ಇದೊಂದು ಬಿಟ್ರೆ 80% ಕಾಯಿಲೆ ನಿಮ್ಮ ಹತ್ರ ಬರೋದಿಲ್ಲ ದೀರ್ಘಾಯಸ್ಸು ಹಾಗೂ ಕಾಯಿಲೆ ರಹಿತ ಜೀವನದ ಗುಟ್ಟು ತಿಳಿಸಿದ ಖ್ಯಾತ ಮನೋವೈದ್ಯರು.!

 

WhatsApp Group Join Now
Telegram Group Join Now

ಮನುಷ್ಯನಿಗೆ ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಮಾನಸಿಕ ಆರೋಗ್ಯವೂ ಸುಸ್ತಿತಿಯಲ್ಲಿರುವುದು ಅಷ್ಟೇ ಮುಖ್ಯ ದೇಹದ ಶಕ್ತಿ ಮನಸ್ಸಿನಲ್ಲಿ ಅಡಗಿದೆ ಎಂದರು ಕೂಡ ಅದು ತಪ್ಪಾಗುವುದಿಲ್ಲ. ಯಾಕೆಂದರೆ ದೇಹಕ್ಕೆ ಚೈತನ್ಯ ಕೊಡುವುದು ಮನಸ್ಸು, ಮನಸ್ಸಿಗೆ ಎಂದೂ ಕೂಡ ವಯಸಾಗುವುದಿಲ್ಲ.

ಮನಸ್ಸು ಆಕ್ಟಿವ್ ಆಗಿ ಇದ್ದವರು 80 ವಯಸ್ಸಾಗಿದ್ದರು ಕೂಡ ಇನ್ನೂ ಹೊಸ ಹುರುಪಿನಲ್ಲಿ ಇರುತ್ತಾರೆ, ಅವರಲ್ಲಿ ಬದುಕುವ ಉತ್ಸಾಹ ಕುಂದಿರುವುದಿಲ್ಲ. ಹಾಗಾಗಿ ಮನುಷ್ಯ ಕಾಯಿಲೆ ರಹಿತವಾಗಿ ಬದುಕಲು ಸುಖವಾಗಿರಲು ದುಃಖವಾಗಿರಲು ಮನಸೇ ಕಾರಣ. ಕನ್ನಡದಲ್ಲಿರುವ ಮನಸಿದ್ದರೆ ಮಾರ್ಗ, ಮನಸಿನಂತೆ ಮಹಾದೇವ ಈ ಗಾದೆಗಳು ಕೂಡ ಇದನ್ನೇ ಹೇಳುತ್ತವೆ.

ಇದರ ಜೊತೆಗೆ ಕರ್ನಾಟಕದ ಕ್ಯಾತ ಮನೋವೈದ್ಯ ಡಾ. ಸಿಆರ್ ಚಂದ್ರಶೇಖರ್ ಅವರು ಕೂಡ ಇದನ್ನೇ ಹೇಳುತ್ತಾರೆ. ಮನಸ್ಸಿನಲ್ಲಿ ಸಂತೋಷ ಇದ್ದವನಿಗೆ ಚಾಪೆ ಮೇಲೆ ಮಲಗಿದರೂ ಕೂಡ ನಿದ್ದೆ ಬರುತ್ತದೆ, ಆದರೆ ಆತನ ಮನಸ್ಸು ಕೆಟ್ಟು ಹೋಗಿದ್ದರೆ ಅವನಿಗೆ ನೆಮ್ಮದಿ ಇಲ್ಲ ಎಂದರೆ ಆತನಿಗೆ ಫೈವ್ ಸ್ಟಾರ್ ಹೋಟೆಲ್ ರೂಮ್ ಮಾಡಿಕೊಟ್ಟರು ಖುಷಿಯಾಗಿ ಇರಲಾ ಹಾಗಾಗಿ ಮನಸ್ಸನ್ನು ಯಾವಾಗಲೂ ಖುಷಿಯಾಗಿ ಇಟ್ಟುಕೊಳ್ಳಬೇಕು.

ಯಾಕೆಂದರೆ ಜೀವನದಲ್ಲಿ ಕಳೆದುಕೊಳ್ಳುವುದು ಏನು ಇಲ್ಲ, ತೆಗೆದುಕೊಂಡು ಹೋಗುವುದು ಏನು ಇಲ್ಲ ಬದುಕು ಇರುವುದು ಇರುವಷ್ಟು ದಿನ ಸಂತೋಷವಾಗಿ ಕಳೆಯಲು. ಜೀವನದಲ್ಲಿ ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ಸಮಸ್ಯೆ ಇದ್ದೇ ಇರುತ್ತದೆ. ಅವರವರ ವೃತ್ತಿ ಅಥವಾ ಕುಟುಂಬಕ್ಕೆ ತಕ್ಕ ಹಾಗೆ ಜವಾಬ್ದಾರಿ ಹಾಗೂ ಒತ್ತಡಗಳು ಇರುತ್ತವೆ.

ಇದೆಲ್ಲವನ್ನು ನಿಭಾಯಿಸಿಕೊಂಡು ಮನಸ್ಸನ್ನು ಕೂಡ ಆರೋಗ್ಯವಾಗಿ ಇಟ್ಟುಕೊಳ್ಳಬೇಕು ಇಲ್ಲವಾದಲ್ಲಿ ಕಡಿಮೆ ವಯಸ್ಸಿಗೆ ಬಿ.ಪಿ, ಶುಗರ್, ಹೃ-ದಯಾಘಾ-ತ ಇತ್ಯಾದಿ ಇತ್ಯಾದಿ ಆರೋಗ್ಯ ಸಮಸ್ಯೆಗಳಿಗೆ ಇದು ಎಡೆ ಮಾಡಿಕೊಡುತ್ತದೆ ಎನ್ನುತ್ತಾರೆ ವೈದ್ಯರು. ನಾವು ಸಂತೋಷವಾಗಿರುವುದು ಹಾಗೂ ದುಃಖದಲ್ಲಿ ಇರುವುದು ನಮ್ಮ ಮನಸ್ಸಿನ ಮೇಲೆ ನಿರ್ಧಾರ ಆಗುತ್ತದೆ.

ರಾಮಾಯಣ ಮಹಾಭಾರತದ ಕಾಲದಿಂದಲೂ ಸಂಕಷ್ಟಗಳನ್ನು ಧೈರ್ಯವಾಗಿ ಎದುರಿಸಿ ಮಾದರಿಯಾಗಿದ್ದಾರೆ. ದ್ರೌಪದಿ ತನಗಾದ ಅವಮಾನಕ್ಕೆ ಆತ್ಮಹ’ತ್ಯೆ ಮಾಡಿಕೊಳ್ಳಲಿಲ್ಲ. ಆದರೆ ಆದ ಅನ್ಯಾಯಕ್ಕೆ ನ್ಯಾಯ ಪಡೆದುಕೊಳ್ಳಬೇಕು ಎನ್ನುವ ಹಠ, ಛಲ ಆಕೆಗೆ ಇತ್ತು.

ವನವಾಸಕ್ಕೆ ಹೋದರು ಮರಳಿ ಬಂದು ರಾಜ್ಯ ಕೇಳಿದರು ಪಾಂಡವರು ಅದು ಬದುಕುವ ಉತ್ಸಾಹ. ಈಗಿನ ಕಾಲಕ್ಕೆ ತೆಗೆದುಕೊಳ್ಳುವುದಾದರೆ ಒಂದು ತರಗತಿಯಲ್ಲಿ 10 ವಿದ್ಯಾರ್ಥಿಗಳಿದ್ದರೆ ಪರೀಕ್ಷೆಯಲ್ಲಿ 6 ಜನ ಉತ್ತೀರ್ಣರಾಗಿರಬಹುದು, 4 ಜನ ಅನುತ್ತೀರ್ಣರಾದರೆ ಅದರಲ್ಲಿ ಒಬ್ಬ ಹೆದರಿ ಆತ್ಮಹ’ತ್ಯೆ ಮಾಡಿಕೊಳ್ಳುತ್ತಾನೆ. ಮತ್ತೆ ಒಬ್ಬ ಮರಳಿ ಪರೀಕ್ಷೆ ಕಟ್ಟಿ ಪಾಸ್ ಮಾಡಿ ಮುಂದಕ್ಕೆ ಹೋಗುತ್ತಾನೆ, ಇನ್ನಿಬ್ಬರು ಓದು ಇಷ್ಟಕ್ಕೆ ಸಾಕು ಇನ್ನೇನಾದರೂ ಮಾಡೋಣ ಎಂದು ಬೇರೆ ದಾರಿ ಹುಡುಕುತ್ತಾರೆ. ಹೀಗೆ ಎಲ್ಲದಕ್ಕೂ ಕೂಡ ಪರಿಹಾರ ಮಾರ್ಗ ಇರುತ್ತದೆ. ಹಾಗಾಗಿ ಸಮಸ್ಯೆಯೇ ದೊಡ್ಡದು ಎಂದುಕೊಂಡು ಬದುಕನ್ನು ಹಾಳು ಮಾಡಿಕೊಳ್ಳಬಾರದು. ನಾವು ಹುಟ್ಟುವಾಗಲೇ ನಮ್ಮ ಆಯಸ್ಸು ನಿರ್ಧಾರವಾಗಿರುತ್ತದೆ ಬ್ರಹ್ಮ ಹಣೆಯಲ್ಲಿ ಬರೆದಿರುತ್ತಾನೆ ಎನ್ನುವುದನ್ನು ನಂಬದೇ ಇರುವವರು ನಮ್ಮ ಜೀನ್ಸ್ ಆದರೂ ನಂಬಬೇಕು.

ವಿಜ್ಞಾನದ ಪ್ರಕಾರ ಜೀನ್ಸ್ ನಿಂದ ಜೀವಪಾಗುವಾಗಲೇ ಆಯುಷ್ಯ ಎಷ್ಟು ಎಂದು ನಿರ್ಧಾರ ಆಗಿರುತ್ತದೆ ಹಾಗಾಗಿ ಅಲ್ಲಿಯವರೆಗೂ ಖುಷಿಯಾಗಿ ಇರಬೇಕು ಸಾಧ್ಯವಾದಷ್ಟು ಸಾಧನೆ ಮಾಡಬೇಕು. ಆಗದಿದ್ದರೆ 10 ಜನಕ್ಕಾದರೂ ಹತ್ತಿರವಾಗಿ ಅವರ ಕಷ್ಟ ಸುಖಗಳಿಗೆ ಹೆಗಲಾಗಿ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎನ್ನುತ್ತಾರೆ ಮನೋವೈದ್ಯರು. ಆರ್.ಸಿ ಚಂದ್ರಶೇಖರ್ ಅವರ ಇನ್ನಷ್ಟು ಮನಸ್ಥೈರ್ಯ ತುಂಬುವಂತಹ ಮಾತುಗಳನ್ನು ಕೇಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

ಬರಹ- ಉಮಾ ಮಹೇಶ್ವರಿ ( ಅಂಕಿತ ಆರಾಧ್ಯ )

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now