ಹೊಟ್ಟೆ ತುಂಬಾ ಬೊಜ್ಜು ತುಂಬಿಕೊಂಡಿದ್ದರೆ ಅದನ್ನು ಕರಗಿಸುವುದು ಹೇಗೆ ಎನ್ನುವ ಚಿಂತೆ ಕಾಡುವುದು ಸಹಜ. ಇಂದಿನ ಜೀವನ ಶೈಲಿ ಮತ್ತು ಆಹಾರ ಕ್ರಮದಿಂದಾಗಿ ಹೆಚ್ಚಿನವರಲ್ಲಿ ಬೊಜ್ಜು ಕಾಣಿಸಿ ಕೊಳ್ಳುವುದು.
ದೇಹದ ಸೌಂದರ್ಯವನ್ನು ಅಳೆಯುವ ವೇಳೆ ಮುಖ್ಯವಾಗಿ ಕೆಲವೊಂದು ಸಲ ಹೊಟ್ಟೆಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ಯಾಕೆಂದರೆ ಹೊಟ್ಟೆ ದೊಡ್ಡದಾಗಿದ್ದರೆ ಆಗ ಅದು ಸಂಪೂರ್ಣ ಸೌಂದರ್ಯವನ್ನು ಕೆಡಿಸುವುದು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಹೀಗಾಗಿ ಪ್ರತಿಯೊಬ್ಬರು ಹೊಟ್ಟೆಯ ಸೌಂದರ್ಯದ ಕಡೆಗೆ ಗಮನಹರಿಸಬೇಕು. ಕೆಲವರಿಗೆ ಅತಿಯಾದ ಬೊಜ್ಜು ಆವರಿಸಿಕೊಂಡಿರುವಂತಹ ಜಾಗವೆಂದರೆ ಅದು ಹೊಟ್ಟೆ ಎಂದು ಹೇಳಬಹುದು. ಹೊಟ್ಟೆಯಲ್ಲಿ ತುಂಬಿರುವ ಬೊಜ್ಜು ಕಡಿಮೆ ಮಾಡುವುದು ಕಠಿಣ ಕೆಲಸ ಹೊಟ್ಟೆಯ ಕೊಬ್ಬು ಆರೋಗ್ಯಕ್ಕೆ ತುಂಬಾ ಹಾನಿಕರ. ಇದರಿಂದಾಗಿ ಮಧುಮೇಹದಿಂದ ಹಿಡಿದು ಹೃದಯದ ಸಮಸ್ಯೆ, ನಿದ್ರಾಹೀನತೆ ಮತ್ತು ಕ್ಯಾನ್ಸರ್ ನಂತಹ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿ ಕೊಳ್ಳಬಹುದು.
ಹೊಟ್ಟೆಯ ಬೊಜ್ಜು ವ್ಯಕ್ತಿಯೊಬ್ಬನ ಆತ್ಮವಿಶ್ವಾಸ ಕುಗ್ಗಿಸುವುದು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಮಧ್ಯಭಾಗದಲ್ಲಿರುವ ಒಳಾಂಗಗಳ ಕೊಬ್ಬು ಹೊಟ್ಟೆಯ ಕೊಬ್ಬಿಗೆ ಪ್ರಮುಖ ಕಾರಣವಾಗಿದೆ ಮತ್ತು ಇದು ತುಂಬಾ ಅಪಾಯಕಾರಿ ಕೂಡ. ಒಳಾಂಗಗಳ ಕೊಬ್ಬು ಹೊಟ್ಟೆಯಲ್ಲಿ ತುಂಬಾ ಆಳವಾಗಿ ಇರುವ ಕೊಬ್ಬು ಮತ್ತು ಚರ್ಮದ ಅಡಿಭಾಗದಲ್ಲಿ, ಕಿಡ್ನಿ ಮತ್ತು ಯಕೃತ್ ನಂತಹ ಕೆಲವೊಂದು ಮಹತ್ವದ ಅಂಗಾಂಗಗಳ ಸುತ್ತಲು ಆವರಿಸಿಕೊಂಡಿರುವುದು. ಹೊಟ್ಟೆ ಕೊಬ್ಬನ್ನ ಇಳಿಸು ವುದರಿಂದ ನಿಮ್ಮ ಆರೋಗ್ಯಕ್ಕೆ ಮಾತ್ರವಲ್ಲದೆ, ಸೌಂದರ್ಯಕ್ಕೂ ತುಂಬಾ ಒಳ್ಳೆಯದು. ಹೊಟ್ಟೆಯು ಸಮತಟ್ಟಾಗಿದ್ದರೆ ಆಗ ಇದು ಚರ್ಮದ ಸೌಂದರ್ಯ ವೃದ್ಧಿಸುವುದು. ಅದೇ ರೀತಿಯಾಗಿ ನಿಮಗೆ ಯಾವುದೇ ರೀತಿಯ ಬಟ್ಟೆ ಧರಿಸಬಹುದು ಮತ್ತು ಆತ್ಮವಿಶ್ವಾಸವನ್ನು ಕೂಡ ಇದು ಹೆಚ್ಚಿಸುವುದು ಹೊಟ್ಟೆಯ ಕೊಬ್ಬು ಇಳಿಸುವ ಏಳು ವಿಧಾನಗಳ ಬಗ್ಗೆ ನೀವು ತಿಳಿಯಿರಿ.
ಹೊಟ್ಟೆಯ ಕೊಬ್ಬು ಇಳಿಸಿಕೊಳ್ಳುವ ಮೊದಲು ಬಯುಸವವರು ಮುಖ್ಯವಾಗಿ ಪಾಲಿಸಬೇಕಾಗಿರುವಂತಹ ವಿಚಾರವೆಂದರೆ ಅದು ಸರಿಯಾದ ಆಹಾರ ಕ್ರಮ ಮತ್ತು ವ್ಯಾಯಮ. ಹೊಟ್ಟೆಯಲ್ಲಿ ಬೊಜ್ಜು ಆವರಿಸಿಕೊಂಡಿರುವ ಜನರು ಹೆಚ್ಚಾಗಿ ವಿವಿಧ ರೀತಿಯ ವ್ಯಾಯಾಮ ಹಾಗೂ ಆಹಾರ ಕ್ರಮದಲ್ಲಿ ಬದಲಾವಣೆಗಳನ್ನು ಮಾಡಿಕೊಂಡು ಇದನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಬಯಸುವರು. ಆದರೆ ಅವರಿಗೆ ಇದು ಸಾಧ್ಯವಾಗದೆ ಇರುವುದು. ಯಾಕೆಂದರೆ ಕೆಲವು ಜನರು ಸರಿಯಾಗಿ ವ್ಯಾಯಾಮ ಮಾಡಿಕೊಂಡು ಬಂದ ಬಳಿಕ ಸಿಕ್ಕಿದೆಲ್ಲವನ್ನು ತಿನ್ನುವರು. ಇದು ಯಾವುದೇ ರೀತಿಯ ಪ್ರಯೋಜನ ಬೀರದು. ಹೊಟ್ಟೆ ಕೊಬ್ಬು ಕರಗಿಸಲು ವ್ಯಾಯಾಮವು ಅತೀ ಮಹತ್ವದ್ದಾಗಿದೆ ವ್ಯಾಯಾಮದ ಬಗ್ಗೆ ಕೆಳಗೆ ತಿಳಿಸಿಕೊಡಲಿದ್ದೇವೆ. ಇದಕ್ಕೆ ಮೊದಲು ನೀವು ಕೊಬ್ಬು ಕರಗಿಸುವ ಹತ್ತು ಆಹಾರಗಳ ಬಗ್ಗೆ ತಿಳಿಯಿರಿ. ತುಂಬಾ ಖಾರವಾಗಿರುವಂಹತ ಮೆಣಸುಗಳು ಹೊಟ್ಟೆಯ ಕೊಬ್ಬು ಕರಗಿಸುವಲ್ಲಿ ತುಂಬಾ ಮಹತ್ವದ ಪಾತ್ರ ವಹಿಸುವುದು ಮತ್ತು ಹಸಿವನ್ನು ಇದು ಕಡಿಮೆ ಮಾಡುವುದು.
ಇದು ಆರೋಗ್ಯಕಾರಿ ಚಯಾಪಚಯ ಕ್ರಿಯೆ ವೃದ್ಧಿಸುವ ವಿಟಮಿನ್ ಸಿಯನ್ನು ಒದಗಿಸುವುದು. ಪ್ರೋಟೀನ್ ಹೊಂದಿರುವಂತಹ ಮೊಟ್ಟೆಯು ನಿಮ್ಮ ಹಸಿವನ್ನು ನಿಯಂತ್ರಣದಲ್ಲಿ ಇಡುತ್ತದೆ. ಇದರಿಂದಾಗಿ ನೀವು ಕಡಿಮೆ ತಿನ್ನುವಿರಿ ಮತ್ತು ಹೊಟ್ಟೆಯ ಕೊಬ್ಬು ವೇಗವಾಗಿ ಕರಗುವುದು. ಆರೋಗ್ಯಕಾರಿ ಪ್ರೋಟೀನ್ ಸೇವನೆಯಿಂದ ಕೊಬ್ಬು ಕರಗಿಸಿಕೊಳ್ಳಬಹುದು ಎಂದು ಕೆಲವೊಂದು ಅಧ್ಯಯನಗಳು ಹೇಳಿವೆ.ಕೆಲವರು ಹೊಟ್ಟೆ ಕರಗಿಸಬೇಕೆಂದು ಉಪವಾಸ ಕೂಡ ಮಾಡುವರು. ಆದರೆ 20 ದಿನಗಳ ಕಾಲ ಏನೂ ತಿನ್ನದೆ ಇದ್ದರೂ ಅವರಲ್ಲಿ 3-4 ಕಿ.ಲೋ.ತನಕ ತೂಕ ಹೆಚ್ಚಾಗುವುದು ಎಂದು ಅಧ್ಯಯನಗಳು ಹೇಳಿವೆ. ನಿಮ್ಮ ದೇಹ ತೂಕವು ಮಿತಿಗಿಂತ ಹೆಚ್ಚಾಗಿದ್ದರೆ ಆಗ ನೀವು ಕೆಲವೊಂದು ವಿಧಾನಗಳನ್ನು ಪಾಲಿಸಿದರೆ ಅದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು. ನಾವಿಲ್ಲಿ ನಿಮಗೆ ಹೊಟ್ಟೆಯ ಬೊಜ್ಜು ಕರಗಿಸುವಂತಹ ಒಳ್ಳೆಯ ಪಾನೀಯದ ಬಗ್ಗೆ ತಿಳಿಸಿಕೊಡಲಿದ್ದೇವೆ.
ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ ಆಗ ಕೊಬ್ಬು ಜಮೆ ಆಗಿರುವುದು ಕರಗುವುದು. ನೀವು ಜೀರಿಗೆ ಮತ್ತು ಶುಂಠಿ ಹಾಕಿಕೊಂಡು ಪಾನೀಯ ತಯಾರಿಸಿ, ಅದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು ಇದು ಹೊಟ್ಟೆ ಇಳಿಸಿ, ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದಿರುವವರಿಗೆ ಅದ್ಭುತವಾಗಿ ಕೆಲಸ ಮಾಡುವುದು. ಜೀರಿಗೆಯನ್ನು ನಾವೆಲ್ಲರೂ ಹೆಚ್ಚಾಗಿ ಪ್ರತಿಯೊಂದು ಆಹಾರದಲ್ಲೂ ಬಳಕೆ ಮಾಡುತ್ತೇವೆ. ಇದು ಚಯಾಪಚಯ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಇದು ದೇಹದಲ್ಲಿ ಕೊಬ್ಬು ಕರಗಿಸುವ ಪ್ರಕ್ರಿಯೆ ಹೆಚ್ಚಿಸುವುದು ಮತ್ತು ಕೊಬ್ಬು ಜಮೆ ಆಗಿರುವುದನ್ನು ನಿವಾರಣೆ ಮಾಡುವುದು. ಜೀರಿಗೆಯು ಹೊಟ್ಟೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಜೀರ್ಣಕ್ರಿಯೆ, ಹೊಟ್ಟೆ ಉಬ್ಬರ, ಮಲಬದ್ಧತೆ, ಅಸಿಡಿಟಿ ಇತ್ಯಾದಿ ಸಮಸ್ಯೆಗಳನ್ನು ನಿವಾರಣೆ ಮಾಡುವುದು. ಶುಂಠಿಯಲ್ಲಿ ಇರುವಂತಹ ಜಿಂಜರಾಲ್ ಎನ್ನುವ ಅಂಶವು ಉರಿಯೂತ ಶಮನಕಾರಿ ಗುಣವನ್ನು ಹೊಂದಿದೆ ಮತ್ತು ಇದು ಹೊಟ್ಟೆಯನ್ನು ಶುದ್ದೀಕರಿಸುವುದು. ಇದರಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಗುಣಗಳು ಪ್ರತಿರೋಧಕ ಶಕ್ತಿ ವೃದ್ಧಿಸುವುದು ಮತ್ತು ಆಟೋಇಮ್ಯೂನ್ ಕಾಯಿಲೆಗಳ ವಿರುದ್ಧ ಹೋರಾಡುವುದು. ಶುಂಠಿಯನ್ನು ನೀವು ದಿನನಿತ್ಯವೂ ಸೇವಿಸಿದರೆ ಆಗ ಋತುವಿಗೆ ಅನುಗುಣವಾಗಿ ಬರುವ ಜ್ವರದ ಸಮಸ್ಯೆ ನಿವಾರಣೆ ಮಾಡಬಹುದು.