ಸರ್ಕಾರದಿಂದ ಹೊಸ ಯೋಜನೆ ಆರಂಭ, ಇನ್ಮುಂದೆ ಪ್ರತಿ ಕುಟುಂಬಕ್ಕೂ 20,000 ಸಾವಿರ ಆರ್ಥಿಕ ನೆರವು ಸಿಗಲಿದೆ, ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ.

ರಾಷ್ಟ್ರೀಯ ಕುಟುಂಬ ಪ್ರಯೋಜನ ಯೋಜನೆಯು (NFBS) ಕೇಂದ್ರ ಸರ್ಕಾರದ ನೂತನ ಯೋಜನೆಯಾಗಿದೆ. ಈಗಾಗಲೇ ಕೇಂದ್ರ ಸರ್ಕಾರವು ಹಲವಾರು ಯೋಜನೆಗಳ ಮೂಲಕ ದೇಶದ ನಾಗರಿಕರಿಗೆ ನೆರವಾಗಿದೆ. ಇವುಗಳ ಪೈಕಿ NFBS ಸ್ಕೀಮ್ ಕೂಡ ಒಂದು. ಬಡತನ ರೇಖೆಗಿಂತ ಕೆಳಗೆ ಇರುವ ಬಡ ಕುಟುಂಬದ ಕೆಟ್ಟ ಪರಿಸ್ಥಿತಿಯಲ್ಲಿ ಆರ್ಥಿಕ ನೆರವು ನೀಡುವ ಮೂಲಕ ಕುಟುಂಬದ ಪರಿಸ್ಥಿತಿಯನ್ನು ಸುಧಾರಿಸುವುದಕ್ಕೆ ಈ ಯೋಜನೆ ನೆರವಾಗುತ್ತಿದೆ.

ಕುಟುಂಬದ ಮುಖ್ಯಸ್ಥರಾದವರು ಕುಟುಂಬದ ಜವಾಬ್ದಾರಿಯನ್ನು ಹೊತ್ತಿರುತ್ತಾರೆ. ಆತನ ನಂಬಿಕೆಯಿಂದ ಕುಟುಂಬದ ಇತರ ಸದಸ್ಯರ ಜೀವನ ನಡೆಯುತ್ತಿರುತ್ತದೆ ಆದರೆ ಅಂತಹ ವ್ಯಕ್ತಿಯೇ ಅಚಾನಕ್ಕಾಗಿ ಮರಣ ಹೊಂದಿದರೆ ಆ ಕುಟುಂಬದ ಪರಿಸ್ಥಿತಿಯನ್ನು ಊಹಿಸಿ ಕೊಳ್ಳುವುದು ಅಸಾಧ್ಯ. ಅಂತಹ ಪರಿಸ್ಥಿತಿಯಲ್ಲಿ ಕುಟುಂಬಕ್ಕೆ ಆರ್ಥಿಕ ನೆರವು ನೀಡಿ, ಕುಟುಂಬಸ್ಥರಿಗೆ ಆಸರೆ ಆಗುವ ನಿರ್ಧಾರಕ್ಕೆ ಕೇಂದ್ರ ಸರ್ಕಾರವು ಬಂದಿದೆ.

ಹಾಗಾಗಿ ರಾಷ್ಟ್ರೀಯ ಕುಟುಂಬ ಪ್ರಯೋಜನ ಯೋಜನೆಯಡಿ ಅರ್ಜಿ ಸಲ್ಲಿಸಿ ಬಡತನ ರೇಖೆಗಿಂತ ಕೆಳಗಿರುವ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮುಖ್ಯಸ್ಥ ಮ.ರಣ ಹೊಂದಿದಾಗ ಆತನ ವಾರಸುದಾರರಿಗೆ 20,000 ನಗದು ಸಹಾಯಧನವನ್ನು ನೀಡಿ ಆಸರೆ ಆಗಲು ಕೇಂದ್ರ ಸರ್ಕಾರವು ಈ ರಾಷ್ಟ್ರೀಯ ಕುಟುಂಬ ಪ್ರಯೋಜನ ಯೋಜನೆಯನ್ನು ಜಾರಿಗೆ ತಂದಿದೆ.

ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಕುಟುಂಬಸ್ಥರು ಎಲ್ಲಿ ಅರ್ಜಿ ಸಲ್ಲಿಸಬೇಕು, ಯಾವಾಗ ಅರ್ಜಿ ಸಲ್ಲಿಸಬೇಕು, ಏನೆಲ್ಲ ದಾಖಲೆಗಳನ್ನು ನೀಡಬೇಕು ಎನ್ನುವುದರ ಕುರಿತು ವಿವರವಾಗಿ ಈ ಅಂಕಣದಲ್ಲಿ ತಿಳಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಇಂತಹ ಉಪಯುಕ್ತ ವಿಷಯದ ಬಗ್ಗೆ ದೇಶದ ಎಲ್ಲ ನಾಗರಿಕರಿಗೂ ಕೂಡ ಮಾಹಿತಿ ಇರಬೇಕು.

ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಕುಟುಂಬಸ್ಥರು ಮತ್ತು ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ. ಈ ಯೋಜನೆ ಬಗ್ಗೆ ಯಾವುದೇ ಗೊಂದಲಗಳು ಇದ್ದರೂ ಕೂಡ ಹೆಚ್ಚಿನ ವಿವರಕ್ಕಾಗಿ ಹತ್ತಿರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಗೆ ಭೇಟಿ ಕೊಟ್ಟು ಮಾಹಿತಿ ಪಡೆಯಬಹುದು.

NFBS ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ:-
● ಈ ಯೋಜನೆಗೆ ಆಫ್ ಲೈನ್ ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ.
● ಅರ್ಜಿ ಸಲ್ಲಿಸಲು ಹತ್ತಿರದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ಭೇಟಿ ಕೊಡಬೇಕು.
● NFBS ಯೋಜನೆಗೆ ಇರುವ ಅರ್ಜಿ ಫಾರಂ ಅನ್ನು ಸರಿಯಾದ ವಿವರಗಳೊಂದಿಗೆ ಭರ್ತಿ ಮಾಡಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಅರ್ಜಿಯನ್ನು ಸಲ್ಲಿಸಬೇಕು.
● ಕೇಳಲಾಗುವ ಅಗತ್ಯ ದಾಖಲೆಗಳ ಪ್ರತಿಗಳನ್ನು ಕೂಡ ಅರ್ಜಿ ಜೊತೆ ಲಗತ್ತಿಸಬೇಕು.
● ಮ.ರಣ ಹೊಂದಿದ ವ್ಯಕ್ತಿಯ ವಾರಸುದಾರರು ಅರ್ಜಿ ಸಲ್ಲಿಸಬೇಕು.

NFBS ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು:-
● ಅರ್ಜಿ ಸಲ್ಲಿಸುವ ವ್ಯಕ್ತಿಯ ಆಧಾರ್ ಕಾರ್ಡ್
● ಪ್ಯಾನ್ ಕಾರ್ಡ್
● ಬ್ಯಾಂಕ್ ಖಾತೆ ವಿವರ
● ಮೊಬೈಲ್ ಸಂಖ್ಯೆ
● ಕುಟುಂಬದ ಮುಖ್ಯಸ್ಥನ ವಯಸ್ಸಿನ ಪುರಾವೆ
● ಕುಟುಂಬದ ಮುಖ್ಯಸ್ಥನ ಮರಣ ಪ್ರಮಾಣ ಪತ್ರ
● ಅರ್ಜಿದಾರರ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು
● ಪಡಿತರ ಚೀಟಿ
● ಇನ್ನಿತ್ಯಾದಿ ಪ್ರಮುಖ ದಾಖಲೆಗಳು

NFBS ಯೋಜನೆಯ ಪ್ರಯೋಜನವನ್ನು ಪಡೆಯಲು ಬೇಕಾಗಿರುವ ಅರ್ಹತೆಗಳು:-
● ಭಾರತದ ನಿವಾಸಿಗಳು ಮಾತ್ರ ಈ ರಾಷ್ಟ್ರೀಯ ಕುಟುಂಬ ಪ್ರಯೋಜನ ಯೋಜನೆಯಡಿ ಆರ್ಥಿಕ ನೆರವನ್ನು ಪಡೆಯಲು ಅರ್ಜಿ ಸಲ್ಲಿಸಬಹುದು.
● ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.
● ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಮರಣ ಹೊಂದಿದ ವ್ಯಕ್ತಿಯ ವಾರಸುದಾರರು ಮಾತ್ರ ಅರ್ಹರಾಗಿರುತ್ತಾರೆ.

Leave a Comment

%d bloggers like this: