ಗ್ರಾಮೀಣ ಭಾಗದ ಜನತೆಗೆ ನಗರ ಪ್ರದೇಶದಲ್ಲಿ ಇರುವವರಿಗೆ ಹೋಲಿಸಿದರೆ ಉದ್ಯೋಗವಕಾಶಗಳ ಸಂಖ್ಯೆ ಬಹಳ ಕಡಿಮೆ ಇರುತ್ತದೆ. ಆದರೆ ಇರುವ ಪ್ರತಿಭೆ ಹಾಗೂ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಂಡರೆ ಅಥವಾ ಅವುಗಳ ಬಗ್ಗೆ ಸರಿಯಾದ ಮಾರ್ಗದರ್ಶನ ದೊರೆತರೆ ಯಾವುದೇ ಮೆಟ್ರೋ ಪಾಲಿಟನ್ ಸಿಟಿಗಿಂತ ಕಡಿಮೆ ಇಲ್ಲದಂತಹ ಜೀವನ ಸಾಗಿಸಬಹುದು.
ಇದು ಸಾಧ್ಯವಾಗಬೇಕು ಎಂದರೆ ಉದ್ಯೋಗವಕಾಶ ಎನ್ನುವುದು ಮೊದಲ ಆಪ್ಷನ್ ಆಗಿರುತ್ತದೆ ಹಾಗಾಗಿ ಇಂದು ಈ ಲೇಖನದಲ್ಲಿ ಹಳ್ಳಿಗಾಡಿನ ಜನರಿಗೆ ಅನುಕೂಲವಾಗುವಂತಹ ಒಂದು ಮಾಹಿತಿಯನ್ನು ತಿಳಿಸುತ್ತೇವೆ.
ಅದೇನೆಂದರೆ, ರೂಟ್ ಜೆಡ್ ಎನ್ನುವ ಸಂಸ್ಥೆಯು ಸಮಾಜ ಸೇವೆ ಮಾಡುವ ಉದ್ದೇಶದಿಂದಾಗಿ ಕಾಲ ಕಾಲಕ್ಕೆ ಹಲವಾರು ರೀತಿಯ ತರಬೇತಿಗಳನ್ನು ಏರ್ಪಡಿಸುತ್ತದೆ ಮತ್ತು ಈ ತರಬೇತಿಗಳಲ್ಲಿ ಭಾಗವಹಿಸುವವರಿಗೆ ಸ್ವಂತ ಉದ್ಯಮ ಆರಂಭಿಸುವುದಕ್ಕೆ ಬ್ಯಾಂಕ್ ಲೋನ್ ಪಡೆದುಕೊಳ್ಳಲು ಬೇಕಾದ ಸೌಲತ್ತುಗಳನ್ನು ಒದಗಿಸಿ ಎಲ್ಲ ರೀತಿಯ ನೈತಿಕ ಬೆಂಬಲವನ್ನು ಕೂಡ ನೀಡುತ್ತದೆ.
ಈ ಸುದ್ದಿ ಓದಿ:-60 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಸರ್ಕಾರದ ಕಡೆಯಿಂದ ಗುಡ್ ನ್ಯೂಸ್, ಇನ್ಮುಂದೆ ಬಸ್ ಪ್ರಯಾಣ ಸಂಪೂರ್ಣ ಉಚಿತ.!
ಅದೇ ಈ ವರ್ಷ ಸಂಸ್ಥೆಯು ಪುರುಷರಿಗಾಗಿ ಉಚಿತ ಟೈಲರಿಂಗ್ ತರಬೇತಿ ನೀಡಲು ನಿರ್ಧರಿಸಿದ್ದು ಅರ್ಜಿ ಆಹ್ವಾನ ಮಾಡಿದೆ. ಈ ಕಂಡಿಷನ್ ಗಳನ್ನು ಒಪ್ಪುವಂತಹ ಮತ್ತು ನಿಗದಿಪಡಿಸುವ ಮಾನದಂಡಗಳನ್ನು ಪೂರೈಸುವ ಆಸಕ್ತ ಪುರುಷ ಅಭ್ಯರ್ಥಿಗಳು ಭಾಗಿಯಾಗಿ ಇದರ ಪ್ರಯೋಜನ ಪಡೆದುಕೊಳ್ಳಬಹುದು.
ಸಾಮಾನ್ಯವಾಗಿ ಟೈಲರಿಂಗ್ ತರಬೇತಿಗಳನ್ನು ಮಹಿಳೆಯರಿಗಾಗಿ ಏರ್ಪಡಿಸಲಾಗುತ್ತದೆ ಆದರೆ ಈ ಬಾರಿ ಪುರುಷರಿಗೂ ಕೂಡ ಇಂತಹ ಒಂದು ಅನುಕೂಲತೆ ಮಾಡಿಕೊಡಲಾಗುತ್ತಿದ್ದು ಇದರ ಕುರಿತಾದ ಸಂಪೂರ್ಣ ವಿವರ ಹೀಗಿದೆ ನೋಡಿ.
ತರಬೇತಿ ಸಂಸ್ಥೆ:- ರೂಟ್ ಜೆಡ್ ಸ್ವ ಉದ್ಯೋಗ ತರಬೇತಿ ಸಂಸ್ಥೆ, ವಿಜಯಪುರ
ಉದ್ದೇಶ:- ಗ್ರಾಮೀಣ ಭಾಗದಲ್ಲಿ ಉದ್ಯೋಗವಕಾಶ ಹೆಚ್ಚಿಸುವುದು ಈ ಮೂಲಕ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಆರ್ಥಿಕ ಶಕ್ತಿ ಚೇತನ ಗೊಳಿಸುವುದು.
ಈ ಸುದ್ದಿ ಓದಿ:-ಸೀತಾರಾಮ್ ಜಿಂದಾಲ್ ವಿದ್ಯಾರ್ಥಿ ವೇತನ, ಪ್ರತಿ ತಿಂಗಳು 3,200 ಸ್ಕಾಲರ್ಶಿಪ್ ಬರುತ್ತೆ ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ.!
ಅರ್ಹತೆಗಳು:-
* ವಿಜಯಪುರ ಜಿಲ್ಲೆಯವರಿಗೆ ಮೊದಲ ಆದ್ಯತೆ
* ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು, 45 ವರ್ಷದ ಒಳಗಿನವರಾಗಿರಬೇಕು
* ಈ ಬಾರಿ ಪುರುಷ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ, ಈ ಕೆಳಗಿನ ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡುವ ಮೂಲಕ ಮಹಿಳಾ ಟೈಲರಿಂಗ್ ತರಬೇತಿ ಬಗ್ಗೆ ಕೂಡ ವಿಚಾರಣೆ ಮಾಡಬಹುದು.
* ಗ್ರಾಮೀಣ ಭಾಗದಲ್ಲಿರುವವರ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸೇರಿದ ಪುರುಷರಿಗೆ, ನಿರುದ್ಯೋಗಿಗಳಿಗೆ ಹೆಚ್ಚಿನ ಆದ್ಯತೆ ಇರುತ್ತದೆ
* ಅರ್ಜಿ ಸಲ್ಲಿಸುವ ವ್ಯಕ್ತಿ ಕನ್ನಡ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು
* ಅರ್ಜಿ ಸಲ್ಲಿಸುವ ಅಭ್ಯರ್ಥಿಯು ತರಬೇತಿ ಪಡೆದ ಬಳಿಕ ಸ್ವಂತ ಉದ್ಯಮ ಆರಂಭಿಸಲು ಆಸಕ್ತಿ ಹೊಂದಿರಬೇಕು.
ಈ ಸುದ್ದಿ ಓದಿ:-ಜಲಸಂಪನ್ಮೂಲ ಇಲಾಖೆಯಲ್ಲಿ ಬೃಹತ್ ನೇಮಕಾತಿ ಆಸಕ್ತರು ಅರ್ಜಿ ಸಲ್ಲಿಸಿ.! ವೇತನ 62,600
ಪ್ರಯೋಜನಗಳು:-
* ಅಭ್ಯರ್ಥಿಗೆ 30 ದಿನಗಳ ಕಾಲ ಉಚಿತವಾಗಿ ಊಟ ವಸತಿ ವ್ಯವಸ್ಥೆಯೊಂದಿಗೆ ಟೈಲರಿಂಗ್ ತರಬೇತಿಯನ್ನು ನುರಿತ ತರಬೇತುದಾರರಿಂದ ಕೊಡಿಸಲಾಗುತ್ತದೆ
* ತರಬೇತಿ ಪಡೆದ ಅಭ್ಯರ್ಥಿಯು ಈ ಆಧಾರದ ಮೇಲೆ ಸ್ವಂತ ಉದ್ಯಮ ಆರಂಭಿಸಲು ಹೆಚ್ಚಿಸುವುದಾದರೆ ಸರ್ಕಾರದ ಯಾವ ಯೋಜನೆಗಳ ಮೂಲಕ ನೆರವು ಸಿಗುತ್ತದೆ ಎನ್ನುವುದರ ಸಂಪೂರ್ಣ ಮಾರ್ಗದರ್ಶನದ ಜೊತೆಗೆ ಮಾರಲ್ ಸಪೋರ್ಟ್ ಕೂಡ ಇರುತ್ತದೆ.
* 26 ಏಪ್ರಿಲ್ 2024 ರಿಂದ 25 ಮೇ 2024ರ ವರೆಗೆ ಈ ಟೈಲರಿಂಗ್ ತರಬೇತಿ ಕಾರ್ಯಕ್ರಮ ನಡೆಯುತ್ತದೆ
ಅರ್ಜಿ ಸಲ್ಲಿಸುವ ವಿಧಾನ:-
* ಈ ಕೆಳಕಂಡ ಸಂಖ್ಯೆಗಳಿಗೆ ಕರೆ ಮಾಡಿ ನೋಂದಾಯಿಸಿಕೊಳ್ಳಬೇಕು ಮತ್ತು ತರಬೇತಿಗೆ ಮೊದಲ ದಿನ ಬಾಗಿಯಾಗುವ ಸಮಯದಲ್ಲಿ ಆಧಾರ್ ಹಾಗೂ ವಿಳಾಸ ಪುರಾಬೇಕಾಗಿ ಯಾವುದಾದರೂ ಒಂದು ಗುರುತಿನ ಚೀಟಿಯನ್ನು ತರಬೇಕು.
ಸಹಾಯವಾಣಿ ಸಂಖ್ಯೆಗಳು:-
ರೂಟ್ ಜೆಡ್ ಸ್ವ ಉದ್ಯೋಗ ತರಬೇತಿ ಸಂಸ್ಥೆ:-
9739511914 / 9731065632 / 7483987824 / 9480078829