ಹಳ್ಳಿ ಊಟ ಚಂದ ಪೇಟೆ ನೋಟ ಚೆನ್ನ ಎನ್ನುವ ಗಾದೆ ಇತ್ತು. ಸದ್ಯಕ್ಕೆ ಆ ಗಾದೆಯನ್ನು ಹಳ್ಳಿ ನೋಟವೂ ಕೂಡ ಚಂದವೇ ಚಂದ ಎಂದು ಬದಲಾಯಿಸಿದರೆ ತಪ್ಪಾಗುವುದಿಲ್ಲ. ಯಾಕೆಂದರೆ ಈಗ ಕಾಲ ಸಾಕಷ್ಟು ಬದಲಾಗಿ ಹೋಗಿದೆ. ಆಗಿನ ಕಾಲದಲ್ಲಿ ಮನೆಯಲ್ಲಿ ಮೂರು ಜನ ಮಕ್ಕಳಿದ್ದರೆ ಓದಿದ ವಿದ್ಯಾವಂತನಾದ ಒಬ್ಬ ಮಗ ಪಟ್ಟಣಕ್ಕೆ ಹೋಗಿ ತನ್ನ ದುಡಿಮೆಯ ಹಣವನ್ನು ಹಳ್ಳಿಯಲ್ಲಿರುವ ತಂದೆ ತಾಯಿ ಕುಟುಂಬಕ್ಕಾಗಿ ಕಳುಹಿಸುತ್ತಿದ್ದ.
ಆದರೆ ಈಗ ಗಂಡು ಮಕ್ಕಳು ಮಾತ್ರವಲ್ಲದೆ ಹೆಣ್ಣು ಮಕ್ಕಳು ಕೂಡ ವಿದ್ಯಾಭ್ಯಾಸ ಮುಗಿದ ತಕ್ಷಣ ಪಟ್ಟಣ ಸೇರುತ್ತಿದ್ದಾರೆ ಆದರೆ ಈ ಬದುಕು ಕೆಲವೇ ದಿನಗಳಲ್ಲಿ ನರಕ ಎನಿಸಿಬಿಡುತ್ತದೆ. ಸಿಟಿಯಲ್ಲಿನ ಪೊಲ್ಲ್ಯೂಷನ್, ಟೆನ್ಶನ್ ಲೈಫ್ ಸ್ಟೈಲ್ ಬೋರಾಗಿ ಸುಸ್ತಾಗಿ ಮತ್ತೆ ನಮ್ಮ ಹಳ್ಳಿಗೆ ಹೋಗಿ ಬಿಡಬೇಕು ಎನಿಸದೇ ಇರದು ಈ ರೀತಿ ಬದಲಾದ ಎಷ್ಟೋ ಜನ ಇಂದು ಸಿಟಿ ಬಿಟ್ಟು ಮತ್ತೆ ಹಳ್ಳಿ ಸೇರುತ್ತಿದ್ದಾರೆ.
ಈ ಸುದ್ದಿ ಓದಿ:-ಜಮೀನು ರಿಜಿಸ್ಟರ್ ಆದ ಮೇಲೆ ಮ್ಯೂಟೇಷನ್ ಪ್ರಕ್ರಿಯೆ ಹೇಗೆ ನಡೆಯುತ್ತದೆ ನೋಡಿ.!
ತಾವು ಪಡೆಯುತ್ತಿದ್ದ ಲಕ್ಷ ಸಂಬಳದ ಉದ್ಯೋಗಕ್ಕೆ ಗುಡ್ ಬೈ ಹೇಳಿ ಹಳ್ಳಿಗಳಲ್ಲಿ ಹಳ್ಳಿಗರೆ ಅಚ್ಚರಿ ಪಡುವ ರೀತಿ ಬದುಕುತ್ತಿದ್ದಾರೆ. ಸಾಮಾನ್ಯವಾಗಿ ಹಳ್ಳಿಯಲ್ಲಿ ಇರುವವರಿಗೆ ಪಟ್ಟಣದ ಆಕರ್ಷಣೆ ಇದ್ದೇ ಇರುತ್ತದೆ ಆದರೆ ಒಮ್ಮೆ ಸಿಟಿಗೆ ಹೋಗಿ ಬಂದವರು ಹಳ್ಳಿಯ ವ್ಯಾಲ್ಯೂವನ್ನು ಹಳ್ಳಿಯಲ್ಲಿ ಇದ್ದವರಿಗಿಂತ ಹೆಚ್ಚಾಗಿ ಅರಿತುಕೊಂಡಿರುತ್ತಾರೆ.
ಹೀಗೆ ವಾಪಸ್ ಆದ ಮೇಲೆ ಕಡಿಮೆ ಖರ್ಚಿನಲ್ಲಿ ಮನೆ ನಡೆಸುವುದು ಆರ್ಗನಾಕ್ ಆಗಿರುವ ಆಹಾರ ಪದಾರ್ಥಗಳನ್ನು ಬಳಸುವುದು ಯಾವುದೇ ಪದಾರ್ಥಗಳನ್ನು ವೇಸ್ಟ್ ಮಾಡದೆ ಇರುವುದು ಈ ಎಲ್ಲಾ ಬುದ್ಧಿ ಚೆನ್ನಾಗಿ ಬಂದಿರುತ್ತದೆ. ನೀವು ಕೂಡ ಹೀಗೆ ಆಲೋಚಿಸಿ ಹಳ್ಳಿಗೆ ಹೋಗಿ ಹಳ್ಳಿ ರೀತಿಯಲ್ಲಿಯೇ ತೊಟ್ಟಿ ಮನೆಯಲ್ಲಿ ಇದ್ದುಕೊಂಡು ಹೊಲಗದ್ದೆಯಲ್ಲಿ ಕೆಲಸ ಮಾಡಿಕೊಂಡು ಬದುಕಬೇಕು ಎನ್ನುತ್ತಿದ್ದರೆ ಇದಕ್ಕೆ ಬಜೆಟ್ ಎಷ್ಟಾಗಬಹುದು ಎನ್ನುವ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.
ಈ ಸುದ್ದಿ ಓದಿ:-ಲಾಭದಾಯಕ ಸೇವಂತಿಗೆ ಹೂವಿನ ಕೃಷಿ ಮಾಡಿ, ಮೊದಲ ಇಳುವರಿಯಲ್ಲಿಯೇ 7.5 ಲಕ್ಷ ಲಾಭ ಪಡೆಯಬಹುದು.!
ಬೆಂಗಳೂರಿನ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ವ್ಯಕ್ತಿಯೊಬ್ಬರು ಈಗ ಮೈಸೂರಿನ ಪಕ್ಕದ ಹಳ್ಳಿ ಒಂದರಲ್ಲಿ ತಮ್ಮ ಜಮೀನಿನಲ್ಲಿ ಕಡಿಮೆ ಬಜೆಟ್ ನಲ್ಲಿ ತೊಟ್ಟಿ ಮನೆ ಕಟ್ಟಿಕೊಂಡು ಸುಂದರವಾದ ಜೀವನವನ್ನು ನಡೆಸುತ್ತಿದ್ದಾರೆ. ಆ ತೊಟ್ಟಿ ಮನೆ ಬಜೆಟ್ ಬಗ್ಗೆ ಈ ಆಸಕ್ತಿ ಬಳಸಿಕೊಂಡ ಬಗ್ಗೆ ಇವರು ಹೇಳುವುದೇನೆಂದರೆ,
ಮೊದಲಿಗೆ ನಾನು ನನ್ನ ಮಗ ಚಿಕ್ಕವನಿದ್ದಾಗ ಅವನಿಗೆ ಟೈಮ್ ಕೊಡಲಾಗುತ್ತಿಲ್ಲ ಕೆಲಸ ಬಿಡಬೇಕು ಎಂದು ನಿರ್ಧಾರ ಮಾಡಿದ್ದೆ ಬಳಿಕ ಹೋಗಿ ಕೃಷಿ ಮಾಡಬೇಕು ಎನ್ನುವುದು ಫಿಕ್ಸ್ ಆಯಿತು. ನನ್ನ ಹೆಂಡತಿ ಎಲ್ಲದಕ್ಕೂ ಸಹಕಾರ ನೀಡಿದಳು ಆಗಾಗ ವಾರಾಂತ್ಯದಲ್ಲಿ ಬಂದು ಇಲ್ಲಿ ಕೃಷಿ ನೋಡಿಕೊಳ್ಳುತ್ತಿದ್ದೆ ಹಾಗೆ ಮನೆ ಕಟ್ಟಿಸಲು ಆರಂಭಿಸಿದೆ.
ಈ ಸುದ್ದಿ ಓದಿ:-ಪೋಸ್ಟ್ ಆಫೀಸ್ ನಿಂದ ಪ್ರತಿ ತಿಂಗಳು 20,500 ರೂ ಬಡ್ಡಿ ಪಡೆಯುವ ಹೊಸ ಸ್ಕೀಮ್ ಜಾರಿ.!
45*45 ಅಳತೆಯ 1800sq.ft ಮನೆಯನ್ನು ನಾಲ್ಕೈದು ವರ್ಷದ ಹಿಂದೆ 13 ಲಕ್ಷ ಬಜೆಟ್ ನಲ್ಲಿ ಪೂರ್ತಿ ಮಾಡಿದ್ದೆ ಯಾವುದೇ ಇಂಜಿನಿಯರ್ ಐಡಿಯಾ ಇಲ್ಲ ನಾನೇ ನನಗೆ ಹೇಗೆ ತೋಚುತ್ತದೆ ಹಾಗೆ ಮಾಡಿದ್ದು ಸುಸ್ಥಿರ ಮನೆ ಎನ್ನುವ ಕಾನ್ಸೆಪ್ಟ್ ಇತ್ತು. ಸೋಲಾರ್ ಬಳಸುತ್ತೇವೆ ಟಿವಿ ಇಲ್ಲ, ಫ್ರಿಡ್ಜ್ ಇಲ್ಲ ಹಾಗಾಗಿ ಮನೆ ಒಳಗೆ ತೊಟ್ಟಿಯಲ್ಲಿ ಬೀಳುವ ನೀರನ್ನು ಹಾರ್ವೆಸ್ಟಿಂಗ್ ಮಾಡಿದ್ದೇವೆ.
