ಮಕ್ಕಳ ಆಧಾರ್ ಕಾರ್ಡ್ ಮಾಡಿಸುವುದು ಹೇಗೆ ಬೇಕಾದ ದಾಖಲೆಗಳೇನು ಗೊತ್ತಾ.?

 

ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರಕ್ಕೆ (UIDAI) ಭಾರತದ ಸರ್ಕಾರವು ದೇಶದ ಎಲ್ಲಾ ನಾಗರಿಕರಿಗೂ ಆಧಾರ್ ಕಾರ್ಡ್ ನೀಡುವ ಜವಾಬ್ದಾರಿ ಕೊಟ್ಟಿದೆ. ಸರ್ಕಾರವು ಆಧಾರ್ ಕಾರ್ಡನ್ನು ಕಡ್ಡಾಯವಲ್ಲ ಎಂದು ಹೇಳಿದ್ದರೂ ಕೂಡ ಇತ್ತೀಚಿನ ದಿನಗಳಲ್ಲಿ ಯಾವುದೇ ಖಾಸಗಿ ವಲಯದ ಅಥವಾ ಸರ್ಕಾರಿ ಸಂಸ್ಥೆಯ ಕೆಲಸ ಕಾರ್ಯಗಳು ಆಗಬೇಕು ಎಂದರೆ ಅನಿವಾರ್ಯವಾಗಿ ಆಧಾರ್ ಕಾರ್ಡ್ ಬೇಕೇ ಬೇಕು.

ಮಕ್ಕಳನ್ನು ಶಾಲೆಗೆ ದಾಖಲು ಮಾಡುವ ಸಮಯದಿಂದ ಹಿಡಿದು ಬ್ಯಾಂಕ್ ಖಾತೆ ತೆರೆಯಲು, ಸ್ಕಾಲರ್ಶಿಪ್ ಪಡೆಯಲು, ಸರ್ಕಾರಿ ಯೋಜನೆಗಳ ಸಹಾಯ ಧನಗಳನ್ನು ಪಡೆಯಲು ರೇಷನ್ ಕಾರ್ಡ್ ಗೆ ಸೇರಿಸಲು ಹೀಗೆ ಪ್ರತಿಯೊಂದು ವಿಷಯದಲ್ಲೂ ಕೂಡ ಆಧಾರ್ ಕಾರ್ಡನ್ನು ಮುಖ್ಯ ದಾಖಲೆಯಾಗಿ ಕೇಳುತ್ತಾರೆ. ಹಾಗಾಗಿ ಇಂದು ನವಜಾತ ಶಿಶುಗಳಿಗೆ ಕೂಡ UIDAI ಸಂಸ್ಥೆಯು ಆಧಾರ್ ಕಾರ್ಡನ್ನು ವಿತರಣೆ ಮಾಡುತ್ತಿದೆ.

ಆದರೆ ಐದು ವರ್ಷದ ಒಳಗಿನ ಮಕ್ಕಳಿಗೆ ಹಾಗೂ ಐದು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಪ್ರತ್ಯೇಕ ವಿಧಾನಗಳ ಮೂಲಕ ಹಾಗೂ ಮಾರ್ಗಸೂಚಿಗಳ ಮೂಲಕ ಆಧಾರ್ ಕಾರ್ಡ್ ವಿತರಣೆ ಮಾಡುತ್ತದೆ. ಈ ಅಂಕಣದಲ್ಲಿ ಅದನ್ನೇ ತಿಳಿಸಿಕೊಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ.

5 ವರ್ಷದ ಒಳಗಿನ ಮಕ್ಕಳ ಆಧಾರ್ ಕಾರ್ಡ್ ಪಡೆಯುವ ವಿಧಾನ ಮತ್ತು ಬೇಕಾಗುವ ದಾಖಲೆಗಳು:-
● ಮಗುವಿನ ತಂದೆ ಅಥವಾ ತಾಯಿಯ ಆಧಾರ್ ಕಾರ್ಡ್.
● ಮಗುವಿನ ಜನನ ಪ್ರಮಾಣ ಪತ್ರ ಅಥವಾ ಆಸ್ಪತ್ರೆಯ ಡಿಸ್ಚಾರ್ಜ್ ಕಾರ್ಡ್ ಅಥವಾ ಡಿಸ್ಚಾರ್ಜ್ ಸಮ್ಮರಿ.
● ಈ ಅಗತ್ಯ ದಾಖಲೆಗಳ ಜೊತೆ ಆಧಾರ್ ಕೇಂದ್ರಕ್ಕೆ ಹೋಗಿ ಪೋಷಕರು ತಮ್ಮ ಮಗುವಿನ ಆಧಾರ್ ಕಾರ್ಡನ್ನು ಪಡೆಯಬಹುದು.

ಐದು ವರ್ಷಕ್ಕಿಂತ ಮೇಲ್ಪಟ್ಟ ಮಗುವಿನ ಆಧಾರ್ ಕಾರ್ಡ್ ಪಡೆಯುವ ವಿಧಾನ ಮತ್ತು ಬೇಕಾಗುವ ದಾಖಲೆಗಳು:-
● ಮಗುವಿನ ಜನನ ಪ್ರಮಾಣ ಪತ್ರ ಅದು ಇಲ್ಲದ ಪಕ್ಷದಲ್ಲಿ ಮಗು ವ್ಯಾಸಂಗ ಮಾಡುತ್ತಿರುವ ಶಾಲೆಯ ಮುಖ್ಯೋಪಾಧ್ಯಾಯರು ಮಗುವಿನ ಹೆಸರು ಜನ್ಮ ದಿನಾಂಕ ತಂದೆಯ ಹೆಸರು ಇತ್ಯಾದಿ ವಿವರಗಳನ್ನು ಒಂದು ಪತ್ರದಲ್ಲಿ ಬರೆದು ಸಹಿ ಮತ್ತು ಸೀಲ್ ಮಾಡಿ ಕೊಡಬೇಕು.

ಮಗು ಇನ್ನು ಶಾಲೆಗೆ ದಾಖಲಾಗಿರದ ಸಂದರ್ಭದಲ್ಲಿ ಇದೇ ರೀತಿಯಾಗಿ ಅಂಗನವಾಡಿ ಕೇಂದ್ರ ಅಥವಾ ಗ್ರಾಮ ಪಂಚಾಯಿತಿ ಅಥವಾ ಗ್ರಾಮ ಮುಖಂಡರಿಂದ ಈ ರೀತಿ ವಿವರವಾಗಿ ಪತ್ರ ಬರೆಯಿಸಿ, ಸಹಿ ಮತ್ತು ಮೊಹರು ಹಾಕಿದ ಪತ್ರವನ್ನು ದಾಖಲೆಯಾಗಿ ಕೊಡಬೇಕು.
● ಈ ಎಲ್ಲಾ ದಾಖಲೆಗಳ ಜೊತೆಯಲ್ಲಿ ಆಧಾರ್ ಕೇಂದ್ರಕ್ಕೆ ಹೋಗಿ ಅರ್ಜಿ ಫಾರಂ ಪಡೆದು ಭರ್ತಿ ಮಾಡಿ ಸಲ್ಲಿಸಬೇಕು

● ಅರ್ಜಿ ಸ್ವೀಕರಿಸಿದ ಸಿಬ್ಬಂದಿಗಳು ನಿಮ್ಮ ಮಗುವಿನ ಬಯೋಮೆಟ್ರಿಕ್ ಮಾಹಿತಿಯನ್ನು ಕೂಡ ಪಡೆದುಕೊಳ್ಳುತ್ತಾರೆ.
● ಐದು ವರ್ಷದ ಮೇಲ್ಪಟ್ಟ ಮಗುವಿಗೆ ಮಾತ್ರ ಈ ರೀತಿ ಬಯೋಮೆಟ್ರಿಕ್ ಮಾಹಿತಿಗಳನ್ನು ತೆಗೆದುಕೊಳ್ಳುತ್ತಾರೆ. ನಿಮ್ಮ ಮಗುವಿಗೆ 15 ವರ್ಷ ತುಂಬಿದ ಬಳಿಕ ನೀವು ಮತ್ತೆ ಈ ಬಯೋಮೆಟ್ರಿಕ್ ಮಾಹಿತಿಗಳನ್ನು ಅಪ್ಡೇಟ್ ಮಾಡಿಸಬೇಕು.

ಈ ರೀತಿ ಎಲ್ಲಾ ಮಾಹಿತಿಗಳ ಸಲ್ಲಿಸುವಿಕೆ ಮತ್ತು ಅರ್ಜಿ ಸಲ್ಲಿಸುವಿಕೆ ಪ್ರಕ್ರಿಯೆ ಪೂರ್ತಿಗೊಂಡ ಬಳಿಕ ಕನಿಷ್ಠ ಅರ್ಜಿ ಶುಲ್ಕವನ್ನು ಪಾವತಿ ಮಾಡಿದರೆ ಕೆಲವೇ ದಿನಗಳಲ್ಲಿ ಅಂಚೆ ಮೂಲಕ ನಿಮ್ಮ ವಿಳಾಸಕ್ಕೆ ನಿಮ್ಮ ಮಗುವಿನ ಆಧಾರ್ ಕಾರ್ಡ್ ಬರುತ್ತದೆ. ಇದೊಂದು ಉಪಯುಕ್ತ ಮಾಹಿತಿಯಾಗಿದೆ ಆದ್ದರಿಂದ ತಪ್ಪದೇ ಈ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.

Leave a Comment

%d bloggers like this: