ವಿಧವಾ ವೇತನ ಹಣ ಇನ್ಮುಂದೆ ಬ್ಯಾಂಕ್ ಖಾತೆಗೆ ಜಮೆ ಆಗಲು ಈ ರೀತಿ ಅರ್ಜಿ ಸಲ್ಲಿಸಿ.!

ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿ ಅಬಲೆಯರಿಗೆ ವೃದ್ಧರಿಗೆ, ಅಶಕ್ತರಿಗೆ ಸರ್ಕಾರವು ಧನ ಸಹಾಯ ಮಾಡುತ್ತದೆ. ಇದರಲ್ಲಿ ವಿಧವೆಯರಿಗೆ ನೀಡುವ ವಿಧವಾ ವೇತನ (Widow Pension) ಕೂಡ ಸೇರಿದೆ ಈ ವಿಧವಾ ವೇತನವನ್ನು ಪಡೆಯಲು ಏನೆಲ್ಲಾ ಕಂಡಿಷನ್ ಗಳಿವೆ?

WhatsApp Group Join Now
Telegram Group Join Now

ಯಾವ ದಾಖಲೆಗಳನ್ನು ಸಲ್ಲಿಸಬೇಕು? ಮತ್ತು ಸರ್ಕಾರದಿಂದ ಪ್ರತಿ ತಿಂಗಳು ಎಷ್ಟು ಹಣಕಾಸಿನ ನೆರವು ಸಿಗುತ್ತದೆ?, ಎಲ್ಲಿ ಅರ್ಜಿ ಸಲ್ಲಿಸಬೇಕು ಮತ್ತು ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ? ಎನ್ನುವುದು ಪ್ರತಿಯೊಬ್ಬರು ತಿಳಿದುಕೊಳ್ಳಲೇ ಬೇಕಾದ ಬಹಳ ಮುಖ್ಯ ಮಾಹಿತಿಯಾಗಿದೆ.

ಈ ಸುದ್ದಿ ಓದಿ:- ಪತ್ನಿ ಹೆಸರಲ್ಲಿ ಗೃಹ ಸಾಲ ಮಾಡುವುದರಿಂದ ಏನೆಲ್ಲಾ ಲಾಭ ಗೊತ್ತಾ.?

ಹಾಗಾಗಿ ಇಂದು ಈ ಅಂಕಣದಲ್ಲಿ ಯೋಜನೆ ಕುರಿತ ಕೆಲ ಪ್ರಮುಖ ಅಂಶಗಳ ಬಗ್ಗೆ ಮಾಹಿತಿ ತಿಳಿಸುತ್ತಿದ್ದೇವೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ 18 ವರ್ಷ ಮೇಲ್ಪಟ್ಟು 64 ವಯಸ್ಸಿನ ಒಳಗಿನ ನಿರ್ಗತಿಕ ವಿಧವೆಯರಿಗೆ ವಿಧವಾ ವೇತನವನ್ನು ಸರ್ಕಾರದ ಆದೇಶದ ಮೇರೆಗೆ 1 ಏಪ್ರಿಲ್ 1984ರಿಂದ ಕಾರ್ಯಗತ ಮಾಡಲಾಗಿದೆ.

ಅರ್ಹತಾ ಮಾನದಂಡ:-

* ಪತಿ ಜೀವಿಸಿಲ್ಲದ ಅಥವಾ ಕಾನೂನು ರೀತಿಯಾಗಿ ಮೃ’ತಪಟ್ಟಿದ್ದಾರೆ ಎಂದು ಭಾವಿಸಲ್ಪಟ್ಟುವ ವ್ಯಕ್ತಿಯ ಪತ್ನಿ ಈ ಯೋಜನೆಗೆ ಅರ್ಹರಾಗಿರುತ್ತಾರೆ
* ಅರ್ಜಿ ಸಲ್ಲಿಸುವ ಮಹಿಳೆಯ ಕುಟುಂಬದ ವಾರ್ಷಿಕ ಆದಾಯವು ರೂ.32,000 ಕ್ಕಿಂತ ಕಡಿಮೆ ಇರಬೇಕು

* ಈ ವಿಧವ ವೇತನವನ್ನು ಮೃ’ತರಾಗುವವರೆಗೆ ಅಥವಾ ಮರು ವಿವಾಹ ಆಗುವವರೆಗೆ ಅಥವಾ ಉದ್ಯೋಗ ಪಡೆದು ನಿರ್ಗತಿಕ ವಾರ್ಷಿಕ ಆದಾಯಕ್ಕಿಂತ ಹೆಚ್ಚಿನ ಆದಾಯ ಪಡೆಯಲು ಅರ್ಹರ ಆಗುವವರೆಗೂ ಕೂಡ ಸರ್ಕಾರದಿಂದ ಪಡೆಯಬಹುದಾಗಿದೆ.
* ಇವೆಲ್ಲ ಕಂಡಿಷನ್ ಜೊತೆ ಅವರು ಅರ್ಜಿ ಸಲ್ಲಿಸುವ ವೇಳೆಯಲ್ಲಿ ಈ ಮೇಲೆ ತಿಳಿಸಿದ ಅರ್ಹತ ಮಾನದಂಡಗಳನ್ನು ಪೂರೈಸುವವರು ಎನ್ನುವ ಪುರಾವೆಗಾಗಿ ಕೇಳಲಾಗಿರುವ ಎಲ್ಲಾ ಪೂರಕ ದಾಖಲೆಗಳನ್ನು ಕೂಡ ಸಲ್ಲಿಸಬೇಕು.

