ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ (Fiod and Civil Supply Department) ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಉಚಿತ ಪಡಿತರವನ್ನು ಫಲಾನುಭವಿಗಳಿಗೆ ನ್ಯಾಯಬೆಲೆ ಅಂಗಡಿ (Fareprice shop) ಮೂಲಕ ತಲುಪಿಸಲಾಗುತ್ತದೆ. ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಕೂಡ ನ್ಯಾಯಬೆಲೆ ಅಂಗಡಿ ಇದ್ದು, ಕೆಲವೊಮ್ಮೆ ಒಂದಕ್ಕಿಂತ ಹೆಚ್ಚು ನ್ಯಾಯಬೆಲೆ ಅಂಗಡಿಗಳು ಇರುತ್ತವೆ.
ಆದರೆ ವಿಪರ್ಯಾಸವೇನೆಂದರೆ ಕೆಲವೊಂದು ಗ್ರಾಮಗಳಲ್ಲಿ ಜನಸಂಖ್ಯೆ ಹೆಚ್ಚಾಗಿದ್ದರೂ ಕೂಡ ನ್ಯಾಯಬೆಲೆ ಅಂಗಡಿ ಇರುವುದಿಲ್ಲ ಅಥವಾ ಇದ್ದ ನ್ಯಾಯಬೆಲೆ ಅಂಗಡಿಗಳು ಕಾರಣಾಂತರದಿಂದ ಮುಚ್ಚಿ ಹೋಗುತ್ತದೆ. ಇದರಿಂದ ಅವರು ಪಕ್ಕದಲ್ಲಿ ಗ್ರಾಮಗಳಿಗೆ ರೇಷನ್ ಪಡೆಯಲು ಹೋಗಬೇಕು, ಕೆಲವು ಸಮಯದಲ್ಲಿ ಅದು ಸಾಧ್ಯವಾಗದೇ ಇದ್ದಾಗ ಅವರಿಗೆ ಸರ್ಕಾರದ ಅನುದಾನ ತಲುಪುವುದಿಲ್ಲ.
ಈ ಅವ್ಯವಸ್ಥೆಯನ್ನು ಸರಿಪಡಿಸುವುದರ ಬಗ್ಗೆ ಗಮನ ಹರಿಸಿದ ಸರ್ಕಾರವು ಯಾರು ಕೂಡ ಪಡಿತರ ಪಡೆಯುವುದರಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಅನ್ನಭಾಗ್ಯ ಯೋಜನೆ ಮುನ್ನೆಲೆಗೆ ಬರುತ್ತಿದ್ದಂತೆ ಇದಕ್ಕೆ ಕ್ರಮ ಕೈಗೊಂಡಿದೆ ಹೊಸದಾಗಿ ನ್ಯಾಯಬೆಲೆ ಅಂಗಡಿಗಳನ್ನು ಯಾವ ಭಾಗದಲ್ಲಿ ನ್ಯಾಯಬೆಲೆ ಅಂಗಡಿಗಳ ಕೊರತೆ ಇದೆ.
ಅಲ್ಲಿ ಸ್ಥಾಪಿಸಲು ಆಸಕ್ತಿ ಇರುವವರಿಂದ ಅರ್ಜಿ ಆಹ್ವಾನ ಮಾಡಿದೆ. ಹೊಸ ನ್ಯಾಯಬೆಲೆ ಅಂಗಡಿ ಸ್ಥಾಪಿಸಲು ಇರುವ ಕ್ರಮಗಳ ಬಗ್ಗೆ ಕೆಲ ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ. ನ್ಯಾಯಬೆಲೆ ಅಂಗಡಿ ಸ್ಥಾಪಿಸಲು ಆರಂಭಿಕ ಬಂಡವಾಳದ ಅವಶ್ಯಕತೆ ಇರುತ್ತದೆ ನಂತರದ ಫೆಸಿಲಿಟಿಗಳನ್ನು ಸರ್ಕಾರವೇ ಆಹಾರ ಇಲಾಖೆ ಮೂಲಕ ತಲುಪಿಸುತ್ತದೆ.
ನ್ಯಾಯಬೆಲೆ ಅಂಗಡಿಯನ್ನು ತೆರೆಯುವುದರಿಂದ ಕೆಲವು ಕಡೆ ತಿಂಗಳ ಲೆಕ್ಕದಲ್ಲಿ ಸಂಬಳ ಪಡೆಯಬಹುದು ಆದರೆ ಹೆಚ್ಚಿನ ಕಡೆಗಳಲ್ಲಿ 1Kg ಧವಸಕ್ಕೆ ಇಂತಿಷ್ಟು ಕಮಿಷನ್ ಎಂದು ಹಣ ಹೋಗುತ್ತದೆ ಮತ್ತು ರೇಷನ್ ಕಾರ್ಡ್ ಗಳ ಸಂಖ್ಯೆ ಹೆಚ್ಚು ಅಥವಾ ಸದಸ್ಯರ ಸಂಖ್ಯೆ ಹೆಚ್ಚಾದಷ್ಟು ಹೆಚ್ಚು ಬೋನಸ್ ಕೂಡ ಸಿಗುತ್ತದೆ ಮತ್ತು ಮುಖ್ಯವಾಗಿ ಸರ್ಕಾರದ ಸೇವೆಯನ್ನು ಜನಸಾಮಾನ್ಯರಿಗೆ ತಲುಪಿಸಿದ ಸಮಾಧಾನ ಕೂಡ ಇರುತ್ತದೆ.
ಅರ್ಹತೆಗಳು:-
* 18 ವರ್ಷ ಮೇಲ್ಪಟ್ಟವರು ಅರ್ಜಿ ಸಲ್ಲಿಸಬಹುದು.
* ನ್ಯಾಯಬೆಲೆ ಅಂಗಡಿ ಆರಂಭಿಸುವ ಅಭ್ಯರ್ಥಿಗೆ ಕಂಪ್ಯೂಟರ್ ಜ್ಞಾನ (computer knowledge is mandatory) ಇರುವುದು ಕಡ್ಡಾಯವಾಗಿದೆ, ಯಾಕೆಂದರೆ ಈಗ ಎಲ್ಲಾ ಕ್ಷೇತ್ರವು ಡಿಜಟಲೀಕರಣವಾಗಿರುವುದರಿಂದ ಪಡಿತರ ವಿತರಣೆ ಮಾಡಿದ ನಂತರ ಗಣಕೀಕರಣ ಮಾಡುವ ಅಗತ್ಯ ಇರುವುದರಿಂದ ಅವರಿಗೆ ಕಂಪ್ಯೂಟರ್ ಜ್ಞಾನ ಇರಬೇಕು.
* ಪ್ರಾಥಮಿಕ ಕೃಷಿ ಸಹಕಾರಿ ಸಂಘ, ತೋಟಗಾರಿಕಾ ಸಂಘ, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇರುವ ಸಂಘ ಸಂಸ್ಥೆಗಳು, ಕಂಪನಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಮಾನ್ಯತೆ ಪಡೆದುಕೊಂಡಿರುವ ಸ್ವ ಸಹಾಯ ಗುಂಪುಗಳು ಮೊದಲಾದ ಸಂಘ-ಸಂಸ್ಥೆಗಳಿಗೆ ನ್ಯಾಯಬೆಲೆ ಅಂಗಡಿ ಆರಂಭಿಸಲು ಮೊದಲ ಆದ್ಯತೆ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:-
* ನಿಮ್ಮ ಹತ್ತಿರದ ಆಹಾರ ಇಲಾಖೆ ಕಚೇರಿಗೆ ಹೋಗಿ ಅರ್ಜಿ ನಮೂನೆ ಎ ಹಾಗೂ ಸಂಬಂಧಪಟ್ಟ ದೃಢೀಕರಣ ಪ್ರಮಾಣ ಪತ್ರಗಳನ್ನು ಪಡೆದು ಮಾಹಿತಿಗಳನ್ನು ಭರ್ತಿ ಮಾಡಿ ನಾಗರಿಕ ಸರಬರಾಜು ಇಲಾಖೆ ಮತ್ತು ಗ್ರಾಹಕ ವ್ಯವಹಾರಗಳ ಜಂಟಿ ನಿರ್ದೇಶಕರ ಕಚೇರಿಗೆ ಕಡೆ ದಿನಾಂಕದ ಒಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-
* ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್ಸೈಟ್ https://ahara.kar.nic.in/Home/Home
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 30 ನವೆಂಬರ್, 2023