ರಾಜ್ಯ ರಾಜಧಾನಿ ಬೆಂಗಳೂರು ಉದ್ಯಾನ ನಗರಿ, ನಾನಾ ಉದ್ಯಮಗಳ ತವರು ಮಾತ್ರವಲ್ಲದೇ ವಿದ್ಯಾ ಕಾಶಿಯೂ ಹೌದು ಎಂದು ಒಪ್ಪಲೇಬೇಕು. ಯಾಕೆಂದರೆ ರಾಜ್ಯದ ನಾನಾ ಮೂಲೆಗಳಿಂದ ಮಾತ್ರವಲ್ಲದೇ ದೇಶ ವಿದೇಶಗಳಿಂದ ಬೆಂಗಳೂರಿಗೆ ವಿದ್ಯಾಭ್ಯಾಸ ಮಾಡುವುದಕ್ಕಾಗಿ ಯುವ ಜನತೆ ಬರುತ್ತಾರೆ.
ನಮ್ಮ ದೇಶದ ವಿವಿಧ ಭಾಗದಲ್ಲಿ ಮಿಂಚುತ್ತಿರುವ ಅದೆಷ್ಟೋ ಪ್ರತಿಭಾವಂತರು ಬೆಂಗಳೂರಿನಲ್ಲಿ ಇದ್ದುಕೊಂಡು ತಮ್ಮ ಇಷ್ಟದ ಕೋರ್ಸ್ ಕಲಿತು ಹೋದವರಾಗಿದ್ದಾರೆ ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ. ಇಂತಹ ಬೃಹತ್ ಬೆಂಗಳೂರಿನಲ್ಲಿ ನೀವು ನಿಮ್ಮ ಕನಸನ್ನು ನನಸಾಗಿಸಿಕೊಳ್ಳುವ ಉದ್ದೇಶದಿಂದ ವಿದ್ಯಾಭ್ಯಾಸ ಪಡೆಯಲು ಬಯಸುವುದಾದರೆ ಮೊದಲಿಗೆ ಎದುರಾಗುವ ಒಂದೇ ಸಮಸ್ಯೆ.
ಈ ಸುದ್ದಿ ಓದಿ:- ಮಹಿಳೆಯರಿಗೆ ಸರ್ಕಾರದಿಂದ 50,000 ಸಹಾಯಧನ, ಆಸಕ್ತರು ಅರ್ಜಿ ಸಲ್ಲಿಸಿ.!
ಉಳಿದುಕೊಳ್ಳಲು ಆಸರೆ? ಯಾಕೆಂದರೆ ಬೆಂಗಳೂರಿನ ಈ ದುಬಾರಿ ದುನಿಯಾದಲ್ಲಿ ಉದ್ಯೋಗ ಪಡೆದು ಬದುಕುವುದೇ ಕಷ್ಟ ಇನ್ನು ವಿದ್ಯಾಭ್ಯಾಸಕ್ಕಾಗಿ ತರುವ ಹಣಕಾಸಿನಲ್ಲಿ ಬದುಕು ನಡೆಸಲು ಸಾಧ್ಯವೇ ಈ ಹಾದಿಯಲ್ಲಿ ಗುರಿ ತಲುಪಲು ಆಗುತ್ತದೆಯೇ ಎನ್ನುವ ಪ್ರಶ್ನೆಯೇ ಎದುರಾಗುತ್ತದೆ.
ಈ ಸುದ್ದಿ ಓದಿ:- ಬಾಡಿಗೆ ಮನೆ ಕಟ್ಟುವಾಗ ಹಣ ಉಳಿಸುವುದು ಹೇಗೆ ನೋಡಿ.!
ನೀವು ಕೂಡ ಬೆಂಗಳೂರಿನ ಹೊರಭಾಗದವರಾಗಿದ್ದರೆ ಬೆಂಗಳೂರಿನಿಂದ ದೂರ ಇರುವ ಹಳ್ಳಿಗಳಿಂದ ವಿದ್ಯಾಭ್ಯಾಸದ ಉದ್ದೇಶಕ್ಕಾಗಿ ಬೆಂಗಳೂರಿಗೆ ಬರುತ್ತಿದ್ದರೆ ಉಳಿದುಕೊಳ್ಳುವ ವ್ಯವಸ್ಥೆ ಬಗ್ಗೆ ಯೋಚನೆ ಬಿಟ್ಟುಬಿಡಿ. ಬೆಂಗಳೂರಿನ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆಯು ವಿವಿಧ ಕೋರ್ಸ್ ಕಲಿಯಲು ಬೆಂಗಳೂರಿಗೆ ಬರುವ ಬಡ ವೀರಶೈವ ಪ್ರತಿಭಾವಂತ ವಿದ್ಯಾರ್ಥಿ ಬಳಗಕ್ಕೆ.
ಈ ಸುದ್ದಿ ಓದಿ:- ಜೂನ್ 1 ರ ಒಳಗೆ ಈ ಕೆಲಸ ಮಾಡದೇ ಇದ್ದರೆ, ಇನ್ಮುಂದೆ ಗ್ಯಾಸ್ ಸಬ್ಸಿಡಿ ಸಿಗಲ್ಲ.!
ಕೆಲವು ಕಂಡೀಷನ್ ಗಳ ಮೇರೆಗೆ ಉಚಿತ ವಸತಿ ವ್ಯವಸ್ಥೆ ಮಾಡಿಕೊಡುತ್ತಿದೆ ಮತ್ತು ಪ್ರಸಕ್ತ ಸಾಲಿನ ಉಚಿತ ಹಾಸ್ಟೆಲ್ ಸೌಲಭ್ಯಕ್ಕಾಗಿ ಅರ್ಜಿ ಕೂಡ ಆಹ್ವಾನ ಮಾಡಿದೆ. ಈ ಕುರಿತಾದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸುತ್ತಿದ್ದೇವೆ ತಪ್ಪದೇ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಹೆಚ್ಚಿನ ಮಿತ್ರರೊಡನೆ ಶೇರ್ ಮಾಡಿ.
ಕೋರ್ಸ್ ಗಳು ಮತ್ತು ಅರ್ಜಿ ಪ್ರಾರಂಭವಾಗುವ ದಿನಾಂಕ:-
* PUC, ಡಿಪ್ಲಮೋ ಮತ್ತು ಪದವಿ ವಿದ್ಯಾರ್ಥಿಗಳು 31.05.2024ರ ಒಳಗಾಗಿ ಅರ್ಜಿ ಪಡೆದು 05.06.2024ರ ಒಳಗೆ ಭರ್ತಿ ಮಾಡಿದ ಅರ್ಜಿ ನಮೂನೆ ತಲುಪಿಸಬೇಕು
* ವೈದ್ಯಕೀಯ / ತಾಂತ್ರಿಕ / ಸ್ನಾತಕೋತ್ತರ / ಐದು ವರ್ಷಗಳ ಬಿಎ ಎಲ್ಎಲ್‌ಬಿ ಮತ್ತು ನರ್ಸಿಂಗ್ ಕೋರ್ಸ್ ಗಳನ್ನು ಕಲಿಯಲು ಬರುವ ವಿದ್ಯಾರ್ಥಿಗಳು 30.06.2024 ರ ಒಳಗೆ ಅರ್ಜಿ ಪಡೆದು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು 05.07 2024 ರ ಒಳಗೆ ತಲುಪಿಸಬೇಕು.
ಕಂಡಿಷನ್ ಗಳು:-
* ಬೆಂಗಳೂರಿನ ಹೊರಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ
* ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ
* ಈ ಮೇಲೆ ತಿಳಿಸಿದ ಶೈಕ್ಷಣಿಕ ತರಗತಿಗಳನ್ನು ಅಭ್ಯಾಸ ಮಾಡುವ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.
* ವೀರಶೈವ ವಿದ್ಯಾರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ
* ನೋಟಿಫಿಕೇಶನ್ ನಲ್ಲಿ ತಿಳಿಸಿರುವ ದಿನಾಂಕದ ಮೇಲೆ ಬರುವ ವಿದ್ಯಾರ್ಥಿಗಳಿಗೆ ಅರ್ಜಿ ಫಾರಂ ದೊರೆಯುವುದಿಲ್ಲ ಮತ್ತು ಸೂಚಿಸಲಾಗದ ದಿನಾಂಕದ ನಂತರ ಸಲ್ಲಿಸುವ ತುಂಬಿದ ಅರ್ಜಿ ನಮೂನೆಗಳು ಕೂಡ ತಿರಸ್ಕೃತವಾಗುತ್ತದೆ
* ಈ ಉಚಿತ ಹಾಸ್ಟೆಲ್ ಸೌಲಭ್ಯದ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಬೇಕಿದ್ದರೂ ಕಛೇರಿ ವಿಳಾಸಕ್ಕೆ ಭೇಟಿ ಕೊಡಿ.
* ಅರ್ಜಿಗಳು ದೊರೆಯುವ ಸ್ಥಳ:-
ಕಛೇರಿ ವಿಳಾಸ:-
ಕಾರ್ಯದರ್ಶಿಗಳು,
ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆ,
SJM ಟವರ್ಸ್,
ನಂ.18/1,
ಕಲ್ಯಾಣ ಸಮುಚ್ಛಯ,
2ನೇ ಮಹಡಿ 6ನೇ ಅಡ್ಡರಸ್ತೆ,
ಗಾಂಧಿನಗರ,
ಬೆಂಗಳೂರು.