ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ದೇಶದಾದ್ಯಂತ ಸುದ್ದಿಯಲ್ಲಿರುವ ನಮ್ಮ ರಾಜ್ಯ ಸರ್ಕಾರವು (Karnataka Government) ಗ್ಯಾರೆಂಟಿಯೇತರವಾಗಿ ಕೂಡ ಅನೇಕ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಕರ್ನಾಟಕದ ಜನತೆಗೆ ಇನ್ನೂ ಹೆಚ್ಚಿನ ಅನುಕೂಲತೆ ಮಾಡಿಕೊಡುತ್ತಿದೆ. ಈ ಸಾಲಿಗೆ ಗೃಹ ಆರೋಗ್ಯ ಯೋಜನೆ (Gruha Arogya Yojane) ಕೂಡ ಸೇರುತ್ತಿದೆ.
ಗೃಹ ಆರೋಗ್ಯ ಯೋಜನೆಯ ಮುಖ್ಯ ಉದ್ದೇಶ ಮನೆಮನೆಗೂ ಕೂಡ ತೆರಳಿ, ಆರೋಗ್ಯ ಸಮಸ್ಯೆ ಇರುವವರ ಬಗ್ಗೆ ಸರ್ವೆ ಮಾಡಿ, ಮಾಹಿತಿ ಸಂಗ್ರಹಿಸಿ ಸರ್ಕಾರದ ವತಿಯಿಂದ ಅವರಿಗೆ ಉಚಿತವಾಗಿ ಔಷಧಿಗಳನ್ನು ಕಳುಹಿಸುವುದು ಮತ್ತು ತೀವ್ರಗತವಾದ ಸಮಸ್ಯೆಗಳಿದ್ದಾಗ ಉಚಿತವಾಗಿ ಶಸ್ತ್ರ ಚಿಕಿತ್ಸೆಗೆ ಒಳಪಡಿವುದಾಗಿದೆ. ಈ ಯೋಚನೆ ಬಗ್ಗೆ ಹಾಲಿ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ (Health Minister Dinesh Gundurao) ಅವರೇ ಕೆಲ ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಅದರ ಕುರಿತು ಕೆಲ ಪ್ರಮುಖ ಅಂಶಗಳನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಸಮಗ್ರ ಆರೋಗ್ಯ ರಕ್ಷಣೆ ಯೋಜನೆಯಾದ ಈ ಯೋಜನೆಯ ಮೂಲ ಉದ್ದೇಶ ರೋಗವನ್ನು ತಡೆಗಟ್ಟುವುದು, ಈ ಕುರಿತು ಜನರಿಗೆ ಜಾಗೃತಿ ಮೂಡಿಸಿ, ಆರೋಗ್ಯ ಸಮಸ್ಯೆಗೆ ಒಳಪಟ್ಟಿರುವವರನ್ನು ಗುರುತಿಸಿ, ಅವರ ರೋಗವನ್ನು ಸುಧಾರಿಸಿಕೊಳ್ಳಲು ಎಲ್ಲ ರೀತಿಯ ಪೂರಕ ವಾತಾವರಣವನ್ನು ಕಲ್ಪಿಸಿಕೊಟ್ಟು ಶೀಘ್ರವಾಗಿ ಗುಣಮುಖರಾಗಲು ನೆರವಾಗುವುದು ಎಂದ ಸಚಿವರು ಯೋಜನೆ ಬಗ್ಗೆ ಈ ರೀತಿ ವಿವರಿಸಿದ್ದಾರೆ.
ಆಶಾ ಕಾರ್ಯಕರ್ತರ ಮೂಲಕ ಮನೆ ಮನೆಗೆ ತೆರಳಿ ಗ್ರಾಮಸ್ಥರ ಆರೋಗ್ಯ ತಪಾಸಣೆ (servey) ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ, ಆಶಾ ಕಾರ್ಯಕರ್ತರಿಗೆ (Asha workers) ಸರಿಯಾದ ಮಾಹಿತಿಯನ್ನು ಕುಟುಂಬದಲ್ಲಿರುವ ಎಲ್ಲಾ ಸದಸ್ಯರ ಮಾಹಿತಿ ಮತ್ತು ಅವರು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳ ಬಗ್ಗೆ ವಿವರ ನೀಡಬೇಕು.
ಮೊದಲಿಗೆ ಎಂಟು ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಮಧುಮೇಹ, ಕಿಡ್ನಿ ವೈಫಲ್ಯ, ಅಧಿಕ ರಕ್ತದೊತ್ತಡ ಮತ್ತು ಕ್ಯಾನ್ಸರ್ ಬಗ್ಗೆ ಮೊದಲು ಕೇಂದ್ರೀಕರಿಸಲಾಗಿದೆ. ಸಮಸ್ಯೆ ಇರುವವರನ್ನು ಗುರುತಿಸಿ, ತಲಾ 90 ಮಾತ್ರೆಗಳು ಇರುವ ಮಾದರಿ ಔಷಧ ಪೆಟ್ಟಿಗೆಗಳನ್ನು ಉಚಿತವಾಗಿ ಅವರಿಗೆ ವಿತರಿಸಲಾಗುತ್ತದೆ ಮೂರು ತಿಂಗಳ ನಂತರ ಮತ್ತೆ ಅವರ ಮನೆ ಬಾಗಿಲಿಗೆ ಉಚಿತವಾಗಿ ಈ ಔಷಧಿ ತಲುಪುತ್ತದೆ.
ಆದರೆ 30 ವರ್ಷದ ಮೇಲ್ಪಟ್ಟವರು ಮಾತ್ರ ಈ ಔಷಧಿಗಳನ್ನು ಪಡೆಯಲು ಅರ್ಹರಿಸುತ್ತಾರೆ. ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ಆರೋಗ್ಯ ಸಮಸ್ಯೆಗೆ ಸರ್ಕಾರವೇ ತಲಾ ಮೂರು ಮಾದರಿಯ ಮಾತ್ರೆಗಳನ್ನು ಗುರುತಿರುಸುತ್ತದೆ ಆ ಮಾತ್ರೆಗಳನ್ನು ಮಾತ್ರ ಫಲಾನುಭವಿಗಳಿಗೆ ಕೊಡಲಾಗುತ್ತದೆ.
ಹೋಟೆಲ್ ಆರಂಭಿಸಲು ಸರ್ಕಾರದಿಂದ ಸಹಾಯಧನ ಆಸಕ್ತರು ಅರ್ಜಿ ಸಲ್ಲಿಸಿ.! ನಿಮ್ಮ ಕನಸಿನ ಉದ್ಯಮ ಆರಂಭ ಮಾಡಲು ಸುವರ್ಣಾವಕಾಶ
ಆರಂಭಿಕವಾಗಿ ರಾಮನಗರ, ತುಮಕೂರು, ಬೆಳಗಾವಿ, ಗದಗ, ಮೈಸೂರು, ಚಿಕ್ಕಮಗಳೂರು, ಬಳ್ಳಾರಿ ಮತ್ತು ಯಾದಗಿರಿ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಲಾಗುತ್ತದೆ. ಈ ಸಮೀಕ್ಷೆಯು ವೈಯಕ್ತಿಕವಾಗಿ ರೋಗಿಗಳನ್ನು ಗುರುತಿಸುವುದು ಮಾತ್ರವಲ್ಲದೇ ರೋಗದ ಹರಡುವಿಕೆಯ ಪ್ರಮಾಣವನ್ನು ಕೂಡಾ ಪತ್ತೆ ಹಚ್ಚಲಾಗುವುದು ಎಂದರು.
ಆರೋಗ್ಯ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇರುವುದರಿಂದ ಈ ವರ್ಷ 800 ಲ್ಯಾಬ್ ತಂತ್ರಜ್ಞರನ್ನು (Lab Technicians )ಮತ್ತು ಇತರೆ ಅಗತ್ಯವಿರುವ ವೈದ್ಯಕೀಯ ಸಿಬ್ಬಂದಿಯನ್ನು (Staffs) ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗುತ್ತದೆ. ಹಂತ ಹಂತವಾಗಿ ಹೆಚ್ಚಿನ ವೈದ್ಯಕೀಯ ಸಿಬ್ಬಂದಿಯನ್ನು ಕೂಡಾ ನೇಮಿಸಿಕೊಳ್ಳಲಾಗುವುದು ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ.
ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸರ್ಕಾರದ ವೆಬ್ಸೈಟ್ ಗಳಲ್ಲಿ ಸರ್ಚ್ ಮಾಡಬಹುದು ಅಥವಾ ನಿಮ್ಮ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಆಶಾ ಕಾರ್ಯಕರ್ತೆಯನ್ನು ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ. ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ಎಲ್ಲರೊಂದಿಗೆ ಹಂಚಿಕೊಳ್ಳಿ.!