ಕರ್ನಾಟಕ ಸರ್ಕಾರ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ 2023-24ನೇ ಸಾಲಿನ ಜಿಲ್ಲಾ ವಲಯದ ಜಿಲ್ಲಾ ಉದ್ಯಮ ಕೇಂದ್ರ ಯೋಜನೆಯಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳ ಗ್ರಾಮೀಣ ಪ್ರದೇಶದ ಅರ್ಹ ವೃತಿ ನಿರತ ಮಹಿಳಾ ಕುಶಲಕರ್ಮಿಗಳಿಗೆ ವಿದ್ಯುತ್ಚಾಲಿತ ಹೋಲಿಕೆ ಯಂತ್ರಗಳನ್ನು ಮತ್ತು ವೃತ್ತಿಪರ ಕುಶಲ ಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಸಲಕರಣೆ ಸರಬರಾಜು.
ಯೋಜನೆಯಡಿ ವಿವಿಧ ಕಸಬುಗಳಲ್ಲಿ ತೊಡಗಿರುವ ಗ್ರಾಮೀಣ ಪ್ರದೇಶದ ಅನುವಂಶಿಕ ಕುಶಲಕರ್ಮಿಗಳಿಗೆ ವಿದ್ಯುತ್ ಚಾಲಿತ ಬಡಗಿ ಉಪಕರಣ, ಎಲೆಕ್ಟ್ರಿಷಿಯನ್ಗಳಿಗೆ ಕಿಟ್ ಹಾಗೂ ಗಾರೆ, ಕ್ಷೌರಿಕ, ಕಲ್ಲುಕುಟುಕ, ಕಮ್ಮಾರಿಕೆ ಬುಟ್ಟಿ ಎಣೆಯುವುದು, ನಾರು, ಕಸೂತಿ, ಕುಂಬಾರಿಕೆ, ಬೋರ್ವೆಲ್ ರಿಪೇರ್ ಮೋಟಾರ್ ವೈರಿಂಗ್ ಮತ್ತು ದೋಬಿ ಮುಂತಾದ ಕುಲಕಸುಬುಗಳಲ್ಲಿ ತೊಡಗಿಕೊಂಡಿರುವವರಿಗೆ ಸುಧಾರಿತ ಉಪಕರಣಗಳನ್ನು ವಿತರಿಸಲು ಸರ್ಕಾರ ಅರ್ಜಿ ಆಹ್ವಾನ ಮಾಡಿದೆ.
ಆಸಕ್ತ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಿ ಅನುಕೂಲತೆ ಪಡೆದುಕೊಳ್ಳಬಹುದು. ಇದರೊಂದಿಗೆ ಕುಶಲಕರ್ಮಿಗಳು ಬಡ್ಡಿ ಸಹಾಯಧನ, ಜಿಲ್ಲಾ ಉದ್ಯಮ ಬಂಡವಾಳ ಹೂಡಿಕೆ ಯೋಜನೆಯ ಪ್ರಯೋಜನ ಕೂಡ ಪಡೆಯಬಹುದು. ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿಕೊಡಲು ಯೋಜನೆ ಕುರಿತ ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಯೋಜನೆ ಹೆಸರು:-
* ಜಿಲ್ಲಾ ಉದ್ಯಮ ಬಂಡವಾಳ ಹೂಡಿಕೆ ಯೋಜನೆ
* ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಸಲಕರಣೆ ಸರಬರಾಜು ಯೋಜನೆ
* ಕುಶಲಕರ್ಮಿಗಳಿಗೆ ಬಡ್ಡಿ ಸಹಾಯಧನ
ಅರ್ಜಿ ಸಲ್ಲಿಸಲು ಅರ್ಹತೆಗಳು:-
* ವಿದ್ಯುಚ್ಛಾಲಿತ ಹೊಲಿಗೆ ಯಂತ್ರ ಪಡೆಯುವುದಕ್ಕೆ ಗ್ರಾಮೀಣ ಭಾಗದಲ್ಲಿ ವಾಸಿಸುವ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಹರಾಗಿರುತ್ತಾರೆ.
* ಈ ಮೇಲೆ ತಿಳಿಸಿದ ಯಾವುದೇ ವೃತ್ತಿಪರ ಕುಶಲಕರ್ಮಿಗಳು ಉಚಿತವಾಗಿ ಸುಧಾರಿತ ಸಲಕರಣೆಗಳನ್ನು ಪಡೆಯಬೇಕು ಎಂದರೆ ಅವರ ವಯಸ್ಸು 18 ವರ್ಷದ 45 ವರ್ಷದ ಒಳಗಿರಬೇಕು.
* ಅರ್ಜಿ ಸಲ್ಲಿಸುವವರು ಕನಿಷ್ಠ 8ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿರಬೇಕು
* ಒಂದು ಕುಟುಂಬದಿಂದ ಒಂದು ಅರ್ಜಿ ಸಲ್ಲಿಸಲು ಮಾತ್ರ ಅವಕಾಶ
* ಈಗಾಗಲೇ ಸರ್ಕಾರದ ಯಾವುದೇ ನಿಗಮ ಅಥವಾ ಮಂಡಳಿಯಿಂದ ಹೊಲಿಗೆ ಯಂತ್ರವನ್ನು ಅಥವಾ ಸುಧಾರಿತ ಉಪಕರಣಗಳ ಕಿಟ್ ಪಡೆದಿದ್ದರೆ ಅಂತಹ ಫಲಾನುಭವಿಗಳು ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ
* ಸರ್ಕಾರಿ ನೌಕರರು ಅಥವಾ ಕುಟುಂಬದಲ್ಲಿ ಯಾರಾದರೂ ಸರ್ಕಾರಿ ನೌಕರಿಯಲ್ಲಿದ್ದರೆ ಆ ಕುಟುಂಬಗಳಿಗೆ ಸೇರಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅನುಮತಿ ಇಲ್ಲ.
ಬೇಕಾಗುವ ದಾಖಲೆಗಳು:-
* ಅರ್ಜಿ ಸಲ್ಲಿಸುವವರ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
* ಜನ್ಮ ದಿನಾಂಕದ ಪುರಾವೆಗಾಗಿ SSLC ಅಂಕಪಟ್ಟಿ ಅಥವಾ ವರ್ಗಾವಣೆ ಪ್ರಮಾಣ ಪತ್ರ
* ಶೈಕ್ಷಣಿಕ ವಿದ್ಯಾರ್ಹತೆ ಪುರಾವೆಗಾಗಿ ಅಂಕಪಟ್ಟಿ ಅಥವಾ ವರ್ಗಾವಣೆ ಪ್ರಮಾಣ ಪತ್ರ
* ಜಾತಿ ಮತ್ತು ಆದಾಯ ಪ್ರಮಾಣ ಪತ್ರ
* BPL ರೇಷನ್ ಕಾರ್ಡ್
* ಆಧಾರ್ ಕಾರ್ಡ್
* ಹೊಲಿಗೆ ತರಬೇತಿ ಪ್ರಮಾಣ ಪತ್ರ ಮತ್ತು ಆಯಾ ಗ್ರಾಮ ಪಂಚಾಯಿತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಂದ ಹೊಲಿಗೆ ವೃತ್ತಿ, ಬಡಗಿ, ಕ್ಷೌರಿಕ, ಕಲ್ಲುಕುಟುಕ ಮತ್ತು ದೋಬಿ ಅಥವಾ ಇನ್ನಿತರ ಕಸಬು ಮಾಡುತ್ತಿರುವ ಬಗ್ಗೆ ದೃಢೀಕರಣ ಪತ್ರ
ಅರ್ಜಿ ಸಲ್ಲಿಸುವ ವಿಧಾನ:-
* ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಯಾ ಜಿಲ್ಲಾ ಪಂಚಾಯತ್ ಕಚೇರಿ ವೆಬ್ಸೈಟ್ ವಿಳಾಸಕ್ಕೆ ಭೇಟಿ ಕೊಟ್ಟು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು.
* ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ CSC ಕೇಂದ್ರಗಳಲ್ಲೂ ಅರ್ಜಿ ಸಲ್ಲಿಸಲು ಅವಕಾಶವಿದೆ.
ಆಯ್ಕೆ ಪ್ರಕ್ರಿಯೆ:-
* ನಿಗದಿಪಡಿಸಿರುವ ಸಂಖ್ಯೆಗಿಂತ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾದಲ್ಲಿ ಲಾಟರಿ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ, ಈ ವಿಚಾರದಲ್ಲಿ ಇಲಾಖೆ ತೀರ್ಮಾನವೆ ಅಂತಿಮವಾಗಿರುತ್ತದೆ.
ಪ್ರಮುಖ ದಿನಾಂಕಗಳು:-
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 13.10.2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 30.11.2023