ಆಧಾರ್ ಕಾರ್ಡ್ (Aadhar Card) ಒಂದು ಅತ್ಯಂತ ಪ್ರಮುಖ ದಾಖಲೆಯಾಗಿದೆ, ಈಗಿನ ಕಾಲದಲ್ಲಿ ಶಾಲೆಗೆ ಅಡ್ಮಿಶನ್ ಮಾಡಿಸುವುದರಿಂದ ಹಿಡಿದು ಅಂಕಪಟ್ಟಿಗೆ, ಪ್ಯಾನ್ ಕಾರ್ಡ್ ಗೆ, ಡ್ರೈವಿಂಗ್ ಲೈಸೆನ್ಸ್ ಗೆ, ರೇಷನ್ ಕಾರ್ಡ್ ಗೆ, ಬ್ಯಾಂಕ್ ಖಾತೆಗೆ, ಪಿಂಚಣಿಗೆ ಹೀಗೆ ಪ್ರತಿಯೊಂದು ದಾಖಲೆಗೂ ಕೂಡ ಆಧಾರ್ ಲಿಂಕ್ ಮಾಡುತ್ತೇವೆ. ಭಾರತ ಸರ್ಕಾರದ ಅಧೀನ ಸಂಸ್ಥೆಯಾದ UIDAI ದೇಶದ ನಾಗರಿಕರಿಗೆ ಆಧಾರ್ ಕಾರ್ಡ್ ವಿತರಿಸುತ್ತದೆ ಮತ್ತು ಕಾಲ ಕಾಲಕ್ಕೆ ಇದರ ಸಂಬಂಧಿತವಾಗಿ ಕೆಲವು ನಿಯಮಗಳನ್ನು ಹೊರಡಿಸುತ್ತದೆ.
ಅಂತೆಯೇ ಯಾರು ಕಳೆದ ಹತ್ತು ವರ್ಷಗಳಿಂದ ಒಮ್ಮೆಯೂ ಕೂಡ ತಮ್ಮ ಆಧಾರ್ ಅಪ್ಡೇಟ್ ಮಾಡಿಸಿಕೊಂಡಿಲ್ಲ ಅವರು ಯಾವುದೇ ತಿದ್ದುಪಡಿಗಳಿದ್ದಲ್ಲಿ ಅಥವಾ ಏನು ವ್ಯತ್ಯಾಸಗಳಿಲ್ಲದೆ ಇದ್ದರೂ ಮತ್ತೊಮ್ಮೆ ತಮ್ಮ POA / POI / ಬಯೋಮೆಟ್ರಿಕ್ ಮಾಹಿತಿ ಅಥವಾ ಮೊಬೈಲ್ ಸಂಖ್ಯೆ ಕೊಟ್ಟು ನವೀಕರಣಸಿಕೊಳ್ಳಬೇಕು ಎಂದು ಸೂಚನೆ ಕೊಡಲಾಗಿದೆ.
ಈ ಸುದ್ದಿ ಓದಿ:- 18 ಲಕ್ಷ ಸಿಮ್ ಕಾರ್ಡ್ ಬಂದ್ ಮಾಡಲು ಆದೇಶ, ನಿಮ್ಮ ನಂಬರ್ ಇದೆಯೇ ಚೆಕ್ ಮಾಡಿ.!
ಈಗಾಗಲೇ ಇದಕ್ಕೆ ಸಾಕಷ್ಟು ಬಾರಿ ಉಚಿತವಾಗಿ ಕಾಲಾವಕಾಶ ನೀಡಿರುವ ಸರ್ಕಾರವು ಜೂನ್ 14, 2024ಕ್ಕೆ ಇದಕ್ಕೆ ಕಡೆ ಗಡುವು ವಿಸ್ತರಿಸಿದೆ. ಒಂದು ವೇಳೆ ಈ ಅವಧಿ ಮುಗಿದ ಬಳಿಕವೂ ನೀವು ಕಳೆದ ಹತ್ತು ವರ್ಷಗಳಿಂದ ಅಪ್ಡೇಟ್ ಮಾಡಿಸದೆ ಉಳಿದಿದ್ದಲ್ಲಿ ನಿಮ್ಮ ಆಧಾರ್ ಸಂಬಂಧಿತ ಯಾವುದೇ ಕಾರ್ಯ ನಡೆಯಲು ಕಷ್ಟವಾಗಬಹುದು ಅಥವಾ ಅತಿಹೆಚ್ಚಿನ ದಂಡವನ್ನು ಪಾವತಿಸಿ, ಅದರ ಅಪ್ಡೇಟ್ ಮಾಡಿಸಬೇಕಾಗಿ ಬರಬಹುದು ಹಾಗಾಗಿ ತಪ್ಪದೆ ಈ ಪ್ರಕ್ರಿಯೆ ಪೂರ್ತಿ ಗೊಳಿಸಿ. ನೀವು ನಿಮ್ಮ ಮೊಬೈಲ್ ಮೂಲಕವೇ ಆದರೆ ನವೀಕರಿಸಬಹುದು. ಅದರ ಸಂಬಂಧಿತ ವಿಧಾನ ಈ ರೀತಿ ಇದೆ.
* Google ಕ್ರೋಮ್ ಗೆ ಹೋಗಿ UIDAI ವೆಬ್ ಸೈಟ್ ಗೆ ಭೇಟಿ ಕೊಡಿ
* UIDAI / Aadhar / Update Aadhar ಇತ್ಯಾದಿ ಲಿಂಕ್ ಗಳಲ್ಲಿ ಯಾವುದೇ ಒಂದನ್ನು ಕ್ಲಿಕ್ ಮಾಡಿ, ನಂತರ ನಿಮ್ಮ ಆಯ್ದ ಭಾಷೆಯನ್ನು ಸೆಲೆಕ್ಟ್ ಮಾಡಿ
* ಆಧಾರ್ ನವೀಕರಣ ಎನ್ನುವ ಲಿಂಕ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
ಈ ಸುದ್ದಿ ಓದಿ:- ಭಾರತೀಯ ವಾಯುಪಡೆಯಲ್ಲಿ ನೇಮಕಾತಿ, 304 ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ, ವೇತನ 1,77,500.!
* ತಕ್ಷಣ ಗುರುತು ಮತ್ತು ವಿಳಾಸ ಬೆಂಬಲಿಸುವ ದಾಖಲೆಗಳನ್ನು ಅಪ್ಡೇಟ್ ಮಾಡಿ ಎಂದು ಸ್ಕ್ರೀನ್ ಮೇಲೆ ಬರುತ್ತದೆ ಏನು ಸಲ್ಲಿಸುವುದು? ಸಲ್ಲಿಸುವುದು ಹೇಗೆ? ಏನು ಆಪ್ಷನ್ ಇರುತ್ತದೆ ಇದನ್ನು ಕ್ಲಿಕ್ ಮಾಡುವ ಮೂಲಕ ವಿಡಿಯೋ ಮೂಲಕ ಮಾರ್ಗದರ್ಶನ ಅಥವಾ ಟೋಲ್ ಫ್ರೀ ಸಂಖ್ಯೆಗಳಿಗೆ ಕರೆ ಮಾಡುವ ಮೂಲಕ ಮಾಹಿತಿ ಪಡೆಯಬಹುದು ನಂತರ ಸಲ್ಲಿಸು ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
* ಈಗ Log in to Aadhar with OTP ಎಂಬ ವಿಭಾಗಕ್ಕೆ ಬರುತ್ತೀರಿ
* ನಿಮ್ಮ ಮೊಬೈಲ್ ಸಂಖ್ಯೆ ಹಾಕಿ, Captcha Code ಎಂಟ್ರಿ ಮಾಡಿ Send OTP ಕ್ಲಿಕ್ ಮಾಡಿ ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ ಬಂದಿರುವ OTP ನಮೂದಿಸಿ ಲಾಗ್ ಇನ್ ಆಗಿ
* ನಿಮ್ಮ ಆಧಾರ್ ಪ್ರೊಫೈಲ್ ಕಾಣಿಸುತ್ತದೆ ಸ್ಕ್ರೋಲ್ ಮಾಡಿದರೆ ಡಾಕುಮೆಂಟ್ ನವೀಕರಣ ಸೇವೆ ವಿಭಾಗ ಬರುತ್ತದೆ, ಇದರ ನಂತರ ಮುಂದೆ ಎನ್ನುವ ಆಪ್ಷನ್ ಕಾಣುತ್ತದೆ.
* ಕ್ಲಿಕ್ ಮಾಡಿ ಕೇಳಲಾಗಿರುವ POA ಅಥವಾ POI ಗಳಲ್ಲಿ ನಿಮ್ಮ ಬಳಿ ಯಾವ ದಾಖಲೆ ಇದೆ, ಅದನ್ನು ಕೇಳಿರುವ ನಮೂನೆಯಲ್ಲಿ ಅಪ್ಲೋಡ್ ಮಾಡಿ ಅಥವಾ ಮೊಬೈಲ್ ಸಂಖ್ಯೆ ಬದಲಾಯಿಸುವುದಿದ್ದರೆ ಮೊಬೈಲ್ ಸಂಖ್ಯೆ ಬದಲಾಯಿಸಿ ಅಥವಾ ಭಾವಚಿತ್ರ ಬದಲಾಯಿಸುವುದಿದ್ದರೂ ಬದಲಾಯಿಸಬಹುದು. ಆದರೆ ಇದಕ್ಕೆ ಬಯೋಮೆಟ್ರಿಕ್ ಡಿವೈಸ್ ಗಳ ಅವಶ್ಯಕತೆ ಇರುವುದರಿಂದ ಆಧಾರ್ ಸೇವಾ ಕೇಂದ್ರಗಳಿಗೆ ಹೋಗಿ ಈ ಮೇಲೆ ತಿಳಿಸಿದ ದಾಖಲೆಗಳೊಂದಿಗೆ ನವೀಕರಿಸಿಕೊಳ್ಳುವುದು ಒಳ್ಳೆಯ ಆಪ್ಷನ್ ಆಗಿರುತ್ತದೆ. ಜೂನ್ 14ರ ಒಳಗೆ ತಪ್ಪದೆ ಈ ಪ್ರಕ್ರಿಯೆ ಪೂರ್ತಿಗೊಳಿಸಿ.