MNC ಬಿಟ್ಟು ಬಣ್ಣ ಬಣ್ಣದ ಹೂ ಬೆಳೆದು ಹಳ್ಳಿಯಲ್ಲಿ ಒಂದು ಕೋಟಿ ದುಡಿದ MBA ಗ್ರಾಜುಯೇಟ್.!

ಆಗದು ಎಂದು ಕೈಕಟ್ಟಿ ಕುಳಿತರೆ ಜೀವನದಲ್ಲಿ ಏನನ್ನು ಸಾಧಿಸಲು ಆಗುವುದಿಲ್ಲ. ಮನಸ್ಸಿದ್ದರೆ ಮಾರ್ಗ ಹಾಗಾಗಿ ಕೆಚ್ಚೆದೆಯಿಂದ ಮುನ್ನುಗ್ಗಬೇಕು ಅಂದುಕೊಂಡಿದ್ದನು ಕಷ್ಟವಾದರೂ ಸಾಧಿಸಬೇಕು. ಇಂತಹದೇ ಒಂದು ಹಠಕ್ಕೆ ಬಿದ್ದ ಅನುಷಾ ಎನ್ನುವ ಹೆಸರಿನ ಪಾವಗಡದ ಯುವತಿ ಪಾವಗಡದ ಹಳ್ಳಿಯಲ್ಲಿ ಹುಟ್ಟಿದ್ದರೂ.

WhatsApp Group Join Now
Telegram Group Join Now

ಪಟ್ಟಣದಲ್ಲಿ ಬೆಳೆದು ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೈತುಂಬ ಸಂಬಳ ಸಿಗುತ್ತಿದ್ದ ಕೆಲಸ ಬಿಟ್ಟು ಬಟ್ಟೆ ಬಿಸಿನೆಸ್ ಮಾಡಲು ಹೋಗಿ ಕೈ ಸುಟ್ಟುಕೊಂಡು ಸಾಲ ಹೊತ್ತುಕೊಂಡು ಆದರೂ ಛಲ ಬಿಡದೆ ತಮ್ಮ ಊರಿನಲ್ಲಿ ಹೋಗಿ ಪಾಲಿ ಹೌಸ್ ಟೆಕ್ನಾಲಜಿಯಲ್ಲಿ ಹೂವಿನ ಕೃಷಿ ಮಾಡಿ ಲಕ್ಷ ಲಕ್ಷ ಹಣ ಸಂಪಾದನೆ ಮಾಡುತ್ತಿದ್ದಾರೆ.

ತಮ್ಮ ಊರಿನಲ್ಲಿರುವ ಮಹಿಳೆಯರಿಗೆ ಉದ್ಯೋಗ ಸೃಷ್ಟಿಸಿ ಕೊಡಬೇಕು ಮತ್ತು ಆರೋಗ್ಯವಂತ ಪ್ರಾಡಕ್ಟ್ ಜನರಿಗೆ ಸಿಗಬೇಕು ಎಂದು ಹೆಲ್ತಿ ಫುಡ್ಸ್ ಕೂಡ ಮಾಡಿದ್ದಾರೆ ಇವರ ಯಶಸ್ಸಿನ ಖಾತೆ ವಿವರ ಹೀಗಿದೆ. ಬೆಂಗಳೂರಿನಲ್ಲಿ ಉದ್ಯೋಗಿ ಆಗಿದ್ದ ಇವರು ಒಂದು ದಿನ ತಾನು ಕೆಲಸ ಗಾರ್ತಿಯಾಗಿಯೇ ಇರಬಾರದು ತಾನೇ ಬಿಸಿನೆಸ್ ಮಾಡಿ ಹೆಚ್ಚಿನ ಹಣ ಮಾಡಬೇಕು ಎನ್ನುವ ಆಸೆಯಿಂದ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಬಟ್ಟೆ ಅಂಗಡಿ ಇಡುತ್ತಾರೆ.

ಈ ಸುದ್ದಿ ಓದಿ:- ಹೊಸ ರೇಷನ್ ಕಾರ್ಡ್ ಮತ್ತು ತಿದ್ದುಪಡಿಗೆ ಅವಕಾಶ.!

ಕೇವಲ ಒಂದೇ ವರ್ಷದಲ್ಲಿ ಅವರ ಕನಸು ನುಚ್ಚು ನೂರಾಗಿ ಬಿಜಿನೆಸ್ ಲಾಸ್ ಆಗಿ ಹಾಕಿದ್ದ 16 ಲಕ್ಷ ಬಂಡವಾಳಕ್ಕೆ ಸಾಲ ಹೊತ್ತುಕೊಳ್ಳುತ್ತಾರೆ. ನಂತರ ದೃಢ ಮನಸ್ಸು ಮಾಡಿದ ಇವರು ಪತಿ ಹಾಗೂ ತಂದೆಯ ಸಹಕಾರದಿಂದ ತಾವು ಹುಟ್ಟಿದ ಊರಿನಲ್ಲಿ ಹೋಗಿ ಕೃಷಿ ಮಾಡಲು ನಿರ್ಧರಿಸುತ್ತಾರೆ ಅಂತ ಸಮಯದಲ್ಲಿ ಇವರಿಗೆ ಬಂದ ಐಡಿಯಾ ಪಾಲಿ ಹೌಸ್ ನಲ್ಲಿ ಡೆಕೋರೇಟ್ ಹೂ ಗಳನ್ನು ಬೆಳೆಯಬೇಕು ಎನ್ನುವುದು.

ಒಟ್ಟು 80 ಲಕ್ಷ ಬಂಡವಾಳದಲ್ಲಿ 30 ಲಕ್ಷ ಸರ್ಕಾರಿ ಸಬ್ಸಿಡಿ ಪಡೆದು 50 ಲಕ್ಷ ಸ್ವಂತಕ್ಕೆ ಸಾಲ ಪಡೆದು ಒಂದೂವರೆ ಎಕರೆಯಲ್ಲಿ ಪಾಲಿ ಹೌಸ್ ಸೆಟ್ ಮಾಡಿಸುತ್ತಾರೆ. ಕೇವಲ ಐದೇ ವರ್ಷದಲ್ಲಿ ಇಂದು ಅವರ ಬ್ಯುಸಿನೆಸ್ ಕೋಟಿ ದಾಟಿದೆ ತಮ್ಮ ಎಲ್ಲಾ ಸಾಲ ತೀರಿಸಿ ಹಾಕಿದ ಬಂಡವಾಳವನ್ನು ತೆಗೆದು ಸೈಟ್ ಖರೀದಿಸಿ ಲಾಭದಲ್ಲಿ ಮತ್ತೊಂದು ಬಿಸಿನೆಸ್ ಶುರು ಮಾಡಿದ್ದಾರೆ.

ತಮ್ಮ ಗ್ರಾಮದಲ್ಲಿ ಇರುವ ಮಹಿಳೆಯರಿಗೆ ಕೆಲಸ ಕೊಡಬೇಕೆಂಬ ಉದ್ದೇಶದಿಂದ ಮಿಲೆಟ್ ನಿಂದ ಹೆಲ್ತಿ ಫುಡ್ ಗಳನ್ನು ತಯಾರಿಸಿ ಅದನ್ನು ಕೂಡ ಮಾರ್ಕೆಟಿಂಗ್ ಮಾಡಿ ಲಾಭದಲ್ಲಿದ್ದಾರೆ. ಹೂವಿನ ಕೃಷಿ ತಮ್ಮ ಅನುಭವಗಳ ಮಾತನಾಡುವ ಇವರು ಮಣ್ಣಿಗೆ ಬಂಡವಾಳ ಹಾಕಿದ ಯಾರು ಕೂಡ ಲಾಸ್ ಆಗುವುದಿಲ್ಲ ಆದರೆ ಪ್ರಾಮಾಣಿಕವಾಗಿ ಶ್ರದ್ಧೆಯಿಂದ ಉತ್ಸಾಹದಿಂದ ಕೆಲಸ ಮಾಡಬೇಕು ಅಷ್ಟೇ ಎನ್ನುತ್ತಾರೆ.

ಈ ಸುದ್ದಿ ಓದಿ:- LPG ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ.!

ಒಮ್ಮೆ ನೀವು ಈ ಮಣ್ಣಿನ ಗುಣಕ್ಕೆ ಹೊಂದಿಕೊಂಡರೆ ವ್ಯವಸಾಯ ಬಿಟ್ಟು ಇರಲು ಸಾಧ್ಯವಾಗುವುದಿಲ್ಲ. ಇಂದು ನಾನು ಅಂದುಕೊಂಡಂತೆ ಬದುಕುತ್ತಿದ್ದೇನೆ. MBA ಮಾಡಿ ಕೆಲಸದಲ್ಲಿದ್ದರು ಕೃಷಿಯೇ ಖುಷಿ ಕೊಟ್ಟಿರುವುದು, ಇದಕ್ಕೆಲ್ಲ ನನ್ನ ಕುಟುಂಬದ ಸಹಕಾರ ಕಾರಣವಾಯಿತು.

ಲೇಬರ್ ಜೊತೆ ಹೊಲದಲ್ಲಿ ನಿಂತು ಕಳೆ ಕೀಳುವುದರಿಂದ ಹಿಡಿದು ರಾತ್ರಿ ಹೋಗಿ ಹೂ ಮಾರಿ ಬರುವವರೆಗೂ ಕೂಡ ಜವಾಬ್ದಾರಿ ಹೊತ್ತು ಕೊಂಡಿದ್ದೇನೆ. ಪ್ರತಿಯೊಂದು ಬೆವರ ಹನಿ ಶ್ರಮ ತಿಳಿದಿದೆ ಪ್ರಕೃತಿ ಜೊತೆ ಇಂದು ಸಂತೋಷವಾಗಿ ನಮ್ಮ ಊರಿನಲ್ಲಿ ಬದುಕುತ್ತಿರುವ ನೆಮ್ಮದಿ ಇದೆ. ಇದು ಎಲ್ಲಾ ಕನಸು ಕಾಣುವ ಜನರಿಗೆ ಸ್ಪೂರ್ತಿ ಆಗಬೇಕು ಎಂದು ಹೇಳುತ್ತಾರೆ.

ಇವರ ಇನ್ನಷ್ಟು ಮಾತುಗಳನ್ನು ಕೇಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ಸಲಹೆಗಾಗಿ ಈ ಕೆಳಗಿನ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿ.
ಅನುಷಾ:-
7829079826

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now