ಹೊಸ ರೇಷನ್ ಕಾರ್ಡ್ ಪಡೆಯಲು ಹಾಗೂ ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಪ್ರಕ್ರಿಯೆ ಆರಂಭ.! ಈ ದಾಖಲೆ ಇದ್ದರೆ ಮಾತ್ರ ಇನ್ಮುಂದೆ ರೇಷನ್ ಕಾರ್ಡ್ ಸಿಗೋದು

 

ಕರ್ನಾಟಕದಲ್ಲಿ ನೂತನ ಸರ್ಕಾರ ಬಂದ ಮೇಲೆ ಜಾರಿಯಾಗಿರುವ ಗ್ಯಾರಂಟಿ ಯೋಜನೆ (Gyarantee Scheme) ಪ್ರಯೋಜನವನ್ನು ಪಡೆಯಲು ರೇಷನ್ ಕಾರ್ಡ್ (Ration Card) ಕಡ್ಡಾಯವಾದ ದಾಖಲೆಯಾಗಿದೆ. ಹಾಗಾಗಿ ರೇಷನ್ ಕಾರ್ಡ್ ರದ್ದಾಗಿದ್ದವರು, ರೇಷನ್ ಕಾರ್ಡ ನಲ್ಲಿ ಹೆಸರು ತಿದ್ದುಪಡಿ ಮಾಡಿಸಬೇಕಾದವರು ಮತ್ತು ಹೊಸ ರೇಷನ್ ಕಾರ್ಡ್ ಗಳನ್ನು ಪಡೆದುಕೊಳ್ಳಬೇಕಾದವರು ಅರ್ಜಿ ಸಲ್ಲಿಸಲು ಪ್ರಯತ್ನಿಸುತ್ತಿದ್ದಾರೆ.

ಆದರೆ ಈ ಮೂರು ತಿಂಗಳ ಹಿಂದೆ ಕೂಡ ಅರ್ಜಿ ಸಲ್ಲಿಸಿದವರಿಗೂ ಚುನಾವಣೆ ನೀತಿ ಸಂಹಿತೆ (Code of Conduct) ಜಾರಿಯಲ್ಲಿದ್ದ ಕಾರಣ ರೇಷನ್ ಕಾರ್ಡ್ ವಿತರಣೆ (New Ration card distribution) ನಡೆದಿಲ್ಲ. ಈ ವಿಚಾರವಾಗಿ ಕಳೆದ ವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಎಚ್ ಮುನಿಯಪ್ಪ (Food and Civil Supply Minister K.H Muniyappa) ಅವರು ರಾಜ್ಯದ ಜನತೆಗೆ ಈ ಬಗ್ಗೆ ಸುಳಿವು ನೀಡಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ ಪಟ್ಟಿ ಬಿಡುಗಡೆ ಈ ಲಿಸ್ಟ್ ನಲ್ಲಿ ಹೆಸರು ಇದ್ದವರಿಗೆ ಮಾತ್ರ ಸಿಗುತ್ತದೆ 2000 ನಿಮ್ಮ ಹೆಸರು ಈ ಲಿಸ್ಟ್ ನಲ್ಲಿದಿಯೇ ಚೆಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!

ಚುನಾವಣೆ ನೀತಿ ಸಂಹಿತೆ ಕಾರಣದಿಂದಾಗಿ ತಡೆಹಿಡಿಯಲಾಗಿದ್ದ ರೇಷನ್ ಕಾರ್ಡ್ ವಿತರಣೆ ಕಾರ್ಯಕ್ರಮವನ್ನು ಶೀಘ್ರದಲ್ಲೇ ಪುನಾರಾರಂಭಗೊಳಿಸಲಿದ್ದೇವೆ. ಹಾಗೆಯೇ ಹೊಸದಾಗಿ ರೇಷನ್ ಕಾರ್ಡ್ ಪಡೆಯುವವರಿಗೆ ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ಮತ್ತು ತಿದ್ದುಪಡಿಗೆ ಅವಕಾಶವನ್ನು ಕೂಡ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

ಅದರ ಪ್ರಕಾರವಾಗಿ ಈಗಾಗಲೇ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಮತ್ತು ಬಾಪೂಜಿ ಸೇವಾ ಕೇಂದ್ರ ಸೇವೆಗಳಲ್ಲಿ ಹೊಸ ರೇಷನ್ ಕಾರ್ಡ್ ತಿದ್ದುಪಡಿ ಹಾಗೂ ಹೊಸದಾಗಿ ರೇಷನ್ ಕಾರ್ಡ್ ಅಪ್ಲೈ ಮಾಡುವುದಕ್ಕೆ ಆಪ್ಷನ್ ಕಾಣುತ್ತಿರುವುದನ್ನು ನೋಡಬಹುದು. ಇದನ್ನೆಲ್ಲ ಪೂರ್ತಿ ಮಾಡಿ ಸಬ್ಮಿಟ್ ಮಾಡುವ ವೇಳೆ ಸಮಸ್ಯೆ ಆಗುತ್ತಿದೆ ಯಾಕೆಂದರೆ ಸರ್ಕಾರ ಇದಕ್ಕೆ ದಿನಾಂಕ ಅನೌನ್ಸ್ ಮಾಡಿಲ್ಲ.

ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ದೊಡ್ಡ ಬದಲಾವಣೆ, ನಿಮ್ಮ ಮಕ್ಕಳ ಹೆಸರಲ್ಲಿ ಹಣ ಕಟ್ಟುತ್ತಿರುವವರು ತಪ್ಪದೆ ಈ ಸುದ್ದಿ ನೋಡಿ.!

