ಗಂಧದಗುಡಿ ಸಿನಿಮಾಾವು ಪುನೀತ್ ರಾಜ್ ಕುಮಾರ್ ಅವರ ಕನಸಿನ ಕೂಸಾಗಿತ್ತು ಎಂದು ಹೇಳಿದರೆ ತಪ್ಪಾಗಲಾರದು. ಇದೇ ಅಕ್ಟೋಬರ್ 28 ರಂದು ಬಿಡುಗಡೆ ಆಗಲಿರುವ ಗಂಧದಗುಡಿ ಚಿತ್ರದ ಪ್ರೀ ರಿಲೀಸ್ ಈವೆಂಟ್ ಕಾರ್ಯಕ್ರಮವು ಬೆಂಗಳೂರಿನ ಅರಮನೆ ಮೈದಾನದಲ್ಲಿ ನೆನ್ನೆ ಸಂಜೆ 6:30 ರಿಂದ ಪ್ರಾರಂಭವಾಗಿ ಕಾರ್ಯಕ್ರಮ ಸುಸೂತ್ರವಾಗಿ ನೆರವೇರಿದೆ. ಈ ಒಂದು ಕಾರ್ಯಕ್ರಮಕ್ಕೆ ಜನಸಾಗರವೇ ಹರಿದು ಬಂದಿತ್ತು. ಕನ್ನಡ ಚಿತ್ರರಂಗದ ನಟರುಗಳು ಮಾತ್ರವಲ್ಲದೇ ಇತರ ಭಾಷೆಯ ಅನೇಕ ಸ್ಟಾರ್ ನಟ ಮತ್ತು ನಟಿಯರು ಕೂಡ ಇಲ್ಲಿ ಹಾಜರಿದ್ದರು. ಕಾರ್ಯಕ್ರಮ ನಡೆಯುತ್ತಿರುವಂತಹ ಸಂದರ್ಭದಲ್ಲಿ ಪುನೀತ್ ರಾಜ್ಕುಮಾರ್ ಅವರ ಪತ್ನಿ ಅಶ್ವಿನಿ ಅವರು ವೇದಿಕೆ ಮೇಲೆ ಕಣ್ಣೀರು ಹಾಕುತ್ತಾ ಕೈಮುಗಿದು ಹೊರ ಬರುತ್ತಿರುವ ಅಂತಹ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಹೌದು ಪುನೀತ್ ರಾಜ್ಕುಮಾರ್ ಅವರ ಅಭಿನಯದ ರಾಜಕುಮಾರ ಚಿತ್ರದ ಹಾಡನ್ನು ರಾಜ್ ಕುಟುಂಬದ ಎಲ್ಲಾ ಸದಸ್ಯರು ನಿಂತು ವೇದಿಕೆ ಮೇಲೆ ಹಾಡುತ್ತಿದ್ದರು ಇದರಲ್ಲಿ ಸಂಗೀತಗಾರರಾದ ವಿಜಯ್ ಪ್ರಕಾಶ್ ಸಹ ಇದ್ದರು. ಹಾಡನ್ನು ಹಾಡುತ್ತಿರುವಂತಹ ಸಂದರ್ಭದಲ್ಲಿ ಅಶ್ವಿನಿ ಅವರು ಅಳುತ್ತಲೇ ಹಾಡನ್ನು ಹಾಡಿದ್ದಾರೆ ಕುಟುಂಬದ ಎಲ್ಲಾ ಸದಸ್ಯರು ಸಹ ತುಂಬಾ ದುಃಖದಿಂದ ಹಾಡನ್ನು ಹಾಡಿದ್ದು ವೇದಿಕೆ ಮೇಲೆ ಎಲ್ಲರೂ ಸಹ ಕಣ್ಣೀರು ಹಾಕಿದ್ದಾರೆ. ಗಂಧದ ಗುಡಿ ಸಿನಿಮಾವು ಅಪ್ಪು ಅವರ ಕನಸಾಗಿತ್ತು ಕರ್ನಾಟಕದಲ್ಲಿ ಇರುವಂತಹ ಸೊಬಗನ್ನು ಎಲ್ಲೆಡಿ ಚೆಲ್ಲಬೇಕು ಎನ್ನುವಂತಹ ದೃಷ್ಟಿಯಿಂದ ಈ ಒಂದು ಡಾಕ್ಯುಮೆಂಟರಿ ಚಿತ್ರಕ್ಕೆ ಕೈ ಹಾಕಿದರು ಇವರು ಚಿತ್ರಕ್ಕಾಗಿ ಸಾಕಷ್ಟು ರೀತಿಯ ತಯಾರಿಗಳನ್ನು ಸಹ ನಡೆಸಿದ್ದರು ಆದರೆ ಈ ಚಿತ್ರದ ಬಿಡುಗಡೆಯ ಸಮಯದಲ್ಲಿ ಅವರು ನಮ್ಮ ಜೊತೆ ಇಲ್ಲ ಎನ್ನುವುದೆ ನೋವಿನ ವಿಷಯ.
ಪುನೀತ ಪರ್ವ ಕಾರ್ಯಕ್ರಮದಲ್ಲಿ ಸಾಕಷ್ಟು ಜನ ನಟರು ಆಗಮಿಸಿದ್ದರು ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಅಪ್ಪು ಅವರ ಜೊತೆಗೆ ಕಳೆದಿರುವಂತಹ ಸವಿ ನೆನಪುಗಳನ್ನು ಮೆಲಕು ಹಾಕುತ್ತಾ ಕಣ್ಣಂಚಲ್ಲಿ ಕಣ್ಣೀರು ತುಂಬಿಕೊಂಡಿದ್ದಾರೆ. ಅಪ್ಪು ನಮಗೆ ಕೇವಲ ವ್ಯಕ್ತಿ ಮಾತ್ರವಲ್ಲ ಅವರು ಒಂದು ವ್ಯಕ್ತಿತ್ವ, ಆ ವ್ಯಕ್ತಿತ್ವ ನಮ್ಮ ಜೊತೆಯಲ್ಲಿ ಸದಾ ಇದ್ದೇ ಇರುತ್ತದೆ. ಅಪ್ಪು ಅವರ ರಾಜಕುಮಾರ ಚಿತ್ರದ ಹಾಡನ್ನು ಅಶ್ವಿನಿ ಪುನೀತ್ ರಾಜಕುಮಾರ್ ಹಾಗೆಯೇ ಪುತ್ರಿ ವಂದಿತ, ಶಿವ ರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್, ವಿನಯ್ ರಾಜ್ಕುಮಾರ್, ಹಾಗೆ ಯುವರಾಜ್ ಕುಮಾರ್,
ಪುನೀತ್ ರಾಜಕುಮಾರ್ ಅವರ ಸಹೋದರಿಯರು ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಇನ್ನಿತರ ಕುಟುಂಬ ಸದಸ್ಯರು ಸೇರಿದಂತೆ ಹಲವರು ವೇದಿಕೆ ನಿಂತು ಹಾಡನ್ನು ಹಾಡುತ್ತಾ ಭಾವುಕರಾಗಿದ್ದಾರೆ. ಈ ಒಂದು ಕಾರ್ಯಕ್ರಮಕ್ಕೆ ಎಲ್ಲರೂ ಸಹ ಬಿಳಿ ಬಣ್ಣದ ವಸ್ತ್ರಗಳನ್ನು ಧರಿಸಿಕೊಂಡು ಅಪ್ಪು ಅವರಿಗೆ ನಮನವನ್ನು ಸಲ್ಲಿಸಿದ್ದಾರೆ. ಅಕ್ಟೋಬರ್ 28ರಂದು ಗಂಧದಗುಡಿ ಚಿತ್ರ ಬಿಡುಗಡೆಯಾಗುತ್ತಿದ್ದು ಎಲ್ಲಾ ಕನ್ನಡ ಜನತೆ ಸಿನಿಮಾವನ್ನು ನೋಡುವ ಮೂಲಕ ಅಪ್ಪು ಅವರಿಗೆ ಗೌರವನ್ನು ಸಲ್ಲಿಸಬೇಕು. ಅಪ್ಪು ಅವರಿಗೆ ಅವರೇ ಸಾಟಿ ಅವರ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ಪುನೀತ್ ರಾಜ್ ಕುಮಾರ್ ಅವರಿಗೆ ನೀವು ಸಹ ಗೌರವವನ್ನು ನೀಡುವುದಾದರೆ ತಪ್ಪದೇ ನಮಗೆ ಅಪ್ಪು ಎಂದು ಕಮೆಂಟ್ಸ್ ಮೂಲಕ ತಿಳಿಸಿ.