ಕಾಂಗ್ರೆಸ್ ಪಕ್ಷವು ಚುನಾವಣೆ ಪ್ರಚಾರದ ವೇಳೆ ಕರ್ನಾಟಕದ ಜನತೆಗಾಗಿ 5 ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಜಾರಿಗೆ ತರುತ್ತೇವೆ ಎಂದು ಹೇಳಿ, ಜನರ ವಿಶ್ವಾಸ ಗಳಿಸಿ ಅಂತಿಮವಾಗಿ ಕರ್ನಾಟಕ ವಿಧಾನಸಭಾ ಚುನಾವಣೆ 2023ರಲ್ಲಿ ವಿಜಯಶಾಲಿಗಳಾಗಿದ್ದಾರೆ. ರಾಜ್ಯದಲ್ಲಿ ಈಗ ಕಾಂಗ್ರೆಸ್ ಸರ್ಕಾರವೇ ಸ್ಥಾಪನೆ ಆಗಿದ್ದು ಪ್ರಚಾರದ ವೇಳೆ ಘೋಷಿಸಿದ್ದ ಯೋಜನೆಗಳನ್ನು ಜಾರಿಗೆ ತರಬೇಕಿದೆ.
ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿರುವ ಸಿದ್ದರಾಮಯ್ಯ ಅವರು ರಾಜ್ಯದ ಸಾಲದ ಹೊರೆ ಹೆಚ್ಚಾಗದಂತೆ ಕಡಾ ಖಂಡಿತವಾಗಿ ಐದಕ್ಕೆ ಐದು ಯೋಜನೆಗಳನ್ನು ಕೂಡ ಜಾರಿಗೆ ತರುತ್ತೇವೆ ಎಂದು ಹೇಳಿ ಕೊಟ್ಟ ಮಾತಿನಂತೆ ಮೊದಲ ಸಚಿವ ಸಂಪುಟದಲ್ಲಿ ಇದರ ಬಗ್ಗೆ ಚರ್ಚಿಸಿ ತಾತ್ವಿಕ ಅನುಮೋದನೆಯನ್ನು ಸಹ ನೀಡಿದ್ದಾರೆ. ಈಗ ರಾಜ್ಯದಲ್ಲೆಡೆ ಎಲ್ಲಾ ಜನರು ಕೂಡ ಈ ಉಚಿತ ಯೋಜನೆಗಳ ಪ್ರಯೋಜನ ಪಡೆಯಬಹುದು.
ಆದರೆ ಮೊದಲ ಸಚಿವ ಸಂಪುಟದಲ್ಲಿ ಇದಕ್ಕೆ ತಾತ್ವಿಕ ಅನುಮೋದನೆ ಮಾತ್ರ ಸಿಕ್ಕಿದೆ, ಈ ಯೋಜನೆಗಳ ಜಾರಿಗೆ ಇನ್ನು ಕೆಲವು ಮಾರ್ಗಸೂಚಿಗಳಿದ್ದು ಕೆಲ ನಿಯಮಗಳು ಹಾಗೂ ಕಂಡೀಶನ್ ಗಳನ್ನು ಕೂಡ ಸರ್ಕಾರ ಹೇಳಿದೆ. ಅದು ಏನಿರಲಿದೆ ಎನ್ನುವುದರ ಬಗ್ಗೆ ಮತ್ತೊಂದು ಸುತ್ತಿನ ಚರ್ಚೆ ನಡೆಸಿ ಪ್ರತ್ಯೇಕವಾಗಿ ಆದೇಶ ಹೊರಡಿಸಿದೆ ಅದನ್ನು ಕೂಡ ಶೀಘ್ರದಲ್ಲಿಯೇ ಮಾಡಲಿದ್ದೇವೆ ಎಂದು ಕಾಂಗ್ರೆಸ್ ಸರ್ಕಾರ ಒಪ್ಪಿಕೊಂಡಿದೆ.
ಈಗ ಜನ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳು ಯಾವಾಗ ಜನಕ್ಕೆ ಬರುತ್ತವೆ ಎಂದು ಎದುರು ನೋಡುತ್ತಿದ್ದಾರೆ. ಇದರಲ್ಲಿ ಐದನೇ ಗ್ಯಾರಂಟಿ ಆಗಿ ಶಕ್ತಿ ಯೋಜನೆ ಎನ್ನುವ ಹೆಸರಿನಲ್ಲಿ ಘೋಷಣೆ ಆಗಿದ್ದ ಕರ್ನಾಟಕದ ಎಲ್ಲಾ ಮಹಿಳೆಯರಿಗೂ ಕೂಡ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಾಹನಗಳಲ್ಲಿ ಉಚಿತ ಪ್ರಯಾಣ ಎನ್ನುವಂತಹ ಯೋಜನೆ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದ್ದು, ಶೀಘ್ರದಲ್ಲಿ ಇದೆ ಮೊದಲಿಗೆ ಜಾರಿಗೆ ಬರುವ ಸಾಧ್ಯತೆ ಇದೆ.
