ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿರುವುದು ದೇಶದ ಜನರನ್ನು ಸಂಕಷ್ಟಕ್ಕೆ ನೂಕಿದೆ. ಕಳೆದ ಕೆಲವು ದಿನಗಳಿಂದ ಪೆಟ್ರೋಲ್ ಡೀಸೆಲ್ ಬೆಲೆ ಸೇರಿದಂತೆ ಅಡುಗೆ ಅನಿಲದ ಬೆಲೆ, ಆಹಾರ ಪದಾರ್ಥಗಳ ಬೆಲೆ, ತರಕಾರಿ ಪಲ್ಲೆಗಳ ಮತ್ತು ಹಾಲು ಉತ್ಪನ್ನಗಳ ಬೆಲೆಯೂ ಕೂಡ ಹೆಚ್ಚಳವಾಗಿರುವುದು ಮಧ್ಯಮ ಮತ್ತು ಬಡವರ್ಗದ ಜನತೆಯ ಚಿಂತೆಗೆ ಕಾರಣ ಆಗಿದೆ
ಸರ್ಕಾರ ಈ ಬೆಲೆ ನಿಯಂತ್ರಣದ ಬಗ್ಗೆ ಗಮನಹರಿಸಿದ್ದು, ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ಕೂಡ ಎದುರಾಗುತ್ತಿರುವುದರಿಂದ ಸಾಧ್ಯವಾದಷ್ಟು ಬೆಲೆ ಇಳಿಕೆಗೆ ಪ್ರಯತ್ನಿಸುತ್ತಿದೆ. ಇದರ ನಡುವೆ ಕೇಂದ್ರ ಸರ್ಕಾರದಿಂದ ಮತ್ತೊಂದು ಮಹತ್ವದ ಘೋಷಣೆಯಾಗಿದೆ. Kg 25 ರೂಪಾಯಿಗೆ ಭಾರತ್ ರೈಸ್ (Bharath Rice) ಹಂಚಿಕೆ ಮಾಡಲು ಸರ್ಕಾರ ನಿರ್ಧರಿಸಿದೆ.
ಈ ವಿಚಾರ ದೇಶದಾದ್ಯಂತ ಎಲ್ಲರ ಗಮನ ಸೆಳೆದಿದ್ದು ಸರ್ಕಾರದ ಅಧಿಕೃತ ಘೋಷಣೆಗಾಗಿ ಕಾಯುತ್ತಿದ್ದಾರೆ. ಈಗಾಗಲೇ ಬಲವಾದ ಮೂಲಗಳಿಂದ ಬಂದಿರುವ ಮಾಹಿತಿಯ ಪ್ರಕಾರ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು ಈ ಹಿಂದೆಯೂ ಕೂಡ ಭಾರತ್ ಗೋದಿ ಹಿಟ್ಟು (Bharath Atta ) ಹಾಗೂ ಭಾರತ್ ಬೇಳೆಕಾಳುಗಳನ್ನು (Bharath Dal) ಪರಿಚಯಿಸಿ ಯಶಸ್ವಿ ಆಗಿದ್ದ ರಾಜ್ಯ ಸರ್ಕಾರವು ಅಗತ್ಯ ಆಹಾರ ಪದಾರ್ಥವಾದ ಅಕ್ಕಿಯನ್ನು ಕೂಡ ದೇಶಕ್ಕೆ ಪರಿಚಯಿಸಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ಈ ಪ್ರಕಾರವಾಗಿ Kg ಗೆ 25 ರೂಪಾಯಿಗೆ ಭಾರತ್ ಅಕ್ಕಿ ದೊರಕುವಂತಾದರೆ ಎಷ್ಟೋ ಮಧ್ಯಮ ಹಾಗೂ ಬಡವರ್ಗದವರ ಹೊಟ್ಟೆ ತುಂಬಲಿದೆ ಎನ್ನುವುದು ಸರ್ಕಾರದ ವಿಶ್ವಾಸ. ಮುಂದಿನ ದಿನಗಳಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಕೂಡ ಇಳಿಕೆ ಆಗಲಿದೆ ಚುನಾವಣಾ ಪ್ರಣಾಳಿಕೆಯಲ್ಲಿ ಈ ವಿಷಯ ಪ್ರಸ್ತಾಪ ಆಗಬಹುದು ಎಂದು ನಿರೀಕ್ಷಿಸಲಾಗಿದೆ.
ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ (NAFED), ರಾಷ್ಟ್ರೀಯ ಸಹಕಾರಿ ಒಕ್ಕೂಟ ಗ್ರಾಹಕರ ನಿಯಮಿತ (NCCF) ಕೇಂದ್ರೀಯ ಭಂಡಾರ್ ಮಳಿಗೆಗಳು ಮತ್ತು ಮೊಬೈಲ್ ವ್ಯಾನ್ ಗಳಂತಹ ಸರ್ಕಾರಿ ಸಂಸ್ಥೆಗಳ ಮೂಲಕವಾಗಿ ಈ ಭಾರತ್ ಅಕ್ಕಿ ಹಂಚಿಕೆಗೆ ಸಿದ್ಧತೆ ನಡೆಸಲಾಗಿದೆ ಎಂದು ತಿಳಿದು ಬಂದಿದ್ದು, ಅಖಿಲ ಭಾರತ ಸರಾಸರಿ ಚಿಲ್ಲರೆ ಬೆಲೆಯಲ್ಲಿ ಗಮನಾರ್ಹ ಏರಿಕೆ ಮಧ್ಯೆ ಇದಕ್ಕೆ Kg ಗೆ 25 ನಿರ್ಧರಿಸಲಾಗಿದೆ.
ಬಡ ಕುಟುಂಬ ಹಾಗೂ ಮಾಧ್ಯಮ ವರ್ಗದವರಿಗೂ ಇದು ಕೈಗೆಟುಕುವ ಬೆಲೆ ಎಂದು ನಿರ್ಧಾರಕ್ಕೆ ಬರಲಾಗಿದೆ ಭಾರತ್ ಆಟಾ ಕೂಡ Kg ಗೆ ರೂ. 27.50 ಮತ್ತು ಭಾರತ್ ಕಡಲೆ ಕಾಳು Kgಗೆ 60ರೂಪಾಯಿಗೆ ಮಾರಾಟವಾಗುತ್ತಿದೆ ಮತ್ತು ಇದು ಪರಿಚಯವಾದ ದಿನದಿಂದ ಇಂದಿನವರೆಗೂ ಕೂಡ ಗ್ರಾಹಕರಿಂದ ತನ್ನ ಬೇಡಿಕೆಯನ್ನು ಉಳಿಸಿಕೊಂಡು ಅಷ್ಟೇ ಗುಣಮಟ್ಟದಲ್ಲಿ ವಿತರಣೆ ಸಹ ಆಗುತ್ತಿದೆ.
ಹಾಗಾಗಿ ಸರ್ಕಾರದ ನೂತನ ಚಿಂತನೆಯದ ಭಾರತ್ ಅಕ್ಕಿ ಕನಿಷ್ಠ ಬೆಲೆಗೆ ಮಾರಾಟ ಯೋಜನೆ ಕೂಡ ಅಷ್ಟೇ ಯಶಸ್ವಿ ಆಗುತ್ತದೆ ಎನ್ನುವ ಸುಳಿವು ಸಿಗುತ್ತದೆ ಮತ್ತು ಈಗಾಗಲೇ ಈ ಅಕ್ಕಿ ವಿಚಾರವೂ ದೇಶದಾದ್ಯಂತ ಸುದ್ದಿಯಾಗಿದ್ದು, ಅಧಿಕೃತ ಘೋಷಣೆಗಾಗಿ ಎದುರು ನೋಡುತ್ತಿದ್ದಾರೆ.
ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಿ ಬಡವರಿಗೆ ಹಾಗೂ ಮಧ್ಯಮ ವರ್ಗದವರಿಗೆ ಅನುಕೂಲತೆ ಮಾಡಿಕೊಡುವುದೇ ಸರ್ಕಾರದ ಉದ್ದೇಶ ಎಂದು ಕೇಂದ್ರ ಸರ್ಕಾರವು ಹೇಳಿಕೊಂಡಿದೆ ಮತ್ತು ಶೀಘ್ರದಲ್ಲಿ ಭಾರತ್ ಅಕ್ಕಿ ಬಗ್ಗೆ ವಿಷಯ ಪ್ರಸ್ತಾಪವು ಸಹ ಮಾಡಲಿದೆ, ಸರ್ಕಾರದ ಈ ನಿರ್ಧಾರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.