ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ ಮೇಲೆ ಈ ರೀತಿ ಬಂದಿಲ್ಲ ಅಂದ್ರೆ ಉಚಿತ ವಿದ್ಯುತ್ ಸಿಗಲ್ಲ. ಸ್ಟೇಟಸ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.

 

WhatsApp Group Join Now
Telegram Group Join Now

ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಮೊದಲನೇ ಗ್ಯಾರಂಟಿಯಾಗಿ ಘೋಷಣೆ ಆಗಿದ್ದ ಗೃಹಜ್ಯೋತಿ ಯೋಜನೆಯು ಜುಲೈ 1 ರಿಂದ ಅನ್ವಯ ಆಗಲಿದೆ. ಸರ್ಕಾರ ಅರ್ಜಿ ಆಹ್ವಾನ ಮಾಡಿದ್ದು ಸೇವಾಸಿಂಧು ಪೋರ್ಟಲ್ ಮೂಲಕ ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರದಲ್ಲಿ ಅರ್ಜಿ ಸಲ್ಲಿಸಲು ಸೂಚಿಸಿದೆ. ಮೊಬೈಲ್ ಮತ್ತು ಲ್ಯಾಪ್ಟಾಪ್ ಗಳಿಂದ ಕೂಡ ಸೇವಾ ಸಿಂಧು ಪೋರ್ಟಲ್ ಗೆ ಲಾಗಿನ್ ಆಗಿ ಅರ್ಜಿ ಸಲ್ಲಿಸಬಹುದು.

ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವವರಿಗೆ ಗ್ರಾಮ ಪಂಚಾಯಿತಿ ಅಥವಾ ಹತ್ತಿರದ ವಿದ್ಯುತ್ ಸರಬರಾಜು ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಲು ತಿಳಿಸಿದೆ. ಯಾರು ಜೂನ್ 25ರ ಒಳಗೆ ಅರ್ಜಿ ಸಲ್ಲಿಸಿ ನೊಂದಣಿ ಆಗುವುದಿಲ್ಲ ಅವರಿಗೆ ಜುಲೈ ತಿಂಗಳ ಬಳಕೆಗೆ ಆಗಸ್ಟ್ ಅಲ್ಲಿ ನೀಡುವ ವಿದ್ಯುತ್ ಬಿಲ್ ಅನ್ನು ಪೂರ್ತಿ ಬಿಲ್ ನೀಡಲಾಗುವುದು ಎಂದು ಇಂಧನ ಸಚಿವರು ಎಚ್ಚರಿಕೆ ಕೊಟ್ಟಿದ್ದಾರೆ.

ಹಾಗಾಗಿ ಜುಲೈ 25ರ ಕಡೆ ದಿನಾಂಕವಾಗಿದ್ದರೂ ಅದಕ್ಕೆ ಮುಂಚಿತವಾಗಿಯೇ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿ ಮತ್ತು ನಿಮ್ಮ ಅರ್ಜಿ ಸ್ವೀಕೃತಿ ಆಗಿದೆಯೇ ಎಂದು ಅದನ್ನು ಸ್ಟೇಟಸ್ ಕೂಡ ಒಮ್ಮೆ ಚೆಕ್ ಮಾಡಿಕೊಳ್ಳಿ. ಯಾಕೆಂದರೆ ನೀವು ಅರ್ಜಿ ಸಲ್ಲಿಸಿದಾಗ ಟೆಕ್ನಿಕಲ್ ಎರರ್ ಆಗಿದ್ದರೆ ಅರ್ಜಿ ಸಲ್ಲಿಕೆ ಪೂರ್ತಿ ಆಗಿದೆ ಎಂದು ಸುಮ್ಮನಾಗಿರಬಹುದು. ನಿಮ್ಮ ಅರ್ಜಿ ಪ್ರೋಸೆಸಿಂಗ್ ಅಲ್ಲಿ ಇಲ್ಲ ಎಂದರೆ ನೀವು ಅರ್ಜಿ ಸಲ್ಲಿಸಿಲ್ಲ ಎಂದೇ ಲೆಕ್ಕ ಆಗಬಹುದು ಆ ಕಾರಣಕ್ಕಾಗಿ ತಪ್ಪದೇ ಸ್ಟೇಟಸ್ ಕೂಡ ಚೆಕ್ ಮಾಡಿಕೊಳ್ಳಿ.

