ಕರ್ನಾಟಕದ ಮಹಿಳೆಯರಿಗೆಲ್ಲಾ ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳ ಮೂಲಕ ಬರಪೂರ ಗಿಫ್ಟ್ ನೀಡಿದೆ. ಅದರಲ್ಲೂ ಗೃಹಲಕ್ಷ್ಮಿ ಯೋಜನೆಯ ಮೂಲಕ ಪ್ರತಿ ತಿಂಗಳು ಸರ್ಕಾರದ ವತಿಯಿಂದ 2,000ರೂ. ಸಹಾಯಧನವನ್ನು ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿರುವ ಮಹಿಳೆಯು ಪಡೆಯುತ್ತಿದ್ದಾರೆ.
ಆಗಸ್ಟ್ 30 ರಿಂದ ಈ ರೀತಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲು ಅನುಮತಿ ನೀಡಲಾಗಿದ್ದು, ಹಂತ ಹಂತವಾಗಿ ಯೋಜನೆಗೆ ಅರ್ಹರಾಗಿದ್ದ ಎಲ್ಲ ಮಹಿಳೆಯರು ಕೂಡ ಹಣ ಪಡೆದಿದ್ದಾರೆ ಈಗ ಎರಡನೇ ಕಂತಿನ ಹಣ ವರ್ಗಾವಣೆ ಮಾಡುವುದಕ್ಕೆ ಸಿದ್ಧತೆ ಕೂಡ ನಡೆಯುತ್ತಿದೆ.
60 ವರ್ಷ ದಾಟಿದವರಿಗೆ ಪ್ರತಿ ತಿಂಗಳು 10,000 ಪಿಂಚಣಿ ಘೋಷಣೆ, ಹಣ ಪಡೆಯಲು ಮುಗಿಬಿದ್ದ ಜನ.!
ಆದರೆ ಇನ್ನು ನಮಗೆ ಮೊದಲನೇ ಕಂತಿನ ಹಣ ಬಂದಿಲ್ಲ ಎನ್ನುವವರು ಇದ್ದಾರೆ ಸೆಪ್ಟೆಂಬರ್ ತಿಂಗಳು ಕೂಡ ಮುಗಿದು ಹೋಗಿದೆ ಎರಡನೇ ಕಂತಿನ ಹಣ ಬಿಡುಗಡೆ ಆಗುತ್ತಿದೆ ಹಾಗಾದರೆ ಮೊದಲನೇ ಕಂತಿನ ಹಣ ಪಡೆಯಲು ಆಗದಿದ್ದವರಿಗೆ ಹಣ ಸಿಗುವುದಿಲ್ಲವೇ ಎನ್ನುವ ಅನುಮಾನಗಳಿದ್ದರೆ ಅದಕ್ಕೆ ಉತ್ತರ ಇಲ್ಲಿದೆ ನೋಡಿ.
● ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ನೀಡಿರುವ ಮಾಹಿತಿ ಪ್ರಕಾರ 7 ರಿಂದ 8 ಲಕ್ಷ ಮಹಿಳೆಯರ ಖಾತೆಗಳಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದೆ. ಫಲಾನುಭವಿಗಳ ದಾಖಲೆಗಳಲ್ಲಿ ನೀಡಿರುವ ಹೆಸರುಗಳು ಮಿಸ್ ಮ್ಯಾಚ್ ಆಗಿರುವುದು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗದೆ ಇರುವುದು, ಖಾತೆಗಳು ಇನ್ ಆಕ್ಟೀವ್ ಆಗಿರುವುದು ಇತ್ಯಾದಿ ಕಾರಣಗಳಿಂದ ಹಣ ವರ್ಗಾವಣೆ ಆಗಿಲ್ಲ ಎನ್ನುವ ಮಾಹಿತಿ ತಿಳಿದು ಬಂದಿದೆ. ಇದನ್ನು ಸರಿಪಡಿಸಿಕೊಂಡರೆ ಅಂತಹ ಮಹಿಳೆಯರಿಗೆ ಎರಡು ಕಂತಿನ ಹಣವು ಕೂಡ ಒಟ್ಟಿಗೆ ಬರಲಿದೆ.
● ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸುವಾಗ ಯಾವುದೇ ರೀತಿಯ ಬ್ಯಾಂಕ್ ಖಾತೆ ಮಾಹಿತಿ ಕೇಳಿರಲಿಲ್ಲ, ಆದರೆ ಕೆಲವು ಮಹಿಳೆಯರು ತಮ್ಮ ಬ್ಯಾಂಕ್ ಖಾತೆ ಮಾಹಿತಿ ನೀಡಿದ್ದರು. ಈಗ ಅದೇ ಖಾತೆಗೆ ಹಣ ಬರುತ್ತದೆ ಎಂದು ನಿರೀಕ್ಷಿಸುತ್ತಿರಬಹುದು ಆದರೆ ಅವರ ಆಧಾರ್ ಕಾರ್ಡ್ ಈಗಾಗಲೇ ಯಾವುದಾದರೂ ಬ್ಯಾಂಕ್ ಖಾತೆಗೆ ಲಿಂಕ್ ಆಗಿದ್ದರೆ ಆ ಖಾತೆಗೆ ಹಣ ಹೋಗಿರುತ್ತದೆ ಅದನ್ನು ಪರಿಶೀಲಿಸಿಕೊಳ್ಳಬೇಕು.
● ಮಹಿಳೆಯು ಮೂರ್ನಾಲ್ಕು ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾಗ ಯಾವ ಬ್ಯಾಂಕ್ ಖಾತೆಗೆ ಹಣ ಹೋಗಿದೆ ಎನ್ನುವುದು ತಿಳಿಯದೆ ಗೊಂದಲಕ್ಕೆ ಒಳಗಾಗಿರಬಹುದು. ಅವರು ನೇರವಾಗಿ ಹತ್ತಿರದಲ್ಲಿರುವ ಕರ್ನಾಟಕ ಒನ್, ಬೆಂಗಳೂರು ಒನ್, ಅಥವಾ ಗ್ರಾಮ ಒನ್ ಸೇವಾಕೇಂದ್ರಗಳಿಗೆ ಭೇಟಿಕೊಟ್ಟು ತಮ್ಮ ಗೃಹಲಕ್ಷ್ಮಿ ಯೋಜನೆ ಅರ್ಜಿ ಸ್ಥಿತಿ ಪರಿಶೀಲಿಸಿಕೊಂಡರೆ ಅವರ ಖಾತೆಗೆ ಹಣ ಬಂದಿದ್ದರೆ ಯಾವ ಬ್ಯಾಂಕ್ ಖಾತೆಗೆ ಹಣ ಬಂದಿದೆ ಎನ್ನುವುದರ ಮಾಹಿತಿ ತಿಳಿದು ಬರುತ್ತದೆ. ಒಂದು ವೇಳೆ ಹಣ ವರ್ಗಾವಣೆಯಾಗಲು ಸಮಸ್ಯೆ ಇದ್ದರೆ ಏನಾಗಿದೆ ಎಂದು ಅವರು ತಿಳಿಸುತ್ತಾರೆ.
ಬೋರ್ವೆಲ್ ಹಾಕಿಸಬೇಕು ಅಂದುಕೊಂಡವರಿಗೆ ಉಪಯುಕ್ತ ಮಾಹಿತಿ.!
● ಅನ್ನಭಾಗ್ಯ ಯೋಜನೆ ಹಣ ಪಡೆದಿರುವವರು ಅದೇ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆ ಹಣವನ್ನು ಪಡೆಯಲಿದ್ದಾರೆ.
● ಕೆಲವು ಮಹಿಳೆಯರು ಬ್ಯಾಂಕ್ ಗಳಿಂದ ಸಾಲ ಪಡೆದಿರುತ್ತಾರೆ ಹೀಗಾಗಿ ಹಣ ಅವರ ಖಾತೆಗೆ ಹಣ ವರ್ಗಾವಣೆ ಆಗಿದ್ದರೂ ಅದು ಆಟೋ ಡಿಟೆಕ್ಟ್ ಆಗಿರುವ ಸಾಧ್ಯತೆ ಇರುತ್ತದೆ. ಹಾಗಾಗಿ ಬ್ಯಾಂಕಿಗೆ ಹೋಗಿ ಸ್ಟೇಟ್ಮೆಂಟ್ ಪಡೆದರೆ ಅಥವಾ ಪಾಸ್ ಬುಕ್ ಎಂಟ್ರಿ ಮಾಡಿಸಿದರೆ ಅವರಿಗೆ ಮಾಹಿತಿ ಸಿಗುತ್ತದೆ.
● ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿದ್ದ 1.10 ಕೋಟಿ ಮಹಿಳೆಯರ ಖಾತೆಗೆ ಹಣ ತುಂಬಿಸುವಷ್ಟು ಹಣ ಈಗಾಗಲೇ ಸಂಬಂಧಪಟ್ಟ ಇಲಾಖೆಗೆ ವರ್ಗಾವಣೆಯಾಗಿದೆ. ಇಲಾಖೆ ವತಿಯಿಂದ RBI ನಿಯಮದ ಅನುಸಾರವಾಗಿ ಹಣ ವರ್ಗಾವಣೆ ಮಾಡಲಾಗುತ್ತಿದೆ ಹಾಗಾಗಿ ದಿನಕ್ಕೆ ಇಂತಿಷ್ಟೇ ಖಾತೆಗಳು ಎನ್ನುವ ಮಿತಿ ಇದೆ.
ಸೆಪ್ಟೆಂಬರ್ ತಿಂಗಳಿನಲ್ಲಿ ಹಣ ಪಡೆಯಲಾಗದೆ ಇದ್ದರೆ ಅವರಿಗೆ ಅಕ್ಟೋಬರ್ ತಿಂಗಳಲ್ಲಿ ಮೊದಲ ಕಂತಿನ ಹಣ ಬರುವ ಸಾಧ್ಯತೆ ಇದೆ ಆದರೆ ಮೊದಲನೇ ಕಂತಿನ ಹಣ ಪಡೆಯದೆ ಇದ್ದವರಿಗೆ, ಅದನ್ನು ಪಡೆಯುವವರೆಗೂ ಮುಂದಿನ ಕಂತುಗಳ ಹಣ ಬರುವುದಿಲ್ಲ ಎನ್ನುವುದು ಖಚಿತ.