ಆಗಸ್ಟ್ ತಿಂಗಳ ಅನ್ನಭಾಗ್ಯ ಯೋಜನೆ ಹಣ ಜಮೆ ಆಗಿದೆ ಈ ರೀತಿ ಚೆಕ್ ಮಾಡಿ ನೋಡಿ.!

ಎಲ್ಲರಿಗೂ ತಿಳಿದಿರುವಂತೆ ಕರ್ನಾಟಕ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು (Guarantee Scheme) ಜಾರಿ ಮಾಡಿದೆ. ಆ ಪೈಕಿ ಅನ್ನ ಭಾಗ್ಯ ಯೋಜನೆಯಡಿ (Annabhagya) ಪ್ರತಿ ಸದಸ್ಯರಿಗೂ 10Kg ಪಡಿತರ ನೀಡಬೇಕಿತ್ತು. ಆದರೆ ದಾಸ್ತಾನು ಕೊರತೆಯಿಂದ 5Kg ಪಡಿತರ ನೀಡಿ ಹೆಚ್ಚುವರಿ 5Kg ಅಕ್ಕಿಯ ಹಣವನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ (Annabhagya amount transfer to head of the family account) ವರ್ಗಾವಣೆ ಮಾಡಲಾಗುತ್ತಿದೆ.

WhatsApp Group Join Now
Telegram Group Join Now

ಈಗಾಗಲೇ ಜುಲೈ ತಿಂಗಳಿಂದ ಯೋಜನೆ ಜಾರಿಗೆ ಬಂದಿದ್ದು ಕೋಟ್ಯಾಂತರ ಪಡಿತರದಾರರು ಜುಲೈ ತಿಂಗಳ ಹೆಚ್ಚುವರಿ ಹಣವನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ ಪಡೆದಿದ್ದಾರೆ. ಸರ್ಕಾರವು ಯಾವುದೇ ಅರ್ಜಿ ಆಹ್ವಾನಿಸದೆ ರೇಷನ್ ಕಾರ್ಡ್ ಮಾಹಿತಿ ಆಧರಿಸಿ DBT ಮೂಲಕ ಹಣ ವರ್ಗಾವಣೆ ಮಾಡುತ್ತಿದೆ. ಆದರೆ ಎಲ್ಲರಿಗೂ ಕೂಡ ಈ ಹಣ ವರ್ಗಾವಣೆಯಾಗಿಲ್ಲ, ಲಕ್ಷಾಂತರ ಫಲಾನುಭವಿಗಳು ಅರ್ಹರಾಗಿದ್ದರು ಕೂಡ ಖಾತೆಗಳಿಗೆ ಹಣ ಜಮೆಯಾಗಿಲ್ಲ.

ಲೇಬರ್ ಕಾರ್ಡ್ ಇದ್ದವರ ಮಕ್ಕಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆ, ಅರ್ಜಿ ಸಲ್ಲಿಸುವುದು ಹೇಗೆ ನೋಡಿ.!

ಮೂರು ತಿಂಗಳಿಂದ ರೇಷನ್ ಪಡೆಯದೆ ಇದ್ದವರು ಹಾಗೂ ರೇಷನ್ ಕಾರ್ಡ್, ಬ್ಯಾಂಕ್ ಮಾಹಿತಿ ಮತ್ತು ಆಧಾರ್ ಕಾರ್ಡ್ ಮಾಹಿತಿಯಲ್ಲಿ ಹೊಂದಾಣಿಕೆ ಆಗದವರು ಈ ಹಣವನ್ನು ಪಡೆಯಲಾಗಿಲ್ಲ. ಆದರೆ ಎಲ್ಲಾ ದಾಖಲಾತಿ ಸರಿಯಿದ್ದು ಕೂಡ ಬ್ಯಾಂಕ್ ಅಕೌಂಟ್ ಗೆ ಆಧಾರ್ ಸೀಡಿಂಗ್ ಮತ್ತು NPCI ಮ್ಯಾಪಿಂಗ್ (Aadhar Seeding NPCI Mapping) ಆಗಿರದ ಕಾರಣ ಅನೇಕರು ಈ ಹಣದಿಂದ ವಂಚಿತರಾಗಿದ್ದಾರೆ.

ಜುಲೈ ತಿಂಗಳಿನಲ್ಲಿ ಅನ್ನಭಾಗ್ಯ ಹಣ ವರ್ಗಾವಣೆ ಆಗಿರುವ ಮಾಹಿತಿಯನ್ನು ಆಹಾರ ಇಲಾಖೆಯ ವೆಬ್ಸೈಟ್ಗೆ ತೆರಳಿ, DBT ಸ್ಟೇಟಸ್ (Amount transfer DBT status check through Ahara website) ಮೂಲಕ ಚೆಕ್ ಮಾಡಿದಾಗ ಅನೇಕರಿಗೆ ಇದು ತಿಳಿದಿದೆ. DBT ಸ್ಟೇಟಸ್ ನಲ್ಲಿ ರೇಷನ್ ಕಾರ್ಡ್ ಡೇಟಾವನ್ನು ಆಧಾರ್ ಧೃಡೀಕರಣ ಪರಿಶೀಲನೆ ಮತ್ತು NPCI ದೃಢೀಕರಣ ಪರಿಶೀಲನೆಗಾಗಿ ಕಳುಹಿಸಲಾಗಿತ್ತು.

