ಈಗಿನ ಕಾಲದಲ್ಲಿ ಮೊಬೈಲ್ ಬಹಳ ದೊಡ್ಡ ಅಡಿಕ್ಷನ್ ಆಗಿದೆ. ವಯಸ್ಕರು ಮಾತ್ರವಲ್ಲದೇ ಚಿಕ್ಕ ಚಿಕ್ಕ ಮಕ್ಕಳು ಕೂಡ ಮೊಬೈಲ್ ನಲ್ಲಿರುವ ವಿಡಿಯೋ ಗೇಮ್ ಗಳು, ರಿಲ್ಸ್ ಗಳು ಇವುಗಳನ್ನು ನೋಡಲು ಅಡಿಕ್ಟ್ ಆಗಿ ಹೋಗಿದ್ದಾರೆ ಶಾಲೆಗೆ ಹೋಗುವ ಮಕ್ಕಳಂತೂ ಮೊಬೈಲ್ ಗಾಗಿ ಮನೆಯಲ್ಲಿ ವಿಪರೀತ ಹಠ ಮಾಡುತ್ತಾರೆ.
ಹೆತ್ತವರು ಕೂಡ ಮಕ್ಕಳ ಈ ಚಟದಿಂದ ಬೇಸತ್ತು ಹೋಗಿರುತ್ತಾರೆ. ನಿಮ್ಮ ಮಕ್ಕಳು ಊಟ ಮಾಡುವ ವೇಳೆ ಮೊಬೈಲ್ ನೋಡುತ್ತಿದ್ದರೆ ಇದನ್ನು ಬಿಡಿಸಲು ಮತ್ತು ನಿಧಾನವಾಗಿ ಹೇಗೆ ಮಕ್ಕಳನ್ನು ಮೊಬೈಲ್ ನಿಂದ ದೂರ ಮಾಡಬೇಕು ಎನ್ನುವುದನ್ನು ತಿಳಿದುಕೊಳ್ಳಲು ಈ ಅಂಕಣವನ್ನು ತಪ್ಪದೆ ಪೂರ್ತಿ ಓದಿ ಮತ್ತು ಇದರಲ್ಲಿ ನಾವು ಹೇಳಿರುವ ಸುಲಭವಾದ ಟಿಪ್ ಗಳನ್ನು ಫಾಲೋ ಮಾಡಿ.
ಕೊರೋನ ಲಾಕ್ ಡೌನ್ ಆದ ಮೇಲೆ ಮೊಬೈಲ್ ಬಳಕೆ ಇನ್ನು ದುಪ್ಪಟ್ಟು ಹೆಚ್ಚಾಯಿತು ಎಂದರೆ ತಪ್ಪಾಗಲಾರದು. ಅದಕ್ಕೂ ಮುನ್ನ ಮನೆ ಹೊರಗೆ ಮಕ್ಕಳು ಸ್ವಲ್ಪವಾದರೂ ಆಟವಾಡುತ್ತಿದ್ದರು. ಆದರೆ ಈಗ ಮೊಬೈಲ್ ಗೆ ಅಡಿಕ್ಟ್ ಆಗಿ ಹೋಗಿದ್ದಾರೆ. ಅದನ್ನು ಕಡಿಮೆ ಮಾಡಬೇಕು ಎಂದರೆ ನೀವು ನಿಮ್ಮ ಮಕ್ಕಳಿಗೆ ಯಾವುದಾದರೂ ಹವ್ಯಾಸ ಕಲಿಸಬೇಕು.
ಮಕ್ಕಳು ಮಾತ್ರವಲ್ಲದೆ ದೊಡ್ಡವರಿಗೂ ಇದು ಅನ್ವಯವಾಗುತ್ತದೆ. ಯಾವ ವ್ಯಕ್ತಿಯು ವೃತ್ತಿ ಜೊತೆ ಪ್ರವೃತ್ತಿ ಹೊಂದಿರುತ್ತಾನೆ ಆತ ಹೆಚ್ಚು ಆಕ್ಟೀವ್ ಆಗಿರುತ್ತಾನೆ ಮತ್ತು ಆತನ ಪರ್ಸನಾಲಿಟಿ ಅಷ್ಟೇ ಚೆನ್ನಾಗಿ ಡೆವಲಪ್ ಆಗುತ್ತದೆ ಹಾಗಾಗಿ ನಿಮ್ಮ ಮಕ್ಕಳಿಗೆ ಯಾವುದು ಆಸಕ್ತಿ ಇದೆಯೋ ಅದನ್ನು ಮಾಡಲು ಬಿಡಿ.
ಡ್ರಾಯಿಂಗ್, ಸಿಂಗಿಂಗ್, ಡ್ಯಾನ್ಸಿಂಗ್, ಕರಾಟೆ ಅಥವಾ ಸಮಾಜ ಸೇವೆಯಲ್ಲಿ ಮಕ್ಕಳು ತೊಡಗಿಕೊಳ್ಳುವುದು, ಹೊಸ ಸ್ನೇಹಿತರನ್ನು ಭೇಟಿಯಾಗುವುದು, ಕಥೆ ಹೇಳುವುದು, ಕಥೆ ಬರೆಯುವುದು ಈ ರೀತಿ ಯಾವ ಅಭ್ಯಾಸ ಇದೆಯೋ ಅದನ್ನು ಅವರಿಗೆ ಮಾಡಲು ಅವಕಾಶ ಮಾಡಿಕೊಡಿ.
ಆಗ ಅವರು ತಮ್ಮ ಶಾಲೆಯ ಸಮಯ ಬಿಟ್ಟು ಉಳಿದ ಸಮಯವನ್ನು ತಮಗಿರುವ ಆಸಕ್ತಿಯಲ್ಲಿ ತೊಡಗಿಸಿಕೊಳ್ಳಲು ಶುರು ಮಾಡುತ್ತಾರೆ. ನಿಧಾನವಾಗಿ ಮೊಬೈಲ್ ಅಡಿಕ್ಷನ್ ಇಂದ ಹೊರ ಬರುತ್ತಾರೆ. ಜೊತೆಗೆ ಸಂಪೂರ್ಣವಾಗಿ ಮಕ್ಕಳು ಮೊಬೈಲ್ ಬಿಟ್ಟು ಒಂದೇ ಬಾರಿಗೆ ಇರಲು ಒಪ್ಪುವುದಿಲ್ಲ ಮತ್ತು ಈಗಿನ ಕಾಲದಲ್ಲಿ ತಕ್ಕಮಟ್ಟಿಗೆ ಮೊಬೈಲ್ ಬಳಕೆ ಕೂಡ ಅನಿವಾರ್ಯ.
ಹಾಗಾಗಿ ನಿಮ್ಮ ಮಕ್ಕಳಿಗೆ ಎಂಟರ್ಟೈನ್ಮೆಂಟ್ ಗಾಗಿ ಮೊಬೈಲ್ ಬೇಕಿದ್ದರೆ ಅವರಿಗೆ ಡಿಜಿಟಲ್ ಟೈಂ ಫಿಕ್ಸ್ ಮಾಡಿ. ನಾನು ನಿನಗೆ ಅರ್ಧ ತಾಸು ಮೊಬೈಲ್ ಕೊಡುತ್ತೇನೆ ನಂತರ ಕೇಳಬಾರದು ಎಂದು ಟೈಮ್ ಟೇಬಲ್ ಮಾಡಿ. ಆ ಸಮಯದಲ್ಲಿ ಮಕ್ಕಳಿಗೆ ಮೊಬೈಲ್ ಕೊಡಿ ಮತ್ತು ಪದೇ ಪದೇ ಟೈಮ್ ಆಯಿತು ಎಂದು ಹೇಳಬೇಡಿ.
ಅರ್ಧ ಗಂಟೆ ನಂತರ ಅವರೇ ತಂದು ಕೊಡಬೇಕು ಎಂದು ಹೇಳಿ ಈ ರೀತಿಯಾಗಿ ದಿನದಿಂದ ದಿನಕ್ಕೆ ಮಕ್ಕಳನ್ನು ಇಂಪ್ರೂ ಮಾಡಬಹುದು. ಇದರೊಂದಿಗೆ ಮತ್ತೊಂದು ಮುಖ್ಯವಾದ ವಿಷಯ ಏನೆಂದರೆ ಮನೆಯಲ್ಲಿ ದೊಡ್ಡವರಿಗೆ ಏನು ಮಾಡುತ್ತಾರೆ ಅದನ್ನು ನೋಡಿಕೊಂಡು ಮಕ್ಕಳು ಕಲಿಯುತ್ತಾರೆ.
ಹಾಗಾಗಿ ಮಕ್ಕಳ ಎದುರು ಮೊಬೈಲ್ ಅತಿ ಹೆಚ್ಚು ಬಳಸುವುದು ಅಥವಾ ಮೊಬೈಲ್ ನಲ್ಲಿ ಬೇಡದ್ದು ನೋಡುವುದು ಅಥವಾ ಮೊಬೈಲ್ ನೋಡಿಕೊಂಡು ಊಟ ಮಾಡುವುದು ಈ ರೀತಿ ಅಭ್ಯಾಸಗಳನ್ನು ಮಾಡಬೇಡಿ. ನಿಮ್ಮ ಮಕ್ಕಳು ಸಹ ಮೊಬೈಲ್ ನೋಡಿಕೊಂಡು ಊಟ ಮಾಡುತ್ತಿದ್ದರೆ ಅದನ್ನು ಬಿಡಿಸಲು ಮೊದಲಿಗೆ ಅವರಿಗೆ ಇಷ್ಟ ಆಗುವ ಊಟ ಏನು ಅದನ್ನು ತಿಳಿದುಕೊಂಡು ರುಚಿಯಾಗಿ ಮಾಡಿಕೊಡಿ.
ಮತ್ತು ನಿಮ್ಮ ಮಕ್ಕಳಿಗೆ ಮೊಬೈಲ್ ಬಿಟ್ಟು ಊಟ ಮಾಡಿದರೆ ಪ್ಲತಿದಿನವೂ ಇಷ್ಟವಾದ ತಿಂಡಿ ಮಾಡಿಕೊಡುತ್ತೇನೆ ಎಂದು ಪ್ರೀತಿಯಿಂದ ಹೇಳಿ. ಈ ರೀತಿಯಾಗಿ ನಿಧಾನವಾಗಿ ಮಕ್ಕಳನ್ನು ಮೊಬೈಲ್ ಅಡಿಕ್ಷನ್ ಇಂದ ಹೊರ ತರಬಹುದು.