ರೈತರಿಗೆ ದುಪ್ಪಟ್ಟು ಹಣ ಘೋಷಣೆ.! ಈ ಯೋಜನೆಗೆ ನೀವು ಅರ್ಜಿ ಸಲ್ಲಿಸಿ.!

 

WhatsApp Group Join Now
Telegram Group Join Now

ಕೇಂದ್ರ ಸರ್ಕಾರದಿಂದ (Central government) ದೇಶದಾದ್ಯಂತ ಇರುವ ಎಲ್ಲ ರೈತರಿಗಾಗಿ (for Farmers) ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಕೃಷಿ ನಮ್ಮ ದೇಶದ ಜೀವಾಳ, ದೇಶದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಕೃಷಿ ಕ್ಷೇತ್ರವನ್ನು ಅವಲಂಬಿಸಿ ದೇಶದ ಬಹುತೇಕ ಜನಸಂಖ್ಯೆ ಬದುಕುತ್ತಿದೆ ಮೂಲತಃ ಹಳ್ಳಿಗಳ ದೇಶವಾಗಿರುವ ಭಾರತದಲ್ಲಿ ಕೃಷಿಯೇ ಹಳ್ಳಿಗಾಡಿನ ಜನರ ಪ್ರಮುಖ ಉದ್ಯೋಗ.

ಹಾಗಾಗಿ ಕೃಷಿಯಲ್ಲಿ ತೊಡೆದುಕೊಂಡಿರುವ ರೈತರನ್ನು ಸದೃಢರನ್ನಾಗಿ ಮಾಡಿ ಕೃಷಿ ಕ್ಷೇತ್ರವನ್ನು ಮುನ್ನಲೆಗೆ ತರುವ ಉದ್ದೇಶದಿಂದ ಅಪಾರ ಮಟ್ಟದ ಹಣವನ್ನು ಪ್ರತಿ ಬಜೆಟ್ ನಲ್ಲೂ ಸರ್ಕಾರ ಮೀಸಲಿಡುತ್ತದೆ ಮತ್ತು ಈಗಾಗಲೇ ಕೇಂದ್ರ ಸರ್ಕಾರದಿಂದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ (PMKSY), ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ(PMFBY), ರೈತ ಮನ್ ಧನ್ ಯೋಜನೆ (Mandan Scheme) ಸೇರಿದಂತೆ ರೈತರಿಗಾಗಿ ಹಲವಾರು ಯೋಜನೆಗಳನ್ನು ಪರಿಚಯಿಸಲಾಗಿದೆ.

ಇದಿಷ್ಟು ಮಾತ್ರವಲ್ಲದೆ ಕೃಷಿ ಯಂತ್ರೋಪಕರಣಗಳ ಖರೀದಿಗೆ, ಬಿತ್ತನೆ ಬೀಜ ರಸ ಗೊಬ್ಬರಗಳ ಖರೀದಿಗೆ ಸಬ್ಸಿಡಿ ನೀಡಲಾಗುತ್ತಿದೆ. ಹೀಗೆ ಅನೇಕ ರೀತಿಯಲ್ಲಿ ರೈತನಿಗೆ ನೆರವಾಗುವ ಪ್ರಯತ್ನ ಮಾಡಲಾಗುತ್ತಿದ್ದು ಇದರೊಂದಿಗೆ ಕೇಂದ್ರ ಸರ್ಕಾರವು ತನ್ನ ಯೋಜನೆಯೊಂದರ ಅನುದಾನವನ್ನು ಹೆಚ್ಚಿಸಿದೆ ಇದು ದೇಶದಾದ್ಯಂತ ಸುಮಾರು 8 ಕೋಟಿಗೂ ಹೆಚ್ಚು ರೈತರ ಪಾಲಿಗೆ ಸಿಹಿ ಸುದ್ದಿಯಾಗಿದೆ.

2019ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Narendra Modi) ಜಾರಿಗೆ ತಂದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಸಹಾಯಧನವನ್ನು ದುಪ್ಪಟ್ಟು ಮಾಡುವ ಚಿಂತನೆಯಲ್ಲಿ ಕೇಂದ್ರ ಸರ್ಕಾರ ಇದೆ. ಈ ಬಗ್ಗೆ ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ, ರಾಜಸ್ಥಾನದಲ್ಲಿ ನಡೆದ ಬಿಜೆಪಿ ರ್ಯಾಲಿಯಲ್ಲಿ ವಿಷಯ ಹಂಚಿಕೊಂಡಿದ್ದಾರೆ, ಇದಕ್ಕೆ ಸಂಬಂಧಪಟ್ಟ ವಿವರ ಹೀಗಿದೆ ನೋಡಿ.

ಇನ್ನು ಕೆಲವೇ ದಿನಗಳಲ್ಲಿ ರಾಜಸ್ಥಾನ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ(Rajasthan Assembly election), ಈ ಚುನಾವಣೆಯಲ್ಲಿ ರಾಜಸ್ಥಾನದಲ್ಲಿ ತನ್ನ ಪ್ರಾಬಲ್ಯ ಸ್ಥಾಪಿಸಲು BJP ಶತ ಪ್ರಯತ್ನ ಮಾಡುತ್ತಿದ್ದು ತನ್ನ ಪ್ರಣಾಳಿಕೆ ಅಸ್ತ್ರವನ್ನು ಕೂಡ ಪ್ರಯೋಗಿಸುತ್ತಿದೆ.

ಸ್ವತಃ ಪ್ರಧಾನಿಗಳೇ BJP ಚುನಾವಣಾ ರ್ಯಾಲಿಗಳಲ್ಲಿ ಭಾಗವಹಿಸುತ್ತಿದ್ದಾರೆ ಮತ್ತು ಅಲ್ಲಿನ ಜನರನ್ನು ಉದ್ದೇಶಿಸಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ತಾವು ಅನುಷ್ಠಾನಕ್ಕೆ ತರುವ ಯೋಜನೆಗಳ ಭರವಸೆಯನ್ನು ನೀಡುತ್ತಿದ್ದಾರೆ. ಅದೇ ಪ್ರಕಾರ ಕೇಂದ್ರ ಸರ್ಕಾರದ ಹೆಸರಾಂತ ಯೋಜನೆಯಾದ ಕೃಷಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ರೈತನಿಗಾಗಿ ಸಹಾಯಧನ ನೀಡುವ ಸಲುವಾಗಿಯೇ.

ದೇಶದಲ್ಲಿ ಮೊಟ್ಟ ಮೊದಲಿಗೆ ಜಾರಿಗೆ ತಂದ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣವನ್ನು 6,000 ದಿಂದ 12,000 ಕ್ಕೆ ವಿಸ್ತರಿಸಲಾಗುವುದು ಎನ್ನುವ ಸಿಹಿ ಸುದ್ದಿಯನ್ನು ಪ್ರಧಾನಿಗಳು ನೀಡಿದ್ದಾರೆ. ಅರ್ಥಾತ್ ಕೇಂದ್ರ ಸರ್ಕಾರದಿಂದ ಈಗ ರೂ.6,000 ದೇಶದ ಎಲ್ಲಾ ರೈತರಿಗೂ ಕೂಡ 4 ತಿಂಗಳ ಅಂತರದಲ್ಲಿ 3 ಕಂತುಗಳಲ್ಲಿ ವರ್ಗಾವಣೆ ಆಗುತ್ತಿದೆ.

ಇದನ್ನು ಹೊರತುಪಡಿಸಿ ರಾಜಸ್ಥಾನದಲ್ಲಿ BJP ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯ ಸರ್ಕಾರದಿಂದ ಕೂಡ ರೂ.6000 ರೂಪಾಯಿಯನ್ನು 3 ಕಂತುಗಳಲ್ಲಿ ನೀಡಲಾಗುವುದು ಎಂದು ಪ್ರಧಾನಿಗಳು ತಿಳಿಸಿದ್ದಾರೆ. ಮುಂದಿನ ವರ್ಷದಲ್ಲಿ ಇನ್ನು ಕೆಲವೇ ತಿಂಗಳ ಅಂತರದಲ್ಲಿ ಲೋಕಸಭಾ ಚುನಾವಣೆ (Parliment Ellection-2023) ಕೂಡ ಇರುವುದರಿಂದ ಇದೇ ಅಸ್ತ್ರ ಲೋಕಸಭಾ ಚುನಾವಣೆಯಲ್ಲೂ ಕೂಡ ಪ್ರಯೋಗವಾಗಬಹುದು ಎನ್ನುವುದು ಹಲವರ ನಿರೀಕ್ಷೆ.

ಯಾಕೆಂದರೆ ಈ ಯೋಜನೆಯು ಈಗಾಗಲೇ ದೇಶದ ಎಲ್ಲ ರೈತರ ಮನ.ಗೆದ್ದಿದೆ. ಹಾಗಾಗಿ ಸದ್ಯಕ್ಕೆ ರಾಜಸ್ಥಾನದಲ್ಲಿ BJP ಅಧಿಕಾರ ಬಂದರೆ ಅಲ್ಲಿನ ರೈತರಿಗೆ ಸಿಗುವ ಈ ದುಪ್ಪಟ್ಟು ಅನುಕೂಲತೆಯನ್ನು ಕೇಂದ್ರದಲ್ಲಿ BJP ಮತ್ತೆ ಅಧಿಕಾರಕ್ಕೆ ಬಂದರೆ ದೇಶದ ಎಲ್ಲಾ ರೈತರಿಗೂ ಕೇಂದ್ರ ಸರ್ಕಾರ ವತಿಯಿಂದಲೇ ವಿಸ್ತರಿಸುವ ಸಾಧ್ಯತೆ ಇದೆ. ಈ ರೀತಿ ಆದಲ್ಲಿ ರೈತರಿಗೆ ಬಹಳ ಅನುಕೂಲ ಆಗಲಿದೆ ಇದು ಸಾಧ್ಯವಾಗಲಿ ಎಂದು ನಾವು ಬಯಸೋಣ.

 

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now