ಕುಡಿತದ ದಾಸರಾಗಿ ಆರೋಗ್ಯ ಹಾನಿ ಮಾಡಿಕೊಂಡು ಮನೆಯವರಿಗೂ ಕೂಡ ಸಮಸ್ಯೆ ಆಗಿರುವವರು ನಮ್ಮ ನಡುವೆ ಸಾಕಷ್ಟು ಜನರಿದ್ದಾರೆ. ನಮ್ಮ ಕುಟುಂಬದಲ್ಲಿ ಅಥವಾ ಸ್ನೇಹಿತರ ಬಳಗದಲ್ಲಿ ಈ ರೀತಿ ಕುಳಿತದಿಂದ ಜೀವನ ಹಾಳು ಮಾಡಿಕೊಂಡವರ ಉದಾಹರಣೆಯನ್ನು ಕಣ್ಣಾರೆ ಕಂಡಿದ್ದೇವೆ. ಇಂಥವರಿಂದ ಅವರಿಗೆ ತಿಳಿಯದಂತೆ ಕುಡಿತದ ಚಟ ಬಿಡಿಸಬೇಕು ಎಂದರೆ ಬಹಳ ಕಷ್ಟ.
ಯಾವುದೇ ಔಷಧಿಗಳನ್ನು ಕೊಟ್ಟರು ಕೂಡ ಅದನ್ನು ಸ್ವೀಕರಿಸಲು ಅವರು ಸಿದ್ಧವಿರುವುದಿಲ್ಲ. ಹಾಗಾಗಿ ಅವರಿಗೆ ತಿಳಿಯದ ರೀತಿ ಕೆಲ ಮನೆ ಮದ್ದುಗಳನ್ನು ಮಾಡಿ ಅವರು ಕುಡಿಯುವ ಟೀ ಕಾಫಿ ಮತ್ತು ಮಧ್ಯದಲ್ಲಿ ಕೊಡುವುದರಿಂದ ಕೆಲವೇ ದಿನಗಳಲ್ಲಿ ಅವರು ಕುಡಿತದ ಚಟವನ್ನು ಬಿಟ್ಟು ನಾರ್ಮಲ್ ಆಗುತ್ತಾರೆ.
ಒಂದು ವೇಳೆ ಅವರಿಗೆ ಅವರ ತಪ್ಪಿನ ಅನುವಾಗಿ ಅವರೇ ಕುರಿತದಿಂದ ಹೊರ ಬರಬೇಕು ಎಂದು ಇಚ್ಛೆ ಪಟ್ಟರೆ ಇನ್ನು ಶೀಘ್ರವಾಗಿ ಸಮಸ್ಯೆಯಿಂದ ಹೊರ ಬರುತ್ತಾರೆ. ಅಂತಹ ಒಂದು ಅದ್ಭುತ ಮನೆ ಮದ್ದಿನ ಬಗ್ಗೆ ಇವತ್ತು ಈ ಅಂಕಣದಲ್ಲಿ ತಿಳಿಸಿಕೊಡುತ್ತಿದ್ದೇವೆ. ಈ ಮನೆಮದ್ದನ್ನು ಮಾಡುವುದರಿಂದ ಯಾವುದೇ ರೀತಿಯ ಸೈಡ್ ಎಫೆಕ್ಟ್ ಇರುವುದಿಲ್ಲ. ನೂರಕ್ಕೆ ನೂರರಷ್ಟು ನ್ಯಾಚುರಲ್ ಆದ ಪದಾರ್ಥವನ್ನು ಉಪಯೋಗಿಸಿ ಈ ಮನೆಮದ್ದನ್ನು ಮಾಡಬಹುದು.
ಇದಕ್ಕಾಗಿ ಬೇಕಾಗಿರುವುದು ಸೀತಾಫಲ ವೃಕ್ಷದ ಚಿಗುರು ಎಲೆ ಹಾಗೂ ಹೂವು ಮಾತ್ರ. ಸೀತಾಫಲ ಮರ ಹಳ್ಳಿಗಳಲ್ಲಿ ಎಲ್ಲಾ ಕಡೆ ಸಿಗುತ್ತದೆ, ಪ್ರತಿಮನೆ ಹಿತ್ತಲಲ್ಲಿಯೂ ಕೂಡ ಸೀತಾಫಲ ಗಿಡ ಇರುತ್ತದೆ. ಆ ಗಿಡದ ಚಿಗುರು ಎಲೆಗಳು ಮತ್ತು ಹೂವುಗಳನ್ನು ತೆಗೆದುಕೊಂಡು ಕುಡಿತದ ಚಟ ಬಿಡಿಸಲು ಅದ್ಭುತವಾದ ಔಷಧಿಯನ್ನು ನಾವೇ ಮನೆಯಲ್ಲಿ ಮಾಡಿಕೊಳ್ಳಬಹುದು.