ಕಾಂಗ್ರೆಸ್ ಸರ್ಕಾರವು ತಮ್ಮ ಪಕ್ಷವು ಅಧಿಕಾರಕ್ಕೆ ಬಂದರೆ ಕರ್ನಾಟಕದಲ್ಲಿರುವ ಎಲ್ಲಾ ಮಹಿಳೆಯರು ಕೂಡ ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡಬಹುದು ಎಂದು ಹೇಳಿತ್ತು ಈಗ ಮುಖ್ಯಮಂತ್ರಿಗಳು ಕೂಡ ಆದೇಶ ಪತ್ರದಲ್ಲಿ ರಾಜ್ಯದ ಮಹಿಳೆಯರು ಕರ್ನಾಟಕ ರಾಜ್ಯದ ಸಾರಿಗೆ ಸಂಸ್ಥೆ ವಾಹನಗಳಾದ KSRTC, BMTC, ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡಬಹುದು.
ಆದರೆ ರಾಜ್ಯದ ಮಹಿಳೆಯರಿಗಷ್ಟೇ ಈ ಅವಕಾಶವನ್ನು ನೀಡಲಾಗುವುದು, ಐಷಾರಾಮಿ ಬಸ್ ಗಳಿಗೆ ಈ ಯೋಜನೆ ಅನ್ವಯವನ್ನು ನಿರ್ಪಂಧಿಸಲಾಗಿದೆ ಎಂದು ತಿಳಿಸಿದೆ. ಜೊತೆಗೆ ಈಗ ಬಂದಿರುವ ಸುದ್ದಿಗಳ ಪ್ರಕಾರ ಸಾರಿಗೆ ಇಲಾಖೆಗೂ ಕೂಡ ಇದರ ಬಗ್ಗೆ ಮಾರ್ಗಸೂಚಿಗಳನ್ನು ಸಿದ್ಧಪಡಿಸಲು ಸರ್ಕಾರ ಆಜ್ಞೆ ಹೊರಡಿಸಿದೆಯಂತೆ.
ಜೊತೆಗೆ ಸರ್ಕಾರವು ಇದಕ್ಕಾಗಿ ಒಂದು ವೆಬ್ಸೈಟ್ ತೆರೆಯಲಿದೆ ಅದರಲ್ಲಿ ಅರ್ಜಿ ಸಲ್ಲಿಸಿದ ಮತ್ತು ಸರ್ಕಾರವು ಕೇಳುವ ದಾಖಲೆಗಳನ್ನು ಹೊಂದಿದ ಮಹಿಳೆಯರಿಗೆ ಅಷ್ಟೇ ಅವಕಾಶವಿರುತ್ತದೆ ಎನ್ನುವ ಗಾಳಿ ಸುದ್ದಿಗಳು ಹರಿದಾಡುತ್ತಿತ್ತು, ಆದರೆ ಈಗ ಕೇಳಿ ಬರುತ್ತಿರುವ ಮಾತಿನ ಪ್ರಕಾರ ಮಹಿಳೆಯರಿಗೆ ಯಾವುದೇ ರೀತಿಯ ಪಾಸ್ ವಿತರಣೆ ಮಾಡುವುದಿಲ್ಲ, ಬದಲಾಗಿ ಆಧಾರ್ ಕಾರ್ಡ್ ಹೊಂದಿದ್ದರೆ ಸಾಕು. ಮಹಿಳೆಯರು ಆಧಾರ್ ಕಾರ್ಡ್ ತೋರಿಸಿದರೆ ಅವರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಸಿಗುತ್ತದೆ ಎನ್ನುವ ಮಾಹಿತಿಗಳು ಹರಿದಾಡುತ್ತಿವೆ. ಇನ್ನೆರಡು ದಿನಗಳಲ್ಲಿಯೇ ಇದಕ್ಕೆ ಸ್ಪಷ್ಟತೆ ಸಿಗಲಿದೆ, ಅಲ್ಲಿಯವರೆಗೂ ಕಾದು ನೋಡೋಣ.