ಗೃಹ ಜ್ಯೋತಿ ಯೋಜನೆಯ ಸ್ಟೇಟಸ್ ಚೆಕ್ ಮಾಡುವ ವಿಧಾನ:-
● ಮೊದಲಿಗೆ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಸೂಚಿಸಿರುವ ಸೇವಾ ಸಿಂಧು ಪೋರ್ಟಲ್ ವೆಬ್ಸೈಟ್ https://sevasindhugs.karnataka.gov.in/ ಗೆ ಭೇಟಿಕೊಡಿ.
● ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿ ಯೋಜನೆ ಮತ್ತು ಯುವನಿಧಿ ಗೆ ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ನಾಲ್ಕು ಆಪ್ಷನ್ ಕಾಣುವ ಪೇಜ್ ಓಪನ್ ಆಗುತ್ತದೆ.
● ಆ ಪೇಜ್ ನ ಎಡ ಭಾಗದ ಮೇಲೆ ಮೂರು ಗೆರೆಗಳು ಕಾಣಿಸುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.

● ಅದರಲ್ಲಿ ಮೂರನೇ ಆಪ್ಷನ್ ನಲ್ಲಿ ನಿಮ್ಮ ಅರ್ಜಿಯ ಸ್ಥಿತಿಯನ್ನು ತಿಳಿಯಿರಿ ಎನ್ನುವ ಆಯ್ಕೆ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿ.
● ಮೊದಲಿಗೆ ನಿಮ್ಮ ಎಸ್ಕಾಂ ಸೆಲೆಕ್ಟ್ ಮಾಡಬೇಕಾಗುತ್ತದೆ ನಂತರ ನಿಮ್ಮ ಅಕೌಂಟ್ ಐಡಿಯನ್ನು ಕೇಳಲಾಗುತ್ತದೆ. ಆ ಬಾಕ್ಸ್ ಅಲ್ಲಿ ನಿಮ್ಮ ವಿದ್ಯುತ್ ಬಿಲ್ ಅಕೌಂಟ್ ಐಡಿ ಎಂಟ್ರಿ ಮಾಡಿ ಸೆಲೆಕ್ಟ್ ಸ್ಟೇಟಸ್ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.

● ನಿಮ್ಮ ಅರ್ಜಿ ಸಲ್ಲಿಕೆ ಸರಿಯಾಗಿದ್ದರೆ ಮತ್ತು ನಿಮ್ಮ ಅರ್ಜಿ ಮುಂದಿನ ಹಂತಕ್ಕೆ ಹೋಗಿದ್ದರೆ ಸ್ಕ್ರೀನ್ ಮೇಲೆ ನಿಮ್ಮ ಅಪ್ಲಿಕೇಶನ್ ರೆಫರೆನ್ಸ್ ನಂಬರ್, ಅಕೌಂಟ್ ಐಡಿ, ನೀವು ನೋಂದಣಿ ಆದ ದಿನಾಂಕ ಮತ್ತು ವಿದ್ಯುತ್ ಇಲಾಖೆಯ ಒಂದು ಘೋಷಣೆ ಕಾಣುತ್ತದೆ.
● ಸ್ಟೇಟಸ್ ಅಲ್ಲಿ ಯುವರ್ ಅಪ್ಲಿಕೇಶನ್ ಫಾರ್ ಗೃಹಜ್ಯೋತಿ ಸ್ಕೀಮ್ ಇಸ್ ರಿಸೀವ್ಡ್ ಅಂಡ್ ಸೆಂಡ್ ಟು ESCOM ಫಾರ್ ಪ್ರೊಸೆಸಿಂಗ್ ಎನ್ನುವುದು ಬರುತ್ತದೆ. ಈ ರೀತಿ ಬಂದರೆ ನಿಮ್ಮ ಅಪ್ಲಿಕೇಶನ್ ಪ್ರೋಸೆಸಿಂಗ್ ಅಲ್ಲಿ ಇದೆ ಸರಿಯಾಗಿ ಅರ್ಜಿ ಸಲ್ಲಿಸಿದ್ದೀರಿ ಎಂದು ಅರ್ಥ ಒಂದು ವೇಳೆ ಈ ರೀತಿ ಬರೆದೇ ಇದ್ದಲ್ಲಿ ಮತ್ತೊಮ್ಮೆ ನೀವು ಗೃಹಜ್ಯೋತಿ ಯೋಜನೆಗೆ ಮೊದಲಿನಿಂದ ಅರ್ಜಿ ಸಲ್ಲಿಸಬೇಕು.

 

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now