ಹೊಸ ರೇಷನ್ ಕಾರ್ಡ್ ಮತ್ತು ರೇಷನ್ ತಿದ್ದುಪಡಿಗೆ ಅರ್ಜಿ ಆರಂಭ, 2 ದಿನ ಮಾತ್ರ ಅವಕಾಶ.!

ಪಡಿತರ ಚೀಟಿ (Ration Card) ಎನ್ನುವುದು ಒಂದು ಬಹಳ ಪ್ರಮುಖವಾದ ದಾಖಲೆಯಾಗಿದೆ. ಇದು ವಿಳಾಸದ ಪುರಾವೆಯಾಗಿ ಚಾಲ್ತಿಗೆ ಬರುತ್ತಿದೆ ಮತ್ತು ಇಂದು ದೇಶದಲ್ಲಿ ರೇಷನ್ ಕಾರ್ಡ್ ಆಧಾರಿತವಾಗಿಯೇ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವತಿಯಿಂದ ವೈದ್ಯಕೀಯ ಖರ್ಚು ವೆಚ್ಚಗಳಲ್ಲಿ ಹಾಗೂ ಶಿಕ್ಷಣದ ಶುಲ್ಕ ಇತ್ಯಾದಿಗಳಲ್ಲಿ ರೇಷನ್ ಕಾರ್ಡ್ ಆಧಾರಿತವಾಗಿ ರಿಯಾಯಿತಿ ಕೂಡ ನೀಡಲಾಗುತ್ತಿದೆ.

WhatsApp Group Join Now
Telegram Group Join Now

ಕರ್ನಾಟಕದ ವಿಚಾರವಾಗಿಯೇ ಹೇಳುವುದಾದರೆ ರಾಜ್ಯದ ಜನತೆಗೆ ನೀಡಲಾಗಿರುವ ಪಂಚಖಾತ್ರಿ (Gyaranty Scheme) ಯೋಜನೆಗಳಲ್ಲಿ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯು (Annabhagya and Gruhalakshmi) ರೇಷನ್ ಕಾರ್ಡ್ ಆಧಾರಿತ ಯೋಜನೆಗಳಾಗಿವೆ.

ಈ ಯೋಜನೆಗಳ ಪ್ರಯೋಜನವು ಅರ್ಹ ಎಲ್ಲರಿಗೂ ಸಿಗಬೇಕು ಎನ್ನುವುದು ಸರ್ಕಾರಗಳ ಉದ್ದೇಶವಾಗಿದ್ದರು ಅನೇಕ ಕಾರಣಗಳಿಂದಾಗಿ ಲಕ್ಷಾಂತರ ಫಲಾನುಭವಿಗಳು ವಂಚಿತರಾಗಿದ್ದಾರೆ. ಇದರಲ್ಲಿ ಮುಖ್ಯವಾಗಿ ರೇಷನ್ ಕಾರ್ಡ್ ಗಳಲ್ಲಿ ದೋಷಗಳಿರುವುದು, ರೇಷನ್ ಕಾರ್ಡ್ ಗಳಲ್ಲಿ ಹೆಸರೇ ಇಲ್ಲದಿರುವುದು ಮತ್ತು ರೇಷನ್ ಕಾರ್ಡ್ ಪಡೆದುಕೊಳ್ಳದೇ ಇರುವುದು ಮುಖ್ಯ ಕಾರಣಗಳಾಗಿವೆ.

ಈ ಸುದ್ದಿ ಓದಿ:- ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ, PUC ಪಾಸ್ ಆದವರು ಅರ್ಜಿ ಸಲ್ಲಿಸಿ ವೇತನ 42,000/-

ಗ್ಯಾರಂಟಿ ಯೋಜನೆಗಳು ಜಾರಿಯಾದ ಮೇಲೂ ರೇಷನ್ ಕಾರ್ಡ್ ತಿದ್ದುಪಡಿಗಾಗಿ (Rationcard Correction) ಅನೇಕ ಬಾರಿ ಕಾಲವಕಾಶ ನೀಡಲಾಗಿತ್ತು ಮುಂದುವರೆದು ಈಗ ಮತ್ತೊಮ್ಮೆ ಸರ್ಕಾರದ ಕಡೆಯಿಂದ ಈ ಕುರಿತು ಸಿಹಿ ಸುದ್ದಿ ಸಿಕ್ಕಿದೆ. ಅಧಿಕೃತವಾಗಿ ಈ ವಿಚಾರವನ್ನು ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರೇ ತಿಳಿಸಿದ್ದಾರೆ.

ಹೆಚ್ಚಿನ ಅರ್ಜಿ ಸಲ್ಲಿಕೆ‌ಯಾಗಿ ಈ ಹಿಂದೆ ಆದ ರೀತಿ ಸರ್ವರ್ ತೊಂದರೆ ಆಗಬಾರದೆಂದು ಕಡಿಮೆ ಸಮಯಾವಕಾಶ ಮಾಡಿಕೊಡಲಾಗಿದೆ. ಎಲ್ಲರಿಗೂ ಭಾನುವಾರ ರಜೆ ಇರುವ ಹಿನ್ನೆಲೆ ಅಂದೇ ಹೊಸ ರೇಷನ್ ಮಾಡಿಸಲು ಅವಕಾಶ ನೀಡಲಾಗಿದೆ. ಇದರ ಪ್ರಯೋಜನ ಪಡೆದುಕೊಳ್ಳಿ ಎಂದಿದ್ದಾರೆ. ಇದರ ಕುರಿತ ವಿವರ ಹೀಗಿದೆ ನೋಡಿ.

ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ದಿನಾಂಕ ಮತ್ತು ಸಮಯ:-
ಹೊಸ ಆದ್ಯತಾ (BPL Ration card) ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ನಾಗರಿಕರು 08-03-2024 ಮತ್ತು 09-03-2024 ಬೆಳಗ್ಗೆ 10:00 – 12:00 ಗಂಟೆಯವರೆಗೆ ಅರ್ಜಿ ಸಲ್ಲಿಸಬಹುದು.

ಈ ಸುದ್ದಿ ಓದಿ:-ಇದೊಂದು ಮಿಷನ್ ಇದ್ದರೆ ಸಾಕು ಕೇವಲ 2 ಗಂಟೆ ಕೆಲಸ ಮಾಡಿ 30 ಸಾವಿರ ಗಳಿಸಿ.!
ಯಾವುದಕ್ಕೆ ಅವಕಾಶ:-
* ರೇಷನ್ ಕಾರ್ಡ್ ನಲ್ಲಿರುವ ಯಾವುದೇ ತಿದ್ದುಪಡಿ
* ರೇಷನ್ ಕಾರ್ಡ್ ಗೆ ಹೊಸ ಸದಸ್ಯರನ್ನು ಸೇರ್ಪಡೆ ಮಾಡಲು

ಎಲ್ಲಿ ಅರ್ಜಿ ಸಲ್ಲಿಸಬೇಕು:-

* ಆನ್ಲೈನ್ ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ
* ಜಿಲ್ಲೆಯ ನಗರ ಪ್ರದೇಶಗಳಲ್ಲಿರುವ ಕರ್ನಾಟಕ ಒನ್‌ ಕೇಂದ್ರಗಳಲ್ಲಿ
* ಗ್ರಾಮಾಂತರ ಪ್ರದೇಶಗಳಲ್ಲಿ ಇರುವವರಿಗೆ ಗ್ರಾಮ ಒನ್‌ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಮಾತ್ರ ಅವಕಾಶ
* ಇವೆರಡನ್ನು ಹೊರತುಪಡಿಸಿ ಯಾವುದೇ ಪ್ರೈವೇಟ್ ಸೆಕ್ಟರ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.

ಅಗತ್ಯ ದಾಖಲೆಗಳು:-

* ಆಧಾರ್‌ ಕಾರ್ಡ್‌
* ಮನೆಯ ಸದಸ್ಯರ ಆಧಾರ್‌ ಕಾರ್ಡ್‌ಗಳು,
* ಆದಾಯ ಪ್ರಮಾಣ ಪತ್ರ
* ಜಾತಿ ಪ್ರಮಾಣ ಪತ್ರ
* ನಿವಾಸ ಧೃಡೀಕರಣ ಪ್ರಮಾಣ ಪತ್ರ
* ಮೊಬೈಲ್‌ ಸಂಖ್ಯೆ (ಕಡ್ಡಾಯ)
* ಬಾಡಿಗೆದಾರರಿಗೆ ಒಪ್ಪಂದ ಪತ್ರ‌ (ಕಡ್ಡಾಯ)

ಪ್ರಕ್ರಿಯೆ ಹೇಗೆ ನಡೆಯುತ್ತದೆ:-

* ಪಡಿತರ ಚೀಟಿಗಾಗಿ ಸಲ್ಲಿಸಿದ ಎಲ್ಲಾ ದಾಖಲೆಗಳ ಪರಿಶೀಲನೆ ನಂತರದ 15 ದಿನದೊಳಗೆ ನಡೆಯುತ್ತದೆ
* ಇಲಾಖೆ ವತಿಯಿಂದ ಅನುಮೋದನೆ ಆದವರಿಗೆ ಹೊಸ ಪಡಿತರ ಚೀಟಿಗಳನ್ನು ನೀಡಲಾಗುತ್ತದೆ. ಆ ಸಂದರ್ಭದಲ್ಲಿ 100 ರೂ ಅಥವಾ ನಿಗದಿಪಡಿಸಿರುವ ಶುಲ್ಕವನ್ನು ನೀಡಬೇಕು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now