Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ನಮ್ಮ ದೇಶದಲ್ಲಿ ಅನೇಕ ವರ್ಗಗಳಿಗೆ ಪ್ರತಿ ತಿಂಗಳು ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಕೊಡುವ ಮೂಲಕ ನೊಂದ ವರ್ಗಗಳಿಗೆ ಸರ್ಕಾರ ಆಶಾಕಿರಣವಾಗಿದೆ. ಅಂಗವಿಕಲರು, ವಿಧವೆಯರು, ವೃದ್ಧರು ಈ ಯೋಜನೆಗಳು ಮಾಸಿಕ ಪಿಂಚಣಿ ಪಡೆದು ಬದುಕು ತಳ್ಳುತ್ತಿದ್ದಾರೆ. ಸದ್ಯಕ್ಕೆ ಕರ್ನಾಟಕ ರಾಜ್ಯದಲ್ಲಿ ಕೂಡ ಪ್ರತಿ ತಿಂಗಳು ಕೂಡ ಅಂಗವಿಕಲರಿಗೆ, ವಿಧವೆಯರಿಗೆ ಮತ್ತು ವೃದ್ಧರಿಗೆ ಹಾಗೂ ಲೈಂಗಿಕ ಅಲ್ಪಸಖ್ಯಾತರಿಗೆ ಈ ರೀತಿಯ ಪಿಂಚಣಿ ಭಾಗ್ಯ ಸಿಗುತ್ತಿದೆ.
ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲಿಯೂ ಕೂಡ ಈ ವರ್ಗದವರಿಗೆ ಪಿಂಚಣಿಯನ್ನು ಅಲ್ಲಿನ ರಾಜ್ಯಸರ್ಕಾರಗಳು ನೀಡುತ್ತಿವೆ. ಆದರೆ ಹರಿಯಾಣ ರಾಜ್ಯದಲ್ಲಿ ಮಾತ್ರ ಮದುವೆ ಆಗದೆ ಸಿಂಗಲ್ ಆಗಿ ಇರುವಂತವರಿಗೆ ವಿಶೇಷ ಭತ್ಯೆಯಡಿ ಪ್ರತಿ ತಿಂಗಳು 2750ರೂ ಕೊಡಲು ಅಲ್ಲಿನ ಸರ್ಕಾರ ಮುಂದಾಗಿದೆ. ಈಗ ಇದು ದೇಶದ ಎಲ್ಲರ ಗಮನ ಸೆಳೆದಿದೆ.
ಬಡತನ ರೇಖೆಗಿಂತ ಕೆಳಗಿರುವ ವಾರ್ಷಿಕವಾಗಿ 1.8ಲಕ್ಷ ಆದಾಯವನ್ನು ಹೊಂದಿರುವ ಹಾಗೂ 45 ವರ್ಷಕ್ಕಿಂತ ಮೇಲ್ಪಟ್ಟು 60 ವರ್ಷದ ಒಳಗಿರುವ ಪುರುಷರು ಏಕಾಂಗಿಯಾಗಿದ್ದರೆ ಅವರು ಇನ್ನು ಸಹ ಮದುವೆ ಆಗಿಲ್ಲ ಎಂದರೆ ಅವರಿಗೆ ಸರ್ಕಾರವು ವಿಶೇಷ ಯೋಜನೆಯಡಿ ಪ್ರತಿ ತಿಂಗಳು 2750ರೂ ಭತ್ಯೆಯನ್ನು ಅವರ ಅಕೌಂಟಿಗೆ ಜಮೆ ಮಾಡುತ್ತದೆ.
ಪುರುಷರಿಗೆ ಮಾತ್ರವಲ್ಲದೆ ಮದುವೆ ಆಗದೆ ಏಕಾಂಗಿ ಉಳಿದ ಮಹಿಳೆಯರಿಗೂ ಕೂಡ ಈ ಯೋಜನೆಯಡಿ 2750 ಭತ್ಯೆ ನೀಡುತ್ತಿದೆ. ಇದು ಬಹಳ ವಿಶೇಷ ಎನಿಸಿ ಅಲ್ಲಿನ ಮುಖ್ಯಮಂತ್ರಿಗಳನ್ನು ಮಾಧ್ಯಮಗಳು ಪ್ರಶ್ನಿಸಿದಾಗ ಮದುವೆ ಆಗಿರುವವರಿಗೆ ಸಂಗಾತಿ ಜೊತೆಗಿರುತ್ತಾರೆ, ಇಬ್ಬರಲ್ಲಿ ಯಾರೊಬ್ಬರು ದುಡಿದರೂ ಕೂಡ ಬದುಕು ಹೇಗೋ ಸಾಗುತ್ತದೆ, ಒಬ್ಬರ ಕಷ್ಟಕ್ಕೆ ಮತ್ತೊಬ್ಬರು ನೆರವಾಗಿರುತ್ತಾರೆ.
