ತೋಟಗಾರಿಕೆ ಕೃಷಿ ಮಾಡಬೇಕು ಎಂದು ಆಸೆ ಪಡುವ ರೈತ ತನಗಿರುವ ಮಳೆಯಾಶ್ರಿತ ಕೃಷಿ ಭೂಮಿಯಲ್ಲಿ ಬೋರ್ವೆಲ್ ಮಾಡಿಸಿ ನೀರು ತರೆಸುತ್ತಾನೆ. ಈ ರೀತಿ ನೀರಿನ ಸೆಲೆಯನ್ನು ಹುಡುಕಿ ಮೋರ್ವೆಲ್ ಹಾಕಿಸಿ ತೋಟಗಾರಿಕೆ ಕೃಷಿ ಮಾಡಿದರೆ ರೈತನಿಗೆ ಹಾಗೂ ದೇಶಕ್ಕೂ ಕೂಡ ಸಹಾಯವಾಗುತ್ತದೆ. ದೇಶದಲ್ಲಿ ಆಹಾರದ ಉತ್ಪಾದನೆ ಹೆಚ್ಚಾಗುತ್ತದೆ ಮತ್ತು ಉದ್ಯೋಗ ಸೃಷ್ಟಿ ಆಗುತ್ತದೆ.
ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳ ಖರೀದಿ ಹೆಚ್ಚಾಗಿ ಈ ರೀತಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ದೇಶಕ್ಕೆ ಅನುಕೂಲವಾಗುತ್ತದೆ. ರೈತನಿಗೂ ಕೂಡ ತನ್ನ ಆದಾಯ ಹೆಚ್ಚುತ್ತದೆ ಹೆಚ್ಚು ಬೆಳೆ ಅಥವಾ ಪರ್ಯಾಯ ಬೆಳೆಗಳನ್ನು ಬೆಳೆದು ಆತ ಹೆಚ್ಚು ಆದಾಯ ಮಾಡಿ ಕುಟುಂಬ ನಿರ್ವಹಣೆಯನ್ನು ಮಾಡಲು ಮತ್ತು ಉತ್ತಮ ಗುಣಮಟ್ಟದ ಜೀವನ ನಡೆಸುವುದರಿಂದ ದೇಶದ ಆದಾಯವನ್ನು ಕೂಡ ಹೆಚ್ಚಿಸುತ್ತಾನೆ.
ಈ ರೀತಿಯಾಗಿ ತೋಟಗಾರಿಕೆ ಕೃಷಿ ಮಾಡಲು ಮೊದಲಿಗೆ ಮುಖ್ಯವಾಗಿ ಅವಶ್ಯಕತೆ ಇರುವುದು ನೀರಿನದ್ದು ಹಾಗಾಗಿ ನೀರಿಗಾಗಿ ಬೋರ್ವೆಲ್ ಕೊರಸಿ ನೀರು ತೆಗೆಸಲೇಬೇಕು. ಇತ್ತೀಚಿನ ದಿನಗಳಲ್ಲಿ ಈ ರೀತಿ ಬೋರ್ವೆಲ್ ಕೊರೆಸಲು ಆಧುನಿಕ ಯಂತ್ರೋಪಕರಣಗಳ ಮೊರೆ ಹೋಗುತ್ತಾರೆ. ಜೆಯೋಲಜಿಸ್ಟ್ ಗಳ ಬಳಿ ಸಹಾಯ ಕೇಳಿ ಬೋರ್ವೆಲ್ ತೆಗೆಸುವವರು ಇದ್ದಾರೆ.
ಯಾಕೆಂದರೆ ಬೋರ್ವೆಲ್ ಕೊರೆಸುವುದು ಬಹಳ ಸುಲಭವಾಗಿದ್ದರು ಅದಕ್ಕೆ ತಗಲುವ ಖರ್ಚು ದೊಡ್ಡ ಮೊತ್ತದ್ದು. ಒಂದು ವೇಳೆ ಅದು ಫೇಲ್ ಆದರೆ ರೈತನನ್ನು ಸಾಲಗಾರನನ್ನಾಗಿ ಬಿಡುತ್ತದೆ. ಈ ಕಾರಣದಿಂದ ಬಡ ರೈತರು ತಮ್ಮ ಜಮೀನಿನಲ್ಲಿ ಕೊಳವೆಬಾವಿ ನಿರ್ಮಿಸಬೇಕು ಎಂದು ಆಸೆ ಪಟ್ಟರು ಕೂಡ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.
ಸರ್ಕಾರಗಳು ಕೂಡ ರೈತನಿಗೆ ಸಹಾಯ ಮಾಡುತ್ತವೆ. ಗಂಗಾ ಕಲ್ಯಾಣ ಯೋಜನೆ ಮೂಲಕ ಕೆಲ ವರ್ಗದವರಿಗೆ ಉಚಿತವಾಗಿ ಬೋರ್ವೆಲ್ ಕೊರೆಸಿಕೊಡಲಾಗುತ್ತದೆ. ಇನ್ನುಳಿದವರು ಈ ವಿಷಯದಲ್ಲಿ ಫೇಲಾದರೆ ಸಾಲದ ಹೊರೆ ಹೊರಬಹುದು ಎನ್ನುವ ಕಾರಣಕ್ಕಾಗಿ ಸ್ಕ್ಯಾನಿಂಗ್ ಮಾಡಿಸಿ ಗ್ರಾಫ್ ಹಾಕಿಸಿ ತಜ್ಞರು ಸಲಹೆ ಪಡೆದು ಬೋರ್ ಕೊರೆಸುತ್ತಾರೆ.
