ರೇಷನ್ ಕಾರ್ಡ್ (Ration card) ಈಗ ಅತ್ಯಗತ್ಯ ದಾಖಲೆಯಾಗಿದೆ. ಸರ್ಕಾರದ (government Schemes) ಯಾವುದೇ ಯೋಜನೆಯ ಫಲಾನುಭವಿಗಳಾಗಲು ರೇಷನ್ ಕಾರ್ಡ್ ಕಡ್ಡಾಯವಾಗಿದೆ. ಸದ್ಯಕ್ಕೆ ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳು (Guarantee Scheme) ಜಾರಿಗೆ ಬಂದ ಮೇಲೆ ರೇಷನ್ ಕಾರ್ಡ್ ಗೆ ಎಲ್ಲಿಲ್ಲದ ಬೇಡಿಕೆ ಶುರುವಾಗಿದೆ.
ಹಾಗಾಗಿ ರೇಷನ್ ಕಾರ್ಡ್ ನಲ್ಲಿ ಮಾಹಿತಿ ತಪ್ಪಿರುವವರು, ತಿದ್ದುಪಡಿ ಮಾಡಿಸಿಕೊಳ್ಳಲು ಮತ್ತು ಹಳೆ ಸದಸ್ಯರ ಹೆಸರು ತೆಗೆದು ಹಾಕಿಸಿ ಹೊಸ ಸದಸ್ಯರ ಹೆಸರು ಸೇರ್ಪಡೆ ಮಾಡಿಸಿಕೊಳ್ಳಲು, ಕುಟುಂಬದ ಮುಖ್ಯಸ್ಥರ ಸ್ಥಾನ ಬದಲಾಯಿಸಿಕೊಳ್ಳಲು ಮತ್ತು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಜನ ಕಾಯುತ್ತಿದ್ದಾರೆ.
ಗಂಡ ಹೆಂಡತಿಗೆ ಪ್ರತಿ ತಿಂಗಳು 10,000 ಪಿಂಚಣಿ ಕೇಂದ್ರ ಸರ್ಕಾರದ ಹೊಸ ಯೋಜನೆ ಇದು.!
ಸರ್ಕಾರ ಕಳೆದ ತಿಂಗಳು ಈ ರೀತಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಲು ಸಮಯ ಅವಕಾಶ ಕೂಡ ನೀಡಿತ್ತು ಆದರೆ ಹೊಸ ರೇಷನ್ ಕಾರ್ಡ್ ಗೆ (New ration card application) ಇನ್ನೂ ಅರ್ಜಿ ಅಹ್ವಾನ ಮಾಡಿರಲಿಲ್ಲ. ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದ ಕಾರಣ ಈಗಾಗಲೇ ಅರ್ಜಿ ಸಲ್ಲಿಸಿದ್ದವರ ಅರ್ಜಿಗಳ ಪರಿಶೀಲನೆ ಮತ್ತು ವಿತರಣೆ ಕಾರ್ಯಕ್ರಮವನ್ನು ಕೂಡ ಸ್ಥಗಿತಗೊಳಿಸಲಾಗಿತ್ತು.
ಆದರೆ ಈಗ ಬಂದಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ (food and civil supply department updates) ಮಾಹಿತಿ ಪ್ರಕಾರ ಸರ್ಕಾರವು ಸದ್ಯದಲ್ಲೇ ಹೊಸ ರೇಷನ್ ಕಾರ್ಡಿಗೆ ಅರ್ಜಿ ಆಹ್ವಾನ ಮಾಡಲಿದೆ. ಈ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಏನೆಲ್ಲಾ ದಾಖಲೆಗಳು ಬೇಕಾಗುತ್ತದೆ? ಒಂದು ವೇಳೆ ಸರ್ಕಾರವು ಅನುಮತಿ ನೀಡಿದಾಗ ನೀವು ಎಲ್ಲಿ ಹೋಗಿ ಯಾವ ರೀತಿಯಲ್ಲಿ ಅರ್ಜಿ ಸಲ್ಲಿಸಬೇಕು ಎನ್ನುವುದರ ಕುರಿತು ಕೆಲ ಪ್ರಮುಖ ವಿಷಯವನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.
ಕರ್ನಾಟಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗವಕಾಶ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ.!
● ರೇಷನ್ ಕಾರ್ಡ್ ಗೆ ಆಫ್ ಲೈನ್ನಲ್ಲಿ ಬರವಣಿಗೆ ಮೂಲಕ ಅಥವಾ ಇನ್ಯಾವುದೇ ಫಾರಂ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ, ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು.
● ಗ್ರಾಮೀಣ ಭಾಗದಲ್ಲಿ ಇರುವವರು ಆಯಾ ಗ್ರಾಮ ಪಂಚಾಯಿತಿಯಲ್ಲಿ ಇರುವ ಗಣಕೀಕೃತ ಕೇಂದ್ರದ ಮೂಲಕವೇ ಅರ್ಜಿ ಸಲ್ಲಿಸಬೇಕು.
● ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವವರು ಆ ಪ್ರದೇಶಗಳಲ್ಲಿ ಲಭ್ಯವಿರುವ ಖಾಸಗಿ ಕಂಪ್ಯೂಟರ್ ಸೆಂಟರ್ ಸಹಾಯದಿಂದ ಅರ್ಜಿ ಸಲ್ಲಿಸಬಹುದು.
● ಒಂದು ವೇಳೆ ಇದು ಸಾಧ್ಯವಾಗದೇ ಇದ್ದಲ್ಲಿ ಆಯಾ ಪ್ರದೇಶದ ವ್ಯಾಪ್ತಿಗೆ ಬರುವ ತಾಲೂಕು ಕಚೇರಿ, ಆಹಾರ ಸಹಾಯಕ ನಿರ್ದೇಶಕರ ಕಚೇರಿ ಅಥವಾ ಉಪ ನಿರ್ದೇಶಕರ ಕಛೇರಿಯಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
● ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಅಗತ್ಯವಾಗಿ ಕೆಲ ದಾಖಲೆಗಳು ಮತ್ತು ಮಾಹಿತಿಗಳನ್ನು ಇಟ್ಟುಕೊಂಡಿರಬೇಕು. ಆದರೆ ಇದ್ಯಾವುದನ್ನು ಲಗತ್ತಿಸುವ ಅವಶ್ಯಕತೆ ಇರುವುದಿಲ್ಲ, ಅದರಲ್ಲಿರುವ ಮಾಹಿತಿಯನ್ನು ತಿಳಿಸಿದರೆ ಸಾಕು.
ಬೇಕಾಗುವ ದಾಖಲೆಗಳು:-
● ನಿಮ್ಮ ಗ್ರಾಮ ಪಂಚಾಯಿತಿ ಹೆಸರು
● ನೀವು ಈಗ ವಾಸಿಸುತ್ತಿರುವ ಮನೆಯ ವಿಳಾಸ
● ಮನೆಯ ಆಸ್ತಿ ಸಂಖ್ಯೆ ವಿವರ
● ವಿದ್ಯುತ್ ಸಂಪರ್ಕ ಹೊಂದಿರುವವರು ವಿದ್ಯುತ್ ಬಿಲ್
● ಗ್ಯಾಸ್ ಕನೆಕ್ಷನ್ ಹೊಂದಿದ್ದರೆ ಅದರ ಬಿಲ್ ಸಂಖ್ಯೆ
● ನಿಮ್ಮ ಮನೆಯಲ್ಲಿ ಎಷ್ಟು ಸದಸ್ಯರು ಇದ್ದೀರಾ ಎನ್ನುವ ವಿವರ,
ಎಲ್ಲಾ ಸದಸ್ಯರ ಹೆಸರು ವಯಸ್ಸು, ವೃತ್ತಿ, ಅವರೆಲ್ಲರ ವಾರ್ಷಿಕ ವರಮಾನದ ವಿವರ ನೀಡಬೇಕು ಕುಟುಂಬದ ಮುಖ್ಯಸ್ಥರು ಯಾರು ಎಂದು ತಿಳಿಸಬೇಕು
● ಆ ಕುಟುಂಬದ ಮುಖ್ಯಸ್ಥರ ಜೊತೆ ಉಳಿದ ಸದಸ್ಯರಿಗೆ ಏನು ಸಂಬಂಧ ಎನ್ನುವುದನ್ನು ಕೂಡ ಹೇಳಬೇಕು
● ಒಬ್ಬ ಸದಸ್ಯನ ಮೊಬೈಲ್ ಸಂಖ್ಯೆ
● ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಮತ್ತು ಬಯೋಮೆಟ್ರಿಕ್ ಮಾಹಿತಿ.