ಎಲ್ಲಾ ರೈತರ ಗಮನಕ್ಕೆ, ಇಂದಿನಿಂದ ದನ ಕರುಗಳ ಕಾಲುಬಾಯಿ ರೋಗಕ್ಕೆ ಉಚಿತ ಲಸಿಕೆ, ನಿಮ್ಮ ದನಕರುಗಳಿಗೆ ತಪ್ಪದೇ ಹಾಕಿಸಿ.!

 

WhatsApp Group Join Now
Telegram Group Join Now

ಕಾಲು ಬಾಯಿ ರೋಗವು (foot-mouth disease) ಗೊರಸು ಕಾಲುಗಳುಳ್ಳ ದನಗಳು, ಕುರಿ, ಆಡು, ಎಮ್ಮೆ ಮತ್ತು ಹಂದಿ, ಜಿಂಕೆಗಳಿಗೆ ಬರುವ ರೋಗವಾಗಿದ್ದು, ಅತಿ ವೇಗವಾಗಿ ಹರಡುವ ಸಾಂಕ್ರಾಮಿಕವಾಗಿದೆ. ಅಫ್ಥೋನೋವೈರಸ್ (virus) ಸೋಂಕಿನಿಂದ ಹರಡುವ ಕಾಯಿಲೆ ಇದಾಗಿದ್ದು, ಈ ವೈರಸ್ 250 ಕಿಲೋ ಮೀಟರ್ ವರೆಗೂ ಹರಡುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ.

ಸೋಂಕಿಗೆ ಒಳಗಾಗುವ ಜಾನುವರಿನ ಆಹಾರ, ಮೇವು, ನೀರು, ಗಾಳಿ ಮೂಲಕ ಮತ್ತೊಂದು ಪ್ರಾಣಿಗೂ ಈ ಕಾಯಿಲೆ ಹರಡುತ್ತದೆ. ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಕಾಯಿಲೆ ಉಲ್ಬಣವಾಗಿದ್ದು ಇದರ ಪರಿಣಾಮವಾಗಿ ನಮ್ಮ ರೈತರು (farmers) ವಾರ್ಷಿಕವಾಗಿ 15,000 ಕೋಟಿ ನ’ಷ್ಟ ಅನುಭವಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಬ್ಯಾಂಕ್ ನಲ್ಲಿ ಸಾಲ ಪಡೆದು ತೀರಿಸಲಾಗದ ಗ್ರಾಹಕರಿಗೆ ಗುಡ್ ನ್ಯೂಸ್

ಈ ಕಾಯಿಲೆಗಳಿಂದ ಜಾನುವಾರುಗಳ ಕಾಲುಗಳು, ಬಾಯಿ ಮತ್ತು ಕೆಚ್ಚಲಿನ ಮೇಲೆ ನೀರು ಬೊಬ್ಬೆಗಳಾಗುತ್ತದೆ ಇದರಿಂದ ನಡೆಯಲಾಗದೆ ಕುಂಟುತ್ತವೆ, ಬಾಯಿಯಿಂದ ಜೊಲ್ಲು ಸೋರುತ್ತದೆ, ನಾಲಿಗೆ ಹಾಗೂ ವಸಡುಗಳ ಮೇಲಿನ ಗುಳ್ಳೆಗಳು ಒಡೆದು ಮೇಲ್ಪದರು ಕಿತ್ತು ಅಲ್ಸರ್ ರೀತಿಯ ಗಾಯಗಳಾಗುತ್ತವೆ. ಜೊಲ್ಲು ಸೋರುವಿಕೆ ಮತ್ತು ಈ ನೋವಿನ ಕಾರಣದಿಂದಾಗಿ ಪ್ರಾಣಿಗಳು ಆಹಾರ ತಿನ್ನಲಾಗದೆ ಬಹಳ ತೊಂದರೆ ಅನುಭವಿಸುತ್ತವೆ.

ಸರ್ಕಾರ ಮತ್ತು ಪಶುಪಾಲನ ಇಲಾಖೆಯು (Government and Animal husbandry department) 2030ರ ವೇಳೆಗೆ ಭಾರತವನ್ನು ಕಾಲುಬಾಯಿ ರೋಗ ಮುಕ್ತ ದೇಶವನ್ನಾಗಿ ಮಾಡಲು ಪಣತೊಟ್ಟಿದೆ. ಈ ಕಾಯಿಲೆ ಪರಿಣಾಮದಿಂದ ರೈತರು ಅನುಭವಿಸುತ್ತಿರುವ ನಷ್ಟವನ್ನು ತಪ್ಪಿಸುವ ಸಲುವಾಗಿ ಸರ್ಕಾರದ ವತಿಯಿಂದಲೇ ಉಚಿತ ಲಸಿಕ ವಿತರಣಾ ಕಾರ್ಯಕ್ರಮವನ್ನು (free vaccine program) ಹಮ್ಮಿಕೊಳ್ಳಲಾಗಿದೆ.

ಹೊಸ ವಸತಿ ಯೋಜನೆ, ಬಡ ಜನರ ಸ್ವಂತ ಮನೆ ಕನಸನ್ನು ನನಸು ಮಾಡಲು ಹೊರಟ ಕೇಂದ್ರ ಸರ್ಕಾರ.! ಮನೆ ಇಲ್ಲದವರು, ಹೊಸ ಮನೆ ಕಟ್ಟಬೇಕು ಅನ್ನುವವರು ತಪ್ಪದೆ ಇದನ್ನ ನೋಡಿ.!

ಈ ರೀತಿ ಲಸಿಕೆ ಹಾಕಿಸುವುದರಿಂದ ಪ್ರಾಣಿಗಳಿಗೆ ಈ ರೋಗ ಬರದಂತೆ ಮುಂಜಾನೆ ತೆಗೆದುಕೊಳ್ಳಬಹುದು ಹಾಗಾಗಿ ಸರ್ಕಾರ ನೀಡುತ್ತಿರುವ ಯೋಜನೆ ಪ್ರಯೋಜನವನ್ನು ಪ್ರತಿಯೊಬ್ಬ ರೈತ ಮತ್ತು ಪಶು ಪಾಲಕರು ಪಡೆದುಕೊಳ್ಳಬೇಕು. ಸರ್ಕಾರವು ಇದಕ್ಕಾಗಿ ಉಚಿತ ಲಸಿಕ ಅಭಿಯಾನ ಆರಂಭಿಸಿ ಗ್ರಾಮೀಣ ಭಾಗದ ಪ್ರತಿ ಮನೆಮನೆಗೆ ಹೋಗಿ ಜಾನುವಾರುಗಳಿಗೆ ಲಸಿಕೆ ನೀಡುತ್ತಿದೆ.

ಈ ರೋಗವನ್ನು ನಿಯಂತ್ರಿಸಿ ನಿರ್ಮೂಲನೆ ಮಾಡಲು ಪ್ರತಿ ಆರು ತಿಂಗಳಿಗೊಮ್ಮೆ ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸುವುದೊಂದೇ ಸದ್ಯಕ್ಕಿರುವ ಪರಿಹಾರ ಮಾರ್ಗವಾಗಿದೆ. ಇದಕ್ಕಾಗಿ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಹಾಲು ಮಹಾ ಮಂಡಳಿ ಸಹಯೋಗದೊಂದಿಗೆ ರಾಷ್ಟ್ರೀಯ ಜಾನುವಾರು ರೋಗ ಕಾರ್ಯಕ್ರಮದಡಿಯಲ್ಲಿ ಉಚಿತ ಲಸಿಕೆ ವಿತರಿಸಲು ಮುಂದಾಗಿದೆ.

ಸೆಪ್ಟೆಂಬರ್ 30ರ ನಂತರ ಬಂದ್ ಆಗಲಿದೆ LIC ಈ ಪಾಲಿಸಿ.! LIC ಮಾಡಿಸಿರುವವರು ತಪ್ಪದೆ ನೋಡಿ.!

ಈವರಿಗೆ ಮೂರು ಬಾರಿ ಲಸಿಕೆ ನೀಡಲಾಗಿದ್ದು, ನಾಲ್ಕನೇ ಸುತ್ತಿನ ಲಸಿಕಾ ಅಭಿಯಾನಕ್ಕೆ 26 ಸೆಪ್ಟೆಂಬರ್ 2023 ರಿಂದ ಚಾಲೆಂಜ್ ಸಿಕ್ಕಿದೆ. 26 ಸೆಪ್ಟೆಂಬರ್ 2023ರಿಂದ 25 ಅಕ್ಟೋಬರ್ 2023ರ ವರೆಗೆ ಒಂದು ತಿಂಗಳ ಕಾಲ ಕಾಲು ಬಾಯಿ ರೋಗದ ವಿರುದ್ಧ ಎಲ್ಲ ದನ, ಎಮ್ಮೆ ಮತ್ತು ಕರುಗಳಿಗೆ ನೀಡಲಾಗುವ ವ್ಯಾಕ್ಸಿನ್ ತಪ್ಪದೇ ಹಾಕಿಸಿಕೊಳ್ಳಲು ಸೂಚಿಸಲಾಗಿದೆ. ಈ ಅಭಿಯಾನದಲ್ಲಿ ಲಸಿಕೆ ನೀಡುವವರು ಪ್ರತಿ ಗ್ರಾಮಗಳಿಗೆ ಮನೆ ಬಾಗಿಲಿಗೆ ಹೋಗಿ ಲಸಿಕೆಯನ್ನು ನೀಡಲಿದ್ದಾರೆ ತಪ್ಪದೆ ಹಾಕಿಸಬೇಕಾದ ಜವಾಬ್ದಾರಿ ರೈತರದ್ದಾಗಿದೆ.

ಕಾಲುಬಾಯಿ ರೋಗ ಉಂಟಾಗುವುದರಿಂದ ಗರ್ಭ ಕಟ್ಟುವ ಸಾಧ್ಯತೆ ಕಡಿಮೆ ಆಗುತ್ತದೆ, ವಿಪರೀತವಾಗಿ ಜ್ವರ ಹಾಗೂ ನೋವಿನಿಂದ ಬಳಲುತ್ತವೆ, ಎಮ್ಮೆ ಹಾಗೂ ಕೋಣಗಳಲ್ಲಿ ಶಕ್ತಿ ಸಾಮರ್ಥ್ಯ ಕಡಿಮೆ ಆಗುತ್ತದೆ, ಹಸುಗಳು ಪ್ರಾಣಪಾಯದಿಂದ ಪಾರಾದರು ಕರುಗಳಿಗೆ ಹೃದಯಾಘಾತ ಉಂಟಾಗುವ ಸಾಧ್ಯತೆ ಹೆಚ್ಚು. ಇದನ್ನೆಲ್ಲ ತಪ್ಪಿಸಿ ತಮಗಾಗುವ ಆರ್ಥಿಕ ನ’ಷ್ಟದಿಂದ ಪಾರಾಗಲು ರೈತರು ತಪ್ಪದೆ ಈ ಮೇಲೆ ತಿಳಿಸಿದ ದಿನಾಂಕದೊಳಗೆ ನಾಲ್ಕನೇ ಸುತ್ತಿನ ಲಸಿಕೆಯನ್ನು ಜಾನುವಾರುಗಳಿಗೆ ಕೊಡಿಸಿ.

60 ವರ್ಷ ಮೇಲ್ಪಟ್ಟ ಎಲ್ಲರಿಗೂ ಸಿಗಲಿದೆ ಪ್ರತಿ ತಿಂಗಳು 2 ಲಕ್ಷ ಪಿಂಚಣಿ.! ತಪ್ಪದೇ ಅರ್ಜಿ ಸಲ್ಲಿಸಿ.!

ಈ ಕುರಿತು ಯಾವುದೇ ಗೊಂದಲ ಅಥವಾ ಸಮಸ್ಯೆ ಸಲಹೆಗಳಿದ್ದರೆ ಉಚಿತ ಸಹಾಯವಾಣಿ ಸಂಖ್ಯೆ 8277100200 / 1962 ಸಂಪರ್ಕಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now