ಪಿಂಚಣಿ ಎನ್ನುವುದು ನೌಕರಿದವರಿಗೆ ಒಂದು ವರದಾನವಾಗಿದೆ. ಯಾಕೆಂದರೆ ಕೆಲಸ ಬಿಟ್ಟ ನಂತರ ಅವರಿಗೆ ಪ್ರತಿ ತಿಂಗಳು ಪಿಂಚಣಿ ರೂಪದಲ್ಲಿ ಹಣ ಸಿಗುವುದರಿಂದ ಜೀವನ ನಿರ್ವಹಣೆಗೆ ಅದು ಸಹಾಯಕವಾಗುತ್ತದೆ. ಆದರೆ ಉದ್ಯೋಗದಲ್ಲಿರುವ ಎಲ್ಲರೂ ಕೂಡ ಪಿಂಚಣಿ ಸೌಲಭ್ಯ ಪಡೆಯಲು ಆಗುವುದಿಲ್ಲ ಹಾಗಾಗಿ ಖಾಸಗಿ ಉದ್ಯೋಗದಲ್ಲಿರುವವರಿಗೆ ಅಥವಾ ನೀವು ಈವರಿಗೆ ಪಿಂಚಣಿ ಬಗ್ಗೆ ಪ್ಲಾನ್ ಮಾಡಿಲ್ಲ ಎಂದರೂ ಕೂಡ ನೀವು ನಿವೃತ್ತಿ ವಯಸ್ಸಿನಲ್ಲಿದ್ದರೂ ನಿಮಗೆ SBI ಒಂದು ಅವಕಾಶ ನೀಡುತ್ತಿದೆ.
SBI ಸರಳ ಪಿಂಚಣಿ ಯೋಜನೆ ಎನ್ನುವುದು ರಾಷ್ಟ್ರೀಯ ಪಿಂಚಣಿ ಯೋಜನೆಗೆ ಪರ್ಯಾಯ ವ್ಯವಸ್ಥೆ ಆಗಿದ್ದು ಈ ಯೋಜನೆ ಮೂಲಕ ನೀವು ಗರಿಷ್ಠ 50 ಲಕ್ಷದವರೆಗೆ ಹೂಡಿಕೆ ಮಾಡಿ ಜೀವ ವಿಮೆಯನ್ನು ಪಡೆಯಬಹುದು ಮತ್ತು ಐದು ವರ್ಷಗಳಿಗೊಮ್ಮೆ ಬೋನಸ್ ಪಡೆಯುವುದರೊಂದಿಗೆ ಪ್ರತಿ ತಿಂಗಳು ಪಿಂಚಣಿ ರೂಪದಲ್ಲಿ ಜೀವನ ನಿರ್ವಹಣೆಗಾಗಿ ಹಣ ಪಡೆಯಬಹುದು. ಇದರ ಕುರಿತು ಕೆಲ ಪ್ರಮುಖ ಅಂಶಗಳನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
* SBI ಗ್ರಾಹಕರು ಮಾತ್ರ ಈ ಯೋಜನೆಯ ಫಲವನ್ನು ಪಡೆಯಬಹುದು
* SBI ಸರಳ ಪಿಂಚಣಿ ಯೋಜನೆಯ ಮೂಲಕ ಈ ಮೇಲೆ ತಿಳಿಸಿದಂತೆ ಕನಿಷ್ಠ 50 ಲಕ್ಷದವರೆಗೆ ಹಣ ಹೂಡಿಕೆ ಮಾಡಬಹುದು. ಯಾವುದೇ ಅನಿವಾರ್ಯ ಸಂದರ್ಭದಲ್ಲಿ ಒಟ್ಟು ಮೊತ್ತದ ಠೇವಣಿಯ ಮೂರನೇ ಒಂದು ಭಾಗವನ್ನು ಹಿಂಪಡೆಯಬಹುದು ಮತ್ತು ನೀವು ಆ ಸಮಯದಲ್ಲಿ ಯಾವುದೇ ರೀತಿಯ ತೆರಿಗೆಯನ್ನು ಪಾವತಿಸಬೇಕಿಲ್ಲ.
* SBI ಸರಳ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡುವವರಿಗೆ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ ವಿನಾಯಿತಿ ಸಿಗುತ್ತದೆ ಮತ್ತು ನೀವು 1.50 ಲಕ್ಷದವರೆಗೆ ಈ ತೆರಿಗೆ ವಿನಾಯಿತಿ ಲಾಭವನ್ನು ಪಡೆಯುತ್ತೀರಿ.
* ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಮಧ್ಯದಲ್ಲಿ ಯೋಜನೆಯನ್ನು ರದ್ದು ಮಾಡುವುದಾದರೆ ನಿಮಗೆ ತೆರಿಗೆ ಬೀಳುತ್ತದೆ ಆದರೆ ಮೆಡಿಕಲ್ ಅಥವಾ ಕೋರ್ಟ್ ಕಾರಣದಿಂದಾಗಿ ಯೋಜನೆ ರದ್ದುಪಡಿಸುವುದಾದರೆ ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡಿದಾಗ ವಿನಾಯಿತಿ ಇರುತ್ತದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸರಳ ಪಿಂಚಣಿ
* ಈ ಯೋಜನೆಯನ್ನು ಜೀವವಿಮೆ ರಕ್ಷಕ ಎಂದು ಕರೆಯಬಹುದು.
* ನೀವು ಈ ಪಿಂಚಣಿಯನ್ನು ಪ್ರತಿ ತಿಂಗಳು ಪಡೆಯಬಹುದು. ಅಥವಾ ನಿಮ್ಮ ಅವಶ್ಯಕತೆಗೆ ಅನುಸಾರವಾಗಿ ಮಾಸಿಕವಾಗಿ ಪಡೆಯುವ ಎಲ್ಲಾ ವಾರ್ಷಿಕವಾಗಿ ಪಡೆಯುವ ಆಯ್ಕೆಯನ್ನು ಮೊದಲನೇ ನಿರ್ಧರಿಸಬೇಕು. ಒಂದು ವೇಳೆ ನೀವು ವರ್ಷಕ್ಕೆ ಒಮ್ಮೆ ಪಿಂಚಣಿ ನೀಡಲು ಬಯಸಿದರೆ ಅದು ಆದಾಯ ತೆರಿಗೆ ವಿನಾಯಿತಿ ವ್ಯಾಪ್ತಿ ಮೀರಿದರೆ ಆಗಲು ಕೂಡ ನೀವು ತೆರಿಗೆ ಪಾವತಿ ಮಾಡಲೇಬೇಕು.
ಈ ರೀತಿ ಉಳಿತಾಯ ಹಾಗೂ ಪಿಂಚಣಿ ಸೌಲಭ್ಯ ಪಡೆಯುವುದಕ್ಕೆ ಇನ್ನೂ ಅನೇಕ ಯೋಜನೆಗಳು ಇತ್ತು ಅವೆಲ್ಲದಕ್ಕಿಂತ ಈ SBI ಸರಳ ಪಿಂಚಣಿ ಯೋಜನೆ ಪಿಂಚಣಿಗಾಗಿ ಬಹಳ ವಿಶೇಷ ಇತ್ತೀಚೆಗೆ ಜಾರಿಗೆ ಬಂದಿರುವ ಈ ಯೋಜನೆಯು ಈಗಾಗಲೇ ಲಕ್ಷಾಂತರ ಗ್ರಹಕರನ್ನು ಹೊಂದಿದೆ.
ನೀವು ಕೂಡ SBI ನ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸಿದರೆ ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ SBI ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಡಿ ಅಥವಾ ನಿಮ್ಮ ಹತ್ತಿರದಲ್ಲಿರುವ SBI ಶಾಖೆಯ ಭೇಟಿ ಕೊಟ್ಟು ಈ ಸರಳ ಪಿಂಚಣಿ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಿ.