ಬ್ಯಾಂಕ್ ಗಳಿಂದ ಸಾಲ ಪಡೆದು ರಿಕವರಿ ಏಜೆಂಟ್ ಗಳಿಂದ ಸಮಸ್ಯೆ ಅನುಭವಿಸುತ್ತಿದ್ದೀರಾ.? ಚಿಂತೆ ಬಿಡಿ ಈ ವಿಷಯ ತಿಳ್ಕೊಂಡ್ರೆ ಸಾಕು ಯಾರು ಏನು ಮಾಡೋಕೆ ಆಗಲ್ಲ.!

 

WhatsApp Group Join Now
Telegram Group Join Now

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕೂಡ ಬ್ಯಾಂಕ್ ಗಳಲ್ಲಿ ಸಾಲ ಮಾಡಬೇಕಾದ ಅವಶ್ಯಕತೆ ಇದ್ದೇ ಇರುತ್ತದೆ. ಮನೆ ಕಟ್ಟುವುದಕ್ಕಾಗಿ, ಸೈಟ್ ಖರೀದಿಸುವುದಕ್ಕಾಗಿ ಅಥವಾ ಚಿನ್ನ ಖರೀದಿಗೆ, ವಾಹನ ಖರೀದಿಗೆ ಹೀಗೆ ಒಂದಲ್ಲಾ ಒಂದು ಕಾರಣಕ್ಕಾಗಿ ಕೆಲ ಸಂದರ್ಭದಲ್ಲಿ ಬ್ಯಾಂಕ್ ಗಳಿಂದ ಲೋನ್ ಪಡೆದಿರುತ್ತೇವೆ. ಆದರೆ ಈ ರೀತಿ ಬ್ಯಾಂಕ್ ಗಳಿಂದ ಲೋನ್ ಪಡೆದ ಮೇಲೆ ಅವುಗಳ ವಂತಿಕೆ ಅಥವಾ ಬಡ್ಡಿದರಗಳನ್ನು ಮರುಪಾವತಿಸುವಾಗ ಸ್ವಲ್ಪ ವಿಳಂಬವಾದರೂ ಕೂಡ ಅನೇಕ ಸಮಸ್ಯೆಗಳು ತಲೆದೋರುತ್ತವೆ.

ಅದರಲ್ಲಿ ಮುಖ್ಯವಾಗಿ ಬ್ಯಾಂಕ್ ಗಳು ಅವರು ಕೊಟ್ಟಿದ್ದ ಸಾಲವನ್ನು ವಸೂಲಿ ಮಾಡಲು ರಿಕವರಿ ಏಜೆಂಟ್ ಗಳನ್ನು ನೇಮಿಸಿಕೊಂಡಿರುತ್ತಾರೆ. ಒಂದು ವೇಳೆ ನಿಮ್ಮ ಸಾಲವನ್ನು ವಸೂಲಿ ಮಾಡಲು ಅವರಿಗೆ ಅನುಮತಿ ಕೊಟ್ಟರೆ ಅವರು ನಾನಾ ರೀತಿಯಲ್ಲಿ ನಿಮಗೆ ತೊಂದರೆ ಕೊಡುತ್ತಾರೆ.

ಸಂಬಂಧಿಕರಿಗೆ ಸ್ನೇಹಿತರಿಗೆ ಕರೆ ಮಾಡಿ ವಿಚಾರಿಸುವುದು, ಕರೆಗಳ ಮೂಲಕ ವಾಟ್ಸಪ್ ಸಂದೇಶಗಳ ಮೂಲಕ ನಿಂದಿಸಿ ಮಾತನಾಡುವುದು, ಬೆದರಿಕೆ ಹಾಕುವುದು ಇನ್ನು ಮುಂತಾದ ಮಾನಸಿಕ ಕಿರುಕುಳವನ್ನು ನೀಡಿ ವ್ಯಕ್ತಿಯನ್ನು ಹಿಂಸಿಸುತ್ತಾರೆ. ಕೆಲವೊಂದು ಸಂದರ್ಭಗಳಲ್ಲಿ ಸಾಲ ಪಡೆದುಕೊಂಡವರು ಇವರ ಕಾಟವನ್ನು ತಡೆಯಲು ಸಾಧ್ಯವಾಗದೆ ಊರು ಬಿಟ್ಟು ಓಡಿ ಹೋಗುವ ಅಥವಾ ಆ.ತ್ಮಹ.ತ್ಯೆಗೆ ಪ್ರಯತ್ನಿಸುವ ಪ್ರಕರಣಗಳನ್ನು ಕಂಡಿದ್ದೇವೆ.

ಆದರೆ ನಿಜಕ್ಕೂ RBI ಸಾಲ ಮರುಪಾವತಿಗೆ ಏನೆಲ್ಲ ಗೈಡ್ಲೈನ್ಸ್ ನೀಡಿದೆ ಎನ್ನುವುದನ್ನು ಪ್ರತಿಯೊಬ್ಬರೂ ಕೂಡ ತಿಳಿದುಕೊಂಡಿರಲೇಬೇಕು. ಸಾಲ ಪಡೆದುಕೊಳ್ಳುವುದಕ್ಕೆ ಯೋಚಿಸುವ ಮುನ್ನವೂ ಕೂಡ ಒಮ್ಮೆ ಸಾಲ ಪಡೆಯುವಾಗ ಯಾವೆಲ್ಲ ವಿಚಾರಗಳ ಬಗ್ಗೆ ಗ್ರಾಹಕ ಗಮನಹರಿಸಬೇಕು, ಬ್ಯಾಂಕ್ ನಲ್ಲಿ ವ್ಯವಹಾರ ಹೇಗೆ ನಡೆಯಬೇಕು ಎನ್ನುವುದನ್ನು ಕೂಡ ಈ ಗೈಡ್ಲೈನ್ಸ್ ಮೂಲಕ ತಿಳಿಸಿದೆ. ಅವುಗಳ ಬಗ್ಗೆಯೂ ಗ್ರಾಹಕರು ತಿಳಿದುಕೊಂಡಿರಲೇಬೇಕು.

ಈ ವಿಚಾರಗಳ ಬಗ್ಗೆ ಕೆಲ ಇಂಪಾರ್ಟೆಂಟ್ ವಿಷಯಗಳನ್ನು ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ. RBI ಗೈಡ್ ಲೈನ್ಸ್ ಪ್ರಕಾರ ಬ್ಯಾಂಕ್ ಗಳಲ್ಲಿ ವ್ಯವಹಾರ ಮಾಡುವ ಸಿಬ್ಬಂದಿ ಆಗಲಿ ಅಥವಾ ಬ್ಯಾಂಕ್ ವ್ಯವಹಾರಗಳಲ್ಲಿ ಬಳಸುವ ಅರ್ಜಿಗಳು ಆಗಲಿ ಇನ್ನಿತರ ವಿಷಯಗಳಾಗಲಿ ಸಾಲ ಪಡೆಯುವಾತನ ಅಥವಾ ಬ್ಯಾಂಕಿನ ಗ್ರಾಹಕನ ಪ್ರಾದೇಶಿಕ ಭಾಷೆಯಲ್ಲಿ ಇರಬೇಕು ಹೀಗಿದ್ದಾಗ ಮಾತ್ರ ಅಲ್ಲಿರುವ ವಿಷಯಗಳು ಆತನಿಗೆ ಸ್ಪಷ್ಟವಾಗಿ ಅರ್ಥವಾಗುತ್ತದೆ.

ಷರತ್ತು ಮತ್ತು ನಿಬಂಧನೆಗಳನ್ನು ಒಪ್ಪಿ ಸಹಿ ಮಾಡಲು ಅನುಕೂಲತೆ ಆಗುತ್ತದೆ. ಒಂದು ವೇಳೆ ಗ್ರಾಹಕ ಅನಕ್ಷರಸ್ಥ ಆಗಿದ್ದರೆ ಅಥವಾ ಆತನಿಗೆ ತಿಳಿಯದೇ ಬೇರೆ ಭಾಷೆಗಳಲ್ಲಿ ಇವುಗಳು ಇದ್ದರೆ ಅವುಗಳ ಮಾಹಿತಿ ಆತನಿಗೆ ತಲುಪಿಲ್ಲ ಎಂದೇ ಅರ್ಥವಾಗುತ್ತದೆ. ಆದ್ದರಿಂದ ದಪ್ಪ ಅಕ್ಷರಗಳಲ್ಲಿ ಗ್ರಾಹಕನಿಗೆ ಅರ್ಥ ಆಗುವ ಭಾಷೆಯಲ್ಲಿ ವ್ಯವಹಾರ ಪತ್ರಗಳು ಇರಬೇಕು ಎನ್ನುವುದನ್ನು RBI ತನ್ನ ಗೈಡ್ ಲೈನ್ಸ್ ಅಲ್ಲಿ ತಿಳಿಸಿದೆ.

ಜೊತೆಗೆ ಸಾಲ ಪಡೆದುಕೊಂಡ ಮೇಲೆ ಅದಕ್ಕೆ ವಿಧಿಸಿರುವ ಬಡ್ಡಿಗಳ ವಿಚಾರದಲ್ಲೂ ಕೂಡ ಸಾಕಷ್ಟು ಮೋಸಗಳು ಆಗುತ್ತವೆ. ಉದಾಹರಣೆಗೆ ಸಾಲ ಪಡೆದುಕೊಳ್ಳುವಾಗ 14% ಎಂದು ತಿಳಿಸಿ ಸಾಲ ಪಡೆದಾತನಿಗೆ ಮಾಹಿತಿ ನೀಡದೆ ಅದು ಡಬಲ್ ಆಗಿ ಹೋಗಿರುವ ಉದಾಹರಣೆಗಳು ಇವೆ. 14% -18%, 18% – 24% ಹೀಗೆ ಬ್ಯಾಂಕ್ ಗಳು ಅವರ ಮನಸೋ ಇಚ್ಛೆ ಬಡ್ಡಿದರವನ್ನು ಬದಲಾಯಿಸಿಬಿಟ್ಟಿರುತ್ತವೆ, ಈ ಬಗ್ಗೆ ಗ್ರಾಹಕರಿಗೆ ಮಾಹಿತಿಯನ್ನೇ ನೀಡಿರುವುದಿಲ್ಲ.

RBI ನಿಯಮದ ಪ್ರಕಾರ ಗ್ರಾಹಕನಿಗೆ ನೋಟಿಸ್ ಇಲ್ಲದೆ ಅಥವಾ ಆತನ ಅನುಮತಿ ಇಲ್ಲದೆ ಬ್ಯಾಂಕ್ಗಳು ಲೋನ್ ಅಗ್ರಿಮೆಂಟ್ಗಳಲ್ಲಿ ಯಾವುದೇ ವಿಷಯವನ್ನು ಬದಲಾಯಿಸುವಂತಿಲ್ಲ. ಈ ರೀತಿ ಇನ್ನು ಸಾಕಷ್ಟು ವಿಷಯಗಳು RBI ಗೈಡ್ ಲೈನ್ಸ್ ಅಲ್ಲಿ ಇದೆ. ಅವುಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now