ಈ ವರ್ಷ ರಾಜ್ಯದಲ್ಲಿ ಬರದ ಪರಿಸ್ಥಿತಿ ನಿರ್ಮಾಣವಾಗಿ ರೈತರ ಪರಿಸ್ಥಿತಿ ದಯಾ ಹೀನವಾಗಿದೆ. ರಾಜ್ಯ ಈ ಬರದ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಲು ರಾಜ್ಯ ಸರ್ಕಾರವು ಹಲವಾರು ಹೊಸ ಯೋಜನೆಗಳನ್ನು ಜಾರಿ ಮಾಡಿ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಲು ಸಾಕಷ್ಟು ಶ್ರಮಿಸುತ್ತಿದೆ, ಇದರ ಜೊತೆಗೆ ಅಂತರ್ಜಲ ಮಟ್ಟ ಅತಿಯಾಗಿ ಬಳಕೆ ಆಗುವ ಹಾಗೂ ಬರಪೀಡಿತ ಜಿಲ್ಲೆಗಳ ರೈತರಿಗೆ ಒಂದು ಹೊಸ ಯೋಜನೆ ಅಳವಡಿಸಿಕೊಳ್ಳುವಂತೆ ಕೂಡ ಸೂಚಿಸಿದೆ.
ಇತ್ತೀಚೆಗೆ ರಾಜ್ಯಕ್ಕೆ ಬರ ವೀಕ್ಷಣೆ ಬಗ್ಗೆ ವಿವರ ಸಂಗ್ರಹಿಸಲು ಕೇಂದ್ರ ಅಧ್ಯಯನ ಸಮಿತಿ ಬಂದ ವೇಳೆ ಜಿಲ್ಲೆಯ ಬರ ಪರಿಸ್ಥಿತಿಯನ್ನು ವಿವರಿಸಿ ರೈತರಿಗೆ ತುಂತುರು ನೀರಾವರಿ ಮತ್ತು ಹನಿ ನೀರಾವರಿ ಅವಶ್ಯಕತೆ ಬಗ್ಗೆ ಜಾಗೃತಿ ಮೂಡಿಸಿ ಮನದಟ್ಟು ಮಾಡಿದ್ದರು. ಪ್ರಧಾನಮಂತ್ರಿ ಕೃಷಿಸಿಂಚಾಯಿ ಯೋಜನೆ ಮತ್ತು ಅಟಲ್ ಭೂಜಲ್ ಯೋಜನೆಯಡಿ ತುಂತುರು ನೀರಾವರಿ ಮತ್ತು ಹನಿ ನೀರಾವರಿ ಮಾಡಲು ಸೂಕ್ಷ್ಮ ನೀರಾವರಿ ಘಟಕಗಳನ್ನು ಸ್ಥಾಪಿಸಿ ಕೃಷಿ ಬೆಳೆಗಳಿಗೆ ನೀರು ಹರಿಸಿದರೆ ಉತ್ತಮ ಎನ್ನುವ ಸೂಚನೆಯನ್ನು ಕೇಂದ್ರ ಸರ್ಕಾರ ಹೊರಡಿಸಲಾಗಿದೆ.
మిತಿ ಮೀರಿದ ಅಂತರ್ಜಲ ಬಳಕೆ ಹಾಗೂ ಬರ ಪೀಡಿತ ತಾಲೂಕುಗಳ ರೈತರು ಈ ಯೋಜನೆಯನ್ನು ಅಳವಡಿಸಿಕೊಳ್ಳುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ನಮ್ಮ ರಾಜ್ಯದಲ್ಲಿ ಆರಂಭಿಕ ಹಂತದಲ್ಲಿ 14 ಜಿಲ್ಲೆಗಳು ಅದರಲ್ಲೂ ವಿಶೇಷವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲ ತಾಲೂಕುಗಳು ಈ ವ್ಯಾಪ್ತಿಗೆ ಬರಲಿದ್ದು ಯಾರು ಬೇಕಾದರೂ ಸರ್ಕಾರದ ಈ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಮತ್ತು ಅಟಲ್ ಭೂ ಜಲ ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದು ಎಂದು ತಿಳಿಸಲಾಗಿದೆ.
ಈ ಯೋಜನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ನೀರಿನ ಮಿತ್ರಬಳಕೆ ಆಗುತ್ತದೆ ಅಂತರ್ಜದ ಉಳಿತಾಯವಾಗುತ್ತದೆ ಮತ್ತು ಭೂಮಿಯ ಫಲವತ್ತತೆ ಹಾಳಾಗುವುದು ತಪ್ಪುತ್ತದೆ ಎನ್ನುವ ಇನ್ನು ಮುಂತಾದ ನಿರೀಕ್ಷೆಗಳಿಂದ ಈ ಯೋಜನೆಗಳನ್ನು ಅಳವಡಿಸಿಕೊಳ್ಳುವಂತೆ ಸೂಚಿಸಲಾಗಿದೆ.
ರಾಜ್ಯದ ಚಿಕ್ಕಬಳ್ಳಾಪುರ, ಬೆಳಗಾವಿ, ಬಾಗಲಕೋಟೆ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ. ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಗದಗ, ಹಾಸನ, ಕೋಲಾರ, ರಾಮನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಸೂಕ್ಷ್ಮ ನೀರಾವರಿ ಯೋಜನೆಯಡಿ ತುಂತುರು ಮತ್ತು ಹನಿ ನೀರಾವರಿ ಯಶಸ್ವಿ ಅನುಷ್ಠಾನಕ್ಕೆ ತೀರ್ಮಾನಿಸಲಾಗಿದೆ.
ಈ ಜಿಲ್ಲೆಗಳ ರೈತರು ಈ ಯೋಜನೆಯ ಪ್ರಯೋಜನ ಪಡೆಯಲು ಹತ್ತಿರದಲ್ಲಿರುವ ರೈತ ಸಂಪರ್ಕ ಕೇಂದ್ರ, ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳಿಗೆ ಭೇಟಿ ನೀಡಿ ಯೋಜನೆಯ ಮಾಹಿತಿ ಪಡೆಯಬಹುದು.
ಪ್ರಮುಖ ಅಂಶಗಳು:-
* ತುಂತುರು ನೀರಾವರಿ ಘಟಕಗಳನ್ನು ಸ್ಥಾಪಿಸಲು ರಾಜ್ಯದ ಎಲ್ಲಾ ಜಿಲ್ಲೆಗಳ ಎಲ್ಲ ವರ್ಗದ ರೈತರು ಅರ್ಜಿ ಸಲ್ಲಿಸಲು ಅವಕಾಶವಿದೆ
* 2 ಹೆಕ್ಟೇರ್ ಕೃಷಿ ಭೂಮಿ ಹೊಂದಿರುವ ಸಣ್ಣ ಹಾಗೂ ಅತಿ ಸಣ್ಣ ರೈತನಿಗೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಈ ಮೇಲ್ಕಂಡ ಯೋಜನೆಗಳ ಘಟಕ ಅಳವಡಿಕೆಗೆ 90% ಮತ್ತು ಇತರೆ ವರ್ಗದ ರೈತರಿಗೆ 45% ಸಹಾಯಧನ ಸಿಗಲಿದೆ.
* ಸೂಕ್ತ ದಾಖಲೆಗಳೊಂದಿಗೆ ನೋಂದಣಿ ಮಾಡಿಕೊಂಡರೆ ತುಂತುರು ಮತ್ತು ಹನಿ ನೀರಾವರಿ ಅಳವಡಿಕೆಗೆ 90% ರವರೆಗೂ ಸಹಾಯಧನ ಸಿಗಲಿದೆ. ಅದರಲ್ಲೂ ಮೊದಲು ಬಂದು ನೋಂದಣಿ ಆದ ರೈತರಿಗೆ ಮೊದಲ ಆದ್ಯತೆ. ನಿಗದಿತ ಅನುದಾನ ಮುಗಿದ ನಂತರ ಬರುವ ರೈತರಿಗೆ ಪ್ರಯೋಜನ ಸಿಗದೇ ಹೋಗಬಹುದು ಹಾಗಾಗಿ ಶೀಘ್ರವೇ ರೈತರು ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಿ.