ಎಲ್ಲ ವಿದ್ಯಾರ್ಥಿಗಳಿಗೂ ಗೂಗಲ್ ವತಿಯಿಂದ ಸಿಹಿ ಸುದ್ದಿ ಇದೆ. ವಿದ್ಯಾರ್ಥಿಗಳಿಂದ ಹಿಡಿದು ವೃದ್ಧರವರಿಗೆ ಪ್ರತಿಯೊಬ್ಬರಿಗೂ ಗೊತ್ತಿಲ್ಲದ ವಿಷಯವನ್ನು ತಿಳಿಸುವ ಗುರುವಾಗಿರುವ ಗೂಗಲ್ ಈಗ ಶಿಕ್ಷಣ ಕ್ಷೇತ್ರಕ್ಕೂ ಮಹತ್ವ ನೀಡುತ್ತಿದ್ದು ಒಂದು ಹೊಸ ಹೆಜ್ಜೆ ಇಟ್ಟಿದೆ.
ಜನರೇಷನ್ ಗೂಗಲ್ ಸ್ಕಾಲರ್ಶಿಪ್ ( Generation Google scholarship ) ಯೋಜನೆಯಲ್ಲಿ ಗೂಗಲ್ ಟೆಕ್ನಾಲಜಿ ಗೂಗಲ್ ವತಿಯಿಂದ ವಿದ್ಯಾರ್ಥಿಗಳಿಗಾಗಿ ಸ್ಕಾಲರ್ಶಿಪ್ ಬಿಡುಗಡೆ ಮಾಡಲು ಚಿಂತಿಸಿದೆ. ಸರ್ಕಾರಗಳು ಮಾತ್ರವಲ್ಲದೆ ಪ್ರತಿಷ್ಠಿತ ಕಂಪನಿಗಳು ಕೂಡ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಅವರ ಶಿಕ್ಷಣದ ಕನಸನ್ನು ನನಸು ಮಾಡಿಕೊಳ್ಳಲು ಧನ ಸಹಾಯ ಮಾಡಿ ನೆರವಾಗುತ್ತಿದೆ.
ಅಂತೆಯೇ ಗೂಗಲ್ ಕೂಡ ವಾರ್ಷಿಕವಾಗಿ 2,500 ಡಾಲರ್ ಗಳನ್ನು ಅರ್ಹ ವಿದ್ಯಾರ್ಥಿಗೆ ನೀಡುತ್ತಿದೆ. ನೀವು ಅರ್ಜಿ ಸಲ್ಲಿಸಿ ಈ ವಿದ್ಯಾರ್ಥಿ ವೇತನ ಪಡೆದುಕೊಳ್ಳಲು ಪ್ರಯತ್ನಿಸಬಹುದು ಇದರ ಕುರಿತ ಪ್ರಮುಖ ವಿವರ ಹೀಗಿದೆ ನೋಡಿ. ಜನರೇಶನ್ ಗೂಗಲ್ ಸ್ಕಾಲರ್ಶಿಪ್ ನೀಡುತ್ತಿರುವ ಮುಖ್ಯ ಉದ್ದೇಶ:-
ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪನಿ ಆದ ಗೂಗಲ್ ( Google ) ಗೂಗಲ್ ಸ್ಕಾಲರ್ಶಿಪ್ ನ್ನು ಆರ್ಥಿಕವಾಗಿ ದುರ್ಬಲವಾಗಿರುವ ಮತ್ತು ವಿಜ್ಞಾನ ಸಂಬಂಧಿತ ತಾಂತ್ರಿಕ ಕೋರ್ಸ್ಗಳನ್ನು ಕಲಿಯುತ್ತಿರುವ ಪ್ರಪಂಚದಾದ್ಯಂತ ಇರುವ ಎಲ್ಲಾ ಮಹಿಳಾ ವಿದ್ಯಾರ್ಥಿಗಳಿಗಾಗಿ ಮೀಸಲಿಟ್ಟಿದೆ. ಅನೇಕ ಶೈಕ್ಷಣಿಕ ವೆಬ್ಸೈಟ್ಗಳು ಮತ್ತು ತರಬೇತಿ ಕಾರ್ಯಕ್ರಮಗಳ ಮೂಲಕ ಪ್ರತಿ ವರ್ಷ ಗೂಗಲ್ ವಿದ್ಯಾರ್ಥಿ ವೇತನಕ್ಕೆ ಹಣ ಹೊಂದಿಸುತ್ತದೆ.
ಅರ್ಜಿ ಸಲ್ಲಿಸಲು ಮಾನದಂಡಗಳು:-
* ಏಷ್ಯಾ ಪೆಸಿಫಿಕ್ ರಾಷ್ಟ್ರಗಳಲ್ಲಿ 2023-2024 ಶೈಕ್ಷಣಿಕ ವರ್ಷಕ್ಕೆ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಲ್ಲಿ ಪೂರ್ಣ ಸಮಯದ ಕಂಪ್ಯೂಟರ್ ವಿಜ್ಞಾನ, ಕಂಪ್ಯೂಟರ್ ಎಂಜಿನಿಯರಿಂಗ್ ಅಥವಾ ಸೈನ್ಸ್ ಸಂಬಂಧಿತ ತಾಂತ್ರಿಕ ಶಿಕ್ಷಣವನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು.
