಲ್ಲಿ ಈ ರೀತಿ ಗಿಡಮರದ ಜೊತೆ ಸಮಯ ಕಳೆದವರಿಗೆ ಪಟ್ಟಣದ ಕಾಂಕ್ರೀಟ್ ಕಾಡಿನಲ್ಲಿ ಸ್ವಲ್ಪವೂ ಮಣ್ಣು ಕಾಣದೆ ಹೋಗುವುದು ಬಹಳ ನೋವುಂಟು ಮಾಡುತ್ತದೆ. ಆದರೆ ಈ ಬಗ್ಗೆ ಆಸಕ್ತಿ ಇದ್ದರೆ ಅಸಾಧ್ಯವಾದದ್ದು ಯಾವುದು ಇಲ್ಲ. ಮನೆ ತಾರಸಿ ಮೇಲೆಯೇ ಗಾರ್ಡೆನಿಂಗ್ ಮಾಡಬಹುದು ಈಗ ಇದು ಹವ್ಯಾಸವಾಗಿ ಮಾತ್ರವಲ್ಲ ಕಮರ್ಷಿಯಲ್ ಆಗಿ ಕೂಡ ಬಾರಿ ಸದ್ದು ಮಾಡುತ್ತಿದೆ.
ಮನೆ ತಾರಸಿ ಮೇಲೆ ಮಾಡಿದ ತೋಟದಿಂದ ತಿಂಗಳಿಗೆ ಆಗುವಷ್ಟು ಆದಾಯ ಗಳಿಸಿದ ಉದಾಹರಣೆಗಳು ಕೂಡ ಇವೆ. ಅಷ್ಟಲ್ಲದೆ ಹೀಗೆ ಸಾವಯುವ ವಿಧಾನದಲ್ಲಿ ನಮ್ಮ ಮನೆಗೆ ಆಗುವಷ್ಟು ತರಕಾರಿಗಳನ್ನು ನಾವೇ ಬೆಳೆದುಕೊಂಡು ಸಮೃದ್ಧಿಯಾಗಿ ಬಳಸಿದರೆ ಎಷ್ಟು ಸಂತೋಷ ಅಲ್ಲವೇ?
ಹೇಳುವುದಕ್ಕೆ ಎಲ್ಲವೂ ಸುಲಭ ಮಾಡುವುದಕ್ಕೆ ಕಷ್ಟ ಎಂದು ಕೊಳ್ಳಬೇಡಿ ನಿಮ್ಮ ಮನೆಯಲ್ಲಿರುವ ಒಡೆದ ಪ್ಲಾಸ್ಟಿಕ್ ಟಬ್ ಗಳು, ಪ್ಲಾಸ್ಟಿಕ್ ಚೀಲಗಳು, ಬೇಡದ ಪ್ಲಾಸ್ಟಿಕ್ ಬಕೆಟ್ ಡ್ರಮ್ ಗಳು ಇವುಗಳನ್ನೇ ಬಳಸಿ ಗಾರ್ಡೆನಿಂಗ್ ಮಾಡಬಹುದು. ಆದರೆ ನೆಲದ ಸಮಕ್ಕೆ ಇವುಗಳನ್ನು ಇಡಬೇಡಿ, ಒಂದೆರಡು ಇಟ್ಟಿಗೆ ಇಟ್ಟು ಅದರ ಮೇಲೆ ಈಗ ಕಬ್ಬಿಣದ ರಾಡ್ ಸಿಗುತ್ತದೆ.
ಅದನ್ನು ಇಟ್ಟು ಅದರ ಮೇಲೆ ಗಿಡಗಳನ್ನು ನೆಟ್ಟ ಪಾಟ್ ಗಳನ್ನು ಅಥವಾ ಚೀಲಗಳನ್ನು ಇಡಿ, ನೀವು ಆರಿಸಿಕೊಳ್ಳುವ ಮಣ್ಣು ನಿಮ್ಮ ಗಿಡ ಎಷ್ಟು ಚೆನ್ನಾಗಿ ಬರುತ್ತದೆ ಎಂದು ಡಿಸೈಡ್ ಮಾಡುತ್ತದೆ. ಹಾಗಾಗಿ ಫಲವತ್ತಾದ ಮಣ್ಣು ಮರಳು ಕೊಟ್ಟಿಗೆ ಗೊಬ್ಬರ ಇವುಗಳನ್ನು ಸೇರಿಸಿ ಹದವಾಗಿ ತಯಾರದ ಮಣ್ಣಿನಲ್ಲಿ ಇವುಗಳನ್ನು ನೆಡಿ.
ನಿಮ್ಮ ಮನೆಯಲ್ಲಿ ಬಳಸುವ ವೇಸ್ಟ್ ಪದಾರ್ಥಗಳನ್ನೇ ಗೊಬ್ಬರವನ್ನಾಗಿ ಮಾಡಿ ಇವುಗಳಿಗೆ ಹಾಕಬಹುದು ಇನ್ನು ಪ್ರತಿನಿತ್ಯ ಸಾಕಾಗುವಷ್ಟು ನೀರು ಕೊಟ್ಟರೆ ಸಾಕು ನಿಮ್ಮ ತಿಂಗಳ ಖರ್ಚನ್ನು ಐದಾರು ಸಾವಿರ ಕಡಿಮೆ ಮಾಡಿಬಿಡುತ್ತದೆ ನಿಮ್ಮ ಮನೆ ತಾರಸಿ.
ಹೇಗೆಂದರೆ ತಾರಾಸಿ ಮೇಲೆ ಬದನೆಕಾಯಿ, ಟೊಮೆಟೊ, ಸಣ್ಣ ಈರುಳ್ಳಿ, ಶುಂಠಿ, ಹಾಗಲ, ಬೆಂಡೆ, ಸೌತೆಕಾಯಿ, ಹೀರೆಕಾಯಿ, ಪಡವಲಕಾಯಿ, ತೊಗರಿಕಾಯಿ, ಕರಿಬೇವು, ನುಗ್ಗೆ , ನಿಂಬೆ, ಕಬ್ಬು, ಮಾವು, ಕೊತ್ತಂಬರಿ ಸೊಪ್ಪು, ಪುದೀನ ಸೊಪ್ಪು, ಒಂದೆಲಗ, ಪಾಲಾಕ್, ಕೀರೆ, ದಂಟಿನ ಸೊಪ್ಪು, ತುಳಸಿ, ಅಲೋವೆರಾ, ಸೇವಂತಿಗೆ, ಮಲ್ಲಿಗೆ, ಚೆಂಡು ಹೂ, ಗುಲಾಬಿ ಗಿಡಗಳು, ಅಲಂಕಾರಿಕ ಪುಷ್ಪಗಳು ಹೀಗೆ ಸಾಕಷ್ಟು ಗಿಡಗಳನ್ನು ಬೆಳೆಯಬಹುದು.
ನಿಮಗೆ ಈ ಬಗ್ಗೆ ಆಸಕ್ತಿ ಇದ್ದರೆ ಈಗಾಗಲೇ ಈ ರೀತಿ ಒಂದು ಯೋಚನೆ ಮಾಡಿ ಮನೆ ಟೆರೇಸ್ ಮೇಲೆ ಗಾರ್ಡನಿಂಗ್ ಮಾಡಿ ತಿಂಗಳಿಗೆ ಮನೆಗಾಗುವಷ್ಟು ತರಕಾರಿಗಳನ್ನು ಬೆಳೆಯುತ್ತಿರುವ ಬೆಂಗಳೂರಿನ ಯುವಕನ ಸಲಹೆಗಳನ್ನು ಪಡೆಯಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.