ಆದರೆ ಈ ರೀತಿ ಎಷ್ಟೇ ಆಧುನಿಕ ಯಂತ್ರೋಪಕರಣಗಳನ್ನು ಬಳಸಿಕೊಂಡು ನೀರಿನ ಸೆಲೆ ಕಂಡುಹಿಡಿದರು ಕೂಡ ಯಾರು ನೂರಕ್ಕೆ ನೂರರಷ್ಟು ಭರವಸೆ ಕೊಡಲಾರರು. ಆದರೆ ನಮ್ಮ ಹಳ್ಳಿಗಳಲ್ಲಿ ಮತ್ತೊಂದು ವ್ಯವಸ್ಥೆ ಇದೆ. ನೀರಿನ ಸೆಲೆಯನ್ನು ಕಂಡು ಹಿಡಿಯಬಲ್ಲಹ ಟೆಕ್ನಿಕ್ ಗೊತ್ತಿರುವವರು ತಮಗೆ ತಿಳಿದಿರುವಂತಹ ರೀತಿಯಲ್ಲಿ ನೀರಿನ ಪಾಯಿಂಟ್ ಗಳನ್ನು ಗುರುತಿಸಿ ಕೊಡುತ್ತಾರೆ.
ಅವರು ಹೇಳಿದ ಕಡೆ ಬೋರ್ವೆಲ್ ಹಾಕಿದರೆ ಗ್ಯಾರೆಂಟಿಯಾಗಿ ನೀರು ಬಂದೇ ಬರುತ್ತದೆ. ಹಾಗಾಗಿ ಇಂತಹವರನ್ನು ಕರೆದುಕೊಂಡು ಹೋಗಿ ಜಮೀನಿನಲ್ಲಿ ಪಾಯಿಂಟ್ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ ಆದರೆ ಎಲ್ಲರಿಗೂ ಕೂಡ ಇದು ಬರುವುದಿಲ್ಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ಅಷ್ಟು ನಿಖರವಾಗಿ ಈ ರೀತಿ ನೀರನ್ನು ಸೆಲೆಗಳನ್ನು ಹುಡುಕಿ ಕೊಡುತ್ತಾರೆ.
ಮೈಸೂರು ಮೂಲದ ಸುಪ್ರೀತ್ ಎನ್ನುವ ಒಬ್ಬ ವ್ಯಕ್ತಿಯು ಎಲ್ ಶೇಪ್ ರಾಡ್ ಮತ್ತು ಒಂದು ಬೆಳ್ಳಿ ಸರ ಹಾಗೂ ತೆಂಗಿನಕಾಯಿ ಮತ್ತು ಇಯರ್ ಫೋನ್ ಮೂಲಕ ನೀರಿನ ಸೆಲೆಯನ್ನು ಗುರುತಿಸಿ ಪಾಯಿಂಟ್ ಮಾಡಿಕೊಡುತ್ತಾರೆ. ಇವರ ಕೆಲಸದ ಬಗ್ಗೆ ಇವರಿಗೆ ಎಷ್ಟು ಗ್ಯಾರಂಟಿ ಇದೆ ಎಂದರೆ ಚಾಲೆಂಜ್ ಮಾಡಿ ಚಾಲೆಂಜ್ ಬೋರ್ವೆಲ್ ಪಾಯಿಂಟ್ ಗಳನ್ನು ಕೂಡ ಗುರುತಿಸಿ ಕೊಡುತ್ತಾರೆ.
ಅಲ್ಲದೆ ಸ್ಥಳದಲ್ಲಿಯೇ ನಿಂತು ನೀರು ಬರುವವರೆಗೂ ಕೂಡ ಕಾದು ನೋಡಿ ಹೋಗುತ್ತಾರೆ. ಇವರಿಗೆ ದೇವರಿಂದ ಸಿಕ್ಕಿರುವ ಆಶೀರ್ವಾದ ಎಂದು ಭಾವಿಸಿರುವ ಇವರು ರೈತನಿಗೆ ಆಗುವ ನಷ್ಟವನ್ನು ತಡೆಯುವುದಕ್ಕಾಗಿ ನನ್ನಲ್ಲಿರುವ ಶಕ್ತಿಯನ್ನು ಬಳಸಿಕೊಂಡು ತನ್ನ ಕೈಲಾದ ಪ್ರಯತ್ನ ಮಾಡುತ್ತೇನೆ ಎನ್ನುವ ಉಧಾರದ ಮಾತುಗಳನ್ನು ಆಡುತ್ತಾರೆ. ಇವರ ಈ ಟೆಕ್ನಿಕ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.