* ಅರ್ಜಿ ಸಲ್ಲಿಸಿದ ವಿದ್ಯಾರ್ಥಿನಿಯರು ವಿದ್ಯಾರ್ಥಿ ವೇತನ ಪಡೆಯಲು ಕೋಡಿಂಗ್ ಕೌಶಲ್ಯಗಳನ್ನು ನಿರ್ಣಯಿಸುವ Google ನ ಆನ್ಲೈನ್ ಚಾಲೆಂಜ್ನಲ್ಲಿ ಭಾಗವಹಿಸಬೇಕು.
* ಅರ್ಜಿ ಸಲ್ಲಿಸುವ ವೇಳೆ ವಿದ್ಯಾರ್ಥಿನಿಯರ ಸಂಪೂರ್ಣ ವಿವರಗಳೊಂದಿಗೆ CV ಸಲ್ಲಿಸಬೇಕು ಮತ್ತು ಅಭ್ಯರ್ಥಿಯ ಶೈಕ್ಷಣಿಕ ಸಾಧನೆ ಕೂಡ ಉತ್ತಮವಾಗಿರಬೇಕು.
* ಜನರೇಷನ್ ಗೂಗಲ್ ಸ್ಕಾಲರ್ಶಿಪ್ಅನ್ನು ವೈವಿಧ್ಯತೆ, ಇಕ್ವಿಟಿ ಮತ್ತು ಸೇರ್ಪಡೆ, ಪ್ರದರ್ಶಿತ ನಾಯಕತ್ವ ಮತ್ತು ಶೈಕ್ಷಣಿಕ ಕಾರ್ಯಕ್ಷಮತೆಗೆ ಪ್ರತಿ ಅಭ್ಯರ್ಥಿಯ ಬದ್ಧತೆಯ ಸಾಮರ್ಥ್ಯದ ಆಧಾರದ ಮೇಲೆ ನೀಡಲಾಗುವುದು.
ಸಿಗುವ ವಿದ್ಯಾರ್ಥಿ ವೇತನ:-
2500 ಡಾಲರ್ ಗಳು ಅಂದರೆ ಭಾರತದ ರೂಪಾಯಿಗಳಲ್ಲಿ 2,08,575 ರೂ. DBT ಮೂಲಕ ನೇರವಾಗಿ ವಿದ್ಯಾರ್ಥಿನಿಯ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:-
* https://buildyourfuture.withgoogle.com/scholarships ಲಿಂಕ್ ಕ್ಲಿಕ್ ಮಾಡಿ ಅಜ್ಜಿ ಸಲ್ಲಿಸುವ ವೆಬ್ಸೈಟ್ನ ಮುಖಪುಟ ಓಪನ್ ಆಗುತ್ತದೆ.
* ಸ್ಕ್ರೀನ್ ಮೇಲೆ ಮೊದಲು ಲೊಕೇಶನ್ ಮತ್ತು ಟಾಪಿಕ್ ಸೆಲೆಕ್ಟ್ ಮಾಡಿ. ಜನರೇಶನ್ ಗೂಗಲ್ ಸ್ಕಾಲರ್ಶಿಪ್ ಸೆಲೆಕ್ಟ್ ಮಾಡಿ
ಅರ್ಜಿ ನಮೂನೆಯು ಲಿಂಕ್ ಸ್ಕ್ರೀನ್ ಮೇಲೆ ಕಾಣಿಸುತ್ತದೆ.
* ಅರ್ಜಿ ನಮೂನೆಯಲ್ಲಿ ಭರ್ತಿ ಮಾಡಬೇಕಾದ ಎಲ್ಲಾ ಮಾಹಿತಿಯನ್ನು ನಮೂದಿಸಿ, ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
* ಸಬ್ಮಿಟ್ ಆಯ್ಕೆಯನ್ನು ಒತ್ತಿ ಮತ್ತು ವಿದ್ಯಾರ್ಥಿವೇತನ ಕಾರ್ಯಕ್ರಮಕ್ಕಾಗಿ ನಿಮ್ಮನ್ನು ನೋಂದಾಯಿಸಿಕೊಳ್ಳಿ, ತಪ್ಪದೇ ರಿಸಿಪ್ಟ್ ಪಡೆಯಿರಿ.
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:- ಜನವರಿ ಮೊದಲನೇ ವಾರದಿಂದ ಆರಂಭವಾಗುತ್ತದೆ.
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 16 ಮೇ, 2024.
ಪ್ರಮುಖ ದಿನಾಂಕಗಳು :
ಅರ್ಜಿಯನ್ನು ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗುವ ದಿನಾಂಕ : ಜನವರಿ ಮೊದಲನೇ ವಾರ, 2023
ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕ : ಮೇ 16, 2023