ರೈತರಿಗೆ ಕೃಷಿ ಚಟುವಟಿಕೆಗೆ ಹಣದ ಅವಶ್ಯಕತೆ ಇದ್ದೇ ಇರುತ್ತದೆ. ಬಿತ್ತನೆ ಬೀಜ ರಸಗೊಬ್ಬರಗಳ ಖರೀದಿಗೆ, ಕೃಷಿ ಯಂತ್ರೋಪಕರಣಗಳ ಖರೀದಿಗೆ ಮತ್ತು ಕೃಷಿ ಕಾರ್ಮಿಕರಿಗೆ ಹಣ ನೀಡುವುದಕ್ಕೆ ಈ ರೀತಿಯಾಗಿ ಅನೇಕ ಕಾರಣಗಳಿಂದ ರೈತನಿಗೆ ಹಣದ ಅವಶ್ಯಕತೆ ಇರುತ್ತದೆ ಮತ್ತು ಆತನು ಆ ಹಣವನ್ನು ಬಂಡವಾಳವಾಗಿ ಬಳಸಿ ಹಾಕಿದ್ದ ಬೀಜ ಬೆಳೆ ಕೊಡುವವರೆಗೂ ಕೂಡ ಕಾದು ನಂತರ ಬೆಳೆ ಬಂದಾಗ ಸಾಲ ತೀರಿಸಬೇಕು.
ಅದರಲ್ಲೂ ಮಳೆ ಆಶ್ರಿತಾ ಭೂಮಿ ಬೆಳೆಗಳಾದರೆ ಕೆಲವೊಮ್ಮೆ ಒಂದು ವರ್ಷಗಳ ಕಾಲ ಇಳುವರಿಗಾಗಿ ಕಾಯಬೇಕಾಗುತ್ತದೆ ಅದಲ್ಲದೆ ಭಾರತದಲ್ಲಿ ಕೃಷಿ ಚಟುವಟಿಕೆಯು ಮಳೆ ಜೊತೆಗೆ ಆಡುವ ಜೂಜಾಟ ಆಗಿರುವುದರಿಂದ ನಿಶ್ಚಿತವಾಗಿ ಹಾಕಿದ್ದ ಬಂಡವಾಳಕ್ಕೆ ಲಾಭ ಸಿಗುತ್ತದೆ ಅಥವಾ ಹಣ ವಾಪಸ್ ಬರುತ್ತದೆ ಎನ್ನುವುದನ್ನು ನಿಖರವಾದ ಹೇಳಲಾಗುವುದಿಲ್ಲ.
ಇಂತಹ ಸಂದರ್ಭಗಳಲ್ಲಿ ರೈತನು ತನ್ನ ಬಳಿ ಬಂಡವಾಳ ಇಲ್ಲದೆ ಹೋದಲ್ಲಿ ಹಣದ ಅವಶ್ಯಕತೆಗಾಗಿ ಖಾಸಗಿ ವ್ಯಕ್ತಿಗಳ ಬಳಿ ಲೇವಾದೇವಿಗಳ ಹತ್ತಿರ ಹೋಗಿ ಹೆಚ್ಚಿನ ಬಡ್ಡಿದರಕ್ಕೆ ಸಾಲ ಪಡೆಯುತ್ತಾನೆ. ಆತ ಸಾಲ ತೀರಿಸುವವರೆಗೆ ಅಸಲಿಗಿಂತ ಬಡ್ಡಿಯೇ ದೊಡ್ಡದಾಗಿ ಬೆಳೆದು ರೈತ ಸಾಲದ ಶೂಲಕ್ಕೆ ಸಿಲುಕುತ್ತಾನೆ.
ರಾಷ್ಟ್ರೀಕೃತ ಬ್ಯಾಂಕ್ಗಳಲ್ಲೂ ಕೂಡ ಕೃಷಿ ಸಾಲ ನೀಡುತ್ತಾರೆ ಮತ್ತು ಕೃಷಿ ಯಂತ್ರೋಪಕರಣ ಖರೀದಿಗೆ ಕೂಡ ಸಾಲ ದೊರೆತರೂ ನಿಶ್ಚಿತವಾದ ಲಾಭ ಸಿಗದೆ ಇದ್ದಾಗ ಸಾಲ ಮರುಪಾವತಿ ಮಾಡಲು ಆಗುವುದಿಲ್ಲ ಇಂತಹ ಸಂದರ್ಭಗಳಲ್ಲಿ ರೈತನು ಸಂಕಷ್ಟಕ್ಕೆ ಸಿಲುಕುತ್ತಾನೆ. ಇದೇ ಕಾರಣಕ್ಕೆ ವರ್ಷದಿಂದ ವರ್ಷಕ್ಕೆ ರೈತ ಆ’ತ್ಮ’ಹ’ತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ.
ಇದನ್ನೆಲ್ಲ ತಪ್ಪಿಸುವುದಕ್ಕಾಗಿ ಸರ್ಕಾರವು ಸಹಕಾರಿ ಬ್ಯಾಂಕ್ ಗಳ ಮೂಲಕ ರೈತನಿಗೆ ಅನುಕೂಲತೆ ಮಾಡಿಕೊಡುತ್ತೇವೆ. ಹಾಗಾಗಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಗಳ (DCC) ಮೂಲಕ ಸಾಲ ಸೌಲಭ್ಯ ಪಡೆದುಕೊಳ್ಳುವುದು ಉತ್ತಮ ಯಾಕೆಂದರೆ ಈ ರೀತಿ DCC ಬ್ಯಾಂಕ್ ಗಳಲ್ಲಿ ಪಡೆದುಕೊಳ್ಳುವ ಸಾಲಗಳಿಗೆ ಒಂದು ವರ್ಷದವರೆಗೆ ಯಾವುದೇ ರೀತಿಯ ಬಡ್ಡಿಯನ್ನು ವಿಧಿಸುವುದಿಲ್ಲ.
