ವಿಧಾನಸೌಧದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡಿದ ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಎಚ್ ಮುನಿಯಪ್ಪ (FCSC Minister K.H Muniyappa) ಅವರು ಮಹತ್ವದ ಘೋಷಣೆಯೊಂದನ್ನು ಕೂಡ ಮಾಡಿದ್ದಾರೆ.
ಮೊದಲಿಗೆ ಹೊಸ ರೇಷನ್ ಕಾರ್ಡ್ ಗೆ (New ration card) ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ ಅದರಲ್ಲೂ ಸರ್ಕಾರದ ಗ್ಯಾರಂಟಿ ಕಾರ್ಡ್ (Gyarantee Scheme) ಯೋಜನೆಗಳ ಘೋಷಣೆ ಆದ ಮೇಲೆ ಈ ರೀತಿ ಹೊಸ ಕಾರ್ಡಿಗೆ ಅದರಲ್ಲೂ BPL ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನುವುದನ್ನು ಅಂಕಿ ಅಂಶಗಳೇ ತಿಳಿಸುತ್ತಿದೆ.
ಡಿವೋರ್ಸ್ ಕೊಡ್ತಿಲ್ಲ, ಜೊತೆಯಲ್ಲಿ ಜೀವ್ನನೂ ಮಾಡ್ತಿಲ್ಲ ಅಂದ್ರೆ ಏನು ಮಾಡಬೇಕು.? ಕಾನೂನು ಹೇಳೋದೇನು ನೋಡಿ.!
ಆದರೆ ಕರ್ನಾಟಕ ವಿಧಾನಸಭಾ ಚುನಾವಣೆ ಸಮಯದಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದ (code of coduct) ಕಾರಣ ರೇಷನ್ ಕಾರ್ಡ್ ವಿತರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಹಲವಾರು ಅರ್ಜಿದಾರರು ಹೊಸ ಪಡಿತರ ಚೀಟಿ ಪಡೆಯಲು ಕಾಯುತ್ತಿದ್ದಾರೆ ಇದರ ಬಗ್ಗೆ ಕೂಡ ಮಾತನಾಡಿದ ಸಚಿವರು ನೀತಿ ಸಂಹಿತೆ ಜಾರಿಯಾಗಿದ್ದ ಕಾರಣ ತಾತ್ಕಾಲಿಕವಾಗಿ ಇದನ್ನು ಸ್ಥಗಿತಗೊಳಿಸಲಾಗಿತ್ತು.
ಈಗ ರೇಷನ್ ಕಾರ್ಡ್ ವಿತರಣೆ ಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿ ರಾಜ್ಯದ ಜನತೆಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಇದರ ಜೊತೆಗೆ ಇನ್ನಷ್ಟು ಮಹತ್ವದ ವಿಷಯಗಳ ಬಗ್ಗೆ ಮಾತನಾಡಿದ ಅವರು ಅನ್ನಭಾಗ್ಯ ಯೋಜನೆಯ ಬಗ್ಗೆಯೂ ಕೂಡ ಮಾತನಾಡಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವ ಪ್ರತಿ ಕುಟುಂಬದ ಸದಸ್ಯನಿಗೆ 10Kg ಪಡಿತರ ನೀಡುವುದಾಗಿ ಹೇಳಿದ್ದು ಸೆಪ್ಟೆಂಬರ್ ತಿಂಗಳಿನಿಂದ ಅಕ್ಕಿ ವಿತರಣೆ ಮಾಡುತ್ತೇವೆ ಅಲ್ಲಿಯವರೆಗೂ ಕೂಡ ಹೆಚ್ಚುವರಿ ಅಕ್ಕಿ ಬದಲಾಗಿ ಹಣ ನೀಡುವ ಪ್ರಕ್ರಿಯೆ ಚಾಲ್ತಿಯಲ್ಲಿ ಇರುತ್ತದೆ.
ಅಂಚೆ ಇಲಾಖೆಯಲ್ಲಿ ಬೃಹತ್ ನೇಮಕಾತಿ, ಡಾಕ್ ಸೇವಕ್ ಹುದ್ದೆಗೆ ಅರ್ಜಿ ಆಹ್ವಾನ.! ವೇತನ 29,380
ಈಗಾಗಲೇ ಜುಲೈ ತಿಂಗಳಿನಲ್ಲಿ ಒಂದು ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಸರ್ಕಾರ DBT ಮೂಲಕ ಹಣ ವರ್ಗಾವಣೆ ಮಾಡಿದೆ ಎನ್ನುವ ವಿಷಯವನ್ನು ಹಂಚಿಕೊಂಡರು. ಹಾಗೆಯೇ ಸ್ವಂತ ಕಾರು ಹೊಂದಿರುವವರಿಗೆ BPL ಕಾರ್ಡ್ ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ವೈಟ್ ಬೋರ್ಡ್ ಹೊಂದಿರುವ ಕಾರುಗಳನ್ನು ಸ್ವಂತ ಕಾರುಗಳು ಎಂದು ನಿರ್ಧರಿಸುತ್ತೇವೆ.
ಹಾಗಾಗಿ ಅವರು ಬಡತನ ರೇಖೆಗಿಂತ ಕೆಳಗಿರಲು ಸಾಧ್ಯವಿಲ್ಲ ಹಾಗಾಗಿ ಇಂಥವರು BPL ಕಾರ್ಡ್ ಗೆ ಅರ್ಜಿ ಹಾಕಿದರೆ ನೀಡಲು ಸಾಧ್ಯವಿಲ್ಲ ಮತ್ತು ಅವರು BPL ಕಾರ್ಡ್ ಹೊಂದಿದ್ದರು ಕೂಡ ಅದು ರದ್ದಾಗುತ್ತದೆ (cancel) ಎನ್ನುವ ಮಹತ್ವದ ಘೋಷಣೆಯನ್ನು ಮಾಡಿದ್ದಾರೆ. ಇದರ ಜೊತೆಗೆ ಬಾಡಿಗೆ ಅಥವಾ ಕೆಲಸದ ಉದ್ದೇಶದಿಂದ ಎಲ್ಲೋ ಬೋರ್ಡ್ ಕಾರ್ಡುಗಳನ್ನು ಹೊಂದಿದ್ದರೆ ಅಂತವರಿಗೆ BPL ಕಾರ್ಡ್ ವಿತರಣೆ ಮಾಡಲಾಗುವುದು ಎನ್ನುವ ಸಮಾಧಾನಕರ ವಿಷಯವನ್ನು ಕೂಡ ಹೇಳಿದ್ದಾರೆ.
ಒಂದು ಲಕ್ಷ ಖರ್ಚಿನಲ್ಲಿ ಕಟ್ಟಿರುವ ಮನೆ ಇದು, ಸಣ್ಣ ಫ್ಯಾಮಿಲಿ ಇರೋದಕ್ಕೆ, ಬಾಡಿಗೆಗೆ ಕೊಡೋದಕ್ಕೆ ಸೂಕ್ತವಾದ ಮನೆ.!
ಇದರಿಂದ ರಾಜ್ಯದಲ್ಲಿ ಕಾರ್ ಗಳನ್ನು ಹೊಂದಿರುವ ಹಲವು ಜನರ ರೇಷನ್ ಕಾರ್ಡ್ ತಾಗುವ ಸಾಧ್ಯತೆಗಳು ಇವೆ BPL ಕಾರ್ಡನ್ನು ಉಚಿತ ಪಡಿತರದ ಕಾರಣಕ್ಕೆ ಮಾತ್ರ ಅಲ್ಲದೆ ಇನ್ನು ಅನೇಕ ಯೋಜನೆಗಳಿಗೆ ಅಗತ್ಯ ದಾಖಲೆಯಾಗಿ ಕೇಳಲಾಗುತ್ತದೆ. BPL ಕಾರ್ಡ್ ಹೊಂದಿರುವವರಿಗೆ ಸರ್ಕಾರದಿಂದ ವೈದ್ಯಕೀಯ ಸೌಲಭ್ಯ, ಶೈಕ್ಷಣಿಕ ಶುಲ್ಕ ಸೇರಿದಂತೆ ಹಲವು ಯೋಜನೆಗಳಲ್ಲಿ ರಿಯಾಯಿತಿ ಸಿಗುತ್ತದೆ.
ಹೀಗಾಗಿ ಹೆಚ್ಚಿನ ಜನರು ಅನುಕೂಲಸ್ಥರಾಗಿದ್ದರು ಕೂಡ ಅದನ್ನು ಮರೆಮಾಚಿ BPL ಕಾರ್ಡ್ ಪಡೆಯಲು ಪ್ರಯತ್ನಿಸುತ್ತಾರೆ. ಅಂತವರಿಗೆಲ್ಲಾ ಸಚಿವರ ನೀಡಿರುವ ಈ ಆದೇಶದಿಂದ ಶಾ’ಕ್ ಆಗಿರುತ್ತದೆ. ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ BPL ಕಾರ್ಡ್ ಹೊಂದಿರುವವರಿಗೂ ಕೂಡ BPL ಸಿಗದೇ ಅವರ ಕಾರ್ಡ್ ಗಳು ರದ್ದಾಗುವ ಸಾಧ್ಯತೆಗಳು ಕೂಡ ಇವೆ.