ಟಾಪ್ 2 ಅತ್ಯುತ್ತಮ LIC ಪಿಂಚಣಿ ಯೋಜನೆ //ಜೀವನ್ ಅಕ್ಷಯ್ ಯೋಜನೆ ಮತ್ತು ಶಾಂತಿ ಪೆನ್ಷನ್ ಯೋಜನೆ. ನಮಗೆಲ್ಲರಿಗೂ ಗೊತ್ತಿರುವ ಹಾಗೆ LIC ಪಿಂಚಣಿ ಯೋಜನೆಯಲ್ಲಿ ಹಲವಾರು ಅನುಕೂಲಗಳು ಇದ್ದು LIC ಪ್ರತಿಯೊಬ್ಬರೂ ಕೂಡ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಬಹುದು. ಏಕೆಂದರೆ ಇದರಿಂದ ಮುಂದಿನ ದಿನದಲ್ಲಿ ಹೆಚ್ಚಿನ ಹಣ ಬರುತ್ತದೆ ಹಾಗೂ ಮಧ್ಯ ಮಾರ್ಗ ಏನಾದರೂ ತೊಂದರೆ ಉಂಟಾದರೆ ಅಂತಹ ಸಮಯದಲ್ಲಿ ಹಣದ ಅವಶ್ಯಕತೆ ಇರುವುದರಿಂದ ಆ ಸಮಯದಲ್ಲಿ ಹಣ ಬರುತ್ತದೆ ಎನ್ನುವ ಉದ್ದೇಶದಿಂದ, ಹೆಚ್ಚಿನ ಜನ LIC ಯನ್ನು ಮಾಡಿಸಿಕೊಳ್ಳುತ್ತಾರೆ.
ಅದೇ ರೀತಿಯಾಗಿ LIC ಯಲ್ಲಿ ಹಲವಾರು ವಿಧದ ಯೋಜನೆಗಳು ಇದ್ದು ಅವರಿಗೆ ಯಾವುದು ಅನುಕೂಲವಾಗುತ್ತದೆಯೋ ಅಂತಹ ಯೋಜನೆಯನ್ನು ಆಯ್ಕೆ ಮಾಡಿಕೊಂಡು. ಹಣವನ್ನು ಕಟ್ಟುತ್ತಿರುತ್ತಾರೆ ಎಂದೇ ಹೇಳಬಹುದು. ಅದೇ ರೀತಿಯಾಗಿ ಈ ದಿನ ನಾವು ಹೇಳುತ್ತಿರುವ ಈ ಯೋಜನೆ ಯಾವುದೆಲ್ಲ ರೀತಿಯ ಅನುಕೂಲವನ್ನು ಹೊಂದಿದೆ ಹಾಗೂ ಇವೆರಡು ಯೋಜನೆಗಳು ಯಾವ ರೀತಿಯಾದಂತಹ ಗುಣಲಕ್ಷಣಗಳನ್ನು ಹೊಂದಿದೆ ಇವೆರಡರಲ್ಲಿ ಯಾವುದು ಉತ್ತಮ, ಹಾಗೂ ಯಾವ ಯೋಜನೆಯನ್ನು ನೀವೇ ಆಯ್ಕೆ ಮಾಡಿಕೊಂಡು ಹಣವನ್ನು ಕಟ್ಟುವುದರಿಂದ ಮುಂದಿನ ದಿನದಲ್ಲಿ ಹೆಚ್ಚು ಅನುಕೂಲವನ್ನು ಪಡೆದುಕೊಳ್ಳಬಹುದು ಎನ್ನುವಂತಹ ಮಾಹಿತಿಯ ಬಗ್ಗೆ ತಿಳಿದುಕೊಳ್ಳೋಣ.
ಹಾಗಾದರೆ ಈ ಎರಡು ಯೋಜನೆಗಳ ಹೆಸರು ಯಾವುದು ಎಂದರೆ ಮೊದಲನೆಯದು ನ್ಯೂ ಜೀವನ್ ಶಾಂತಿ ಯೋಜನೆ ಮತ್ತು ಎರಡನೆಯದು ಜೀವನ್ ಅಕ್ಷಯ್ ಯೋಜನೆ ಇವೆರಡು ಯೋಜನೆಗಳು ಕೂಡ LIC ಅಡಿಯಲ್ಲಿ ಬರುತ್ತದೆ. ಹಾಗಾದರೆ ಈ ಯೋಜನೆಗಳನ್ನು ನೀವೇನಾದರೂ ಹಾಕಬೇಕು ಎಂದುಕೊಂಡಿದ್ದರೆ ಯಾವುದೆಲ್ಲ ರೀತಿಯ ನಿಯಮಗಳು ಇರುತ್ತದೆ ಎಂದು ನೋಡುವುದಾದರೆ. ಮೊದಲನೆಯದಾಗಿ ನ್ಯೂ ಜೀವನ್ ಶಾಂತಿ ಯೋಜನೆ.
