ಕಬ್ಬು ಬೆಳೆಗಾರರಿಗೆ ಬಂಪರ್ ಸುದ್ದಿ, ಹೊಸದರ ನಿಗದಿ ಮಾಡಿದ ಕೇಂದ್ರ ಸರ್ಕಾರ, ಪ್ರತಿ ಟನ್ ಗೆ 5,000ರೂ. ಹೆಚ್ಚಳ.!

 

WhatsApp Group Join Now
Telegram Group Join Now

ರಾಜ್ಯದ ಎಲ್ಲಾ ಕಬ್ಬು ಬೆಳೆಗಾರರಿಗೂ (Sugarcane growers) ಕೂಡ ಕೇಂದ್ರ ಸರ್ಕಾರದ ವತಿಯಿಂದ (Central government) ಸಿಹಿ ಸುದ್ದಿ ಇದೆ. ದೇಶದಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯುವ ರಾಜ್ಯಗಳಲ್ಲಿ ಕರ್ನಾಟಕ (Karnataka) ಕೂಡ ಒಂದು. ಒಟ್ಟಾರೆಯಾಗಿ ದೇಶದ 5 ಕೋಟಿ ಕಬ್ಬು ಬೆಳೆಗಾರ ರೈತರು ಹಾಗೂ ಅವರನ್ನು ಅವಲಂಬಿತವಾಗಿರುವ ಕುಟುಂಬಗಳಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಒಂದು ಘೋಷಣೆ ಮಾಡಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ (Narendra modi) ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು (Cabinet meeting) ಕಬ್ಬು ಬೆಳೆಗಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು 2023-24ರ ಸಕ್ಕರೆ ಋತುವಿನಲ್ಲಿ ಕಬ್ಬಿನ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯನ್ನು (FRP) ಪ್ರತಿ ಕ್ವಿಂಟಾಲ್ ಗೆ ರೂ.315 ಎಂದು ಅನುಮೋದಿಸಿದೆ.

ಇದಲ್ಲದೆ, ಕಬ್ಬು ಬೆಳೆಗಾರರ ಹಿತಾಸಕ್ತಿಯನ್ನು ರಕ್ಷಿಸುವ ದೃಷ್ಟಿಯಿಂದ, 9.5%ಕ್ಕಿಂತ ಕಡಿಮೆ ವಸೂಲಿ ಮಾಡುವ ಸಕ್ಕರೆ ಕಾರ್ಖಾನೆಗಳಿಗೆ ಯಾವುದೇ ಕಡಿತವಿಲ್ಲ ಎಂದು ಸರ್ಕಾರವು ನಿರ್ಧರಿಸಿದೆ. ಅಂತಹ ರೈತರಿಗೆ 2022-23 ಸಾಲಿನಲ್ಲಿ ಪ್ರತಿ ಕ್ವಿಂಟಾಲ್ ಕಬ್ಬಿಗೆ 282.125 ರೂ.ಗಳ ಬದಲಿಗೆ 2023-24ರ ಸಕ್ಕರೆ ಋತುವಿನಲ್ಲಿ ಪ್ರತಿ ಕ್ವಿಂಟಾಲ್ ಕಬ್ಬಿಗೆ 291.975 ರೂ.ಗಳನ್ನು ನೀಡಲಾಗುವುದು ಎಂದು ತಿಳಿಸಿದೆ.

ಈಗ ಅನುಮೋದನೆಯಾಗಿರುವ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯು 2023-24ರ ಸಕ್ಕರೆ ಋತು ಅಂದರೆ 2023ರ ಅಕ್ಟೋಬರ್ 1 ರಿಂದ ರೈತರಿಂದ ಕಬ್ಬನ್ನು ಖರೀದಿಸುವಾಗಲಿಂದ ಅನ್ವಯವಾಗುತ್ತದೆ. ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗ (CACP) ಮಾಡಿದ ಶಿಫಾರಸುಗಳ ಆಧಾರದ ಮೇಲೆ, ರಾಜ್ಯ ಸರ್ಕಾರಗಳು ಮತ್ತು ಇತರ ಪಾಲುದಾರರೊಂದಿಗೆ ಸಮಾಲೋಚಿಸಿದ ನಂತರ ಬೆಲೆಯನ್ನು ನಿರ್ಧರಿಸಲಾಗಿದೆ.

ಕಬ್ಬು ಬೆಳೆಗಾರ ರೈತರ ಮಾತ್ರವಲ್ಲದೆ ಸಕ್ಕರೆ ಕಾರ್ಖಾನೆಗಳ (Sugar factory) ಬಗ್ಗೆ ಕೂಡ ಗಮನಹರಿಸಿದ ಕೇಂದ್ರ ಸರ್ಕಾರವು ಸಕ್ಕರೆ ಕಾರ್ಖಾನೆಗಳ ಆರ್ಥಿಕ ಪರಿಸ್ಥಿತಿ ಸುಧಾರಿಸುವಂತಹ ಕೆಲ ಘೋಷಣೆಗಳನ್ನು ಕೂಡ ಮಾಡಿದೆ. ಬಯೋಗ್ಯಾಸ್ (Biogas) ಮತ್ತು ಎಥೆನಾಲ್ (Ethanol) ವಿಷಯವನ್ನು ಪ್ರಸ್ತಾಪ ಮಾಡಿದ ಕೇಂದ್ರ ಸರ್ಕಾರವು ಸಕ್ಕರೆ ಕಾರ್ಖಾನೆಗಳು ಕಬ್ಬು ತಯಾರಿಸಿ ಸಕ್ಕರೆ ಉತ್ಪಾದನೆ ಮಾಡಿದ ನಂತರ ಉಳಿದ ತ್ಯಾಜ್ಯಗಳಿಂದ ಬಯೋಗ್ಯಾಸ್ ಮತ್ತು ಎಥನಾಲ್ ಉತ್ಪಾದನೆ ಮಾಡುತ್ತಿದೆ.

ಬಯೋಗ್ಯಾಸ್ ಮೂಲಕ ಕಬ್ಬಿನ ಕಚ್ಚಾ ವಸ್ತುಗಳಿಂದ ವಿದ್ಯುತ್ ಉತ್ಪಾದಿಸಬಹುದು. ಎಥೆನಾಲ್ ಮಿಶ್ರಿತ ಪೆಟ್ರೋಲ್ (EBP) ಕಾರ್ಯಕ್ರಮವು ವಿದೇಶಿ ವಿನಿಮಯವನ್ನು ಉಳಿಸಿರುವುದಲ್ಲದೆ ದೇಶದ ಇಂಧನ ಭದ್ರತೆಯನ್ನು ಕೂಡಾ ಬಲಪಡಿಸಲಿದೆ. ಇದರ ಜೊತೆಗೆ ಆಮದು ಮಾಡಿಕೊಳ್ಳಬೇಕಾಗಿದ್ದ ಪೆಟ್ರೋಲ್ ಉತ್ಪನ್ನಗಳ ಅವಲಂಬನೆಯನ್ನು ಕಡಿಮೆ ಮಾಡಿ, ಆ ಮೂಲಕ ಇಂಧನ ಕ್ಷೇತ್ರದಲ್ಲಿ ಆತ್ಮನಿರ್ಭರ ಭಾರತದ ಗುರಿಯನ್ನು ಸಾಧಿಸಲು ಸಹಾಯ ಮಾಡಿದೆ.

2025ರ ವೇಳೆಗೆ, 60 LMT ಗಿಂತ ಹೆಚ್ಚಿನ ಸಕ್ಕರೆಯನ್ನು ಎಥೆನಾಲ್ ಗೆ ಪರಿವರ್ತಿಸುವ ಗುರಿಯನ್ನು ದೇಶ ಹೊಂದಿದೆ, ಇದು ಹೆಚ್ಚುವರಿಯಾಗಿ ಸಕ್ಕರೆ ಉತ್ಪಾದಿಸಿ ಅದನ್ನು ಶೇಖರಿಸಿ ಇಡಬೇಕಿದ್ದ ದಾಸ್ತಾನಿನ ಸಮಸ್ಯೆಯನ್ನು ಪರಿಹರಿಸುತ್ತದೆ. ಹಾಗೂ ಕಾರ್ಖಾನೆಗಳ ಹಣಕಾಸಿನ ಪರಿಸ್ಥಿತಿಯನ್ನು ಸುಧಾರಿಸಿ, ಆ ಮೂಲಕ ರೈತರ ಕಬ್ಬಿನ ಬಾಕಿಯನ್ನು ಸಮಯೋಚಿತವಾಗಿ ಪಾವತಿಸಲು ಸಹಾಯ ಮಾಡುತ್ತದೆ, ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ.

ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯು ಮಾಲಿನ್ಯವನ್ನು ಕಡಿಮೆ ಮಾಡಿ ಗಾಳಿಯ ಗುಣಮಟ್ಟವನ್ನು ಸುಧಾರಿಸುತ್ತದೆ. ಹಾಗಾಗಿ ಈ ಘಟಕಗಳ ಸ್ಥಾಪನೆ ಮಾಡಿಕೊಳ್ಳಲು ಬಯಸುವ ಕಾರ್ಖಾನೆಗಳು ಬ್ಯಾಂಕ್ ಲೋನ್ ಪಡೆದರೆ ಶೇಕಡ 6% ರಷ್ಟು ಬಡ್ಡಿಯನ್ನು ಸರ್ಕಾರವೇ ಬರಿಸುವುದಾಗಿ ತಿಳಿಸಿದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now