ನಾವು ಆಸ್ತಿಯನ್ನು ಕೊಂಡುಕೊಳ್ಳಬೇಕು ಎಂದರು ಅಥವಾ ಪ್ರಸ್ತುತವಾಗಿ ಆಸ್ತಿ ಮಾರಿದರೆ ಎಷ್ಟು ಲಾಭ ಆಗುತ್ತದೆ ಎಂಬುದನ್ನು ಲೆಕ್ಕಾಚಾರ ಹಾಕುವುದಕ್ಕಾದರೂ ನಮ್ಮ ಆಸ್ತಿ ಬೆಲೆ ಈಗ ಎಷ್ಟಿದೆ ಎನ್ನುವ ವಿಚಾರ ನಮಗೆ ಗೊತ್ತಿರಲೇಬೇಕು.
ಆಸ್ತಿಯ ನೈಜ ಬೆಲೆ ಎಂದರೇನು? ಅದು ಹೇಗೆ ನಿರ್ಧಾರವಾಗುತ್ತದೆ? ಅದಕ್ಕೆ ಇರುವ ಮಾನದಂಡಗಳು ಏನು ಎನ್ನುವ ಪ್ರಮುಖ ವಿಷಯವನ್ನು ಈ ಅಂಕಣದಲ್ಲಿ ತಿಳಿಸಿಕೊಡುತ್ತಿದ್ದೇವೆ. ಕರ್ನಾಟಕ ಸರ್ಕಾರವು ತೆರಿಗೆ ವಂಚನೆ ತಡೆಯಲು ಮುದ್ರಾಂಕ ಮತ್ತು ನೊಂದಣಿ ಇಲಾಖೆಯ ಸಹಾಯದೊಂದಿಗೆ ಲಾಭ ಮತ್ತು ನಷ್ಟದ ಅದರ ಮೇಲೆ ಆಸ್ತಿಗೆ ಕನಿಷ್ಠ ಮೌಲ್ಯ ನಿಗದಿಪಡಿಸುತ್ತಾರೆ. ಈ ಮೌಲ್ಯವನ್ನು ನೈಜ ಮೌಲ್ಯ ಎನ್ನುತ್ತಾರೆ.
ನೈಜ ಬೆಲೆ ಬರಲು ಕೆಲವು ಮಾನದಂಡಗಳಿವೆ. ಆ ಪ್ರಕಾರವಾಗಿ ಈ ಕೆಳಗಿನ ಅಂಶಗಳು ನೈಜ ಬೆಲೆ ವ್ಯತ್ಯಾಸವಾಗಲು ಕಾರಣವಾಗುತ್ತವೆ.
* ಭೂಮಿಯ ಗುಣ ಧರ್ಮಗಳು
* ಮಣ್ಣಿನ ನಮೂನೆಗಳು
* ಪ್ರಸ್ತುತ ಮಾರುಕಟ್ಟೆ ಬೆಲೆಗಳು
* ವಾಣಿಜ್ಯ ಮತ್ತು ಕೈಗಾರಿಕೆ ಪ್ರದೇಶಗಳಿಗೆ ಹತ್ತಿರವಾಗಿದೆ ಎನ್ನುವುದರ ಅನುಗುಣವಾಗಿ
* ಭವಿಷ್ಯದಲ್ಲಿ ಆ ಜಾಗ ಹೆಚ್ಚು ಮುಂದುವರಿಯಬಹುದು ಎನ್ನುವ ನಿರೀಕ್ಷೆಯಿಂದ.
2000 ನೋಟ್ ಇದ್ದವರಿಗೆ ಗುಡ್ ನ್ಯೂಸ್.! RBI ನಿಂದ ಮಹತ್ವದ ಘೋಷಣೆ.!
* ಖುಷ್ಕಿ, ತರಿ, ಭಾಗಾಯತು ಯಾವ ರೀತಿಯ ಭೂಮಿ ಎನ್ನುವುದು
* ನೀರಾವರಿ ಸೌಲಭ್ಯ ಹೊಂದಿದೆಯೇ ಎನ್ನುವ ವಿಷಯವು ಕೂಡ ಮುಖ್ಯ ಪಾತ್ರ ವಹಿಸುತ್ತದೆ.
* ಖುಷ್ಕಿ ಜಮೀನಿಗೆ ಬೆಲೆ ಕಡಿಮೆ ಇರುತ್ತದೆ. ಆದರೆ ಜಮೀನಿಗೆ ಹೋಗುವ ದಾರಿ, ಗ್ರಾಮಕ್ಕೆ ಹತ್ತಿರವಾಗಿರುವುದು ಇಂತಹ ಕಾರಣಗಳಿಂದ ಖುಷ್ಕಿ ಜಮೀನಾಗಿದ್ದರೂ ಬೆಲೆ ಹೆಚ್ಚಾಗುತ್ತದೆ.
ಈ ರೀತಿ ಬೆಲೆ ನಿರ್ಧರಿಸುವುದರಿಂದ ಆಗುವ ಉಪಯೋಗವೇನೆಂದರೆ:-
* ನೈಜ ಬೆಳೆ ನಿರ್ಧರಿಸುವುದರಿಂದ ಮಾರುಕಟ್ಟೆ ಬೆಲೆ ಹೆಚ್ಚಾಗಿದ್ದರೂ, ಸರ್ಕಾರಕ್ಕೆ ನೈಜ ಬೆಲೆ ಅನುಸಾರ ತೆರಿಗೆ ಕಡಿಮೆ ಕಟ್ಟಬಹುದು
* ಭೂ ಮಾಫಿಯಾ ಮತ್ತು ವಂಚನೆಯಿಂದ ತಪ್ಪಿಸಿಕೊಳ್ಳಲು ಅನುಕೂಲವಾಗುತ್ತದೆ
* ಮೋಸ ಇಲ್ಲದೆ ಕ್ರಯಾ, ವಿಭಾಗ, ದಾನಪತ್ರ ಮಾಡಿಕೊಡಲು ಅನುಕೂಲವಾಗುತ್ತದೆ
* ಜನರ ಹಿತಾಸಕ್ತಿಯು ಅಡಗಿರುತ್ತದೆ
ನೈಜ ಬೆಲೆ ತಿಳಿದುಕೊಳ್ಳುವುದು ವಿಧಾನ:-
* https://kaverionline.karnataka.gov.in ವೆಬ್ಸೈಟ್ ಗೆ ಭೇಟಿ ಕೊಟ್ಟರೆ Kaveri Online Services, Department stamp and registration Government of Karnataka ಮುಖಪುಟ ಓಪನ್ ಆಗುತ್ತದೆ.
* ಪೇಜ್ ಸ್ಕ್ರೋಲ್ ಮಾಡಿದರೆ ಕೆಳಗೆ Services for Guest User list ಕಾಣುತ್ತದೆ ಅದರಲ್ಲಿ Know your Property Valuation ಆಪ್ಷನ್ ಕಾಣುತ್ತದೆ ಕ್ಲಿಕ್ ಮಾಡಿ.
* Valuation details ಎನ್ನುವ ಮತ್ತೊಂದು ಪೇಜ್ ಓಪನ್ ಆಗುತ್ತದೆ. ಅದರಲ್ಲಿ Basic search and Advance search ಎನ್ನುವ ಎರಡು ಆಯ್ಕೆಗಳು ಇರುತ್ತದೆ ಎರಡರಲ್ಲೂ ಕೂಡ ನೀವು ಚೆಕ್ ಮಾಡಬಹುದು.
* District, Registration District, SRO Office, Area name (Village) ಸೆಲೆಕ್ಟ್ ಮಾಡಿದರೆ Thaluk, Village name, Hobli auto fill ಆಗುತ್ತದೆ. ಅದನ್ನು ಒಮ್ಮೆ ಚೆಕ್ ಮಾಡಿಕೊಳ್ಳಿ.
ಕಾರ್ಮಿಕ ಇಲಾಖೆಯಿಂದ ಲೇಬರ್ ಕಾರ್ಡ್ ಇದ್ದವರಿಗೆ 2 ಲಕ್ಷ ಜೀವ ವಿಮೆ ಹಾಗೂ ಅಪಘಾತ ವಿಮೆ.! ಆಸಕ್ತರು ಅರ್ಜಿ ಸಲ್ಲಿಸಿ.!
* ಮುಖ್ಯವಾಗಿ ಅದರಲ್ಲಿ property Usyage type ಎನ್ನುವ ಆಪ್ಷನ್ ನಲ್ಲಿ ಕೃಷಿ ಭೂಮಿಯಾಗಿದ್ದರೆ Agriculture, ಕೃಷಿಯೇತರ ಭೂಮಿ ಅಂದರೆ ಸೈಟ್ ಆಗಿದ್ದರೆNong Agricultural ಎಂದು ಸೆಲೆಕ್ಟ್ ಮಾಡಿ.
* total area ಎಷ್ಟಿದೆ ಎನ್ನುವುದನ್ನು ಸೆಲೆಕ್ಟ್ ಮಾಡಿ, ಮುಖ್ಯವಾಗಿ Measurment Unit ಎನ್ನುವ ಆಪ್ಷನ್ ನಲ್ಲಿ Acre ಎಂದು ಸೆಲೆಕ್ಟ್ ಮಾಡಿ, display Valuation ಎನ್ನುವುದನ್ನು ಸೆಲೆಕ್ಟ್ ಮಾಡಿ.
* ಕೆಲವೊಂದು details ಕೊಟ್ಟು Yes or No ಎಂದು ಕೇಳಲಾಗಿರುತ್ತದೆ. ಹತ್ತಾರು ಪ್ರಶ್ನೆಗಳಿರುತ್ತವೆ, ಅದಕ್ಕೆ ಸಂಬಂಧಪಟ್ಟ ಹಾಗೆ ನಿಮ್ಮ ಜಮೀನು ಇದ್ದರೆ Yes ಎಂದು ಇಲ್ಲವಾದರೆ No ಎಂದು ಸೆಲೆಕ್ಟ್ ಮಾಡಿ.
ವಸತಿ ನಿಲಯ ಹುದ್ದೆಗಳ ನೇಮಕಾತಿ.! ವಾರ್ಡನ್ ಸೇರಿದಂತೆ ಹಲವು ಹುದ್ದೆಗಳು ಖಾಲಿ, ವೇತನ 32,670/- ಆಸಕ್ತರು ಅರ್ಜಿ ಸಲ್ಲಿಸಿ.!
ನಿಮ್ಮ ಜಮೀನು ನ್ಯಾಷನಲ್ ಹೈವೇಗೆ ಹತ್ತಿರವಿದೆಯೇ? ಹತ್ತಿರದಲ್ಲಿಯೇ ಗ್ರಾಮವಿದೆಯೇ? ಜಮೀನಿಗೆ ಹೋಗಲು ಕಾಲು ದಾರಿ ಇದೆಯೇ ಈ ರೀತಿ ಅನೇಕ ಪ್ರಶ್ನೆಗಳು ಇರುತ್ತವೆ. ನಿಮ್ಮ ಉತ್ತರದ ಅನುಗುಣವಾಗಿ ಟೋಟಲ್ ವ್ಯಾಲ್ಯೂಯೇಷನ್ ಎಷ್ಟಿದೆ ಎನ್ನುವುದರ ಮಾಹಿತಿ ಕೊನೆಯಲ್ಲಿ ಬರುತ್ತದೆ. ಇದೇ ರೀತಿ ಕೃಷಿಯೇತರ ಭೂಮಿಗಳಿಗೂ ಕೂಡ ಲೆಕ್ಕ ಹಾಕಬಹುದು.