ಈ ನೀರನ್ನು ಮನೆ ಕೆಲಸಕ್ಕೆ ಹೊರಗೆ ಕೃಷಿಗೆ ಬಳಸಬಹುದು ಮಕ್ಕಳಿಗೆ ಬೇಕಾದಾಗ ಸ್ವಿಮ್ಮಿಂಗ್ ಪೂಲ್ ಮಾಡಿಕೊಳ್ಳಬಹುದು. ಮನೆ ಒಳಗೆ ಕೊಳದ ರೀತಿ ನೋಟ ಕೂಡ ಚೆನ್ನಾಗಿರುತ್ತದೆ. ಮಳೆ ಬಂದಾಗ ಮನೆ ಒಳಗಿದ್ದೇವೋ ಹೊರಗಿದ್ದೆವೋ ಗೊತ್ತೇ ಆಗುವುದಿಲ್ಲ, ಅಷ್ಟು ಚೆನ್ನಾಗಿರುತ್ತದೆ. ಮನೆ ಒಳಗೆ ತೊಟ್ಟಿ ಸುತ್ತ ನಾಲ್ಕು ಸುತ್ತಳತೆಯಲ್ಲಿ ಒಂದು ಕಡೆ ದೇವರ ಮನೆ ಹಾಗೂ ಗೆಸ್ಟ್ ರೂಮ್ ಇದೆ ಇನ್ನೊಂದು ಕಡೆ ಎರಡು ಬೆಡ್ ರೂಮ್ ಇದೆ ಮತ್ತೊಂದು ಕಡೆ ಪೂರ್ತಿ ಹಾಲ್ ಮತ್ತೊಂದರಲ್ಲಿ ಅಡುಗೆ ಮನೆ ಹಾಗೂ ಮಕ್ಕಳಿಗೆ ಸ್ಟಡಿ ರೂಮ್ ಇದೆ.
ಈ ಸುದ್ದಿ ಓದಿ:-ಸೈಟ್ ಖರೀದಿ ಮಾಡುವ ಮುನ್ನ ಈ ದಾಖಲೆ ಪರಿಶೀಲನೆ ಮಾಡುವುದು ಕಡ್ಡಾಯ.!
ಎಲ್ಲವೂ ಓಪನ್ ಸ್ಪೇಸ್ ಅವಶ್ಯಕತೆ ಇರುವಲ್ಲಿ ಮಾತ್ರ ಹೆಚ್ಚು ವಿಂಡೋ ಬಳಸಿದ್ದೇವೆ 15 ಫೀಟ್ ಎತ್ತರದಲ್ಲಿ ಶೀಟ್ ಹಾಕಿಸಿದ್ದೇನೆ. ನೆಲಕ್ಕೆ ರೆಡ್ ಆಕ್ಸೈಡ್ ಬಳಸಿದ್ದೇವೆ ಬಜೆಟ್ ಕೂಡ ಆರೋಗ್ಯಕ್ಕೂ ಒಳ್ಳೆಯದು. ವಾಲ್ ಗಳು ಸಂಪೂರ್ಣವಾಗಿ ಮಡ್ ಇಂದ ಮಾಡಿರುವ ಬ್ರಿಕ್ಸ್ ಗಳಾಗಿವೆ ಇದಕ್ಕೆ ಯಾವುದೇ ಪ್ಲಾಸ್ಟರಿಂಗ್ ಆಗಲಿ ಸಿಮೆಂಟ್ ಆಗಲಿ ಹಾಕಿಸಿಲ್ಲ ಇದನ್ನು ಬ್ರಿಥಿಂಗ್ ಬ್ರಿಕ್ಸ್ ಎಂದು ಕೂಡ ಕರೆಯುತ್ತಾರೆ.
ಮನಸು ಮಾಡಿದರೆ ಎರಡೂವರೆ ತಿಂಗಳಲ್ಲಿ ಈ ಮನೆ ಪೂರ್ತಿ ಮಾಡಬಹುದು ಆದರೆ ನಾನು ವಾರಂತ್ಯದಲ್ಲಿ ಮಾತ್ರ ಕನ್ಸ್ಟ್ರಕ್ಷನ್ ಮಾಡಿಸುತ್ತಿದ್ದರಿಂದ ಹೆಚ್ಚು ಸಮಯ ತೆಗೆದುಕೊಂಡೆ ಎನ್ನುತ್ತಾರೆ ಇವರು. ಈ ವಿಚಾರದ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ.