ಕರ್ನಾಟಕ ಸರ್ಕಾರವು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಮಂಡಳಿಯಲ್ಲಿ (KARBWWB) ನೋಂದಾಯಿಸಿಕೊಂಡು ಲೇಬರ್ ಕಾರ್ಡ್ ಹೊಂದಿರುವವರಾಗಿ ಅನೇಕ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದೆ. ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರು ಈ ಯೋಜನೆಗಳ ಪ್ರಯೋಜನ ಪಡೆಯಬಹುದು.
ಆದರೆ ಅವರನ್ನು ಗುರುತಿಸುವ ಸಲುವಾಗಿ ಲೇಬರ್ ಕಾರ್ಡ್ (Labour Card) ಎನ್ನುವ ಗುರುತಿನ ಚೀಟಿ ಇರಬೇಕು ಹೀಗಾಗಿ ಮಂಡಳಿ ವತಿಯಿಂದ ಅವರು ಕಾರ್ಮಿಕರು ಎಂದು ಗುರುತಿಸಿ ಈ ಐಡೆಂಟಿಟಿ ಕಾರ್ಡ್ ನೀಡಲಾಗುತ್ತದೆ. ಅವರು ಸರ್ಕಾರದಿಂದ ಕಾರ್ಮಿಕರಿಗಾಗಿ ಬಿಡುಗಡೆಯಾಗುವ ಸಹಾಯಧನಗಳು, ಪ್ರೋತ್ಸಾಹ ಧನಗಳು, ಸಾಲ ಸೌಲಭ್ಯ, ಪಿಂಚಣಿ ವ್ಯವಸ್ಥೆ ಇನ್ನಿತರ ಸೌಲಭ್ಯಗಳನ್ನು ಪಡೆದುಕೊಳ್ಳಲು ಲೇಬರ್ ಕಾರ್ಡ್ ಇದ್ದರೆ ಮಾತ್ರ ನೋಂದಣಿ ಸಂಖ್ಯೆಯಿಂದ ಅರ್ಜಿ ಸಲ್ಲಿಸಲು ಸಾಧ್ಯ.
ಕೇಂದ್ರ ಸರ್ಕಾರದಿಂದ ರೇಷನ್ ಕಾರ್ಡ್ ಇದ್ದವರಿಗೆ 5 ಹೊಸ ರೂಲ್ಸ್ ಜಾರಿ.!
ಇಷ್ಟೆಲ್ಲ ಪ್ರಯೋಜನ ಸಿಗುತ್ತಿರುವುದರಿಂದ ಕಟ್ಟಡ ಕಾರ್ಮಿಕರಲ್ಲದವರು ನಕಲಿ ದಾಖಲಾತಿ ಸೃಷ್ಟಿಸಿ ಸರ್ಕಾರಕ್ಕೆ ವಂಚಿಸಿ ಸೌಲಭ್ಯ ಪಡೆಯುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದೆ. ಈ ರೀತಿ ನಕಲಿ ಕಾರ್ಮಿಕ ಗುರುತಿನ ಚೀಟಿಯನ್ನು ಪಡೆದು ಸೌಲಭ್ಯಗಳನ್ನು ಪಡೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಹಾಗಾಗಿ ಅಂತವರು ತಾವೇ ತಮ್ಮ ಕಾರ್ಮಿಕರ ಕಾರ್ಡ್ ರದ್ದು ಪಡಿಸಿಕೊಳ್ಳಬೇಕು ಎಂದು ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ನೀಡಿದಾರೆ.
ಈ ರೀತಿ ನಕಲಿ ಕಾರ್ಡ್ ಗಳನ್ನು ರದ್ದುಪಡಿಸುವುದರಿಂದ ನಿಜವಾದ ಕಾರ್ಮಿಕರಿಗೆ ವಂಚನೆಯಾಗುವುದಿಲ್ಲ. ಈ ಸಿಹಿ ಸುದ್ದಿ ಜೊತೆಗೆ ಕಾರ್ಮಿಕರಿಗೆ ಮತ್ತೊಂದು ಈ ಕುರಿತಾಗಿ ಮುಖ್ಯವಾದ ವಿಷಯ ಇದೆ. ಸರ್ಕಾರದಿಂದ ಜಾರಿಗೆ ಆಗಿರುವ ಲೇಬರ್ ಕಾರ್ಡ್ ಮತ್ತು ಅದರ ಅಡಿಯಲ್ಲಿ ದೊರೆಯುವ ಯೋಜನೆಗಳನ್ನು ಪಡೆಯಲು ನೋಂದಣಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಇದಕ್ಕೆ ಸಂಬಂಧಿಸಿದ ವಿವರ ಇಂತಿದೆ ನೋಡಿ.
ಎಲ್ಲಿ ಅರ್ಜಿ ಸಲ್ಲಿಸಬೇಕು ಮತ್ತು ಹೇಗೆ.?
* ಬೆಂಗಳೂರು ನಗರದ ಸ್ಥಳದಲ್ಲೇ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ನೋಂದಣಿ ಅಭಿಯಾನವು ನಡೆಯಲಿದೆ. * ನೋಂದಣಿ ಪ್ರಕ್ರಿಯೆಯನ್ನು ಮಾಡಲು ಹಿರಿಯ ಕಾರ್ಮಿಕ ನಿರೀಕ್ಷಕರು / ಕಾರ್ಮಿಕ ನಿರೀಕ್ಷಕರ ಕಛೇರಿಗಳಿಗೆ ಭೇಟಿ ನೀಡಬಹುದು.
* 30 ಡಿಸೆಂಬರ್, 2023 ರಿಂದ 31 ಮಾರ್ಚ್, 2024 ರವರೆಗೆ ಈ ಒಂದು ಲೇಬರ್ ಕಾರ್ಡ್ ನೋಂದಣಿ ಪ್ರಕ್ರಿಯೆ ನಡೆಯಲಿದೆ.
ಲೇಬರ್ ಕಾರ್ಡ್ ಇದ್ದವರಿಗೆ ಮತ್ತು ಆ ಸಿಗುವ ಯೋಜನೆಗಳ ವಿವರ:-
* ಅಪಘಾತ ಪರಿಹಾರ
* ಪ್ರಮುಖ ವೈದ್ಯಕೀಯ ವೆಚ್ಚ ಸಹಾಯಧನ
* ತಾಯಿ ಮಗು ಸಹಾಯಹಸ್ತ
* ದುರ್ಬಲತೆ ಪಿಂಚಣಿ ಮುಂದುವರಿಕೆ
* ಪಿಂಚಣಿ ಸೌಲಭ್ಯ
* ಹೆರಿಗೆ ಸೌಲಭ್ಯ
* ದುರ್ಬಲತೆ ಪಿಂಚಣಿ ಸಾಲಭ್ಯ
* ಶೈಕ್ಷಣಿಕ ಸಹಾಯಧನ
* ಅಂತ್ಯಕ್ರಿಯೆ ವೆಚ್ಚ
* ಮದುವೆ ಸಹಾಯಧನ
* ವೈದ್ಯಕೀಯ ಸಹಾಯಧನ
* ಪಿಂಚಣಿ ಸೌಲಭ್ಯ
* ಶ್ರಮಸಾಮರ್ಥ್ಯ ಟೂಲ್ ಕಿಟ್
* ಉಚಿತ ಸಾರಿಗೆ ಬಸ್ ಪಾಸ್ ಸೌಲಭ್ಯ.
ಅರ್ಜಿ ಸಲ್ಲಿಸಲು ಯಾರು ಅರ್ಹರು
* ಲೇಬರ್ ಕಾರ್ಡ್ ಅನ್ನು ಪಡೆಯುವ ಅಥವಾ ನೋಂದಣಿ ಮಾಡುವ ಮೊದಲು 12 ತಿಂಗಳುಗಳ ಕಾಲ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳಲ್ಲಿ ಕನಿಷ್ಠ 90 ದಿನಗಳು ಕೆಲಸ ನಿರ್ವಹಿಸಿರಬೇಕು.
* 18 ರಿಂದ 60 ವರ್ಷದೊಳಗಿರಬೇಕು.
ಬೇಕಾಗುವ ದಾಖಲೆಗಳು :-
* 90 ದಿನಗಳ ಉದ್ಯೋಗ ದೃಢೀಕರಣ ಪತ್ರ.
* ಅರ್ಜಿದಾರ ಹಾಗೂ ಕುಟುಂಬದ ಆಧಾರ್ ಕಾರ್ಡ್ ಪ್ರತಿ.
* ರೇಷನ್ ಕಾರ್ಡ್,
* ಅರ್ಜಿದಾರರ ಬ್ಯಾಂಕ್ ಪಾಸ್ ಬುಕ್ ಪ್ರತಿ.
* ಅರ್ಜಿದಾರರ ಆಧಾರ್ ಕಾರ್ಡ್ ಗೆ ಲಿಂಕ್ ಇರುವ ದೂರವಾಣಿ ಸಂಖ್ಯೆ.
ಹೆಚ್ಚಿನ ಮಾಹಿತಿಗಾಗಿ:-
* ಕಾರ್ಮಿಕ ಅಧಿಕಾರಿಗಳು, ಹಿರಿಯ ಕಾರ್ಮಿಕ ನಿರೀಕ್ಷಕರು ಮತ್ತು ಕಾರ್ಮಿಕ ನಿರೀಕ್ಷಕರನ್ನು ಭೇಟಿ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದು.
* ಸಹಾಯವಾಣಿ ಸಂಖ್ಯೆ:- 155214
* ವೆಬ್ಸೈಟ್ ವಿಳಾಸ:- https://karbwwb.karnataka.gov.in.