ಇತ್ತೀಚಿಗೆ ಎಲ್ಲಾ ವಾಹನ ತಯಾರಿಕ ಕಂಪನಿಗಳು ತಮ್ಮ ಬೈಕ್ ಗಳ ಖರೀದಿಯ ಮೇಲೆ ಭಿನ್ನವಿಭಿನ್ನ ಆಫರ್ ಗಳನ್ನು ಬಿಡುಗಡೆಗೊಳಿಸಿ ತಮ್ಮ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿವೆ. ಶೋರೂಮ್ ನಲ್ಲಿ ಈ ಬೈಕ್ ಗಳ ಖರೀದಿ ಮೇಲೆ ವಿಶೇಷ ಸಂದರ್ಭಗಳಲ್ಲಿ ಡಿಸ್ಕೌಂಟ್ ಆಫರ್, ಬೈಕ್ ಗಳನ್ನು ಖರೀದಿಸುವುದಕ್ಕೆ ಲೋನ್ ಫೆಸಿಲಿಟಿ ಇತ್ಯಾದಿಗಳನ್ನು ಮಾಡಿಕೊಡುವುದು ಮಾತ್ರವಲ್ಲದೆ.
ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಈಗ ಆನ್ಲೈನ್ ನಲ್ಲಿ ಕಂಪನಿಗಳ ವೆಬ್ಸೈಟ್ ಮೂಲಕ ಸೆಕೆಂಡ್ ಹ್ಯಾಂಡ್ ಮಾದರಿಯ ಬೈಕ್ ಗಳನ್ನೂ ಸುಲಭವಾಗಿ ಖರೀದಿಸಬಹುದಾಗಿದೆ. ಕಡಿಮೆ ಬಳಕೆಯಾಗಿರುವ ಬೈಕ್ ಗಳು ಆನ್ಲೈನ್ ನ OLX ನಂತಹ ವಿವಿಧ ವೆಬ್ ಸೈಟ್ ಗಳಲ್ಲಿ ಮತ್ತು ಕಂಪನಿಯ ವೆಬ್ಸೈಟ್ ನಲ್ಲಿಯೂ ಕೂಡ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಸಿಗುತ್ತಿದೆ.
ಅಂತೆಯೇ ದೇಶದ ಪ್ರತಿಷ್ಠಿತ ದ್ವಿಚಕ್ರ ವಾಹನ ಕಂಪನಿಯಾದ Hero MotorCorp Company ಸದಾ ಬೇಡಿಕೆಯಲ್ಲಿ ಮಾಡೆಲ್ ಗಳನ್ನು ಪರಿಚಯಿಸುತ್ತಿರುತ್ತದೆ ಮತ್ತು ಈ ಕಂಪನಿಯ ಮಾಡಲ್ ಗಳು ಸದಾ ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿ ಇರುತ್ತವೆ.
ಇದರ ನಡುವೆ ಕೂಡ ದ್ವಿ ಚಕ್ರ ವಾಹನಗಳ ಮಾರಾಟದಲ್ಲೂ ಕೂಡ ಹೀರೋ ಕಂಪನಿ ಮುಂದಿದ್ದು ಇದರಲ್ಲಿ ಪ್ರಸ್ತುತವಾಗಿ ಸೆಕೆಂಡ್ ಹ್ಯಾಂಡ್ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಗಳು (Second hand Hero splendor plus bikes ) ಹೆಚ್ಚಾಗಿ ಸೇಲ್ ಆಗುತ್ತಿದೆ.
Hero Splendor Plus ಬೈಕ್ ನ ಶೋ ರೂಂ ಬೆಲೆಯು 76,346 ರೂ. ಆಗಿದೆ. ಆದರೆ ನೀವು ಈ ಬೆಲೆಯ ಬಗ್ಗೆ ತಲೆಕೆಡಿಸಿಕೊಳ್ಳದೆ ಇದಕ್ಕಿಂತ ಕಡಿಮೆ ಬೆಲೆಗೆ ವಿವಿಧ ಆನ್ಲೈನ್ ಸೆಕೆಂಡ್ ಹ್ಯಾಂಡಲ್ ಸೇಲ್ ಫ್ಲಾಟ್ ಫಾರ್ಮ್ ಗಳಲ್ಲಿ ಬಹಳ ಅಗ್ಗದ ಬೆಲೆಯಲ್ಲಿ ಖರೀದಿಸಬಹುದು.
ಹೊಸ ವರ್ಷದ ಈ ಸಂದರ್ಭದಲ್ಲಿ Hero Splendor Plus ವ ಬೈಕ್ ಯಾವ ಆಫರ್ ನಲ್ಲಿ ಸಿಗುತ್ತಿದೆ ಎನ್ನುವ ಬಗ್ಗೆ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಇವೆಲ್ಲವೂ ಕೂಡ ಕಡಿಮೆ ಬಳಕೆಯಾಗಿ ಉತ್ತಮ ಸ್ಥಿತಿಯಲ್ಲಿ ಇರುವ ಬೈಕ್ ಗಳಾಗಿವೆ, ಆಸಕ್ತಿ ಇದ್ದವರು ಈ ವೆಬ್ ಸೈಟ್ ಗಳಿಗೆ ಭೇಟಿ ಕೊಟ್ಟು ಈ ಆಫರ್ ಗಳ ಪ್ರಯೋಜನ ಪಡೆದುಕೊಳ್ಳಿ.
1. ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ನ 2014 ರ ಮಾದರಿಯು DROOM ವೆಬ್ ಸೈಟ್ ನಲ್ಲಿ ಖರೀದಿಗೆ ಲಭ್ಯವಿದೆ. ನೀವು 2014 ರ ಮಾದರಿಯನ್ನು ಕೇವಲ 25,000 ರೂ. ನಲ್ಲಿ ಖರೀದಿಸಬಹುದು. ಇದರ ಜೊತೆಗೆ ಸಿಗುತ್ತಿರುವ ಮತ್ತೊಂದು ಅನುಕೂಲತೆ ಏನೆಂದರೆ , ಈ ಸೆಕೆಂಡ್ ಹ್ಯಾಂಡ್ ಬೈಕ್ ನ್ನು ಕೂಡ EMI ಆಪ್ಷನ್ ನಲ್ಲಿ ಖರೀದಿಸಬಹುದು.
2. ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ನ 2015 ರ ಮಾದರಿಯು QUIKR ವೆಬ್ ಸೈಟ್ ನಲ್ಲಿ ಮಾರಾಟಕ್ಕಿದೆ. ಈ ಬೈಕ್ ನ್ನು ನೀವು ಕೇವಲ 30,000 ರೂ. ನಲ್ಲಿ ಖರೀದಿಸಬಹುದಾಗಿದೆ. ಇದನ್ನು ಕೂಡ EMI ಆಯ್ಕೆಯಲ್ಲಿ ಖರೀದಿಸಲು ಅವಕಾಶವಿದೆ.
3. ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ನ 2012 ರ ಮಾದರಿಯು ಬೈಕ್ OLX ವೆಬ್ ಸೈಟ್ ನಲ್ಲಿ ಮಾರಾಟಕ್ಕೆ ಇದೆ. ಈ ಮಾಡೆಲ್ ಬೈಕ್ ನ್ನು ಕೇವಲ ರೂ. 20,000 ಗೆ ಖರೀದಿಸಬಹುದು. ಈ ಬೈಕ್ ನ್ನು ಕೂಡ EMI ನಲ್ಲಿ ಖರೀದಿಸಲು ಅವಕಾಶ ಮಾಡಿಕೊಡಲಾಗಿದೆ.