ಜನನ ಮ.ರಣ ನೋಂದಣಿ ಕಡ್ಡಾಯ ಹಾಗೆ ಮನೆಯಲ್ಲಿ ಮಗುವಿನ ಜನನವಾದರೂ ಅಥವಾ ಕುಟುಂಬ ಸದಸ್ಯರಲ್ಲಿ ಮ’ರ’ಣವಾದರೂ ಆ ಜನನ ಪ್ರಮಾಣ ಪತ್ರ ಮತ್ತು ಮರಣ ಪ್ರಮಾಣ ಪತ್ರವನ್ನು ಒಂದು ದಾಖಲೆಯಾಗಿ ಪಡೆದುಕೊಂಡಿರಬೇಕು. ಮುಂದೆ ಮಗುವಿನ ಆಧಾರ್ ಕಾರ್ಡ್ ಮಾಡಿಸುವ ಸಂದರ್ಭದಲ್ಲಿ, ಶಾಲೆ ದಾಖಲಾತಿ ಮಾಡಿಸುವ ಸಂದರ್ಭದಲ್ಲಿ, ಜನನ ಪ್ರಮಾಣ ಪತ್ರದ ಅವಶ್ಯಕತೆ ಬರುತ್ತದೆ.
ಮತ್ತು ಕುಟುಂಬದ ಆಸ್ತಿ ವರ್ಗಾವಣೆ ಅಥವಾ ವ್ಯಕ್ತಿಯ ವಿಮೆಗಳನ್ನು ಕ್ಲೈಮ್ ಮಾಡುವುದು ಅಥವಾ ಇನ್ನಿತರ ಕಾನೂನು ಬದ್ಧ ಚಟುವಟಿಗಳಿಗಾಗಿ ಮೃ’ತರ ಮರಣ ಪ್ರಮಾಣ ಪತ್ರವನ್ನು ದಾಖಲೆಯಾಗಿ ಸಲ್ಲಿಸಬೇಕಾಗಿರುತ್ತದೆ. ಆದರೆ ಇವುಗಳನ್ನು ನೋಂದಣಿ ಮಾಡಿಸಿ ಪ್ರಮಾಣ ಪತ್ರ ಪಡೆಯುವುದೇ ಬಹಳ ಕಷ್ಟದ ಕೆಲಸವಾಗಿದೆ.
ಈ ಸುದ್ದಿ ಓದಿ:- ಪೋಸ್ಟ್ ಆಫೀಸ್ ನಾ ಈ ಯೋಜನೆಯಲ್ಲಿ ಕೇವಲ 36 ರೂಪಾಯಿ ಹೂಡಿಕೆ ಮಾಡಿದರೆ ಸಾಕು, 6 ಲಕ್ಷ ಸಿಗಲಿದೆ
ಯಾಕೆಂದರೆ ಹಳ್ಳಿಗಳಲ್ಲಿ ಇರುವವರು ಇದಕ್ಕಾಗಿ ಪಟ್ಟಣ ಪ್ರದೇಶದಲ್ಲಿರುವ ತಾಲೂಕು ಕಚೇರಿಗಳಿಗೆ ಅಲೆದಾಡಬೇಕು ಹೋದ ಸಮಯಕ್ಕೆ ಅಧಿಕಾರಿಗಳು ಸಿಗದೇ ಇರುವುದು ಅಥವಾ ಸಿಬ್ಬಂದಿಗಳು ಸರಿಯಾಗಿ ಸ್ಪಂದಿಸದೆ ಇರುವುದು ಅಥವಾ ರೈತನಿಗೆ ತನ್ನ ಕಷ್ಟದ ಕಾರಣದಿಂದಾಗಿ ಕಚೇರಿಗಳಿಗೆ ಹೋಗಲು ಆಗದೆ ಇರುವುದು.
ಇನ್ನಿತರ ಹತ್ತಾರು ಕಾರಣಗಳಿಂದಾಗಿ ಜನನ ಮ.ರಣ ಪ್ರಮಾಣ ಪತ್ರ ಪಡೆದುಕೊಳ್ಳಲು ಸಮಸ್ಯೆ ಆಗುತ್ತಿದೆ. ಆದರೆ ಈಗ ಇದಕ್ಕೊಂದು ಪರಿಹಾರವನ್ನು ಕಂಡುಹಿಡಿಯಲಾಗಿದೆ. ಬಹಳ ಸರಳವಾಗಿ, ಸರಾಗವಾಗಿ ಶೀಘ್ರದಲ್ಲಿಯೇ ಜನನ ಮತ್ತು ಮ.ರಣ ಪ್ರಮಾಣ ಪತ್ರ ಪಡೆಯಲು ಅನುಕೂಲತೆ ಆಗಬೇಕು ಎನ್ನುವ ಉದ್ದೇಶದಿಂದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು (RDPR) ಗ್ರಾಮ ಪಂಚಾಯಿತಿಗಳಲ್ಲಿಯೇ ಜನನ ಮ.ರಣ ನೋಂದಣಿ ಮಾಡಿಸಿ ಪ್ರಮಾಣ ಪತ್ರ ನೀಡಲು ನಿರ್ಧರಿಸಿದೆ.