ಸೀತಾಫಲದ ಚಿಗುರು ಎಲೆ ಹಾಗೂ ಹೂಗಳನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಅದನ್ನು ನುಣ್ಣಗೆ ಅರೆದು ಅಥವಾ ಜಜ್ಜಿ ಅದನ್ನು ಅವರೆಕಾಳಿನ ಗಾತ್ರ ಉಂಡೆಯಾಗಿ ಮಾಡಿಕೊಂಡು ಯಾವ ವ್ಯಕ್ತಿಯನ್ನು ಕುಡಿತದ ಚಟದಿಂದ ಬಿಡಿಸಬೇಕು ಅವರು ಕುಡಿಯುವ ಕಾಫಿ ಮತ್ತು ಚಹಾದಲ್ಲಿ ಹಾಕಿ ಕೊಡಬೇಕು. ಸಾಮಾನ್ಯವಾಗಿ ಕುಡಿತದ ಚಟ ಇರುವವರಿಗೆ ಬೆಳಗ್ಗೆ ಎದ್ದ ಕೂಡಲೇ ಕಾಫಿ ಅಥವಾ ಚಹಾ ಕುಡಿಯುವ ಅಭ್ಯಾಸ ಇರುತ್ತದೆ.
ಹಾಗಾಗಿ ಖಾಲಿ ಹೊಟ್ಟೆಯಲ್ಲಿ ಅವರು ಕುಡಿಯುವ ಕಾಫಿ ಅಥವಾ ಚಹಾಗೆ ಒಂದು ಬಾರಿ ಅವರೇ ಕಾಳಿನ ಗಾತ್ರದಷ್ಟು ಈ ಔಷಧ ಮತ್ತು ಸಂಜೆ ಸಮಯ ಕೂಡ ಒಂದು ಬಾರಿ ಅವರೇ ಕಾಳಿನ ಗಾತ್ರದಷ್ಟು ಇದನ್ನು ಅವರು ಕುಡಿಯುವ ಕಾಫಿ ಚಹಾಗೆ ಹಾಕಿಕೊಟ್ಟರೆ ದಿನ ಕಳೆಯುತ್ತಾ ಹೋದಂತೆ ಅವರು ದುಷ್ಚಟಗಳಿಂದ ಹೊರ ಬರುತ್ತಾರೆ. ಎಷ್ಟೇ ಕೆಟ್ಟ ಕುಡುಕರಾಗಿದ್ದರು ದಿನದಿಂದ ದಿನಕ್ಕೆ ಅವರು ಕುಡಿತದ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಾರೆ.
ಒಂದು ವೇಳೆ ಅವರೇ ಇಚ್ಚೆಪಟ್ಟು ಕುಡಿತದ ಚಟ ಬಿಡಬೇಕು ಎಂದು ಅಂದುಕೊಂಡರೆ ಅವರು ಕುಡಿಯುವ ಮಧ್ಯದಲ್ಲಿ ಬೆಳಿಗ್ಗೆ ಹಾಗೂ ಸಂಜೆ ದಿನದಲ್ಲಿ ಎರಡು ಬಾರಿ ಈ ರೀತಿ ಅವರೆಕಾಳು ಗಾತ್ರದ ಸೀತಾಫಲ ವೃಕ್ಷದ ಎಲೆ ಹಾಗೂ ಹೂವನ್ನು ಅರೆದಿರುವ ಉಂಡೆಯನ್ನು ಹಾಕಿ ಕೊಡಬೇಕು. ಆಗ ಇನ್ನು ಪರಿಣಾಮಕಾರಿಯಾಗಿ ಎರಡು ಮೂರು ದಿನಗಳಲ್ಲೇ ಅವರು ಕುಡಿತದ ಸಹವಾಸಕ್ಕೆ ಹೋಗುವುದನ್ನು ಬಿಟ್ಟುಬಿಡುತ್ತಾರೆ.
ಅಷ್ಟು ಆಶ್ಚರ್ಯಕರ ರೀತಿಯಲ್ಲಿ ಅವರು ಕುಡಿತದಿಂದ ದೂರ ಹೋಗಿರುತ್ತಾರೆ. ಈ ಒಂದು ಉಪಾಯ ಅನೇಕರಿಗೆ ಸಹಾಯವಾಗಬಹುದು ಆದ್ದರಿಂದ ಇಂತಹ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರ ಜೊತೆಗೆ ಹಂಚಿಕೊಳ್ಳಿ.