ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಪೂರೈಕೆ ಆಗಲೇಬೇಕು. ಎಲ್ಲರೂ ಸಹ ಕೃಷಿ ಮೂಲವನ್ನು ಅನುಸರಿಸಿದರೆ ಆಹಾರ ಅಭಾವ ಉಂಟಾಗಬಹುದು. ಈ ಕಾರಣಕ್ಕಾಗಿ ಮೀನುಗಾರಿಕೆ, ಕೋಳಿ ಸಾಕಾಣಿಕೆ, ಹೈನುಗಾರಿಕೆ ಇವುಗಳನ್ನು ಕೂಡ ಸರ್ಕಾರಗಳು ಉತ್ತೇಜಿಸುತ್ತಿವೆ. ಸದ್ಯಕ್ಕೀಗ ಕರ್ನಾಟಕ ಸರ್ಕಾರದಲ್ಲೂ ಕೂಡ ಮೀನುಗಾರಿಕೆ ಮತ್ತು ಹೈನುಗಾರಿಕೆ ಮಾಡುವವರಿಗೆ ಯೋಜನೆ ಒಂದು ಜಾರಿಯಾಗಿದ್ದು, ಈ ಯೋಜನೆ ಮೂಲಕ ಇದಕ್ಕೆ ಆಸಕ್ತಿ ತೋರುವ ಅರ್ಹ ಫಲಾನುಭವಿ ರೈತರುಗಳಿಗೆ 2 ಲಕ್ಷದವರೆಗೂ ಕೂಡ ಬಡ್ಡಿರಹಿತ ಸಾಲ ನೀಡಲಾಗುತ್ತಿದೆ.
ನಮ್ಮ ರಾಜ್ಯದ ಅನೇಕ ರೈತರುಗಳಿಗೆ ಸರ್ಕಾರದ ಈ ಯೋಜನೆಗಳ ಮಾಹಿತಿ ತಲುಪದೇ ಇಂತಹ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಈ ಅಂಕಣದಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳ ಬಗ್ಗೆ, ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ ನಡೆಯುತ್ತದೆ ಮತ್ತು ಯೋಜನೆಗಿರುವ ನಿರ್ಬಂಧಗಳು ಏನು ಎನ್ನುವ ಉಪಯುಕ್ತ ಮಾಹಿತಿಗಳನ್ನು ತಿಳಿಸುತ್ತಿದ್ದೇವೆ. ಈ ಮಾಹಿತಿ ತಿಳಿದುಕೊಳ್ಳಲು ಲೇಖನವನ್ನು ಪೂರ್ತಿಯಾಗಿ ಓದಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಕುಟುಂಬಸ್ಥರ ಜೊತೆಗೂ ಹಂಚಿಕೊಂಡು ಹೆಚ್ಚಿನ ರೈತರಿಗೆ ಯೋಜನೆಯ ವಿವರ ತಲುಪುವಂತೆ ಮಾಡಿ.
ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು:-
● ರೈತರ ಜಮೀನಿನ ಪಹಣಿ ಪತ್ರ
● ಗ್ರಾಮ ಲೆಕ್ಕಾಧಿಕಾರಿಗಳಿಂದ ಪಡೆದ ನೀರು ಬಳಕೆ ಪತ್ರ
● ರೈತನ ಆಧಾರ್ ಕಾರ್ಡ್
● ಬಿಳಿ ಹಾಳೆಯಲ್ಲಿ ಬರೆದ ಎಸ್ಟಿಮೇಟ್ ಪತ್ರ
(ಜನಸಂಖ್ಯೆ ಎಷ್ಟಿರುತ್ತದೆ ಮೇವಿನ ಖರ್ಚು ಎಷ್ಟಾಗುತ್ತದೆ, ಇತರೆ ಖರ್ಚು ಎಷ್ಟಾಗುತ್ತದೆ ಎನ್ನುವುದರ ಅಂದಾಜು ಮಾಹಿತಿ ಹೊಂದಿರಬೇಕು)
● ಹೇಳಿಕೆ ಪತ್ರ
● ರೇಷನ್ ಕಾರ್ಡ್
● DCC ಬ್ಯಾಂಕ್ ಉಳಿತಾಯ ಖಾತೆ ಪುಸ್ತಕದ ಪ್ರತಿ
ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮತ್ತು ನಂತರದ ಕ್ರಮಗಳು:-
● ಈ ಮೇಲ್ಕಂಡ ಎಲ್ಲಾ ದಾಖಲೆಗಳನ್ನು ಲಗತ್ತಿಸಿ, ಅರ್ಜಿ ಬರೆದು ಸಂಬಂಧಿಸಿದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅರ್ಜಿ ಸಲ್ಲಿಸಬಹುದು. ಅಥವಾ
ನಿಮ್ಮ ಏರಿಯಾದ DCC ಬ್ಯಾಂಕಿಗೆ ಬೇಟಿ ಕೊಟ್ಟು ಮ್ಯಾನೇಜರ್ ಅವರಿಗೆ ಸಹ ಅರ್ಜಿ ಸಲ್ಲಿಸಬಹುದು.
● ನೀವು ಅರ್ಜಿ ಸಲ್ಲಿಸಿದ ದಿನಾಂಕದ ಒಂದು ತಿಂಗಳ ಒಳಗೆ ಹೈನುಗಾರಿಕೆ ಆರಂಭಿಸಲು ನಿಮಗೆ ಬಡ್ಡಿ ರಹಿತ ಎರಡು ಲಕ್ಷ ರೂಪಾಯಿ ಲೋನ್ ಸಿಗುತ್ತದೆ.
ನಿಬಂಧನೆಗಳು:-
● ಒಂದು ಕುಟುಂಬಕ್ಕೆ ಒಬ್ಬರು ಮಾತ್ರ ಈ ಯೋಜನೆಯ ಫಲಾನುಭವಿಗಳಾಗಬಹುದು. ಈ ಕಾರಣದಿಂದಲೇ ರೇಷನ್ ಕಾರ್ಡನ್ನು ಅಗತ್ಯ ದಾಖಲೆಯಾಗಿ ತೆಗೆದುಕೊಳ್ಳಲಾಗುತ್ತದೆ.
● ಅರ್ಜಿದಾರರು ಸ್ಥಳೀಯ ಹಾಲು ಉತ್ಪಾದಕರ ಸಂಘದಲ್ಲಿ ಸದಸ್ಯರಾಗುರುವುದು ಕಡ್ಡಾಯವಾಗಿರುತ್ತದೆ.
● ಎರಡು ಲಕ್ಷದವರೆಗೆ ಮಾತ್ರ ಬಡ್ಡಿ ರಹಿತ ಸಾಲವಾಗಿರುತ್ತದೆ ಒಂದು ವೇಳೆ ಹೆಚ್ಚಿನ ಮೊತ್ತದ ಸಾಲ ಬೇಕಾದರೆ ಅದಕ್ಕೆ ಸಾಮಾನ್ಯ ಬಡ್ಡಿ ಅನ್ವಯಿಸುತ್ತದೆ.
● ಬೆಳೆ ಸಾಲ ಪಡೆದ ರೈತರು ಕೂಡ ಹೈನುಗಾರಿಕೆ ಆರಂಭಿಸಲು ಸಾಲ ಪಡೆಯಬಹುದು, ಆದರೆ ಎರಡು ಸಾಲದ ಒಟ್ಟು ಮೊತ್ತ ಮೂರು ಲಕ್ಷ ಇರುವಂತಿಲ್ಲ.
● ಹೊಸ ವಾರ್ಷಿಕ ವರ್ಷ ಆರಂಭವಾಗುವ ಮುನ್ನ ಅರ್ಜಿ ಸಲ್ಲಿಸುವುದು ಒಳ್ಳೆಯದು.
● ಒಟ್ಟು ಸಾಲ ನೀಡುವಿಕೆಯ ಗುರಿಯಲ್ಲಿ SC,ST ಕೆಟಗರಿಗೆ 24% ಮೀಸಲು.
● ಈ ಯೋಜನೆಯಲ್ಲಿ ಸಹಾಯಧನ ಪಡೆದು ಖರೀದಿಸುವ ಎಲ್ಲಾ ಹಸುಗಳಿಗೆ ಇನ್ಸೂರೆನ್ಸ್ ಮಾಡಿಸುವುದು ಕಡ್ಡಾಯವಾಗಿರುತ್ತದೆ. ಒಂದು ವೇಳೆ ಹಸು ಮರಣ ಹೊಂದಿದರೆ ರೈತನಿಗೆ ಇನ್ಸೂರೆನ್ಸ್ ಹಣ ಸಿಗಲಿ ಎನ್ನುವ ಉದ್ದೇಶದಿಂದ ಇದನ್ನು ಕೇಳಲಾಗಿದೆ
● ತೆಗೆದುಕೊಂಡ ಸಾಲ ಮರುಪಾವತಿ ಮಾಡಬೇಕು ಎನ್ನುವುದು ಕೂಡ ಕಡ್ಡಾಯ ನಿಯಮಗಳಲ್ಲಿ ಒಂದು.