ಈ ಸೇವೆಯನ್ನು ಗ್ರಾಮ ಪಂಚಾಯಿತಿ ಸೇವೆಗಳ ಪಟ್ಟಿಗೆ ಸೇರಿಸಲಾಗಿದ್ದು, ಇದರ ಕುರಿತ ಅಧಿಕೃತ ಮಾಹಿತಿಯನ್ನು ಸ್ವತಃ ಇಲಾಖೆ ಅಧಿಕಾರಿಗಳೇ ಹಂಚಿಕೊಂಡಿದ್ದಾರೆ ಅದರ ವಿವರ ಹೀಗಿದೆ ನೋಡಿ. ಇದುವರೆಗೂ ನಡೆದಿರುವ ಉನ್ನತ ಅಧಿಕಾರಿಗಳನ್ನು ಒಳಗೊಂಡ ಚರ್ಚೆಯ ಪ್ರಕಾರವಾಗಿ ಜನನ ಮ.ರಣ ಸಂಭವಿಸಿದ 30 ದಿನಗಳ ಒಳಗೆ ಇ- ಜನ್ಮ ತಂತ್ರಾಂಶ(e-janma Karnataka) ಮೂಲಕ ಡಿಜಿಟಲ್ ಸಹಿ (Digital Sign) ಒಳಗೊಂಡ ಪ್ರಮಾಣ ಪತ್ರ ನೀಡಲು ನಿರ್ಧರಿಸಲಾಗಿದೆ.
ಈ ಸುದ್ದಿ ಓದಿ:- ಕೇವಲ 18 ಲಕ್ಷಕ್ಕೆ ಯಾವುದೇ ಕ್ವಾಲಿಟಿ ಕಾಂಪ್ರಮೈಸ್ ಇಲ್ಲದೆ ಡುಪ್ಲೆಕ್ಸ್ ಮನೆ ಕಟ್ಟಿದ್ದರೆ ನೋಡಿ.!
ಡಿಜಿಟಲ್ ರೂಪದ ಸಹಿ ನೀಡಲು ಅಧಿಕಾರಿಗಳು ಕೆಲಸದ ಒತ್ತಡ ಅಥವಾ ಇನ್ನಿತರ ಕಾರಣಗಳನ್ನು ಕೊಟ್ಟು ಸಬೂಬು ನೀಡುವಂತಿಲ್ಲ. ಮತ್ತೊಂದು ಪ್ರಮುಖ ಬದಲಾವಣೆ ಏನೆಂದರೆ PDO ಗಳನ್ನು ಜನನ ಮರಣ ಪ್ರಮಾಣ ಪತ್ರ ನೋಂದಣಾಧಿಕಾರಿಗಳನ್ನಾಗಿ ನೇಮಿಸುವ ಬದಲು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಿಗೆ (Gram Panchayath secretary) ಈ ಹೊಣೆ ನೀಡಲಾಗಿದೆ.
ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಉಪನೋಂದಣಾಧಿಕಾರಿಗಳಾಗುತ್ತಾರೆ. 30 ದಿನಗಳ ಒಳಗೆ ಅರ್ಜಿ ಸಲ್ಲಿಸಿದರೆ ಇವರ ಸಹಿ ಒಳಗೊಂಡ ಪ್ರಮಾಣ ಪತ್ರ ಶೀಘ್ರವಾಗಿ ಸಿಗಲಿದೆ. 30 ದಿನಗಳು ಆದ ಬಳಿಕ ನೋಂದಣಿ ಮಾಡಿಸಿದರೆ ಗ್ರಾಮ ಲೆಕ್ಕಾಧಿಕಾರಿಗಳು (VO) ನೊಂದಣಾಧಿಕಾರಿಗಳಾಗುತ್ತಾರೆ ಇವರ ಬಳಿ ನೋಂದಣಿ ಮಾಡಿಸಿ ಪ್ರಮಾಣ ಪತ್ರ ಪಡೆಯಬಹುದು.
ಈ ಸುದ್ದಿ ಓದಿ:- IDBI ನೇಮಕಾತಿ 2024, ಬ್ಯಾಂಕ್ ನಲ್ಲಿ ಉದ್ಯೋಗ ಮಾಡಲು ಬಯಸುವವರಿಗೆ ಸುವರ್ಣ ಅವಕಾಶ ತಪ್ಪದೇ ಅರ್ಜಿ ಸಲ್ಲಿಸಿ. ವೇತನ 1.6 ಲಕ್ಷ
ರಾಜ್ಯದ 5950 ಗ್ರಾಮ ಪಂಚಾಯಿತಿಗಳಲ್ಲಿ ಕೂಡ ಈ ಸೇವೆಗಳು ಸಿಗಲಿದೆ. ಮುಂದಿನ ದಿನಗಳಲ್ಲಿ ವಿವಾಹ ನೋಂದಣಿ ಕೂಡ ಇದೇ ಮಾದರಿಯಲ್ಲಿ ನಡೆಯುವುದಕ್ಕೆ ತರಬೇತಿ ನೀಡುವ ಬಗ್ಗೆ ಚಿಂತನೆ ನಡೆಯುತ್ತಿದೆ. ಲೋಕಸಭಾ ಚುನಾವಣೆ ಮುಗಿದ ನಂತರ ಈ ಬಗ್ಗೆ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗುತ್ತದೆ ನಂತರ ಅಧಿಕೃತವಾಗಿ ಇಲಾಖೆ ವತಿಯಿಂದ ಘೋಷಣೆ ಮಾಡುತ್ತೇವೆ ಎನ್ನುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.