ಬಲವಾದ ಮೂಲಗಳ ಪ್ರಕಾರ ಆಗಸ್ಟ್ 15ರ ನಂತರ ಸರ್ಕಾರ ಇದಕ್ಕೆ ಚಾಲನೆ ಕೊಡುತ್ತದೆ ಎನ್ನುವ ಮಾಹಿತಿ ಇದೆ. ಆದರೆ ಸಿಟಿಜನ್ ಲಾಗಿನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ, ಈ ಮೇಲೆ ಹೇಳಲಾದ ಸೇವಾ ಕೇಂದ್ರಗಳಲ್ಲಿ ಮಾತ್ರ ದಾಖಲೆಗಳ ಜೊತೆ ಹೋಗಿ ಅರ್ಜಿ ಸಲ್ಲಿಸಬಹುದು.

ಹೊಸದಾಗಿ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುವವರಿಗೆ ಬೇಕಾಗುವ ದಾಖಲೆಗಳು:-

● ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ (Aadhar card)
● ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಹೊರತುಪಡಿಸಿ ಕುಟುಂಬದ ಎಲ್ಲಾ ಸದಸ್ಯರ ಬಯೋಮೆಟ್ರಿಕ್ (Biometric)
● ಕುಟುಂಬದಲ್ಲಿ ಯಾರಾದರೂ ಒಬ್ಬ ಸದಸ್ಯರ ಹೆಸರಿನಲ್ಲಿ ಆದಾಯ ಪ್ರಮಾಣ ಪತ್ರ (Income certificate)
● ಮನೆಯಲ್ಲಿ ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿದ್ದಲ್ಲಿ ಅವರ ಜನನ ಪ್ರಮಾಣ ಪತ್ರ (Child birth certificate)
● ಕುಟುಂಬದ ಸದಸ್ಯರೊಬ್ಬರ ಮೊಬೈಲ್ ಸಂಖ್ಯೆ / ಇ-ಮೇಲ್ ಐಡಿ (Mobile num. and E-Mail ID)

BPL ಕಾರ್ಡ್ ಗಾಗಿ ಅರ್ಜಿ ಸಲ್ಲಿಸುವವರಿಗೆ ಸರ್ಕಾರ ಹೊಸ ನಿಯಮ (New rules) ಮಾಡಿದೆ. ಅದೇನೆಂದರೆ:-

ಯಾರು ಸ್ವಂತ ವೈಟ್ ಬೋರ್ಡ್ ಕಾರುಗಳನ್ನು (White bord Car) ಹೊಂದಿರುತ್ತಾರೋ ಅವರು BPL ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದರೆ ಅವರ ಅರ್ಜಿ ತಿರಸ್ಕೃತಗೊಳ್ಳುತ್ತದೆ ಎಂದು ಸರ್ಕಾರ ತಿಳಿಸಿದೆ. ಇದರ ಬಗ್ಗೆ ಸ್ವತಃ ಆಹಾರ ಇಲಾಖೆ ಸಚಿವರೆ ಹೇಳಿಕೆ ಕೂಡ ಕೊಟ್ಟಿದ್ದಾರೆ. ಆದರೆ ಉದ್ಯೋಗದ ಕಾರಣಕ್ಕಾಗಿ (work purpose) ಎಲ್ಲೋ ಬೋರ್ಡ್ ಕಾರ್ ಗಳನ್ನು (Yellow bord) ಹೊಂದಿರುವವರಿಗೆ BPL ಕಾರ್ಡ್ ಪಡೆಯುವುದಕ್ಕೆ ಯಾವುದೇ ಸಮಸ್ಯೆ ಇರುವುದಿಲ್ಲ ಎನ್ನುವ ಸಮಾಧಾನಕರವಾದ ವಿಷಯವನ್ನು ಕೂಡ ತಿಳಿಸಿದ್ದಾರೆ.

ಮನೆ ಕಟ್ಟಲು 5 ಲಕ್ಷ, ಮನೆ ದುರಸ್ತಿಗೆ 3 ಲಕ್ಷ, ಸರ್ಕಾರದಿಂದ ಸಹಾಯಧನ ನೀಡುತ್ತಿದ್ದಾರೆ. ಆಸಕ್ತರು ಅರ್ಜಿ ಸಲ್ಲಿಸಿ ಧನಸಹಾಯ ಪಡೆಯಿರಿ.!

ಈ ಹಿಂದೆ ಕೂಡ ಅನುಕೂಲಸ್ಥರು ನಕಲಿ ಮಾಹಿತಿ ನೀಡಿ ಅಥವಾ ಸರ್ಕಾರಕ್ಕೆ ಮಾಹಿತಿ ಮರೆಮಾಚಿ BPL ಕಾರ್ಡ್ ಗಳನ್ನು ಹೊಂದಿರುವುದು ಆಹಾರ ಇಲಾಖೆ ಗಮನಕ್ಕೆ ಬಂದಿದೆ. ಕಟ್ಟುನಿಟ್ಟಿನ ನಿಯಮಗಳನ್ನು ಕೈಗೊಂಡು ಅವುಗಳನ್ನು ರದ್ದು ಮಾಡಲಾಗುವುದು ಎನ್ನುವುದನ್ನು ತಿಳಿಸಿದ್ದಾರೆ.

Leave a Comment

%d bloggers like this: