SSLC ಫಲಿತಾಂಶ ಪ್ರಕಟಗೊಂಡಿದೆ. ಈಗ ಮುಂದಿನ ವಿದ್ಯಾಭ್ಯಾಸಕ್ಕಾಗಿ ಕಾಲೇಜು ಸೇರಲು ತಯಾರಾಗಿರುವ ವಿದ್ಯಾರ್ಥಿಗಳು ಸಾಕಷ್ಟು ಗೊಂದಲದಲ್ಲಿದ್ದಾರೆ. ಕೆಲವರು ತಮ್ಮ ಊರಿನಲ್ಲಿ ಇದ್ದುಕೊಂಡು ಅಲ್ಲೇ ಇರುವ ಕಾಲೇಜಿನಲ್ಲಿ ಅಥವಾ ಊರಿನ ಅಕ್ಕಪಕ್ಕದ ಕಾಲೇಜುಗಳನ್ನು ಸೇರಲು ನಿರ್ಧರಿಸಿದ್ದರೆ.
ಬಹುತೇಕ ಹಳ್ಳಿಗಳಲ್ಲಿ ಈ ವ್ಯವಸ್ಥೆ ಇಲ್ಲದ ಕಾರಣ PUC ಹಾಗೂ ಅದಕ್ಕಿಂತ ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕು ಎಂದರೆ ದೂರದ ಪ್ರದೇಶಗಳಿಗೆ ಹೋಗಲೇಬೇಕಾದ ಅನಿವಾರ್ಯತೆ ಅನೇಕರಿಗಿದೆ. ಹೀಗೆ ತಮ್ಮ ಮಕ್ಕಳನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೇರೆ ಸ್ಥಳಕ್ಕೆ ಕಳುಹಿಸುವ ಪೋಷಕರಿಗೂ ಕೂಡ ಊಟ ವಸತಿ ವ್ಯವಸ್ಥೆ ಹೇಗೆ ಎನ್ನುವ ಟೆನ್ಶನ್ ಇರುತ್ತದೆ.
ಈ ಸುದ್ದಿ ಓದಿ:- ಮನೆ ತಾರಸಿ ಮೇಲೆ ಮಿನಿ ತೋಟ, ಮಾರ್ಕೆಟ್ ನಲ್ಲಿ ಸಿಗುವ ಎಲ್ಲಾ ತರಕಾರಿಗಳನ್ನು ಮನೆ ಮೇಲೆ ಬೆಳೆಯುವ ಸುಲಭ ವಿಧಾನ.!
ಈ ಕಾರಣದಿಂದ ಪ್ರತಿಭಾವಂತ ವಿದ್ಯಾರ್ಥಿಗಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದು ಎನ್ನುವ ಕಾರಣದಿಂದ ಸರ್ಕಾರ ಉಚಿತ ವಸತಿ ಕಾಲೇಜುಗಳನ್ನು ಆರಂಭಿಸಿದೆ. ಕರ್ನಾಟಕ ಅಲ್ಪಸಂಖ್ಯಾತರ ನಿರ್ದೇಶನಾಲಯದಡಿ ಈ ವಸತಿ ಕಾಲೇಜುಗಳು ಕಾರ್ಯನಿರ್ವಹಿಸುತ್ತವೆ.
ಇವುಗಳಲ್ಲಿ ಉಚಿತ ಪ್ರವೇಶಾತಿ ಪಡೆದು ಅತ್ಯುತ್ತಮ ಗುಣಮಟ್ಟದ ವಿದ್ಯಾಭ್ಯಾಸ ಕಲಿಯುವುದರೊಂದಿಗೆ ಭವಿಷ್ಯವನ್ನು ಸುಭದ್ರವಾಗಿ ಕಟ್ಟಿಕೊಳ್ಳಬಹುದು. ಯಾವ ಕಾಲೇಜು? ಅರ್ಜಿ ಸಲ್ಲಿಸುವುದು ಹೇಗೆ? ಏನೆಲ್ಲ ಸೌಲಭ್ಯಗಳು ಇರುತ್ತದೆ? ಇತ್ಯಾದಿ ವಿವರ ಹೀಗಿದೆ ನೋಡಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ಈ ಸುದ್ದಿ ಓದಿ:- ತಾನೇ ತಯಾರಿಸಿದ ಇಟ್ಟಿಗೆಯಿಂದ ಕೇವಲ 2 ಲಕ್ಷದಲ್ಲಿ ಮನೆ ಕಟ್ಟಿದ ರೈತ.!
ಸಿಗುವ ಸೌಲಭ್ಯಗಳು:-
* ಸರ್ಕಾರದ ವಸತಿ ಶಾಲೆಗಳಲ್ಲಿ ಸಿಗುವಂತೆ ಈ ವಸತಿ ಕಾಲೇಜುಗಳಲ್ಲೂ ಕೂಡ PUC ಮುಗಿಸುವವರೆಗೆ ಪಠ್ಯಪುಸ್ತಕ ಆಹಾರ, ಸಮವಸ್ತ್ರ, ಶುಚಿ ಸಂಭ್ರಮ ಕಿಟ್ ಉಚಿತ ವಿತರಣೆ ಇರುತ್ತದೆ
* PCMB / PCMC ಮತ್ತು ಕಾಮರ್ಸ್ ಆಂಗ್ಲ ಮಾಧ್ಯಮದಲ್ಲಿ ಆರಿಸಿಕೊಳ್ಳುವ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ನಲ್ಲೇ ತರಗತಿಗಳು ಇರುತ್ತದೆ.
* ಗೌರವಾನ್ವಿತ ಸಂಸ್ಥೆಗಳಿಂದ NEET / JEE / KCET / CLT / CA ಫೌಂಡೇಶನ್ ತರಗತಿಗಳನ್ನು ನೀಡಲಾಗುತ್ತದೆ
ಕಾಲೇಜುಗಳ ಪಟ್ಟಿ:-
* ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಪದವಿ ಪೂರ್ವ ಕಾಲೇಜು
* ಡಾ. ಎಪಿಜೆ ಅಬ್ದುಲ್ ಕಲಾಂ ವಸತಿ ಕಾಲೇಜುಗಳು
* ಮೊರಾರ್ಜಿ ದೇಸಾಯಿ ವಸತಿ ಮತ್ತು ಸರ್ಕಾರಿ ಮುಸ್ಲಿಂ ವಸತಿ ಶಾಲೆ
ಅರ್ಜಿ ಸಲ್ಲಿಸಲು ಅರ್ಹತೆಗಳು:-
* ಕರ್ನಾಟಕದ ನಿವಾಸಿಗಳಿಗೆ ಮಾತ್ರ ಅವಕಾಶ
* ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯವು 2.50 ಲಕ್ಷದ ಒಳಗಿರಬೇಕು
* ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳಿಗೆ 75% ಮೀಸಲಾತಿ ನೀಡಲಾಗುತ್ತದೆ, 25% ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲಿಡಲಾಗಿದೆ
* ಸರ್ಕಾರಿ ಸರ್ಕಾರದಿಂದ ಅನುಮೋದನೆಗೊಂಡ ಅಥವಾ ಅಲ್ಪಸಂಖ್ಯಾತರ ಯಾವುದೇ ವಸತಿ ಶಾಲೆಯಲ್ಲಿ 10ನೇ ತರಗತಿ ಉತ್ತೀರ್ಣರಾಗಿರಬೇಕು
ಅರ್ಜಿ ಸಲ್ಲಿಸುವ ವಿಧಾನ:-
* ಜಿಲ್ಲಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸಬಹುದು
* ಹತ್ತಿರದಲ್ಲಿರುವ ಯಾವುದೇ ಮುರಾರ್ಜಿ ದೇಸಾಯಿ ವಸತಿ ಕಾಲೇಜು / ಡಾ. ಎಪಿಜೆ ಅಬ್ದುಲ್ ಕಲಾಂ ವಸತಿ ಕಾಲೇಜು / ಮೊರಾರ್ಜಿ ದೇಸಾಯಿ ವಸತಿ ಮತ್ತು ಸರ್ಕಾರಿ ಮುಸ್ಲಿಂ ವಸತಿ ಕಾಲೇಜುಗಳಲ್ಲಿ ಅರ್ಜಿ ಸಲ್ಲಿಸಬಹುದು
* ವಿದ್ಯಾರ್ಥಿ ಅಥವಾ ವಿದ್ಯಾರ್ಥಿ ಹೆಸರಿನಲ್ಲಿ ಪೋಷಕರು ಕೂಡ ಅರ್ಜಿ ಸಲ್ಲಿಸಬಹುದು ಹೆಚ್ಚಿನ ಮಾಹಿತಿಗಾಗಿ ಈ ಮೇಲೆ ತಿಳಿಸಿದ ವಸತಿ ಕಾಲೇಜುಗಳ ಆಡಳಿತ ವರ್ಗ ವಿಭಾಗಕ್ಕೆ ಭೇಟಿ ನೀಡಿ.
ಈ ಸುದ್ದಿ ಓದಿ:- ಅಟಲ್ ಪೆನ್ಷನ್ ಯೋಜನೆಯಿಂದ ಸಿಗಲಿದೆ 5000 ಪಿಂಚಣಿ, ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.!
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 15 ಮೇ, 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 27 ಮೇ, 2024 ಸಂಜೆ 05:30 ರ ಒಳಗೆ