ಈ ಸುದ್ದಿ ಓದಿ:-2024 ರ ಮತದಾರ ಪಟ್ಟಿ ಬಿಡುಗಡೆ ನಿಮ್ಮ ಹೆಸರು ಇದೆಯೇ ಇಲ್ಲವೇ ಮೊಬೈಲ್ ನಲ್ಲಿ ಈ ರೀತಿ ಚೆಕ್ ಮಾಡಿಕೊಳ್ಳಿ ಒಂದ್ವೇಳೆ ಇಲ್ಲದಿದ್ರೆ ಈ ರೀತಿ ಮಾಡಿ.!
ಬೇಕಾಗುವ ದಾಖಲೆಗಳು:-

* ವಾಸಸ್ಥಳ ದೃಢೀಕರಣ ಪತ್ರ
* ವಯಸ್ಸಿನ ದೃಢೀಕರಣ ಪತ್ರ
* ಪತಿಯ ಮರಣ ಪ್ರಮಾಣ ಪತ್ರ
* ವಿಧವಾ ಪ್ರಮಾಣ ಪತ್ರ
(ಈ ಮೇಲೆ ತಿಳಿಸಿದ ದಾಖಲೆಗಳನ್ನು ಹತ್ತಿರದ ಯಾವುದೇ ಸೇವಾಕೇಂದ್ರಗಳಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಪಡೆಯಬಹುದು ಅಥವಾ ಗ್ರಾಮ ಪಂಚಾಯಿತಿ / ನಾಡಕಚೇರಿಗಳಲ್ಲಿ ಪಡೆಯಬಹುದು)
* ಅಂಚೆ ಅಥವಾ ಬ್ಯಾಂಕ್ ಪಾಸ್ ಬುಕ್ ವಿವರ
* ಆಧಾರ್ ಕಾರ್ಡ್
* ರೇಷನ್ ಕಾರ್ಡ್
* ಇತ್ತೀಚಿನ ಭಾವಚಿತ್ರ
* ಮೊಬೈಲ್ ಸಂಖ್ಯೆ
* ಇನ್ನಿತರ ಪ್ರಮುಖ ದಾಖಲೆಗಳು

ಸಿಗುವ ನೆರವು:-

ಪ್ರತಿ ತಿಂಗಳು ಸರ್ಕಾರದ ಕಡೆಯಿಂದ ರೂ.800 ಪಿಂಚಣಿ ಹಣವು DBT ಮೂಲಕ ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ.

ಅರ್ಜಿ ಸಲ್ಲಿಸುವುದು ಎಲ್ಲಿ ಮತ್ತು ಹೇಗೆ?

* ನಿಮ್ಮ ವಾಸಸ್ಥಳ ವ್ಯಾಪ್ತಿಗೆ ಬರುವ ಅಟಲ್ ಜಿ ಜನಸ್ನೇಹಿ ಕೇಂದ್ರಗಳಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಮತ್ತು ನೀಡಲಾಗುವ ರೆಫರೆನ್ಸ್ ನಂಬರ್ ಪ್ರಕಾರವಾಗಿ ನಿಮ್ಮ ಅರ್ಜಿ ಸ್ಟೇಟಸ್ ಚೆಕ್ ಮಾಡಿ ತಿಳಿದುಕೊಳ್ಳಬಹುದು.

* ಅರ್ಜಿ ಸಲ್ಲಿಸಿದ್ದ ಮೇಲೆ ಅನುಮಾನ ಆದರೆ ಆದ ಮರು ತಿಂಗಳಿನಿಂದಲೇ ಪಿಂಚಣಿ ನಿಮ್ಮ ಖಾತೆಗೆ ಬರುತ್ತದೆ
* ಹಿಂದೆ ತಹಶೀಲ್ದಾರ್ ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಲಾಗುತ್ತಿತ್ತು ಮತ್ತು ಹೆಚ್ಚಿನ ಜನರು ಮಧ್ಯವರ್ತಿಗಳಿಂದ ಈ ಕೆಲಸ ಮಾಡಿಸುತ್ತಿದ್ದರು. ಆದರೆ ಮಧ್ಯವರ್ತಿಗಳು ಹೆಚ್ಚಿನ ಹಣ ಡಿಮ್ಯಾಂಡ್ ಮಾಡಿ ದೋಚುತಿದ್ದರು ಅದಕ್ಕಾಗಿ ಈಗ ಆನ್ಲೈನ್ ಮೂಲಕವೇ ಸರಳವಾಗಿ ಅರ್ಜಿ ಸಲ್ಲಿಸಲು ಅನುಕೂಲತೆ ಮಾಡಿಕೊಡಲಾಗಿದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now