ಆದರೆ ವಯಸ್ಸಾದರೂ ಮದುವೆಯಾಗದೆ ಉಳಿದವರಿಗೆ ಈ ಸಹಾಯಧನದ ಅಗತ್ಯ ಇರುತ್ತದೆ ಅದನ್ನು ಅರಿತುಕೊಂಡು ಈ ಯೋಜನೆ ಜಾರಿಗೆ ತಂದಿದ್ದೇವೆ ಎಂದಿದ್ದಾರೆ. ಈ ಮಾತುಗಳು ಅಕ್ಷರಶಃ ಸತ್ಯ ಎಂದು ಪ್ರತಿಯೊಬ್ಬರು ಒಪ್ಪಿಕೊಳ್ಳಲೇ ಬೇಕು. ಯಾಕೆಂದರೆ ಪುರುಷರಿಗಿಂತ ಮಹಿಳೆಯರು ಈ ಸಮಸ್ಯೆಯಿಂದ ಬಳಲಿರುತ್ತಾರೆ.
ಒಂದು ವೇಳೆ ಅವರು ಮದುವೆ ಆಗದೆ ಉಳಿದರು ಕೂಡ ಆರ್ಥಿಕವಾಗಿ ಶಕ್ತರಾಗಿ, ವಿದ್ಯಾವಂತರಾಗಿ ಉದ್ಯೋಗಸ್ಥರಾಗಿದ್ದಾರೆ ಬದುಕು ಸರಳ. ಸ್ವತಂತ್ರವಾಗಿ ಅವರ ಬದುಕನ್ನು ಕಟ್ಟಿಕೊಂಡು ನೆಮ್ಮದಿಯಾಗಿರುತ್ತಾರೆ. ಆದರೆ ಒಂದು ವೇಳೆ ಅವರು ನಿರುದ್ಯೋಗಿಗಳಾಗಿದ್ದು ಮದುವೆ ಆಗದೆ ಮನೆಯಲ್ಲೇ ಉಳಿದಿದ್ದರೆ 40 ವರ್ಷ ತುಂಬಿದ ಬಳಿಕ ಅವರ ಕುಟುಂಬದಲ್ಲಿ ಅವರು ಪರರಾಗಿ ಬದುಕಬೇಕಾಗುತ್ತದೆ.
ತಂದೆ ತಾಯಿ ಆ ವೇಳೆಗಾಗಲೇ ಶಕ್ತಿ ಹೀನರಾಗಿರುತ್ತಾರೆ ಅಥವಾ ಇಲ್ಲವಾಗಿರುತ್ತಾರೆ ಜೊತೆಯಲ್ಲಿ ಹುಟ್ಟಿದವರಿಗೆ ಅವರದ್ದೇ ಸಂಸಾರದ ಭಾರವಿರುತ್ತದೆ ಹಾಗಾಗಿ ಇಂತಹ ಸಮಯದಲ್ಲಿ ಖಂಡಿತವಾಗಿಯೂ ಅವರಿಗೆ ಇಂತಹದೊಂದು ಸಹಾಯಹಸ್ತದ ಅವಶ್ಯಕತೆ ಇರುತ್ತದೆ. ಈ ರೀತಿ ಮದುವೆ ಆಗದೆ ಉಳಿದ ಪುರುಷ ಮತ್ತು ಮಹಿಳೆಯರಿಗೆ ಮಾತ್ರವಲ್ಲದೆ 40 ರಿಂದ 60 ವರ್ಷದ ಒಳಗಿನ ವಾರ್ಷಿಕವಾಗಿ ಮೂರು ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಪತ್ನಿಯನ್ನು ಕಳೆದುಕೊಂಡ ವಿಧುರ ಹಾಗೂ ಪತಿಯನ್ನು ಕಳೆದುಕೊಂಡ ವಿಧವೆ ಮಹಿಳೆಯರಿಗೂ ಕೂಡ ಈ ವಿಶೇಷ ಭತ್ಯೆಯನ್ನು ನೀಡಲು ಅಲ್ಲಿನ ಸರ್ಕಾರ ಮುಂದಾಗಿದೆ.
ವಾರ್ಷಿಕವಾಗಿ ಹರಿಯಾಣ ಸರ್ಕಾರಕ್ಕೆ ಇದರಿಂದ 240 ಕೋಟಿ ಆರ್ಥಿಕ ಹೊರೆ ಹೆಚ್ಚಾಗಲಿದೆ. ಹರಿಯಾಣ ಸರ್ಕಾರದ ಈ ಯೋಜನೆಯನ್ನು ದೇಶದ ಅನೇಕರು ಒಪ್ಪಿದ್ದು ಎಲ್ಲ ರಾಜ್ಯಗಳಲ್ಲೂ ಕೂಡ ಈ ರೀತಿಯ ವಿಶೇಷ ಭತ್ಯೆ ಜಾರಿ ಆಗಬೇಕು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹರಿಯಾಣ ಸರ್ಕಾರ ನೀಡುತ್ತಿರುವ ಈ ವಿಶೇಷ ಭಾಗ್ಯದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.