ಕೆಲವೊಮ್ಮೆ ರೈತನ ಪರಿಸ್ಥಿತಿಯನ್ನು ನೋಡಿ ಈ ರೀತಿ DCC ಬ್ಯಾಂಕ್ ನಲ್ಲಿ ರೈತ ಮಾಡಿದ ಸಾಲವನ್ನು ಸರ್ಕಾರಗಳು ಮನ್ನಾ ಮಾಡಿರುವ ಉದಾಹರಣೆಗಳು ಕೂಡ ಇವೆ. DCC ಬ್ಯಾಂಕ್ ಗಳಲ್ಲಿ ಸಾಲ ಮಾಡುವುದರ ಮತ್ತೊಂದು ಅನುಕೂಲತೆ ಏನೆಂದರೆ ಒಂದು ವರ್ಷ ಮುಗಿದ ಮೇಲೆ ರೈತನು ಸಾಲ ಮರುಪಾವತಿ ಮಾಡದೆ ಇದ್ದಾಗ ಕೂಡ ಆತನಿಗೆ ನೋಟಿಸ್ ಕೊಟ್ಟು ಕಡಿಮೆ ಬಡ್ಡಿ ದರ ವಸೂಲಿ ಮಾಡಲಾಗುತ್ತದೆ.
ಒಂದು ವೇಳೆ ಒಂದು ವರ್ಷದ ಅವಧಿಗೂ ಮುನ್ನವೇ ರೈತ ಸಾಲವನ್ನು ಮರುಪಾವತಿ ಮಾಡಿದರೆ ಮತ್ತೆ ಆತನಿಗೆ ಹಿಂದೆ ಪಡೆದಿದ್ದ ಮತ್ತಕ್ಕಿಂತ ಹೆಚ್ಚಿನ ಸಾಲ ಶೂನ್ಯ ಬಡ್ಡಿ ದರದಲ್ಲಿ ಸಿಗುತ್ತದೆ. ಹಾಗಾಗಿ ಇದು ಸಾಲವನ್ನು ರಿನಿವಲ್ ಮಾಡಿದ ರೀತಿ ಆಗುತ್ತದೆ ಹೊರತು ರೈತನಿಗೆ ಹೊರೆ ಆಗುವುದಿಲ್ಲ ಮತ್ತೆ ಆತ ಈ ಸಾಲವನ್ನು ಬಂಡವಾಳವಾಗಿ ಉಪಯೋಗಿಸಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದು.
ಹಾಗೂ ಎಲ್ಲಾ ರೈತನಿಗೂ ಹತ್ತಿರವಾಗುವಂತೆ ಆತನ ಗ್ರಾಮ ವ್ಯಾಪ್ತಿಯಲ್ಲಿಯೇ ಸಹಕಾರಿ ಬ್ಯಾಂಕುಗಳು ಇರುವುದರಿಂದ ರೈತನಿಗೆ ಯಾವುದೇ ಮಾಹಿತಿ ಬೇಕಾದರೂ ಮತ್ತು ಇದಕ್ಕೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮಕ್ಕೆ ಭಾಗಿಯಾಗಲು ಬಹಳಷ್ಟು ಅನುಕೂಲವಾಗುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿ ಬೇಕಾಗಿದ್ದರೆ ನಿಮ್ಮ ಗ್ರಾಮದ ಸಹಕಾರಿ ಬ್ಯಾಂಕ್ ಗೆ ಭೇಟಿ ಕೊಡಿ.
ಸಾಲ ಪಡೆಯಲು ಬೇಕಾಗುವ ದಾಖಲೆಗಳು
* ರೈತ FID ಸಂಖ್ಯೆ ಪಡೆದಿರಬೇಕು
* ಸಹಕಾರಿ ಬ್ಯಾಂಕಲ್ಲಿ ರೈತ ಖಾತೆ ತೆರೆದಿರಬೇಕು ಮತ್ತು ಅದಕ್ಕೆ ಆಧಾರ್ ಲಿಂಕ್ ಆಗಿರಬೇಕು.
* ಸರ್ವೆ ನಂಬರ್ ಮತ್ತು ಕೆಲವು ರೈತನ ಭೂಮಿಗೆ ಸಂಬಂಧಿಸಿದ ಕೆಲವು ಪ್ರಮುಖ ದಾಖಲೆಗಳನ್ನು ನೀಡಬೇಕು
* ಆಧಾರ್ ಕಾರ್ಡ್
* ಪಾನ್ ಕಾರ್ಡ್
* ಮೊಬೈಲ್ ಸಂಖ್ಯೆ
* ಸ್ವಯಂ ಧೃಡೀಕರಿಸಿದ ಘೋಷಣೆ ಪತ್ರ
* ಇನ್ನಿತರ ಪ್ರಮುಖ ದಾಖಲೆಗಳು