ಅಡಿಯಲ್ಲಿ ನೀವು ಅರ್ಜಿಯನ್ನು ಹಾಕಬೇಕು ಎಂದಿದ್ದರೆ ನಿಮಗೆ 30 ವರ್ಷ ವಯಸ್ಸಾಗಿರಬೇಕು. ಹಾಗೂ 79 ವರ್ಷ ವಯಸ್ಸಿನ ಒಳಗಿನವರು ಈ ಪಾಲಿಸಿಯನ್ನು ಹಾಕಬಹುದು. ಅದೇ ರೀತಿಯಾಗಿ ಜೀವನ್ ಅಕ್ಷಯ್ ಯೋಜನೆಯಲ್ಲಿ ಕನಿಷ್ಠ 30 ವರ್ಷ ಹಾಗೂ ಗರಿಷ್ಠ 85 ವರ್ಷ ವಯಸ್ಸಿನವರಾಗಿರಬೇಕು. ಜೀವನ್ ಶಾಂತಿ ಯೋಜನೆ ಯಲ್ಲಿ ನೀವು ಎಷ್ಟು ವರ್ಷದ ಮೇಲೆ ನಿಮಗೆ ಪೆನ್ಷನ್ ಬರಬೇಕು ಎಂದು ಆಯ್ಕೆ ಮಾಡಿಕೊಂಡಿರುತ್ತೀರೋ ಆನಂತರ ನಿಮಗೆ ಪೆನ್ಷನ್ ಹಣ ಸಿಗುತ್ತದೆ ಆದರೆ ಜೀವನ್ ಅಕ್ಷಯ್ ಯೋಜನೆ ಯಲ್ಲಿ ನಿಮಗೆ ತಕ್ಷಣವೇ ಪೆನ್ಷನ್ ಹಣ ಸಿಗುತ್ತಾ ಹೋಗುತ್ತದೆ.
ಇವೆರಡು ಪಾಲಿಸಿಯಲ್ಲಿ ನೀವು ಯಾರನ್ನ ಬೇಕಾದರೂ ಸೇರಿಸಿಕೊಳ್ಳಬಹುದು ಅಂದರೆ ನಿಮ್ಮ ಗಂಡ, ಮಗ, ಮಗಳು, ಹೀಗೆ ಯಾರನ್ನಾದರೂ ಕೂಡ ಸೇರಿಸಿಕೊಳ್ಳಬಹುದು ಹಾಗೂ ಈ ಎರಡು ಪಾಲಿಸಿಗಳಲ್ಲಿ ಲೋನ್ ಸೌಕರ್ಯಗಳು ಯಾವ ರೀತಿ ಇದೆ ಎಂದು ನೋಡುವುದಾದರೆ. ಈ ಒಂದು ಯೋಜನೆಗೆ ನೀವು ಅರ್ಜಿಯನ್ನು ಹಾಕಿ 3 ತಿಂಗಳ ನಂತರ ನೀವು ಲೋನ್ ಸೌಕರ್ಯವನ್ನು ಪಡೆಯಬಹುದು.
ಅದೇ ರೀತಿಯಾಗಿ ನ್ಯೂ ಜೀವನ್ ಶಾಂತಿ ಯೋಜನೆ ನೀವು ಆಯ್ಕೆ ಮಾಡಿಕೊಂಡಿದ್ದರೆ ಪಾಲಿಸಿ ಹೋಲ್ಡರ್ ಏನಾದರೂ ನಿ.ಧ.ನ ಹೊಂದಿದರೆ ಅವರು ಡೆಪಾಸಿಟ್ ಮಾಡಿರುವಂತಹ ಹಣ ಸಂಪೂರ್ಣವಾಗಿ ಪಾಲಿಸಿ ಹೋಲ್ಡರ್ ಗೆ ಹೋಗುತ್ತದೆ ಹಾಗೆಯೇ ಜೀವನ್ ಅಕ್ಷಯ್ ಯೋಜನೆ ಯಲ್ಲಿ ಪಾಲಿಸಿ ಹೋಲ್ಡರ್ ಏನಾದರೂ ನಿಧನವಾದರೆ ಅವನು ಯಾರನ್ನು ಆಯ್ಕೆ ಮಾಡಿಕೊಂಡಿರುತ್ತಾನೋ ಪಾಲಿಸಿ ಹೋಲ್ಡರ್ ಆಗಿ ಅವರಿಗಾದರೂ ಹೋಗಬಹುದು ಅಥವಾ ಅವರ ಹೆಸರಿನಲ್ಲಿಯೇ ಇರಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.