ಗೃಹಲಕ್ಷ್ಮಿ 2000 ಹಣ ಬಂದಿಲ್ಲದವರಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಸರ್ಕಾರದಿಂದ SMS ಬಂದಿದೆ.! ಮತ್ತೊಮ್ಮೆ ಅರ್ಜಿ ಸಲ್ಲಿಸೋದು ಹೇಗೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

ಆದರೆ NPCI ಚೆಕ್ ವಿಫಲವಾಗಿದೆ ಎಂದು ಅನ್ನಭಾಗ್ಯ ಯೋಜನೆ ಸ್ಟೇಟಸ್ ನಲ್ಲಿ ತೋರಿಸುತ್ತಿತ್ತು ಜುಲೈ ತಿಂಗಳಿನಲ್ಲಿ ಈ ರೀತಿ ಸಮಸ್ಯೆ ಇಂದ ಪಡೆಯಲಾಗದ ವಂಚಿತರಾದವರು ಅದೇ ತಿಂಗಳಿನಲ್ಲಿ ತಮ್ಮ ಬ್ಯಾಂಕ್ ಶಾಖೆಗಳಿಗೆ ಹೋಗಿ ಆಧಾರ್ ಸೀಡಿಂಗ್ ಮತ್ತು NPCI ಮ್ಯಾಪಿಂಗ್ ದಾಖಲೆಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಿದ್ದರೆ ಈ ರೀತಿ ಅರ್ಜಿ ಸಲ್ಲಿಕೆ ಆದ ಬಳಿಕ 15 ರಿಂದ 20 ದಿನಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರುತ್ತದೆ.

ಬಳಿಕ ನೀವು ಅದನ್ನು UIDAI ನ ವೆಬ್ಸೈಟ್ ಗೆ ಭೇಟಿ ಕೊಟ್ಟು ಬ್ಯಾಂಕ್ ಸೀಡಿಂಗ್ ಸ್ಟೇಟಸ್ (Bank seeding status) ಚೆಕ್ ಮಾಡುವ ಮೂಲಕ ಚೆಕ್ ಮಾಡಿಕೊಳ್ಳಬಹುದು. ಸ್ಟೇಟಸ್ ಆಕ್ಟಿವ್ (Active) ಎಂದು ತೋರಿಸಿದರೆ ನಿಮ್ಮ ಬ್ಯಾಂಕ್ ಖಾತೆಗೆ ಈಗ ಆಧಾರ್ ಲಿಂಕ್ ಆಗಿದೆ ಎಂದರ್ಥ ಈ ರೀತಿ ಜುಲೈ ತಿಂಗಳಲ್ಲಿ ಸಮಸ್ಯೆ ಪರಿಹರಿಸಿ ಕೊಂಡವರಿಗೆ ಆಗಸ್ಟ್ ತಿಂಗಳಿನಲ್ಲಿ ಅನ್ನ ಭಾಗ್ಯ ಯೋಜನೆ ಹಣ ವರ್ಗಾವಣೆ ಆಗಿದೆ.

ಎಂಥದ್ದೆ ಲಕ್ವಾ ಹೊಡೆದ್ರು ಸರಿ ಮಾಡ್ತಿನಿ.! ಸ್ಟ್ರೋಕ್ ಆಗೋಕೆ ಇದೇ ಮುಖ್ಯ ಕಾರಣ.! ವೈದ್ಯರು ಬಿಚ್ಚಿಟ್ಟ ಸತ್ಯಾಂಶ ಇದು ತಪ್ಪದೆ ನೋಡಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ.!

ಆದರೆ ಕೆಲವು ಜಿಲ್ಲೆಗಳಿಗೆ ಇನ್ನೂ ಕೂಡ ಹಣ ವರ್ಗಾವಣೆ ಆಗುವುದು ಬಾಕಿ ಇರುವುದರಿಂದ ಅವರಿಗೆ ಪಾವತಿ ಪ್ರಕ್ರಿಯೆಯಲ್ಲಿದೆ ಎನ್ನುವ ಸ್ಟೇಟಸ್ ಬರುತ್ತದೆ. ನೀವು ಕೂಡ ಈ ರೀತಿ ಸಮಸ್ಯೆಗಳನ್ನು ಹೊಂದಿದ್ದರೆ ಈ ಕೂಡಲೇ ನಾವು ಮೇಲೆ ತಿಳಿಸಿದ ವಿಧಾನಗಳ ಮೂಲಕ ಪರಿಹರಿಸಿಕೊಳ್ಳಿ. ಮುಂದಿನ ತಿಂಗಳಿನಿಂದ ನೀವು ಸಹ ಈ ಯೋಜನೆ ಹಣ ಪಡೆಯಲು ಅರ್ಹರಾಗುತ್ತೀರಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now