ಸರ್ಕಾರಗಳು ರೈತರ ಶ್ರೇಯೋಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸುತ್ತಿದೆ ಮತ್ತು ರಾಜ್ಯದಲ್ಲೂ ಸಹ ಬೆಳೆ ವಿಮೆ ಯೋಜನೆಗಳ ಮೂಲಕ ನೆರವಾಗುತ್ತಿದೆ. ಇವುಗಳ ಜೊತೆಗೆ ಸಬ್ಸಿಡಿ ರೂಪದ ಸಾಲ ಸೌಲಭ್ಯಗಳು ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲಗಳನ್ನು ಸಹ ನೀಡುತ್ತಿದೆ. ರಸಗೊಬ್ಬರ ಖರೀದಿಗೆ, ಬಿತ್ತನೆ ಬೀಜಗಳ ಖರೀದಿಗೆ ಮತ್ತು ಕೃಷಿ ಯಂತ್ರೋಪಕರಣಗಳ ಸಾಲವನ್ನು ನೀಡುತ್ತಿರುವ ಸರ್ಕಾರವು ರೈತರು ಬೆಳೆ ಹಾನಿ ಅನುಭವಿಸುವ ಸಂದರ್ಭದಲ್ಲಿ ಕೆಲವೊಮ್ಮೆ ಸಾಲ ಮನ್ನಾ ಕೂಡ ಮಾಡುತ್ತವೆ.
ಈ ವರ್ಷದಲ್ಲೂ ಕೂಡ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಮತ್ತು ಸಹಕಾರಿ ಬ್ಯಾಂಕ್ ಗಳಲ್ಲಿ ತಮ್ಮ ಕೃಷಿ ಚಟುವಟಿಕೆಗಾಗಿ ರೈತರು ಪಡೆದಿದ್ದ ಸಾಲ ಸಂಪೂರ್ಣ ಮನ್ನಾ ಆಗುತ್ತಿದೆ .ಇದರ ಬಗ್ಗೆ ಸರ್ಕಾರವೇ ರೈತರಿಗಾಗಿ ಸಿಹಿ ಸುದ್ದಿ ನೀಡಿದೆ. ಇದರ ಬಗ್ಗೆ ಪೂರ್ತಿ ಮಾಹಿತಿಗಾಗಿ ಈ ಲೇಖನವನ್ನು ಓದಿ. ಕಿಸಾನ್ ಫಸಲ್ ಲೋನ್ ಯೋಜನೆ ದೇಶದ ರೈತರಿಗಾಗಿಯೇ ಇರುವ ಯೋಜನೆ. ಕಿಸಾನ್ ಖರ್ಜ್ ಯೋಜನೆಯ ಮೂಲಕ ರೈತರಿಗೆ 2 ಲಕ್ಷದವರೆಗೆ ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ನೀಡಲಾಗುತ್ತಿತ್ತು.
ಈ ಹಣವನ್ನು ರಾಷ್ಟ್ರೀಕೃತ ಬ್ಯಾಂಕ್ ಗಳ ಮೂಲಕ ಹಾಗೂ ಸಹಕಾರಿ ಬ್ಯಾಂಕ್ ಗಳ ಮೂಲಕ ಸರ್ಕಾರಗಳು ರೈತನಿಗಾಗಿ ನೀಡುತ್ತಿತ್ತು. ಆದರೆ ದೇಶದಲ್ಲಿ ಈಗ ರೈತರು ಬಾರಿ ಸಂಕಷ್ಟದಲ್ಲಿ ಇರುವ ಕಾರಣವಾಗಿ ಇದರಲ್ಲಿ ಆಯ್ದ ಕೆಲ ರೈತರುಗಳಿಗೆ ಈ ಸಾಲವನ್ನು ಮನ್ನಾ ಮಾಡಲು ಸರ್ಕಾರವು ಯೋಚನೆ ಮಾಡಿದೆ. ಅದಕ್ಕಾಗಿ ಕಿಸಾನ್ ಖರ್ಜ್ ಮಾಫಿ ಯೋಜನೆ ಎನ್ನುವ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆ ಮೂಲಕ ಎರಡು ಹಂತದಲ್ಲಿ ರೈತರ ಸಾಲ ಮನ್ನಾ ಆಗಲಿದೆ.
ಮೊದಲನೇ ಹಂತದಲ್ಲಿ 50,000 ರೂಗಳನ್ನು ಮನ್ನಾ ಮಾಡಿ ಎರಡನೇ ಹಂತದಲ್ಲಿ 1,50,000 ಮನ್ನಾ ಮಾಡಲಾಗುತ್ತದೆ. ನಮ್ಮ ರಾಜ್ಯದಲ್ಲೂ ಸಹ ಈ ಕಿಸಾನ್ ಖರ್ಜ್ ಯೋಜನೆಯಲ್ಲಿ ಮೊದಲ ಹಂತದ ಸಾಲ ಮನ್ನಾದಿಂದ ರಾಜ್ಯದ 11,000 ರೈತರುಗಳು ಪ್ರಯೋಜನ ಪಡೆಯಲಿದ್ದಾರೆ, ರೈತರ 36,80,00,000 ಹಣವು ಮೊದಲ ಹಂತದಲ್ಲೇ ಮನ್ನಾ ಆಗಲಿದೆ.
ಇದೇ ಮಾದರಿಯಲ್ಲಿ ಎರಡನೇ ಹಂತದಲ್ಲಿ ರಾಜ್ಯದ 3749 ರೈತರ 26,32,00,000 ಮೊತ್ತದ ಸಾಲವನ್ನು ಸರ್ಕಾರ ಮನ್ನಾ ಮಾಡಲಿದೆ. ನೀವು ಸಹ ರೈತರಾಗಿದ್ದು ಈ ರೀತಿ ಸರ್ಕಾರದಿಂದ ಕಿಸಾನ್ ಖರ್ಜ್ ಲೋನ್ ಪಡೆದಿದ್ದರೆ ಕಿಸಾನ್ ಕರ್ಜ್ ಮಾಫಿ 2023 ಯೋಜನೆಯ ಫಲಾನುಭವಿಗಳ ಲಿಸ್ಟ್ ಅಲ್ಲಿ ಇದ್ದೀರಾ ಎಂದು ಆನ್ಲೈನ್ ಮೂಲಕವೇ ಚೆಕ್ ಮಾಡಿಕೊಳ್ಳಬಹುದು. ಅದಕ್ಕಾಗಿ ಈ ಸರಳ ಕ್ರಮವನ್ನು ಅನುಸರಿಸಿ.
● ಸರ್ಕಾರದ ಖರ್ಜ್ ಮಾಫಿ ಯೋಚನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
● ಮುಖಪುಟದಲ್ಲಿ ನೀವು ಕಿಸಾನ್ ಫಸಲ್ ಲೋನ್ ಮಾಫಿ ಯೋಜನೆ ಅಡಿಯಲ್ಲಿ ಲಾಭ ಪಡೆದ ರೈತರ ಪಟ್ಟಿಯಲ್ಲಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.
● ಆನಂತರ ಒಂದು ಹೊಸ ಪೇಜ್ ತೆರೆಯುತ್ತದೆ, ಅದರಲ್ಲಿ ಎಲ್ಲಾ ಜಿಲ್ಲೆಯ ಹೆಸರು ಇರುತ್ತದೆ. ನೀವು ನಿಮ್ಮ ಜಿಲ್ಲೆಯ ಹೆಸರನ್ನು ಸರ್ಚ್ ಬಾರ್ ನಲ್ಲಿ ಎಂಟರ್ ಮಾಡಿ ಸರ್ಚ್ ಕೊಡಿ.
● ಆಗ Pdf ಫಾರ್ಮ್ ಅಲ್ಲಿ ನಿಮ್ಮ ಜಿಲ್ಲೆಯಲ್ಲಿ ಕಿಸಾನ್ ಖರ್ಜ್ ಮಾಫಿ ಯೋಜನೆಯ ಫಲಾನುಭವಿಗಳಾದ ಎಲ್ಲಾ ರೈತರ ಹೆಸರು ಸಿಗುತ್ತದೆ. ನೀವು ನಿಮ್ಮ ಹೆಸರು ಕೂಡ ಆ ಲಿಸ್ಟ್ ಅಲ್ಲಿ ಇದೆಯಾ ಎಂದು ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದು.