ಸರ್ಕಾರಿ ಉದ್ಯೋಗ ಪಡೆಯಬೇಕು ಎಂದು ಆಸಕ್ತಿ ಹೊಂದಿ ಹಗಲಿರುವ ಶ್ರಮಿಸುತ್ತಿರುವ ಆಕಾಂಕ್ಷಿಗಳಿಗೆ ಕೇಂದ್ರ ಸರ್ಕಾರದ ವತಿಯಿಂದ ಸಿಹಿಸುದ್ದಿ ಇದೆ. ಅದೇನೆಂದರೆ, ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರವ ಹುದ್ದೆಗಳಿಗೆ ಸೂಕ್ತ ಅಭ್ಯರ್ಥಿಗಳನ್ನು ಭರ್ತಿ ಮಾಡುವ ಕಾರ್ಯ ನಡೆಯುತ್ತಿದೆ.
ಸಾಮಾನ್ಯವಾಗಿ ಪ್ರತಿ ವರ್ಷವೂ ಕೂಡ ಅಂಚೆ ಇಲಾಖೆಯು ತನ್ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ದೇಶದ ಅರ್ಹ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿ ಉದ್ಯೋಗವಕಾಶ ಕಲ್ಪಿಸಿಕೊಡುತ್ತದೆ. ಅಂತೆಯೇ ಈ ವರ್ಷದ ಕೊನೆಯಲ್ಲಿ ಹೊಸ ವರ್ಷದ ಆರಂಭದ ನಡುವೆ ಇಂಥದೊಂದು ಅವಕಾಶ ನೀಡುತ್ತಿದೆ.
ಈ ಬಾರಿ ವಿಶೇಷತೆ ಏನೆಂದರೆ 8ನೇ ತರಗತಿ ಉತ್ತೀರ್ಣರಾಗಿದ್ದರು ಸಾಕು ಈ ಸರ್ಕಾರಿ ಹುದ್ದೆ ಪಡೆಯಲು ಅವರು ಸ್ಪರ್ಧಿಸಬಹುದಾಗಿದೆ. ಈ ಹುದ್ದೆಯ ಕುರಿತು ಪೂರ್ತಿ ಮಾಹಿತಿಗಾಗಿ ಅಂಕಣವನ್ನು ಕೊನೆಯವರೆಗೂ ಕೂಡ ಓದಿ ಮತ್ತು ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ.
ಇಲಾಖೆಯ ಹೆಸರು:- ಭಾರತೀಯ ಅಂಚೆ ಇಲಾಖೆ (Indian Postal Department)
ಹುದ್ದೆಯ ಹೆಸರು:- ಮೋಟಾರ್ ವೆಹಿಕಲ್ ಮೆಕ್ಯಾನಿಕ್ ಸ್ಕಿಲ್ಡ್ ಆರ್ಟಿಸನ್ ಗ್ರೇಡ್-3 ಹುದ್ದೆ
ಉದ್ಯೋಗ ಸ್ಥಳ:- ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಛತ್ತೀಸ್ಗಢದ ದರ್ಗ್ನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.
ವೇತನ ಶ್ರೇಣಿ:- ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹19,900-63,200 ಸಂಬಳ ಕೊಡಲಾಗುತ್ತದೆ.
ಶೈಕ್ಷಣಿಕ ವಿದ್ಯಾರ್ಹತೆ:-
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತದಲ್ಲಿ ಮಾನ್ಯತೆ ಪಡೆದ ಯಾವುದೇ ಶಾಲೆ ಅಥವಾ ಮಂಡಳಿಯಲ್ಲಿ 8ನೇ ತರಗತಿ ಉತ್ತೀರ್ಣರಾಗಿದ್ದರೆ ಸಾಕು.
ವಯೋಮಿತಿ:-
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 30 ವರ್ಷಗಳು
ವಯೋಮಿತಿ ಸಡಿಲಿಕೆ:-
* ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ -1 ರ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಾನ ಸಡಿಲಿಕೆ ಇರುತ್ತದೆ
* OBC ವರ್ಗದ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಲಿಕೆ ಇರುತ್ತದೆ
ಅರ್ಜಿ ಸಲ್ಲಿಸುವ ವಿಧಾನ:-
* ಈ ಬಾರಿ ಆಫ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ
* ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು ಅರ್ಜಿ ಫಾರಂ ಡೌನ್ಲೋಡ್ ಮಾಡಿಕೊಂಡು ಸ್ವ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ
* ಅಧಿಸೂಚನೆಯಲ್ಲಿ ಕೇಳಲಾಗಿರುವ ಎಲ್ಲಾ ಪೂರಕ ದಾಖಲೆಗಳ ಪ್ರತಿಗಳನ್ನು ಇದರ ಜೊತೆ ಲಗತ್ತಿಸಿ ಈ ಕೆಳಗಿರುವ ವಿಳಾಸಕ್ಕೆ ಕಳುಹಿಸಿ.
ಮ್ಯಾನೇಜರ್ ಗ್ರೂಪ್ – A,
ಮೇಲ್ ಮೋಟರ್ ಸೇವೆಗಳು,
GPO ಕಾಂಪೌಂಡ್,
ಸುಲ್ತಾನಿಯ ರಸ್ತೆ,
ಭೋಪಾಲ್ – 462001
ಅರ್ಜಿ ಶುಲ್ಕ:-
* ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ತ -1, ಅಂಗವಿಕಲ ಅಭ್ಯರ್ಥಿಗಳು ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
* ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.400/-
* ಇನ್ನುಳಿದ ಎಲ್ಲಾ ಅಭ್ಯರ್ಥಿಗಳಿಗೆ ರೂ.100/-
* ಅರ್ಜಿ ಶುಲ್ಕವನ್ನು ಭಾರತೀಯ ಪೋಸ್ಟಲ್ ಆರ್ಡರ್ ಮೂಲಕವೇ ಪಾವತಿಸಬೇಕು.
ಆಯ್ಕೆ ವಿಧಾನ:-
* ಸ್ಪರ್ಧಾತ್ಮಕ ಪರೀಕ್ಷೆ
* ಸಂದರ್ಶನ
* ದಾಖಲೆಗಳ ಪರಿಶೀಲನೆ
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 19 ಡಿಸೆಂಬರ್, 2023
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 10 ಜನವರಿ, 2024.