APL, BPL ಕಾರ್ಡ್ ಹೊಂದಿರುವವರ ಗಮನಕ್ಕೆ, ಇನ್ಮುಂದೆ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಈ ರಶೀದಿ ಕಡ್ಡಾಯ ಹೊಸ ರೂಲ್ಸ್ ಜಾರಿ.!

ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು (Governments) ಪಡಿತರ ಚೀಟಿ (Ration card) ಮೂಲಕ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಅತಿ ಕಡಿಮೆ ಬೆಲೆಗೆ ಹಾಗೂ ಕೆಲವೊಂದು ಸಮಯದಲ್ಲಿ ಉಚಿತವಾಗಿ ಪಡಿತರ ನೀಡುತ್ತಾ ಬಂದಿದೆ. ಸದ್ಯಕ್ಕೆ ಕೇಂದ್ರದಿಂದ ಕಡ್ಡಾಯ ಆಹಾರ ನೀತಿ ಪ್ರಕಾರ 5Kg ಅಕ್ಕಿಯನ್ನು ದೇಶದ ಎಲ್ಲಾ ರಾಜ್ಯಗಳ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಪಡೆಯುತ್ತಿವೆ.

WhatsApp Group Join Now
Telegram Group Join Now

ಅದೇ ರೀತಿ ಕರ್ನಾಟಕ (Karnataka) ರಾಜ್ಯದ ಅನ್ನಭಾಗ್ಯ ಯೋಜನೆಯನ್ನು (Annabhagya) ಹೆಸರಿಸಬಹುದು. ಗ್ಯಾರಂಟಿ ಯೋಜನೆಯನ್ವಯ ಅನ್ನಭಾಗ್ಯ ಯೋಜನೆ ಅಡಿ 10Kg ಪಡಿತರ ನೀಡಲು ಸರ್ಕಾರ ಆದೇಶಿಸಿದೆ. ಆದರೆ ಸದ್ಯಕ್ಕೆ ದಾಸ್ತಾನು ಕೊರತೆ ಇರುವುದರಿಂದ 5Kg ಅಕ್ಕಿ ಹಾಗೂ ಉಳಿದ 5 Kg ಅಕ್ಕಿಗೆ ಬದಲಾಗಿ 170ರೂ. ನೀಡಲಾಗುತ್ತಿದೆ.

ಸರ್ಕಾರಗಳು ಹೀಗೆ ಬಡ ಜನರಿಗಾಗಿ ರೂಪಿಸಿರುವ ಯೋಜನೆಗಳು ಸಮರ್ಪಕವಾಗಿ ಫಲಾನುಭವಿಗಳನ್ನು ಮುಟ್ಟುತ್ತಿಲ್ಲ. ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಹಂಚಿಕೆ ವಿಚಾರದಲ್ಲಿ ಸಾಕಷ್ಟು ಅನ್ಯಾಯವಾಗುತ್ತಿದೆ ಬಡವರಿಗಾಗಿ ನೀಡುವ ಆಹಾರ ಧಾನ್ಯವನ್ನು ಕೂಡ ದೋಚಿ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ

ಮತ್ತು ಕೃತಕ ಅಭಾವ ಸೃಷ್ಟಿಸಿ ಲಾಭ ಮಾಡಿಕೊಳ್ಳುತ್ತಿದ್ದಾರೆ ಹಾಗೂ ಪಡಿತರವನ್ನು ಹೆಚ್ಚಿನ ಹಣಕ್ಕೆ ಮಾಡಿಕೊಳ್ಳುತ್ತಿದ್ದಾರೆ, ಹಣ ಪಡೆದು ಪಡಿತರ ನೀಡುತ್ತಿದ್ದಾರೆ ಎನ್ನುವ ಇತ್ಯಾದಿ ದೂರು ಕೇಳಿಬಂದಿದೆ. ಸಾಕಷ್ಟು ಕಡೆ ನಾಗರಿಕರ ಕಡೆಯಿಂದ ದೂರು ದಾಖಲಾದಾಗ ಅನ್ಯಾಯ ಎಸಗುತ್ತಿರುವವರ ವಿರುದ್ಧ ಆಹಾರ ಇಲಾಖೆಗಳು ದಾಳಿ ನಡೆಸಿ ಕ್ರಮ ಜರುಗಿಸಿದ್ದಾರೆ. ಆದರೂ ಕೂಡ ಸಂಪೂರ್ಣವಾಗಿ ಹಿಡಿತಕ್ಕೆ ಬಂದಿಲ್ಲ. ಹಾಗಾಗಿ ಈ ನಿಟ್ಟಿನಲ್ಲಿ ಸರ್ಕಾರವು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

ನಮ್ಮ ರಾಜ್ಯದಲ್ಲಿ ಎಷ್ಟು ಜನರಿಗೆ ಇನ್ನೂ ಸಹ ನಮಗೆ ಎಷ್ಟು ಪಡಿತರ ಸಿಗಬೇಕು, ನ್ಯಾಯಬೆಲೆ ಅಂಗಡಿಗಳಲ್ಲಿ ಎಷ್ಟು ಕೊಡುತ್ತಿದ್ದಾರೆ ಹೀಗೆ ತಮಗಾಗುತ್ತಿರುವ ಮೋ’ಸದ ಅರಿವೇ ಇಲ್ಲ. ಅನೇಕ ಕಡೆ ಪಡಿತರ ಕೊಟ್ಟಿರುವುದಾಗಿ ದಾಖಲೆ ಸೃಷ್ಟಿಸಿ ಬಡ ಜನತೆಗೆ ಮೋಸ ಮಾಡಿ ಅರ್ಧಕ್ಕೆ ಅರ್ಧದಷ್ಟು ಕಡಿಮೆ ಕೊಡಲಾಗುತ್ತಿದೆ ಇದನ್ನೆಲ್ಲ ತಡೆಗಟ್ಟುವ ನಿಟ್ಟಿನಲ್ಲಿ ಮತ್ತು ಪಡಿತರ ಹಂಚಿಕೆಯಲ್ಲಿ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಹೊಸದೊಂದು ಯೋಜನೆ ಜಾರಿಗೆ ಬಂದಿದ್ದು ಶೀಘ್ರದಲ್ಲಿ ಅದು ಎಲ್ಲೆಡೆ ಅನ್ವಯ ಕೂಡ ಆಗಲಿದೆ.

ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರ ಧಾನ್ಯ ವಿತರಿಸುವಾಗ ರಸೀದಿ ನೀಡಲು ಆಹಾರ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಈ ಮೂಲಕ ಪಡಿತರ ವಿತರಣೆಯನ್ನು ಮತ್ತಷ್ಟು ಪಾರದರ್ಶಕಗೊಳಿಸಲು (transparency) ಸರ್ಕಾರ ಈ ಕಟ್ಟುನಿಟ್ಟಾದ ನಿಯಮವನ್ನು ರೂಪಿಸಿದೆ. ಆಹಾರ ಇಲಾಖೆ ಆಯುಕ್ತರು ರಾಜ್ಯದ ಎಲ್ಲ ಪಡಿತರ ಅಂಗಡಿಗಳಲ್ಲಿ ಪಡಿತರ ಪಡೆದುಕೊಳ್ಳುವ ಗ್ರಾಹಕರಿಗೆ ಕಡ್ಡಾಯವಾಗಿ ರಸೀದಿ (receipt) ನೀಡಬೇಕೆಂದು ಸೂಚನೆ ನೀಡಿದ್ದಾರೆ.

ನ್ಯಾಯಬೆಲೆ ಅಂಗಡಿ ಮಾಲೀಕರು ಕೂಡ ರಸೀದಿ ನೀಡಲು ಅಗತ್ಯವಿರುವ ಸೌಲಭ್ಯ ಅಳವಡಿಸಿಕೊಳ್ಳಲು ಎಂದು ಸೂಚಿಸಲಾಗಿದೆ. ಕೇಂದ್ರದ ಸೂಚನೆ ಅನ್ವಯ ರಾಜ್ಯದಲ್ಲಿಯೂ ಕೂಡ ಇನ್ನುಮುಂದೆ ಪಡಿತರ ವಿತರಣೆಯಲ್ಲಿ ಈ ನಿಯಮ ಕಡ್ಡಾಯವಾಗಲಿದೆ. ಇನ್ನು ಮುಂದೆ ಬಡ ಜನತೆಗೆ ಯಾಮರಿಸುವ ಮಧ್ಯವರ್ತಿಗಳಿಗೆ ಯೋಜನೆ ಫಲಿಸುವುದಿಲ್ಲ ಮತ್ತು ಕಾಳಸಂತೆಯಲ್ಲಿ ಆಹಾರ ಧಾನ್ಯ ಅಕ್ರಮವಾಗಿ ಹರಾಜ್ ಆಗುವುದು ಕೂಡ ತಪ್ಪುತ್ತದೆ ಎಂದು ಊಹಿಸಲಾಗಿದೆ.

ಈ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದ್ದು ಸ್ವಾಗತಾರ್ಹವಾಗಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಯೋಜನೆ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now